Asianet Suvarna News Asianet Suvarna News

ನೋಟ್‌ ಬ್ಯಾನ್ ವೇಳೆ ಅಕ್ರಮ ನಡೆಸಿದವರಿಗೆ ಶುರುವಾಯ್ತು ಸಂಕಷ್ಟ!

ಅಪನಗದೀಕರಣ ವೇಳೆ ಅಕ್ರಮ ನಡೆಸಿದವರಿಗೆ ಮತ್ತಷ್ಟು ಸಂಕಷ್ಟ| ಕಪ್ಪು ಕುಳಗಳನ್ನು ಬಲೆಗೆ ಕೆಡವಲು ತೆರಿಗೆ ಇಲಾಖೆ ಹೊಸ ತಂತ್ರ| ಎಲ್ಲ ತೆರಿಗೆ ಆಯುಕ್ತರಿಗೆ 17 ಅಂಶಗಳ ‘ಚೆಕ್‌ಲಿಸ್ಟ್‌’ ಹಂಚಿಕೆ

Income Tax Department issues checklist to trace unaccounted demonetisation cash
Author
Bangalore, First Published Aug 18, 2019, 9:17 AM IST
  • Facebook
  • Twitter
  • Whatsapp

ನವದೆಹಲಿ[ಆ.18]: ಅಪನಗದೀಕರಣ ಜಾರಿಯಾಗಿ ಮೂರು ವರ್ಷಗಳಾಗುತ್ತಾ ಬಂದಿದ್ದರೂ, ಆ ವೇಳೆ ಅಕ್ರಮ ನಡೆಸಿದವರ ವಿರುದ್ಧ ನಡೆಸುತ್ತಿರುವ ತನಿಖೆಯನ್ನು ಆದಾಯ ತೆರಿಗೆ ಇಲಾಖೆ ಇನ್ನೂ ಬಿಟ್ಟಿಲ್ಲ. ನೋಟ್‌ಬಂದಿ ವೇಳೆ ಭಾರಿ ಪ್ರಮಾಣದ ಅಕ್ರಮ ಹಣವನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡಿರುವವರ ಪತ್ತೆಗಾಗಿ 17 ಅಂಶಗಳ ‘ಚೆಕ್‌ಲಿಸ್ಟ್‌’ನೊಂದಿಗೆ ಆದಾಯ ತೆರಿಗೆ ಇಲಾಖೆ ಸಜ್ಜಾಗಿದೆ. ಈ ಪಟ್ಟಿಯನ್ನು ಈಗಾಗಲೇ ದೇಶಾದ್ಯಂತ ಇರುವ ತೆರಿಗೆ ಆಯುಕ್ತರಿಗೆ ರವಾನೆ ಮಾಡಿದೆ.

ಅಪನಗದೀಕರಣದ ವೇಳೆ ಅಕ್ರಮ ಹಣವನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡಿದ ವ್ಯಕ್ತಿಗಳನ್ನು ಪತ್ತೆ ಹಚ್ಚುವುದರ ಜತೆಗೆ ಮೇಲ್ನೋಟಕ್ಕೆ ಏನೂ ಆಗಿಯೇ ಇಲ್ಲ ಎಂಬಂತೆ ತಿಳಿದುಬಂದಿರುವ ಪ್ರಕರಣಗಳ ವಿಚಾರದಲ್ಲಿ ಮತ್ತಷ್ಟುಅಧ್ಯಯನ ನಡೆಸುವ ಯತ್ನವಾಗಿದೆ.

ಚೆಕ್‌ಲಿಸ್ಟ್‌ನಲ್ಲಿ ಏನಿದೆ?:

2016ರ ನ.9ರಿಂದ 2016ರ ಡಿ.31ರವರೆಗೆ ಅಕ್ರಮ ಹಣ ಜಮೆ ಮಾಡಿದ ಎಲ್ಲ ಪ್ರಕರಣಗಳನ್ನೂ ಪರಿಶೀಲಿಸಬೇಕು. ತೆರಿಗೆದಾರರು ಇಲಾಖೆ ನೀಡಿದ ಹಣದ ವಿವರದ ಬಗ್ಗೆ ಆಕ್ಷೇಪ ಎತ್ತಿದರೆ, ಬ್ಯಾಂಕಿನಲ್ಲಿ ಪರಿಶೀಲಿಸಿ ನಿಖರ ಮೊತ್ತವನ್ನು ನಮೂದಿಸಬೇಕು. ತೆರಿಗೆ ಪಾವತಿ, 2016-17ನೇ ಸಾಲಿನಲ್ಲಿದ್ದ ಒಟ್ಟಾರೆ ಆದಾಯ, ನಿವ್ವಳ ಆದಾಯ, ಜಮೆ ಮಾಡಲಾದ ಹಣ ನಿವ್ವಳ ಆದಾಯದಲ್ಲಿ ಶೇಕಡಾವಾರು ಎಷ್ಟುಪ್ರಮಾಣದಲ್ಲಿದೆ ಎಂಬುದನ್ನು ಪರಿಶೀಲಿಸಬೇಕು ಎಂದು ತೆರಿಗೆ ಇಲಾಖೆಯು ಆಯುಕ್ತರಿಗೆ ನೀಡಿರುವ ಪಟ್ಟಿಯಲ್ಲಿ ಹೇಳಿದೆ.

Follow Us:
Download App:
  • android
  • ios