ರೇಮಂಡ್ ಗ್ರೂಪ್‌ನ ಅಧ್ಯಕ್ಷನಿಗೆ ಕಂಟಕವಾದ ವಿಚ್ಛೇದನ, ಕಂಪೆನಿಯಲ್ಲಿ ಮರುನೇಮಕಕ್ಕೆ ವಿರೋಧ
ರೇಮಂಡ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಅವರು ವಿಚ್ಛೇದನದ ಬಗ್ಗೆ ಸಮಸ್ಯೆಗಳನ್ನು ಬಗೆಹರಿಸದ ಕಾರಣ ಕಂಪನಿಯ ಮಂಡಳಿಯಲ್ಲಿ ಮರುನೇಮಕಕ್ಕೆ ವಿರೋಧ ವ್ಯಕ್ತವಾಗಿದೆ
ಮುಂಬೈ (ಜೂ.19): ದೇಶದ ಅತ್ಯಂತ ಹಳೆಯ ವ್ಯಾಪಾರ ಕುಟುಂಬಗಳಲ್ಲಿ ಪ್ರಮುಖರು ಎನಿಸಿರುವ ರೇಮಂಡ್ ಗ್ರೂಪ್‌ನ ಸಿಂಘಾನಿಯಾ ಕುಟುಂಬವು ಇತ್ತೀಚೆಗೆ ಬಾರೀ ಸುದ್ದಿಯಲ್ಲಿತ್ತು. ಇದೀಗ ರೇಮಂಡ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಅವರು ವಿಚ್ಛೇದನದ ಬಗ್ಗೆ ಸಮಸ್ಯೆಗಳನ್ನು ಬಗೆಹರಿಸದ ಕಾರಣ ಕಂಪನಿಯ ಮಂಡಳಿಯಲ್ಲಿ ಮರುನೇಮಕಕ್ಕೆ ವಿರೋಧ ವ್ಯಕ್ತವಾಗಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಸಾಂಸ್ಥಿಕ ಹೂಡಿಕೆದಾರರ ಸಲಹಾ ಸೇವೆಗಳು (IiAS), ಪ್ರಾಕ್ಸಿ ಸಲಹಾ ಸಂಸ್ಥೆಯು ರೇಮಂಡ್ ಹೂಡಿಕೆದಾರರನ್ನು ಜೂನ್ 27 ರಂದು ನಿಗದಿಪಡಿಸಲಾದ ಸಂಸ್ಥೆಯ AGM ಗೆ ಮುಂಚಿತವಾಗಿ ಸಿಂಘಾನಿಯಾ ವಿರುದ್ಧ ಮರು-ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಒತ್ತಾಯಿಸಿದೆ. ಸಿಂಘಾನಿಯಾ ಏಪ್ರಿಲ್ 1,1990 ರಿಂದ ರೇಮಂಡ್ ಮಂಡಳಿಯಲ್ಲಿದ್ದಾರೆ.
ದರ್ಶನ್ ಮರ್ಯಾದೆ ಉಳಿಸಿಲು ಮುಂದಾದ ಪತ್ನಿ, ಮಾಧ್ಯಮಗಳಿಗೆ ತಡೆಯಾಜ್ಞೆ ತಂದ ವಿಜಯಲಕ್ಷ್ಮಿ!
ವಿಚ್ಛೇದನ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ ರೇಮಂಡ್ ನಿರ್ದೇಶಕರ ಮಂಡಳಿಯಿಂದ ಗೌತಮ್ ಸಿಂಘಾನಿಯಾ, ಮತ್ತು ಅವರ ವಿಚ್ಛೇದಿತ ಪತ್ನಿ ನವಾಜ್ ಮೋದಿ ಅವರನ್ನು ಕಂಪೆನಿಯಲ್ಲಿರುವ ಸ್ಥಾನಗಳಿಂದ ತೆಗೆದು ಹಾಕುವಂತೆ IIAS ಸಲಹೆ ನೀಡಿದೆ. ವಿಚ್ಛೇದನ ಸಂಬಂಧಿತ ಸಮಸ್ಯೆಗಳು ಇತ್ಯರ್ಥವಾಗುವವರೆಗೆ ಮತ್ತು ಸ್ವತಂತ್ರ ತನಿಖೆಯ ಫಲಿತಾಂಶಗಳು ಬರುವವರೆಗೆ, ಮಂಡಳಿಯು ಗೌತಮ್ ಸಿಂಘಾನಿಯಾ ಮತ್ತು ನವಾಜ್ ಮೋದಿ ಇಬ್ಬರೂ ನಿರ್ದೇಶಕ ಸ್ಥಾನದಿಂದ ಹೊರಬೇಕೆಂದು ನಾವು ನಿರೀಕ್ಷಿಸುತ್ತೇವೆ ಎಂದು ತಿಳಿಸಲಾಗಿದೆ.
ಗೌತಮ್ ಅವರ ಪತ್ನಿ ನವಾಜ್ ಮೋದಿ ಅವರು ಕೌಟುಂಬಿಕ ಹಿಂಸೆ ಮತ್ತು ಕಂಪನಿಯ ಹಣವನ್ನು ತಮ್ಮ ವೈಯಕ್ತಿಕ ಬಳಕೆಗೆ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಿದ್ದರೂ ಕಂಪನಿಯು ಸಿಂಘಾನಿಯಾ ಅವರನ್ನು ಮತ್ತೂ ಐದು ವರ್ಷಗಳ ಅವಧಿಗೆ ಮಂಡಳಿಗೆ ಮರುನೇಮಕ ಮಾಡುವಂತೆ ಸೂಚಿಸಿತು.
ಶಾಲೆಗಳಲ್ಲಿ ಹುಟ್ಟುಹಬ್ಬ ಆಚರಣೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ
ಡಿಸೆಂಬರ್ 2023 ರ ತನ್ನ ಕೊನೆಯ ಹೇಳಿಕೆಯಲ್ಲಿ ಮಂಡಳಿಯು ನವೀಕರಣದ ಬಗ್ಗೆ ತಿಳಿಸಿಲ್ಲ. ಜೊತೆಗೆ ಈ ಆರೋಪಗಳ ಬಗ್ಗೆ ಸ್ವತಂತ್ರ ತನಿಖೆಯನ್ನು ಕೋರಲಾಗಿದೆಯೇ ಎಂಬುದು ಅಸ್ಪಷ್ಟವಾಗಿದೆ ಎಂದು IIAS ಹೇಳಿದೆ.
ಗೌತಮ್ 1999 ರಲ್ಲಿ ನವಾಜ್ ಮೋದಿ ಅವರನ್ನು ವಿವಾಹವಾದರು ಮತ್ತು ಇಬ್ಬರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಗೌತಮ್ 1986 ರಲ್ಲಿ ಸಿಂಘಾನಿಯಾ ಕುಟುಂಬದ JK ಗ್ರೂಪ್ ಆಫ್ ಕಂಪನಿಗಳಿಗೆ ಸೇರಿದರು. ನಂತರ ಅವರು ರೇಮಂಡ್ ಗ್ರೂಪ್‌ಗೆ ಸೇರಿದರು, 1990 ರಲ್ಲಿ ನಿರ್ದೇಶಕರಾದರು.
ಈ ಹಿಂದೆ ಅಂಬಾನಿಗಿಂತಲೂ ಶ್ರೀಮಂತ ವ್ಯಕ್ತಿಯಾಗಿದ್ದ ರೇಮಂಡ್ಸ್ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ಅವರ ಪುತ್ರ ಗೌತಮ್ ಸಿಂಘಾನಿಯಾ. ಆಸ್ತಿಗಾಗಿ ಅಪ್ಪನನ್ನೇ ಹೊರಹಾಕಿ ಸುದ್ದಿಯಾಗಿದ್ದರು. ಬಳಿಕ ಕೌಟುಂಬಿಕ ಕಲಹ ಮತ್ತು ವಿಚ್ಚೇದನದ ಬಗ್ಗೆ ಸುದ್ದಿಯಾಗಿದ್ದರು. ಇತ್ತೀಚೆಗೆ ಕಳೆದ ಮಾರ್ಚ್‌ನಲ್ಲಿ ಸುಮಾರು ಒಂಬತ್ತು ವರ್ಷಗಳ ನಂತರ ತಮ್ಮ ತಂದೆಯೊಂದಿಗೆ ಕಾಣಿಸಿಕೊಂಡು ಮತ್ತೆ ತಂದೆಯೊಂದಿಗೆ ಸರಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದರು. ಕಳೆದ ಒಂದು ದಶಕದಲ್ಲಿ, ತಂದೆ ಮತ್ತು ಮಗನ ನಡುವೆ ಮಾತುಕತೆಯೇ ಇರಲಿಲ್ಲ ಎಂಬುದು ಗಮನಾರ್ಹ ಸಂಗತಿ.
2015 ರ ನಂತರ ವಿಜಯಪತ್ ಸಿಂಘಾನಿಯಾ ಜೀವನವು ವಿಭಿನ್ನ ತಿರುವು ಪಡೆಯಿತು. ವಿಜಯಪತ್ ಸಿಂಘಾನಿಯಾ ಅವರು 2015 ರಲ್ಲಿ ರೇಮಂಡ್ ಗ್ರೂಪ್‌ನ ಅಧಿಕಾರವನ್ನು ತಮ್ಮ ಮಗ ಗೌತಮ್ ಸಿಂಘಾನಿಯಾಗೆ ಹಸ್ತಾಂತರಿಸುವುದಾಗಿ ಘೋಷಿಸುವವರೆಗೂ ಎಲ್ಲವೂ ಸುಗಮವಾಗಿ ನಡೆಯುತ್ತಿತ್ತು. ಅಲ್ಲಿಂದ ಅವರ ಬದುಕು ಬದಲಾಯಿತು. ತಂದೆ ಮತ್ತು ಮಗನ ನಡುವಿನ ಆಸ್ತಿ ವಿವಾದಗಳು ಬೀದಿಗೆ ಬಂತು. ಇದು 2017 ರಲ್ಲಿ ಸಾರ್ವಜನಿಕ ವಾಗ್ವಾದದಲ್ಲಿ ಕೊನೆಗೊಂಡಿತು.
ವಿಜಯಪತ್ ಸಿಂಘಾನಿಯಾ ಅವರನ್ನು ದಕ್ಷಿಣ ಮುಂಬೈನ ಜೆಕೆ ಹೌಸ್‌ನಿಂದ ಮಗ ಗೌತಮ್ ಹೊರ ಹಾಕಿದರು. ಪತ್ನಿ ಕೂಡ ಅದಾಗಲೇ ಮೃತಪಟ್ಟಿದ್ದು, ಒಬ್ಬಂಟಿಯಾಗಿ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ವಿಜಯಪತ್ ಸಿಂಘಾನಿಯಾ ಅವರು ತಮ್ಮ ಮಗನಿಗೆ ಎಲ್ಲವನ್ನೂ ನೀಡುವ ಮೂಲಕ ದೊಡ್ಡ ತಪ್ಪು ಮಾಡಿದ್ದೇನೆ ಎಂದು ಹಲವಾರು ಬಾರಿ ಹೇಳಿಕೊಂಡಿದ್ದರು.