Investment Plan : ದಿನಕ್ಕೆ ಕೇವಲ 6 ರೂ. ಕಟ್ಟಿದ್ರೆ ಸಿಗುತ್ತೆ ಮೂರು ಲಕ್ಷ…! ಮಕ್ಕಳ ಉಜ್ವಲ ಭವಿಷ್ಯಕ್ಕೆ ಉತ್ತಮ ಯೋಜನೆ

ಮಕ್ಕಳು ದೊಡ್ಡವರಾಗ್ತಿದ್ದಂತೆ ಖರ್ಚು ಹೆಚ್ಚು. ಶಾಲೆ, ಕಾಲೇಜು ಸೇರಿದಂತೆ ಮದುವೆಗೆ ಪಾಲಕರು ಹಣ ಖರ್ಚು ಮಾಡ್ಬೇಕಾಗುತ್ತದೆ. ಒಂದೇ ಬಾರಿ ಹಣ ಹೊಂದಿಸೋದು ಕಷ್ಟದ ಮಾತು. ಮುಂದಿನ ಸುಖಕ್ಕೆ ಇಂದೇ ಈ ಯೋಜನೆಯಲ್ಲಿ ಹೂಡಿಕೆ ಮಾಡೋದು ಬೆಸ್ಟ್. 
 

Invest Just Rs 6 in Child Life Insurance for a Hefty Rs 3 Lakh Return

ಮಕ್ಕಳ ಭವಿಷ್ಯ ಉತ್ತಮವಾಗಿರಬೇಕು ಎಂಬುದು ಪ್ರತಿಯೊಬ್ಬ ಪಾಲಕರ ಆಶಯ. ಆರ್ಥಿಕವಾಗಿ ಮಕ್ಕಳಿಗೆ ಯಾವುದೇ ಸಮಸ್ಯೆ ಕಾಡ್ಬಾರದು ಎನ್ನುವ ಕಾರಣಕ್ಕೆ ಹೂಡಿಕೆ ಮಾಡುವ ಸ್ಮಾರ್ಟ್ ಪಾಲಕರಿದ್ದಾರೆ. ಮಕ್ಕಳು ಚಿಕ್ಕವರಿರುವಾಗ್ಲೇ ಅವರ ಮುಂದಿನ ಶಿಕ್ಷಣ, ಮದುವೆಗೆ ಸಂಬಂಧಿಸಿದ ಖರ್ಚಿಗಾಗಿ ಹೂಡಿಕೆ ಶುರು ಮಾಡ್ತಾರೆ. ನೀವೂ ಅವರಲ್ಲಿ ಒಬ್ಬರಾಗಿದ್ದರೆ ಅಂಚೆ ಕಚೇರಿ ಯೋಜನೆ ಲಾಭ ಪಡೆಯಬಹುದು. ಅಂಚೆ ಕಚೇರಿ ಮಕ್ಕಳಿಗಾಗಿ ಬಾಲ ಜೀವನ್ ಬೀಮಾ ಯೋಜನೆಯನ್ನು ಜಾರಿಗೆ ತಂದಿದೆ. ಇದ್ರಲ್ಲಿ ನಿತ್ಯ ಕನಿಷ್ಠ ಹೂಡಿಕೆ ಮಾಡುವ ಮೂಲಕವೇ ನೀವು ಮಕ್ಕಳ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಉಳಿತಾಯ ಮಾಡ್ಬಹುದು.

ಬಾಲ ಜೀವನ್ ಬೀಮಾ (Bal Jeevan Bima) ಯೋಜನೆ : ಬಾಲ ಜೀವನ್ ಬಿಮಾ ಯೋಜನೆ ಅಂಚೆ ಕಚೇರಿ (Post Office) ಯೋಜನೆಯಾಗಿದೆ. ನೀವು ಇಲ್ಲಿ ಕನಿಷ್ಠ 6 ರೂಪಾಯಿ ಹೂಡಿಕೆ ಮಾಡಬೇಕು. ಗರಿಷ್ಠ 3,00,000 ಪ್ರೀಮಿಯಂ ಪಾವತಿ ಮಾಡಬಹುದು.  ಭಾರತ ಸರ್ಕಾರ  ಈ ಮಕ್ಕಳ ಜೀವ ವಿಮಾ ಯೋಜನೆಯನ್ನು ಪ್ರತಿಯೊಬ್ಬ ನಾಗರಿಕರ ಬಗ್ಗೆ ಆಲೋಚನೆ ಮಾಡಿಯೇ ಶುರು ಮಾಡಿದೆ.  

ಗ್ರಾಹಕರೇ ಇಲ್ಲಿ ನೋಡಿ, ನಿಮ್ಮ ಎಫ್‌ಡಿಗೆ ಭರ್ಜರಿ ಬಡ್ಡಿ ನೀಡುವ ಬ್ಯಾಂಕುಗಳಿವು!

ಕುಟುಂಬದ ಇಬ್ಬರು ಮಕ್ಕಳು ಮಾತ್ರ ಈ ಯೋಜನೆ (Scheme) ಯ ಲಾಭ ಪಡೆಯಬಹುದು. ಮಗು ಜನಿಸಿದ ನಂತರ 5 ರಿಂದ 20 ವರ್ಷದೊಳಗಿನ ಮಕ್ಕಳ ಪೋಷಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಮಗುವಿನ ಪೋಷಕರು 5 ವರ್ಷಗಳ ಯೋಜನೆ ಪಡೆಯುತ್ತಿದ್ದರೆ ಪ್ರತಿದಿನ 18 ರೂಪಾಯಿ ಪಾವತಿ ಮಾಡಬೇಕು. ಅದೇ 20 ವರ್ಷಗಳವರೆಗಿನ ಯೋಜನೆಯನ್ನು ತೆಗೆದುಕೊಂಡಲ್ಲಿ  ಅವರು ದಿನಕ್ಕೆ 6 ರೂಪಾಯಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. 

ಮಕ್ಕಳ ಬಾಲ ಜೀವನ್ ಬಿಮಾ ಯೋಜನೆಯಲ್ಲಿ  ಕನಿಷ್ಠ ವಿಮಾ ಮೊತ್ತವು 1,00,000 ರೂಪಾಯಿ ಮತ್ತು ಗರಿಷ್ಠ ವಿಮಾ ಮೊತ್ತ 3,00,000 ರೂಪಾಯಿ ಆಗಿರುತ್ತದೆ. ಪಾಲಿಸಿದಾರ ಮಧ್ಯದಲ್ಲಿಯೇ ಸಾವನ್ನಪ್ಪಿದ್ರೆ ಹಣವನ್ನು ಪಾವತಿಸುವ ಅಗತ್ಯವಿಲ್ಲ. ಪಾಲಿಸಿ ಅವಧಿ ಮುಗಿದ ಮೇಲೆ ಸಂಪೂರ್ಣ ಹಣ   ಸಿಗುತ್ತದೆ. ಮಧ್ಯದಲ್ಲಿಯೇ ಪಾಲಿಸಿ ವಿತ್ ಡ್ರಾ ಮಾಡ್ಬೇಕು ಅಂದ್ರೆ ಐದು ವರ್ಷ ಕಾಯಬೇಕು. ಐದುವರ್ಷಕ್ಕಿಂತ ಮೊದಲು ಪಾಲಿಸಿ ಹಣ ಪಡೆಯಲು ಸಾಧ್ಯವಿಲ್ಲ.   

ಮಕ್ಕಳ ಜೀವ ವಿಮಾ ಯೋಜನೆ ಅರ್ಹತಾ ಮಾನದಂಡ : ನಿಮ್ಮ ಮಕ್ಕಳಿಗಾಗಿ ಮಕ್ಕಳ ಜೀವ ವಿಮಾ ಯೋಜನೆಗೆ ನೀವು ಅರ್ಜಿ ಸಲ್ಲಿಸಲು ಬಯಸಿದರೆ, ಅದಕ್ಕೆ ಕೆಲವು ಅರ್ಹತೆಗಳ ಅಗತ್ಯವಿರುತ್ತದೆ. ಅರ್ಜಿ ಸಲ್ಲಿಸಲು ಪೋಷಕರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು. ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಮೊದಲು ಮಗುವಿನ ವಯಸ್ಸು ಕನಿಷ್ಠ 5 ವರ್ಷಗಳು ಮತ್ತು ಗರಿಷ್ಠ ವಯಸ್ಸು 20 ವರ್ಷಗಳು. ಈ ಯೋಜನೆಯಡಿ ಕುಟುಂಬದ 2 ಮಕ್ಕಳು ಮಾತ್ರ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. 

ಮಕ್ಕಳ ಜೀವ ವಿಮಾ ಯೋಜನೆಗೆ ಅಗತ್ಯವಿರುವ ದಾಖಲೆಗಳು : ಮಕ್ಕಳ ಜೀವ ವಿಮಾ ಯೋಜನೆಗೆ ಅರ್ಜಿ ಸಲ್ಲಿಸುವಾಗ, ಮಗುವಿನ ಜನನ ದಾಖಲೆ, ಆಧಾರ್ ಕಾರ್ಡ್, ವಿಳಾಸದ ದಾಖಲೆ, ಪೋಷಕರ ಆಧಾರ್ ಕಾರ್ಡ್,ಮೊಬೈಲ್ ನಂಬರ್, ಪಾಸ್ಪೋರ್ಟ್ ಗಾತ್ರದ ಫೋಟೋ ಅಗತ್ಯವಿರುತ್ತದೆ. 

ಮೋಧಿ ವಿರೋಧಿಸಿ, ಕಾಂಗ್ರೆಸ್ ಗೆಲುವಿಗೆ ಸಹಕರಿಸಿದ ಯೂಟ್ಯೂಬರ್ ಧ್ರುವ್ ರಾಥಿ ಲವ್ ಲೈಫ್, ನೆಟ್ ವರ್ಥ್ ಇದು!

ಅರ್ಜಿ ಸಲ್ಲಿಕೆ ಹೇಗೆ? : ಮಕ್ಕಳಿಗೆ ಬಾಲ ಜೀವನ್ ಬೀಮಾ ಯೋಜನೆ ಪಡೆಯುತ್ತಿರುವ ಪಾಲಕರು ಮೊದಲು ಹತ್ತಿರದ ಅಂಚೆ ಕಚೇರಿಗೆ ಹೋಗಬೇಕು. ಅಲ್ಲಿ ಈ ಯೋಜನೆ ಅರ್ಜಿ ಪಡೆದು ಅದನ್ನು ಭರ್ತಿ ಮಾಡಬೇಕು. ನಂತ್ರ ಅಗತ್ಯವಿರುವ ದಾಖಲೆಯನ್ನು ಸೇರಿಸಬೇಕು. ಕೊನೆಯಲ್ಲಿ ಅರ್ಜಿ ಮತ್ತು ದಾಖಲೆಯನ್ನು ಸಂಬಂಧಿಸಿದ ಅಧಿಕಾರಿಗೆ ನೀಡಬೇಕು. ಅಧಿಕಾರಿಗಳು ಅರ್ಜಿ, ದಾಖಲೆ ಪರಿಶೀಲಿಸಿ ರಶೀದಿ ನೀಡುತ್ತಾರೆ. 

Latest Videos
Follow Us:
Download App:
  • android
  • ios