ಬೆಂಗಳೂರಿಗಿಂತ ಹೈದರಾಬಾದ್‌ ಹೂಡಿಕೆಗೆ ಪ್ರಶಸ್ತ ಸ್ಥಳವಾಗಿದೆ. ಆಯಕಟ್ಟಿನ ಸ್ಥಳ, ಉದ್ಯಮಕ್ಕೆ ಪೂರಕ ವಾತಾವರಣ ಮತ್ತು ಉನ್ನತ ಮಟ್ಟದ ಜೀವನೋಪಾಯ ಹೊಂದಿರುವ ಮಂದಿ ಹೈದರಾಬಾದ್‌ನಲ್ಲಿ ಅಧಿಕವಾಗಿದ್ದಾರೆ. ಆದರೆ ಬೆಂಗಳೂರಿನಲ್ಲಿ ಅತ್ಯಧಿಕ ಟ್ರಾಫಿಕ್‌ ಕಿರಿಕಿರಿ, ರಸ್ತೆಯಲ್ಲಿ ಗುಂಡಿ, ನೀರಿನ ಅಭಾವ, ಅಧಿಕ ಜೀವನ ವೆಚ್ಚದಂತಹ ಅನೇಕ ಸಮಸ್ಯೆಗಳಿವೆ: ತೆಲಂಗಾಣ ಮಾಹಿತಿ ತಂತ್ರಜ್ಞಾನ ಸಚಿವ ಶ್ರೀಧರ್‌ ಬಾಬು 

ವಾಷಿಂಗ್ಟನ್‌(ಜೂ.12): ಉದ್ಯಮಗಳಲ್ಲಿ ಹೂಡಿಕೆ ಮಾಡಲು ಬೆಂಗಳೂರಿಗಿಂತ ತೆಲಂಗಾಣ ರಾಜಧಾನಿ ಹೈದರಾಬಾದ್‌ ಅತ್ಯುತ್ತಮ ಸ್ಥಳವಾಗಿದೆ ಎಂದು ತೆಲಂಗಾಣ ಮಾಹಿತಿ ತಂತ್ರಜ್ಞಾನ ಸಚಿವ ಶ್ರೀಧರ್‌ ಬಾಬು ಅಭಿಪ್ರಾಯಪಟ್ಟಿದ್ದಾರೆ.

ಪಿಟಿಐ ಜೊತೆ ಸಂದರ್ಶನದಲ್ಲಿ ಮಾತನಾಡಿದ ಶ್ರೀಧರ್‌, ‘ಬೆಂಗಳೂರಿಗಿಂತ ಹೈದರಾಬಾದ್‌ ಹೂಡಿಕೆಗೆ ಪ್ರಶಸ್ತ ಸ್ಥಳವಾಗಿದೆ. ಆಯಕಟ್ಟಿನ ಸ್ಥಳ, ಉದ್ಯಮಕ್ಕೆ ಪೂರಕ ವಾತಾವರಣ ಮತ್ತು ಉನ್ನತ ಮಟ್ಟದ ಜೀವನೋಪಾಯ ಹೊಂದಿರುವ ಮಂದಿ ಹೈದರಾಬಾದ್‌ನಲ್ಲಿ ಅಧಿಕವಾಗಿದ್ದಾರೆ. ಆದರೆ ಬೆಂಗಳೂರಿನಲ್ಲಿ ಅತ್ಯಧಿಕ ಟ್ರಾಫಿಕ್‌ ಕಿರಿಕಿರಿ, ರಸ್ತೆಯಲ್ಲಿ ಗುಂಡಿ, ನೀರಿನ ಅಭಾವ, ಅಧಿಕ ಜೀವನ ವೆಚ್ಚದಂತಹ ಅನೇಕ ಸಮಸ್ಯೆಗಳಿವೆ. ಅದಕ್ಕೆ ಪರಿಹಾರವಾಗಿ ಹೈದರಾಬಾದ್‌ನಲ್ಲಿ ಜೀವನಕ್ಕೆ ಉತ್ತಮ ಸೌಕರ್ಯ, ಉದ್ಯಮವನ್ನು ಸ್ಥಾಪಿಸಲು ಅತ್ಯುತ್ತಮ ಮೂಲಸೌಕರ್ಯ, ಉದ್ಯಮವನ್ನು ವಿಸ್ತರಿಸಲು ಗಣನೀಯ ಪ್ರಮಾಣದಲ್ಲಿ ಸ್ಥಳಾವಕಾಶ ಒದಗಿಸಲಾಗುತ್ತದೆ. ಹಾಗಾಗಿ ಬೆಂಗಳೂರಿಗಿಂತ ಹೈದರಾಬಾದ್‌ ಹೂಡಿಕೆ ಸ್ನೇಹಿಯಾಗಿದೆ’ ಎಂದು ತಿಳಿಸಿದರು.

Investment Plan : ದಿನಕ್ಕೆ ಕೇವಲ 6 ರೂ. ಕಟ್ಟಿದ್ರೆ ಸಿಗುತ್ತೆ ಮೂರು ಲಕ್ಷ…! ಮಕ್ಕಳ ಉಜ್ವಲ ಭವಿಷ್ಯಕ್ಕೆ ಉತ್ತಮ ಯೋಜನೆ

ಇದಕ್ಕೂ ಮೊದಲು ತೆಲಂಗಾಣದಲ್ಲಿ ಬಿಆರ್‌ಎಸ್‌ ಸರ್ಕಾರವಿದ್ದಾಗಲೂ ಸಹ ಬೆಂಗಳೂರಿನಲ್ಲಿ ಐಟಿ ಕಂಪನಿಗಳನ್ನು ಹೈದರಾಬಾದ್‌ನಲ್ಲಿ ಸ್ಥಾಪಿಸುವಂತೆ ಮುಕ್ತ ಆಹ್ವಾನ ನೀಡಿತ್ತು.