Asianet Suvarna News Asianet Suvarna News

ದರ್ಶನ್ ಮರ್ಯಾದೆ ಉಳಿಸಲು ಮುಂದಾದ ಪತ್ನಿ, ಮಾಧ್ಯಮಗಳಿಗೆ ತಡೆಯಾಜ್ಞೆ ತಂದ ವಿಜಯಲಕ್ಷ್ಮಿ!

ಕೊಲೆ ಪ್ರಕರಣದಲ್ಲಿ ಹಲವು ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಕುಟುಂಬದ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ  ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.

RenukaSwamy Murder case actor Darshan Wife Vijayalakshmi stay order against media  gow
Author
First Published Jun 19, 2024, 8:49 PM IST

ಬೆಂಗಳೂರು (ಜೂ.19): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹಲವು ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಕುಟುಂಬದ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ, ವರದಿಗಾರರಿಗೆ , ನಿರೂಪಕರಿಗೆ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ  ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ತನ್ನ ಹಾಗೂ ಮಗ, ಪತಿ ದರ್ಶನ್ ಬಗ್ಗೆ ವೈಯಕ್ತಿಕ ವಿಚಾರದಲ್ಲಿ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದು, ಈ ಬಗ್ಗೆ ಇಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

ದರ್ಶನ್ ನ ರಕ್ಷಣೆಗೆ ಬಿಜೆಪಿ ಶಾಸಕರು, ಸಂಸದರಿಂದ ಒತ್ತಡವಿತ್ತು: ಶಾಸಕ ಪೊನ್ನಣ್ಣ

ಮೊದಲಿಗೆ ಮೃತ ಶ್ರೀ ರೇಣುಕಾಸ್ವಾಮಿ ಕುಟುಂಬಕ್ಕೆ ನನ್ನ ಹೃದಯದಿಂದ ಸಾಂತ್ವಾನ ಹೇಳುತ್ತೇನೆ.  ಕಳೆದ ಕೆಲವು ದಿನಗಳಿಂದ ದರ್ಶನ್, ನಾನು, ನನ್ನ ಹದಿಹರೆಯದ ಮಗ ಮತ್ತು ದರ್ಶನ್ ಅವರ ಎಲ್ಲಾ ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳು ನೋವು ಅನುಭವಿಸುತ್ತಿದ್ದೇವೆ. ಗೌರವಾನ್ವಿತ ನ್ಯಾಯಾಲಯವು ಹೊರಡಿಸಿದ ಈ ಆದೇಶದಿಂದ ವಿವಿಧ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮ ಮಾಧ್ಯಮಗಳಲ್ಲಿ ಹರಡುತ್ತಿದ್ದ ಕೆಲವು ಸುಳ್ಳು ಮಾಹಿತಿ ಮತ್ತು ಅಸತ್ಯಗಳನ್ನು  ನಿಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ.  ನನ್ನ ಚಾಮುಂಡೇಶ್ವರಿ ಮತ್ತು ನಮ್ಮ ಕಾನೂನು ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ನ್ಯಾಯಕ್ಕೆ ಜಯವಾಗಲಿ. ಸತ್ಯಮೇವ ಜಯತೆ! ಎಂದು ಬರೆದುಕೊಂಡಿದ್ದಾರೆ.

ಗಂಡನ ರಕ್ಷಣೆಗೆ ಟೊಂಕ ಕಟ್ಟಿ ನಿಂತ ವಿಜಯಲಕ್ಷ್ಮಿ, ದರ್ಶನ್‌ ಪರ ವಾದಕ್ಕೆ ಹಿರಿಯ ವಕೀಲರ ಭೇಟಿ

ಕಳೆದೆರಡು ದಿನಗಳ ಹಿಂದೆ ಕರ್ನಾಟಕದ ಅತ್ಯುತ್ತಮ ಕ್ರಿಮಿನಲ್ ಲಾಯರ್‌ ಗಳಲ್ಲಿ ಒಬ್ಬರಾಗಿರುವ  ರವಿ. ಬಿ ನಾಯಕ್ ಅವರನ್ನು ವಿಜಯಲಕ್ಷ್ಮಿ ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಇಂದು ಸ್ಟೇ ಆರ್ಡರ್ ತರಲಾಗಿದೆ. ಇಂದು ಅನ್ನಪೂರ್ಣೇಶ್ವರಿ ಠಾಣೆಗೆ ವಿಜಯಲಕ್ಷ್ಮಿ ವಿಚಾರಣೆಗೆ ಬಂದಿದ್ದರು. ಪೊಲೀಸರು ವಿಚಾರಣೆಗೆ ಬರುವಂತೆ ನೊಟೀಸ್ ನೀಡಿದ ಹಿನ್ನೆಲೆಯಲ್ಲಿ ಬಂದು ವಿಚಾರಣೆ ಎದುರಿಸಿ ವಾಪಸ್ಸಾಗಿದ್ದರು.

Latest Videos
Follow Us:
Download App:
  • android
  • ios