ನವದೆಹಲಿ (ಜ. 13): ಖಾಸಗಿ ವಲಯದ ಐಡಿಎಫ್‌ಸಿ ಬ್ಯಾಂಕ್‌ನ ಹೆಸರು ಶನಿವಾರದಿಂದ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಎಂಬುದಾಗಿ ಬದಲಾವಣೆಗೊಂಡಿದೆ.

ಐಡಿಎಫ್‌ಸಿ ಬ್ಯಾಂಕ್‌ ಮತ್ತು ಬ್ಯಾಂಕೇತರ ಹಣಕಾಸು ಕಂಪನಿ ಕ್ಯಾಪಿಟಲ್‌ ಫಸ್ಟ್‌ ಕಂಪನಿಗಳು ವಿಲೀನಗೊಳ್ಳುತ್ತಿರುವುದಾಗಿ ಡಿ.18ರಂದು ಘೋಷಿಸಿದ್ದವು. ಈ ಮೂಲಕ 1.03 ಲಕ್ಷ ಕೋಟಿ ರು. ಮೌಲ್ಯದ ಕಂಪನಿ ಸೃಷ್ಟಿಯಾಗಿದೆ. ಕ್ಯಾಪಿಟಲ್‌ ಫಸ್ಟ್‌ ಲಿಮಿಟೆಡ್‌ನ ಮುಖ್ಯಸ್ಥ ವಿ. ವೈದ್ಯನಾಥನ್‌ ನೂತನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ 203 ಬ್ಯಾಂಕ್‌ ಶಾಖೆಗಳೊಂದಿಗೆ 72 ಲಕ್ಷ ಗ್ರಾಹಕರನ್ನು ಹೊಂದಿರಲಿದೆ.