ಆರ್ಥಿಕ ನಿರ್ವಹಣೆ: ಭಾರತಕ್ಕೆ ಐಎಂಎಫ್‌ ಭೇಷ್‌!

* ಕೊರೋನಾದಿಂದ ಇಡೀ ವಿಶ್ವಕ್ಕೆ ಆರ್ಥಿಕ ಸಂಕಷ್ಟ

* ಆರ್ಥಿಕ ನಿರ್ವಹಣೆ: ಭಾರತಕ್ಕೆ ಐಎಂಎಫ್‌ ಭೇಷ್‌

* ತಕ್ಷಣ ಸ್ಪಂದಿಸಿದ ಭಾರತ ಸರ್ಕಾರ

* ಆರ್ಥಿಕ ನಿಯಮ ಸಡಿಲಿಕೆ, ಜನರಿಗೆ ನೆರವು, ಸುಧಾರಣೆ ಮುಂದುವರಿಕೆ: ಐಎಂಎಫ್‌

IMF commends India swift substantial response to Covid-19 pandemic pod

ವಾಷಿಂಗ್ಟನ್‌(ಅ.17); ಕೋವಿಡ್‌-19ನಿಂದ(Covid 19) ಉದ್ಭವಿಸಿದ ಪರಿಸ್ಥಿತಿಗೆ ಭಾರತ ಸರ್ಕಾರವು ತೋರಿದ ಪ್ರತಿಕ್ರಿಯೆ ಅತ್ಯಂತ ತ್ವರಿತವಾಗಿತ್ತು ಹಾಗೂ ಸದೃಢವಾಗಿತ್ತು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಪ್ರಶಂಸಿಸಿದೆ. ಇತ್ತೀಚೆಗೆ ಭಾರತವು 2021-22ರಲ್ಲಿ ವಿಶ್ವದ ನಂ.1 ಆರ್ಥಿಕತೆಯಾಗಲಿದೆ ಎಂದು ಐಎಂಎಫ್‌ ಹೇಳಿತ್ತು. ಅದರ ಬೆನ್ನಲ್ಲೇ ಈ ಮತ್ತೊಂದು ಮೆಚ್ಚುಗೆ ಪ್ರಕಟಿಸಿದೆ.

ಕೋವಿಡ್‌-19 ಹಿನ್ನೆಲೆಯಲ್ಲಿ ಆರ್ಥಿಕತೆಯ ಮೇಲೆ ಪರಿಣಾಮ ಉಂಟಾಯಿತು. ಆದರೆ ಅತ್ಯಂತ ಸಮರ್ಥವಾಗಿ ಹಾಗೂ ಲಗುಬಗೆಯಿಂದ ಭಾರತ ಸರ್ಕಾರ ಇದಕ್ಕೆ ಪ್ರತಿಕ್ರಿಯಿಸಿತು. ಆರ್ಥಿಕ ಸಂಕಟಕ್ಕೆ ಒಳಗಾದ ಜನರಿಗೆ ಹಣಕಾಸು ನೆರವು ನೀಡಿತು. ಕಠಿಣ ಆರ್ಥಿಕ ನಿಯಮಗಳನ್ನು ಸಡಿಲಗೊಳಿಸಿತು. ಸಾಲ ಸೌಲಭ್ಯ ಒದಗಿಸಿತು ಎಂದು ತನ್ನ ವರದಿಯಲ್ಲಿ ಐಎಂಎಫ್‌ ಹೇಳಿದೆ.

ಕೋವಿಡ್‌ನಿಂದ ಅರ್ಥವ್ಯವಸ್ಥೆ ಮೇಲೆ ಒಂದು ಕಡೆ ಪರಿಣಾಮ ಆಗುತ್ತಿದ್ದರೂ ಭಾರತ ಸರ್ಕಾರ ಆರ್ಥಿಕ ಸುಧಾರಣಾ ನೀತಿಗಳನ್ನು ಕೈಬಿಡಲಿಲ್ಲ. ಖಾಸಗೀಕರಣ ಹಾಗೂ ಕಾರ್ಮಿಕ ಸುಧಾರಣಾ ನೀತಿಗಳನ್ನು ಮುಂದುವರಿಸಿತು ಎಂದು ಅದು ಮೆಚ್ಚುಗೆ ಪ್ರಕಟಿಸಿದೆ.

ಇದೇ ವೇಳೆ, ಆರ್ಥಿಕತೆ ಮೇಲೆ ಕೊರೋನಾ ಪರಿಣಾಮ ಬೀರಿದ್ದರೂ, ಅಂದುಕೊಂಡಿದ್ದಕ್ಕಿಂತ ಅತ್ಯಂತ ಬೇಗ ಚೇತರಿಕೆ ಆಗಲಿದೆ ಎಂದಿದೆ.

ಆರ್ಥಿಕ ಪ್ರಗತಿಯಲ್ಲಿ ಭಾರತ ವಿಶ್ವ ನಂ.1

ಕೊರೋನಾದಿಂದ(Coronavirus) ದೇಶದ ಆರ್ಥಿಕತೆಗೆ(Economy) ಭಾರಿ ಹೊಡೆತ ಬಿದ್ದಿದ್ದರೂ, ಭಾರತವು 2021ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ವೇಗದಿಂದ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ ಎನ್ನಿಸಿಕೊಳ್ಳಲಿದೆ. ಭಾರತದIndia) ಜಿಡಿಪಿ(GDP) ಬೆಳವಣಿಗೆ ದರ 2021ರಲ್ಲಿ ಶೇ.9.5 ಹಾಗೂ 2022ರಲ್ಲಿ ಶೇ.8.5 ಇರಲಿದೆ. ವಿಶ್ವದ ಇತರ ಅಭಿವೃದ್ಧಿ ಹೊಂದಿದ ದೇಶಗಳನ್ನೂ ಭಾರತ ಮೀರಿಸಲಿದೆ ಎಂದು ಅಂತಾರಾಷ್ಟ್ರೀಯ ಆರ್ಥಿಕ ನಿಧಿ (IMF) ಹೇಳಿದೆ.

ತನ್ನ ಆರ್ಥಿಕ ಅಭಿವೃದ್ಧಿ(Economic Development) ಮುನ್ನೋಟದಲ್ಲಿ ಈ ಮಾಹಿತಿಯನ್ನು ಅದು ದಾಖಲಿಸಿದೆ. ‘ಭಾರತವು ಕೊರೋನಾ 2ನೇ ಅಲೆಯ(Second Wave Of Covid 19) ಹಿನ್ನಡೆಯಿಂದ ಹೊರಬಂದಿದೆ’ ಎಂದು ಐಎಂಎಫ್‌ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್‌Gita Gopinath) ಶಹಬ್ಬಾಸ್‌ಗಿರಿ ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ(BJP) ಈ ವರದಿಯನ್ನು ಸ್ವಾಗತಿಸಿದ್ದು, ‘ನರೇಂದ್ರ ಮೋದಿ(Narendra Modi) ಸರ್ಕಾರವು ಹಾಕಿದ ಸುಭದ್ರ ಆರ್ಥಿಕ ಅಡಿಪಾಯದ ಪರಿಣಾಮ ಈಗ ಕಾಣುತ್ತಿದೆ’ ಎಂದು ಹರ್ಷಿಸಿದೆ. ಭಾರತದ ಆರ್ಥಿಕತೆಯು ಇತ್ತೀಚೆಗೆ ಕೊರೋನಾ ಹೊಡೆತಕ್ಕೆ ಸಿಲುಕಿ ಶೇ.7.3ರಷ್ಟುಸಂಕುಚಿತ ಆಗಿದ್ದು ಇಲ್ಲಿ ಗಮನಾರ್ಹ.

ಎಲ್ಲರನ್ನೂ ಹಿಂದಿಕ್ಕಲಿದೆ ಭಾರತ:

ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ, ವಿಶ್ವದ ಆರ್ಥಿಕತೆ ಬೆಳವಣಿಗೆ ವೇಗಕ್ಕಿಂತ ಭಾರತದ ವೇಗ ಹೆಚ್ಚಿದೆ. ವಿಶ್ವದ ಜಿಡಿಪಿ 2021ರಲ್ಲಿ ಶೇ.5.9 ಹಾಗೂ 2022ರಲ್ಲಿ ಶೇ.4.9ರ ದರದಲ್ಲಿ ಅಭಿವೃದ್ಧಿ ಹೊಂದಲಿದೆ. ಆದರೆ ಭಾರತದ ದರ ಶೇ.9.5 ಮತ್ತು ಶೆ.8.5ರಷ್ಟಿರಲಿದೆ ಎಂದು ಐಎಂಎಫ್‌ ತಿಳಿಸಿದೆ.

ಇದೇ ವೇಳೆ, ಅಮೆರಿಕದ ಆರ್ಥಿಕತೆ 2021ರಲ್ಲಿ ಶೇ.6 ಹಾಗೂ 2022ರಲ್ಲಿ ಶೇ.5.2ರ ದರದಲ್ಲಿ, ಚೀನಾ(China) ಜಿಡಿಪಿ 2021ರಲ್ಲಿ ಶೇ.8 ಹಾಗೂ 2022ರಲ್ಲಿ ಶೇ.5.6ರ ದರದಲ್ಲಿ ಅಭಿವೃದ್ಧಿ ಕಾಣಲಿದ್ದು, ಭಾರತಕ್ಕಿಂತ ಹಿಂದೆ ಬೀಳಲಿವೆ ಎಂದು ಅದು ವಿವರಿಸಿದೆ.

ಭಾರತಕ್ಕೆ ಕೊರೋನಾ 2ನೇ ಅಲೆಯು ಜುಲೈನಲ್ಲಿ ಹೊಡೆತ ನೀಡಿತ್ತು. ಆದರೆ ದೇಶವು ಈಗ ಅತಿ ಕಠಿಣ ಕೊರೋನಾದ 2ನೇ ಅಲೆಯಿಂದ ಹೊರಬಂದಿದೆ. ಕೊರೋನಾ ಲಸಿಕೆ ದರದಲ್ಲಿ ಭಾರತೀಯರು ಮುಂಚೂಣಿಯಲ್ಲಿದ್ದಾರೆ. ಇದು ಖಂಡಿತವಾಗಿಯೂ ಭಾರತದ ಆರ್ಥಿಕತೆಗೆ ವರವಾಗಲಿದೆ. ಆದರೆ ಅಭಿವೃದ್ಧಿಶೀಲ ದೇಶಗಳಲ್ಲಿ ಲಸಿಕೆ ಪ್ರಕ್ರಿಯೆ ತೀವ್ರಗೊಳ್ಳಬೇಕು. ಅಭಿವೃದ್ಧಿಶೀಲ ದೇಶಗಳ ಲಸಿಕಾಕರಣಕ್ಕೆ ಶ್ರೀಮಂತ ದೇಶಗಳು ನೆರವಾಆಗಬೇಕು. ಆಗ ಅಲ್ಲಿ ಕೂಡ ಆರ್ಥಿಕ ಪ್ರಗತಿ ಆಗುತ್ತದೆ.

- ಗೀತಾ ಗೋಪಿನಾಥ್‌, ಐಎಂಎಫ್‌ ಮುಖ್ಯ ಆರ್ಥಿಕ ಆರ್ಥಿಕ ತಜ್ಞೆ

 

Latest Videos
Follow Us:
Download App:
  • android
  • ios