ನಾನು ಬ್ಯಾಂಕ್ ಪೋಸ್ಟರ್ ಬಾಯ್: ವಿಜಯ್ ಮಲ್ಯ!

I made the "Poster Boy" of bank default: Vijay Mallya
Highlights

ನಾನು ಬ್ಯಾಂಕ್ ಪೋಸ್ಟರ್ ಬಾಯ್ ಎಂದ ಮಲ್ಯ

ಪ್ರಧಾನಿ, ವಿತ್ತ ಸಚಿವರಿಗೆ ಮಲ್ಯ ಬರೆದ ಪತ್ರದಲ್ಲೇನಿದೆ?

ಮಲ್ಯ ಬರೆದ ಪತ್ರಕ್ಕೆ ಪ್ರಧಾನಿ ಉತ್ತರ ಏಕಿಲ್ಲ?

ನವದೆಹಲಿ(ಜೂ.26): ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ಸಾಲ ಮರುಪಾವತಿ ಮಾಡಬೇಕಿರುವ ವಿಜಯ್ ಮಲ್ಯಾ 'ನಾನು ಬ್ಯಾಂಕ್ ಸುಸ್ತಿದಾರರ ಪೋಸ್ಟರ್ ಬಾಯ್ ಆಗಿದ್ದೇನೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ತಮ್ಮ ಬಹುಕಾಲದ ಮೌನವನ್ನು ಮುರಿದಿರುವ ವಿಜಯ್ ಮಲ್ಯಾ, ಬ್ಯಾಂಕ್ ಸಾಲ ಮರುಪಾವತಿ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವರಿಗೆ 2016 ರ ಏ.15 ರಂದು ಪತ್ರ ಬರೆದಿದ್ದಾಗಿ ತಿಳಿಸಿದ್ದಾರೆ. ಆಡರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದೂ ಮಲ್ಯ ಸ್ಪಷ್ಟಪಡಿಸಿದ್ದಾರೆ.  

ಕಿಂಗ್ ಫಿಷರ್ ಏರ್‌ಲೈನ್ಸ್ ಗಾಗಿ ಪಡೆದಿದ್ದ 9,000 ಕೋಟಿ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದೇನೆ ಎಂಬಂತೆ ರಾಜಕಾರಣಿಗಳು ಹಾಗೂ ಮಾಧ್ಯಮದವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕೆಲವೊಂದು ಬ್ಯಾಂಕ್‌ಗಳು ನನ್ನನ್ನು ಉದ್ದೇಶಪೂರ್ವಕವಾಗಿ ಸುಸ್ತಿದಾರನೆಂಬ ಹಣೆಪಟ್ಟಿ ಕೊಟ್ಟಿವೆ ಎಂದು ಮಲ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

loader