ಪ್ಯಾನ್​ ಕಾರ್ಡ್​ ಬಳಕೆದಾರರೇ ಎಚ್ಚರ! 10 ಸಾವಿರ ದಂಡ ತಪ್ಪಿಸಿಕೊಳ್ಳಲು ಕೊನೆಯ ಅವಕಾಶ, ಇಲ್ಲಿದೆ ಡಿಟೇಲ್ಸ್​

ಪ್ಯಾನ್​ ಕಾರ್ಡ್​ ಬಳಕೆದಾರರೇ ಎಚ್ಚರ! 10 ಸಾವಿರ ದಂಡ ತಪ್ಪಿಸಿಕೊಳ್ಳಲು ಕೊನೆಯ ಅವಕಾಶ, ಇಲ್ಲಿದೆ ನೋಡಿ ಡಿಟೇಲ್ಸ್...​
 

Income Tax Department will impose a penalty of Rs 10 thousand on these pan card holders suc

ಸರ್ಕಾರಗಳ ಯೋಜನೆಗಳ ಪ್ರಯೋಜನ ಪಡೆಯುವುದು ಸೇರಿದಂತೆ ಬಹುತೇಕ ಎಲ್ಲಾ ಹಣಕಾಸಿನ ವ್ಯವಹಾರಗಳಿಗೂ ಇಂದು ಶಾಶ್ವತ ಖಾತೆ ಸಂಖ್ಯೆ ಅಂದರೆ ಪ್ಯಾನ್​ ಕಾರ್ಡ್​ ಅನಿವಾರ್ಯವಾಗಿದೆ. ಭಾರತದಲ್ಲಿ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಐಡಿ ಕಾರ್ಡ್ ಆಗಿದ್ದು, ಇದು ಆದಾಯ ತೆರಿಗೆ ಇಲಾಖೆಗೆ ಪ್ರಮುಖ ದಾಖಲೆಯಾಗಿದೆ. ಸಂಬಳ ಪಡೆಯುವ ಉದ್ಯೋಗಸ್ಥರಿಗೆ ಇದು ಕಡ್ಡಾಯವಾಗಿದ್ದರೂ, ಸಾಮಾನ್ಯ ಜನರಿಗೂ ಇದರಿಂದ ಹಲವಾರು ಅನುಕೂಲಗಳಿವೆ. ಆದಾಯ ತೆರಿಗೆಯನ್ನು ಪಾವತಿ ಮಾಡುವಲ್ಲಿ ಇದು ಮಹತ್ವದ ಪಾತ್ರ ವಹಿಸುವ ಹಿನ್ನೆಲೆಯಲ್ಲಿ, ತೆರಿಗೆಯನ್ನು ತಪ್ಪಿಸಿಕೊಳ್ಳಲು ಹೊಂಚು ಹಾಕುವವರೂ ಸಾಕಷ್ಟು ಮಂದಿ ಇದ್ದಾರೆ. ಈ ಕಳ್ಳರು ಸೇರಿದಂತೆ  ಪ್ಯಾನ್​ ಕಾರ್ಡ್​ ಹೊಂದಿರುವವರಿಗೆ ಬಹು ಮುಖ್ಯವಾಗಿರುವ ಎಚ್ಚರಿಕೆಯೊಂದನ್ನು ಆದಾಯ ತೆರಿಗೆ ಇಲಾಖೆ ಮತ್ತೊಮ್ಮೆ ನೀಡಿದೆ.

ಪ್ಯಾನ್​ ಕಾರ್ಡ್​ ಇರುವವರು ಗೋಲ್​ಮಾಲ್​ ಮಾಡಿದರೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತಿದೆ. ಹಾಗೆಂದು ಒಂದೇ ಪ್ಯಾನ್​ ಕಾರ್ಡ್​ ಹೊಂದಿದ್ದು, ಸರಿಯಾದ ಮಾರ್ಗದಲ್ಲಿ ನಡೆಯುತ್ತಿರುವವರು ಹೆದರಬೇಕಾದ ಅಗತ್ಯವಿಲ್ಲ. ಆದರೆ ತೆರಿಗೆಯನ್ನು ತಪ್ಪಿಸಿಕೊಳ್ಳಲು ಅನೇಕ ಮಂದಿ ಒಂದಕ್ಕಿಂತ ಹೆಚ್ಚು ಪ್ಯಾನ್​ ಕಾರ್ಡ್​ ಹೊಂದಿರುವುದು ಇದಾಗಲೇ ಕೇಂದ್ರದ ಗಮನಕ್ಕೆ ಬಂದಿದೆ. ಇದನ್ನು ತಪ್ಪಿಸುವುದಕ್ಕಾಗಿಯೇ ಪ್ಯಾನ್​ ಕಾರ್ಡ್​ 2.0 ಕೂಡ ಜಾರಿಗೊಳಿಸಲಾಗಿದೆ. ಇದನ್ನೇನು ಎಲ್ಲರೂ ಕಡ್ಡಾಯವಾಗಿ ಮಾಡಿಕೊಳ್ಳಬೇಕೆಂದೇನೂ ಇಲ್ಲ. ಆದರೆ ಕಳ್ಳತನದ ಹಾದಿಯಲ್ಲಿ ಹೆಚ್ಚು ಹೆಚ್ಚು ಪ್ಯಾನ್​ ಕಾರ್ಡ್​ ಮಾಡುತ್ತಿರುವವರ ಪೈಕಿ ಹಲವರ ಲಿಸ್ಟ್​ ಇದಾಗಲೇ ಕೇಂದ್ರದ ಬಳಿ ಇದ್ದು, ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ 10 ಸಾವಿರ ರೂಪಾಯಿ ದಂಡದ ಜೊತೆಗೆ, ಕಾನೂನಿನ ಪ್ರಕಾರ ಮತ್ತಿಷ್ಟು ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ ಎಚ್ಚರ!

ಪನೀರ್​ ಎಂದು ಪ್ರಾಣಕ್ಕೆ ಕುತ್ತಾಗ್ತಿರೋ ವಿಷ ಸೇವಿಸ್ತಾ ಇದ್ದೀರಾ? ನಕಲಿ ಕಂಡುಹಿಡಿಯೋ ಸುಲಭದ ಉಪಾಯ ಹೀಗಿದೆ..
 ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272 ಬಿ ಪ್ರಕಾರ, ಸರ್ಕಾರವನ್ನು ವಂಚಿಸುವ ಅಥವಾ ತೆರಿಗೆ ತಪ್ಪಿಸುವ ಉದ್ದೇಶದಿಂದ ಅನೇಕ ಪ್ಯಾನ್ ಕಾರ್ಡ್‌ ಇರುವವರಿಗೆ ದಂಡದ ರೂಪದಲ್ಲಿ ಶಿಕ್ಷೆ ವಿಧಿಸುವ ಅಧಿಕಾರವಿದೆ. ಅದೇ ರೀತಿ ಪ್ಯಾನ್​ ಕಾರ್ಡ್​ ಮತ್ತು ಆಧಾರ್​ ಕಾರ್ಡ್​ ಲಿಂಕ್​ ಮಾಡುವುದು ಕೂಡ ಕಡ್ಡಾಯ. ಕಳೆದ ವರ್ಷ ಕೇಂದ್ರ ಸರ್ಕಾರ ಇವುಗಳ ಜೋಡಣೆಗೆ ಹಲವು ಬಾರಿ ಗಡುವು ನೀಡಿದ್ದರೂ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾಡಿದ ತಪ್ಪಿಗೆ ಕೆಲವರ ಸಂಬಳ ಹಿಡಿತವಾಗಿದ್ದರೆ, ಪಿಂಚಣಿದಾರರಿಗೆ ಪಿಂಚಣಿ ಬಂದಿರಲಿಲ್ಲ, ಸಿಗುತ್ತಿದ್ದ ಪಿಂಚಣಿಯಲ್ಲಿ ಭಾರಿ ಕಡಿತವಾಗಿತ್ತು. ಕೂಡಲೇ ಎಚ್ಚೆತ್ತುಕೊಂಡಿರುವ ಅವರು ಆಧಾರ್​ ಲಿಂಕ್​ ಮಾಡಿದ ಬಳಿಕ ಅವರಿಗೆ ತಡೆಹಿಡಿದ ಹಣವನ್ನು ನೀಡಲಾಗಿದೆ. ಆದರೆ ಅದಕ್ಕಾಗಿ ಒಂದು ಸಾವಿರ ರೂಪಾಯಿ ದಂಡವನ್ನೂ ಕಟ್ಟುವ ಸ್ಥಿತಿ ಬಂದಿತ್ತು. ಆದರೆ ಈಗಲೂ ನೀವು ಆಧಾರ್​ ಮತ್ತು ಪ್ಯಾನ್​ ಲಿಂಕ್​ ಮಾಡದೇ ಹೋದರೆ, ಒಂದು ಸಾವಿರ ರೂಪಾಯಿ ದಂಡವನ್ನು ಕಟ್ಟಿ ಆನ್​ಲೈನ್​ ಮೂಲಕ ಜೋಡಣೆ ಮಾಡಿಕೊಳ್ಳಬಹುದು. ಇಲ್ಲದೇ ಹೋದರೆ ಹಲವು ಯೋಜನೆಗಳಿಂದ ನೀವು ವಂಚಿತರಾಗಬಹುದು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ. 

 80 ವರ್ಷಕ್ಕಿಂತ ಮೇಲ್ಪಟ್ಟ ಜನರು (ಸೂಪರ್ ಸೀನಿಯರ್ ಸಿಟಿಜನ್ಸ್) ಇವೆರಡನ್ನು ಲಿಂಕ್​ ಮಾಡದಿದ್ದರೂ ನಡೆಯುತ್ತದೆ.  ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು, ಸಬ್ಸಿಡಿಗಳನ್ನು ಪಡೆಯುವುದು ಮತ್ತು ಬ್ಯಾಂಕ್ ಖಾತೆ ತೆರೆಯುವುದು ಮುಂತಾದ ಸರ್ಕಾರಿ ಸೇವೆಗಳನ್ನು ಪಡೆಯಲು ಪ್ಯಾನ್ ಮತ್ತು ಆಧಾರ್ ಕಾರ್ಡ್‌ಗಳನ್ನು ಸಲ್ಲಿಸುವುದು ಅವಶ್ಯಕ. ಹೀಗಾಗಿ, ಪ್ಯಾನ್ ಮತ್ತು ಆಧಾರ್ ಕಾರ್ಡ್‌ಗಳನ್ನು ಲಿಂಕ್ ಮಾಡದಿದ್ದರೆ ಸರ್ಕಾರಿ ಸೇವೆಗಳನ್ನು ಪಡೆಯುವುದು ಕಷ್ಟ. ಪ್ಯಾನ್-ಆಧಾರ್ ಲಿಂಕ್ ಮಾಡದಿರುವಾಗ, ಹೊಸ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿರುವುದರಿಂದ ಹಳೆಯದು ಹಾಳಾಗಿದ್ದರೆ ಅಥವಾ ಕಳೆದುಹೋದರೆ ಹೊಸ ಪ್ಯಾನ್ ಕಾರ್ಡ್ ಪಡೆಯುವುದು ಕಷ್ಟವಾಗಬಹುದು. ಬ್ಯಾಂಕ್ ಖಾತೆ ತೆರೆಯಲು ಆಗುವುದಿಲ್ಲ. ಡೆಬಿಟ್/ಕ್ರೆಡಿಟ್ ಕಾರ್ಡ್‌ ಪಡೆಯಲು, ಮ್ಯೂಚುವಲ್ ಫಂಡ್  ಖರೀದಿಗೆ, ರೂ.50 ಸಾವಿರ ರೂಪಾಯಿಗಿಂತ ಹೆಚ್ಚಿನ  ನಗದು ಠೇವಣಿ ಪಡೆಯಲೂ ಕಷ್ಟವಾಗುತ್ತದೆ. ಆದ್ದರಿಂದ ಕೂಡಲೇ ಇವೆರಡು ಲಿಂಕ್​ ಮಾಡುವ ಜೊತೆಗೆ ಒಂದಕ್ಕಿಂತ ಹೆಚ್ಚು ಪ್ಯಾನ್​ ಕಾರ್ಡ್​ ಇದ್ದರೆ ಒಂದನ್ನು ಮಾತ್ರ ಇಟ್ಟುಕೊಂಡು ದಂಡ ತಪ್ಪಿಸಿಕೊಳ್ಳಿ. 
ಏಳೂವರೆ ಕೋಟಿ ಸಾಮ್ರಾಜ್ಯದ ಒಡೆಯ ಮುಂಬೈನ ಈ ಭಿಕ್ಷುಕ! ಈತನ ರೋಚಕ ಸ್ಟೋರಿ ಇಲ್ಲಿದೆ...

Latest Videos
Follow Us:
Download App:
  • android
  • ios