ನವದೆಹಲಿ(ನ.6): ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್ 30 ಕ್ಕೆ ಅಂತ್ಯಗೊಂಡ ಎರಡನೇ  ತ್ರೈಮಾಸಿಕ ಅವಧಿಯಲ್ಲಿ ಶೇ. 69 ರಷ್ಟು ಕುಸಿತದೊಂದಿಗೆ 576.46 ಕೋಟಿ ರೂ. ಲಾಭ ಗಳಿಸಿದೆ.

ಜುಲೈ- ಸೆಪ್ಟೆಂಬರ್ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್ ಒಟ್ಟಾರೇ,  1.840.43 ಕೋಟಿ ರೂ ಲಾಭ ಗಳಿಸಿತ್ತು. ವಸೂಲಾಗದ ಸಾಲದಿಂದಾಗಿ ಮೊದಲ ಆರ್ಥಿಕ ವರ್ಷದಲ್ಲಿ ಎಸ್‌ಬಿಐಗೆ 4.875.85 ಕೋಟಿ ರೂ.ನಷ್ಟ  ಉಂಟಾಗಿತ್ತು.

ವರ್ಷದ ಹಿಂದೆ ಇದ್ದ 74.948.51 ಕೋಟಿ ರೂ. ಆದಾಯಕ್ಕೆ  ಹೋಲಿಸಿದರೆ  ಈ ಅವಧಿಯಲ್ಲಿ ಒಟ್ಟಾರೇ, 79, 302.72 ಕೋಟಿ ರೂ. ಲಾಭ ಬಂದಿದೆ ಎಂದು ಎಸ್‌ಬಿಐ ಹೇಳಿದೆ.  ಶೇ .4.84 ರಷ್ಟಿದ್ದ ವಸೂಲಾಗದ ಸಾಲದ ಪ್ರಮಾಣ ಶೇ. 4.53 ರಷ್ಟಿದೆ.

ಹಿಂದಿನ ತ್ರೈಮಾಸಿಕ ಅವಧಿಯಲ್ಲಿ 16.842.18 ಕೋಟಿ ರೂ. ವಸೂಲಾಗದ ಸಾಲದ ಮೇಲಿನ ವಿನಾಯಿತಿ ಈ ಅವಧಿಯಲ್ಲಿ  10.381.31 ಕೋಟಿ ಆಗಿದೆ. ಬ್ಯಾಂಕ್ ನಿವ್ವಳ ಲಾಭ 1.581.55 ಕೋಟಿ ರೂ.ದಿಂದ 944.87 ಕೋಟಿ ರೂ.ಗೆ ಕುಸಿತ ಕಂಡಿದೆ.