Asianet Suvarna News Asianet Suvarna News

ಈ ಕಂಪೆನಿಯಲ್ಲಿ ಸೊಳ್ಳೆ ಕಡಿತಕ್ಕೂ 1 ಲಕ್ಷ ಮೊತ್ತದ ವಿಮೆ!

ಸೊಳ್ಳೆ ಕಡಿತಕ್ಕೂ ವಿಮೆ!| ಡೆಂಗ್ಯೂ, ಮಲೇರಿಯಾ ಸೇರಿ 7 ರೋಗಗಳಿಗೆ ವಿಮೆ| ಗರಿಷ್ಠ 1 ಲಕ್ಷ ಮೊತ್ತದ ವಿಮೆ, ಯಾವುದೇ ಆರೋಗ್ಯ ತಪಾಸಣೆಯ ಅಗತ್ಯವಿಲ್ಲ.

IFFCO Tokio Launches MOS BITE Protector Policy
Author
Bangalore, First Published Nov 19, 2019, 10:23 AM IST

ನವದೆಹಲಿ[ನ.19]: ದೇಶದಲ್ಲಿ ವಿವಿದ ಬಗೆಯ ಆರೋಗ್ಯ ವಿಮೆಗಳಿದ್ದರೂ, ಅತಿಯಾದ ಪ್ರಿಮಿಯಂನಿಂದಾಗಿ ಅದರ ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ವಿಮೆ ಇದ್ದರೂ ಸಣ್ಣ ಖಾಯಿಲೆಗಳಿಗೆ ಅದು ಅನ್ವಯಿಸದ ಕಾರಣ ಪಡೆದ ವಿಮೆಗಳು ವ್ಯರ್ಥವಾಗುತ್ತಿದ್ದವು. ಆದರೆ ಇನ್ನು ಮುಂದೆ ಈ ಸಮಸ್ಯೆಗೆ ಬ್ರೇಕ್‌ ಬೀಳಲಿದ್ದು, ಸೊಳ್ಳೆ ಕಡಿತದಿಂದ ಬರುವ ರೋಗಕ್ಕೂ ಕಂಪನಿಯೊಂದು ವಿಮಾ ಯೋಜನೆಯನ್ನು ಪರಿಚಯಿಸಿದೆ.

ಇಫ್ಕೋ ಟೋಕಿಯೋ ಜನರಲ್‌ ಇನ್ಷೂರೆನ್ಸ್‌ ಕಂಪನಿ, ‘ಮಾಸ್‌-ಬೈಟ್‌ ಪ್ರೊಟೆಕ್ಟರ್‌ ಪಾಲಿಸಿ’ ಎಂಬ ಹೊಸ ವಿಮಾ ಯೋಜನೆಯನ್ನು ಪರಿಚಯಿಸಿದ್ದು, ಇದರಲ್ಲಿ ಸೊಳ್ಳೆ ಕಡಿತದಿಂದ ಉಂಟಾಗುವ ಡೆಂಗ್ಯೂ, ಮಲೇರಿಯಾ, ಫಿಲೇರಿಯಾಸಿಸ್‌, ಕಾಲಾ-ಅಜರ್‌, ಚಿಕನ್‌ಗುನ್ಯಾ, ಜಪಾನೀಸ್‌ ಎನ್ಸೆಫಾಲಿಟಿಸ್‌ ಹಾಗೂ ಝೀಕಾ ವೈರಸ್‌ಗೆ ಈ ವಿಮೆ ಯೋಜನೆಯಡಿ ಒಳ ಪಡಲಿದೆ.

18-65 ವಯಸ್ಸಿನವರಿಗೆ ಈ ವಿಮಾ ಸೌಲಭ್ಯ ನೀಡಲಾಗಿದ್ದು ಯಾವುದೇ ಆರೋಗ್ಯ ತಪಾಸಣೆಯ ಅಗತ್ಯ ಇಲ್ಲ. 91 ದಿನದ ಮಗುವಿನಿಂದ ಹಿಡಿದು 23 ವರ್ಷದ ವರೆಗಿನವರಿಗೂ ಈ ಯೋಜನೆ ಲಭ್ಯವಿದೆ. 5000 ದಿಂದ ಹಿಡಿದು 1 ಲಕ್ಷದ ವರೆಗಿನ ಯೋಜನೆಗಳಿದ್ದು, 5 ಸಾವಿರದ ಯೋಜನೆಗೆ ವಾರ್ಷಿಕ 44 ರು. ಹಾಗೂ 1 ಲಕ್ಷದ ಯೋಜನೆಗೆ ವಾರ್ಷಿಕ 876ರು. ಪ್ರೀಮಿಯಂ ನಿಗದಿ ಪಡಿಸಲಾಗಿದೆ. ದೀರ್ಘಾವಧಿಗೂ ಈ ಯೋಜನೆ ಲಭ್ಯವಿದ್ದು 2 ಹಾಗೂ 3 ವರ್ಷದ ವಿಮೆ ಮಾಡಿಸಿಕೊಳ್ಳಬಹುದಾಗಿದೆ. ವಿಮೆ ಹಣ ಪಡೆಯಬೇಕಾದರೆ ಕನಿಷ್ಠ 48 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿರಬೇಕು.

Follow Us:
Download App:
  • android
  • ios