ಆರ್‌ಬಿಐ ರೆಪೊ ದರ ೨೫ ಬೇಸಿಸ್ ಪಾಯಿಂಟ್ ಇಳಿಕೆಯಾಗಿದೆ. ಇದರಿಂದ ಸಾಲದ ಬಡ್ಡಿ ದರ ಕಡಿಮೆಯಾಗಿ ಗೃಹ, ವಾಹನ ಸಾಲಗಳು ಅಗ್ಗವಾಗಲಿವೆ. ಆದರೆ, ಹೊಸ ಎಫ್‌ಡಿಗಳ ಮೇಲಿನ ಬಡ್ಡಿ ಕಡಿಮೆಯಾಗುವ ಸಾಧ್ಯತೆ ಇದೆ. ಈಗಾಗಲೇ ಇರುವ ಎಫ್‌ಡಿಗಳಿಗೆ ಬದಲಾವಣೆ ಇಲ್ಲ. ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿ ಕಡಿತವಾಗಬಹುದು. ಈಗಲೇ ಹೂಡಿಕೆ ಮಾಡುವುದು ಉತ್ತಮ.

ಇದಾಗಲೇ ಹಲವರಿಗೆ ತಿಳಿದಿರುವಂತೆ ಆರ್​ಬಿಐ ರೆಪೊ ದರವನ್ನು ಇಳಿಸಿದೆ. ರೆಪೋ ದರ ಎಂದರೆ ಆರ್​ಬಿಐ ಬ್ಯಾಂಕ್​ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ. ಇದು ಕಡಿಮೆಯಾಗುವ ಕಾರಣದಿಂದ ಸಹಜವಾಗಿ, RBI ರೆಪೊ ದರವನ್ನು ಕಡಿಮೆ ಮಾಡಿದಾಗ, ಬ್ಯಾಂಕುಗಳು ಸಾಮಾನ್ಯವಾಗಿ ತಮ್ಮ ಸಾಲ ದರಗಳನ್ನು ಕೂಡ ಕಡಿಮೆ ಮಾಡುತ್ತದೆ, ಇದು ಗೃಹ, ವಾಹನ ಇತ್ಯಾದಿ ಸಾಲಗಳನ್ನು ಅಗ್ಗವಾಗಿಸುತ್ತದೆ. ಅದೇ ರೀತಿ, ಗೃಹ, ವಾಹನ ಇತ್ಯಾದಿ ಸಾಲ ಪಡೆದುಕೊಂಡಿರುವವರಿಗೆ ಇದು ಗುಡ್​ನ್ಯೂಸ್​ ಆಗಿದೆ. ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಆಗಿರುವ ಕಾರಣ, ವಿವಿಧ ಸಾಲಗಳ ದರಗಳಲ್ಲಿಯೂ ಕಡಿತವಾಗಲಿದೆ.

ಆದರೆ ಭದ್ರತಾ ಠೇವಣಿ ಅಂದ್ರೆ FD ಇಡುವವರಿಗೆ ಇದು ಬ್ಯಾಡ್​ ನ್ಯೂಸ್​ ಆಗಲಿದೆ. ಏಕೆಂದರೆ, ಹೊಸದಾಗಿ ಎಫ್​ಡಿ ಇಡುವವರಿಗೆ ಕಡಿಮೆ ಬಡ್ಡಿದರ ಇದರಿಂದ ಸಿಗುವ ಸಾಧ್ಯತೆ ಇದೆ. ಈಗಾಗಲೇ ಎಫ್​ಡಿ ಇಟ್ಟವರಿಗೆ ಇದು ಅನ್ವಯ ಆಗುವುದಿಲ್ಲ. ಆದ್ದರಿಂದ ಒಂದು ವೇಳೆ ಬ್ಯಾಂಕ್​ಗಳಲ್ಲಿ ಬಡ್ಡಿ ಇಡುವ ಯೋಚನೆ ಮಾಡಿದ್ದರೆ ಈ ಹೊಸ ನಿಯಮ ಜಾರಿಗೆ ಬರುವ ಮೊದಲೇ ಇಟ್ಟರೆ ಒಳಿತು. ಅಷ್ಟಕ್ಕೂ, ಐದು ವರ್ಷಗಳಲ್ಲಿ ಮೊದಲ ಬಾರಿಗೆ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಹೆಚ್ಚಿಸಿದೆ. ಇದು ದೇಶದಲ್ಲಿ ಸಾಲ ಪಡೆದವರಿಗೆ ಸಮಾಧಾನ ತಂದಿದೆ. ಏಕೆಂದರೆ, ಸಾಲದ ಬಡ್ಡಿದರಗಳು ಶೀಘ್ರದಲ್ಲೇ ಕಡಿಮೆಯಾಗುತ್ತವೆ. ಆದರೆ ಈ ನಿರ್ಧಾರವು ಹೂಡಿಕೆದಾರರಿಗೆ, ಅಂದರೆ ಬ್ಯಾಂಕಿನಲ್ಲಿ ಸ್ಥಿರ ಠೇವಣಿ ಇಡುವವರಿಗೆ ಹಿನ್ನಡೆಯನ್ನುಂಟು ಮಾಡಿದೆ. ಹಿರಿಯ ನಾಗರಿಕರಿಗೆ ಈಗ ಇರುವ ಹೆಚ್ಚುವರಿ ಬಡ್ಡಿದರದಲ್ಲಿ ಕೂಡ ಕಡಿತವಾಗಲಿದ್ದು, ಈಗಲೇ ಹೂಡಿಕೆ ಮಾಡಿದರೆ ಒಳಿತು. 

ಗೃಹ ಸಾಲ ಇದ್ಯಾ? ಪಡೆಯೋ ಪ್ಲ್ಯಾನ್​ ಮಾಡಿದ್ದೀರಾ? RBI ಹೊಸ ರೂಲ್ಸ್​ನಿಂದ EMI ಎಷ್ಟು ಕಡಿಮೆ ಆಗತ್ತೆ ನೋಡಿ!

ರೆಪೊ ದರ ಹೆಚ್ಚಳದೊಂದಿಗೆ, ದೇಶದ ಎಲ್ಲಾ ಬ್ಯಾಂಕುಗಳು ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿವೆ. ಆದರೆ ರೆಪೊ ದರ ಕಡಿತದಿಂದ ಬಡ್ಡಿದರಗಳಲ್ಲಿ ಗಣನೀಯ ಇಳಿಕೆ ಕಂಡುಬರಲಿದೆ. ಆರ್‌ಬಿಐ ಬಡ್ಡಿದರಗಳನ್ನು ಕಡಿಮೆ ಮಾಡಿದಾಗ, ಬ್ಯಾಂಕುಗಳು ಕಡಿಮೆ ವೆಚ್ಚದಲ್ಲಿ ಹಣವನ್ನು ಸಾಲ ಪಡೆಯಬಹುದು. ಇದು ಬ್ಯಾಂಕುಗಳು ನೀಡುವ ಸಾಲಗಳ ಮೇಲಿನ ಬಡ್ಡಿದರಗಳನ್ನು ಸಹ ಕಡಿಮೆ ಮಾಡುತ್ತದೆ. ಏತನ್ಮಧ್ಯೆ, ರಿವರ್ಸ್ ರೆಪೊ ದರವು ಮಾರುಕಟ್ಟೆಯಲ್ಲಿ ಹೆಚ್ಚುವರಿ ಹಣವನ್ನು ಮರುಪಡೆಯಲು ರಿಸರ್ವ್ ಬ್ಯಾಂಕ್ ಅಲ್ಪಾವಧಿಯಲ್ಲಿ ಬ್ಯಾಂಕುಗಳಿಂದ ಹಣವನ್ನು ಎರವಲು ಪಡೆಯುವ ದರವಾಗಿದೆ.

ಫೆಬ್ರವರಿ 2023 ರಿಂದ ರೆಪೊ ದರವು ಶೇಕಡಾ 6.5 ರಲ್ಲೇ ಉಳಿದಿದೆ. ಆರ್‌ಬಿಐ ಕೊನೆಯ ಬಾರಿಗೆ ಬಡ್ಡಿದರಗಳನ್ನು ಫೆಬ್ರವರಿ 2023 ರಲ್ಲಿ ಬದಲಾಯಿಸಿತು. ಆ ಸಮಯದಲ್ಲಿ, ರೆಪೊ ದರವನ್ನು ಶೇಕಡಾ 6.25 ರಿಂದ 6.5 ಕ್ಕೆ ಹೆಚ್ಚಿಸಲಾಯಿತು. ಇದರೊಂದಿಗೆ ದೇಶದ ಎಲ್ಲಾ ಬ್ಯಾಂಕುಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿವೆ. ರೆಪೊ ದರ ಕಡಿತದೊಂದಿಗೆ, ಬ್ಯಾಂಕುಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಬಹುದು. ಆದ್ದರಿಂದ ಈಗಲೇ ಎಫ್​ಡಿಯಲ್ಲಿ ಹೂಡಿಕೆ ಮಾಡಿದರೆ ಒಳಿತು ಎನ್ನುವುದು ತಜ್ಞರ ಅಭಿಮತ. 

4 ಲಕ್ಷ ಅರ್ಹರು ಎಲ್​ಐಸಿ ಹಣವನ್ನೇ ಪಡೆದಿಲ್ಲ! ನಿಮ್ಮ-ನಿಮ್ಮವರ ಪಾಲಿಸಿ ಇದೆಯಾ? ಚೆಕ್​ ಮಾಡುವ ಹಂತ ಹಂತದ ಮಾಹಿತಿ ಇಲ್ಲಿದೆ...