Paytm ಐಪಿಒಗೆ ಮೊದಲ ದಿನವೇ ಭರ್ಜರಿ ಶಾಕ್
- ದೇಶದ ಅತಿದೊಡ್ಡ ಐಪಿಒ ಎಂಬ ದಾಖಲೆಯೊಂದಿಗೆ ಬಾಂಬೆ ಷೇರು ಪೇಟೆಯಲ್ಲಿ ಲಿಸ್ಟ್ ಆದ ಪೇಟಿಎಂ ಕಂಪನಿ ಷೇರುಗಳಿಗೆ ಮೊದಲ ದಿನವೇ ಭರ್ಜರಿ ಏಟು
- ಷೇರು ಪೇಟೆಯಲ್ಲಿ ನಿರೀಕ್ಷೆಗಿಂತ ಭಾರೀ ಕಡಿಮೆ ಪ್ರಮಾಣದಲ್ಲಿ ಲಿಸ್ಟ್
ಮುಂಬೈ (ನ.19): ದೇಶದ ಅತಿದೊಡ್ಡ ಐಪಿಒ (IPO) ಎಂಬ ದಾಖಲೆಯೊಂದಿಗೆ ಗುರುವಾರ ಬಾಂಬೆ ಷೇರು ಪೇಟೆಯಲ್ಲಿ (Mumbai Share Market) ಲಿಸ್ಟ್ ಆದ ಪೇಟಿಎಂ (Paytm) ಕಂಪನಿ ಷೇರುಗಳಿಗೆ ಮೊದಲ ದಿನವೇ ಭರ್ಜರಿ ಏಟು ಬಿದ್ದಿದೆ.
18300 ಕೋಟಿ ರು. ಸಂಗ್ರಹ ಉದ್ದೇಶದೊಂದಿಗೆ ಪೇಟಿಎಂ ಸಂಸ್ಥೆ ತಲಾ 2150 ರು. ಮುಖ ಬೆಲೆಯ ಷೇರುಗಳನ್ನು ಬಿಡುಗಡೆ ಮಾಡಿತ್ತು. ಈ ಷೇರುಗಳು ಗುರುವಾರ ಬಾಂಬೆ ಷೇರು ಪೇಟೆಯಲ್ಲಿ ನಿರೀಕ್ಷೆಗಿಂತ ಭಾರೀ ಕಡಿಮೆ ಪ್ರಮಾಣದಲ್ಲಿ ಅಂದರೆ 1955 ರು.ಗೆ ಲಿಸ್ಟ್ (List) ಆಗಿದೆ. ಬಳಿಕ ದಿನದಂತ್ಯಕ್ಕೆ ಒಟ್ಟಾರೆ ಶೇ.27ರಷ್ಟು ಕುಸಿತದೊಂದಿಗೆ 1564 ರು.ಗಳಲ್ಲಿ ಮುಕ್ತಾಯವಾಗಿದೆ.
ಅಂದರೆ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 35000 ಕೋಟಿ ರು.ನಷ್ಟು ಕರಗಿ ಹೋಗಿದೆ. ಭಾರತದಲ್ಲಿ ಡಿಜಿಟಲ್ ಪಾವತಿ (Digital payment) ವ್ಯವಸ್ಥೆ ಪೇಟಿಎಂ ಆ್ಯಪ್ (App) ಮೂಲಕ ಸೇವೆ ಸಲ್ಲಿಸುತ್ತಿರುವ ಸಂಸ್ಥೆ, ತನ್ನ ಕಾರ್ಯಕ್ಷೇತ್ರ ವ್ಯಾಪ್ತಿ ವಿಸ್ತರಣೆಗೆ ಹಣ ಸಂಗ್ರಹಿಸಲು ಷೇರು ಬಿಡುಗಡೆ ಮಾಡಿತ್ತು.
ಕಣ್ಣೀರಿಟ್ಟ ಸಿಇಒ ಶರ್ಮಾ : ಗುರುವಾರ ಬಾಂಬೆ ಷೇರುಪೇಟೆಯಲ್ಲಿ ತಮ್ಮ ಕಂಪನಿಯ ಷೇರು ಲಿಸ್ಟ್ ಆಗುವ ಮುನ್ನ ರಾಷ್ಟ್ರಗೀತೆ (national Anthem) ಮೊಳಗಿದ ವೇಳೆ ಪೇಟಿಎಂ ಸಿಇಒ (CEO) ವಿಜಯ್ ಶಂಕರ್ ಶರ್ಮಾ (Vijay shankar Sharma) ಆನಂದದಿಂದ ಕಣ್ಣೀರಿಟ್ಟರು. ಶಾಲಾ ಶಿಕ್ಷಕರ (School Teacher) ಮಗನಾದ ಶರ್ಮಾ ಎಂಜಿನಿಯರಿಂಗ್(Engineering) ಪದವೀಧರರಾಗಿದ್ದು ದಶಕದ ಹಿಂದೆ ಭಾರತದಲ್ಲಿ ಪೇಟಿಎಂ ಆ್ಯಪ್ ಮೂಲಕ ಡಿಜಿಟಲ್ ಪಾವತಿ (Digital Payment) ವ್ಯವಸ್ಥೆಗೆ ಮುನ್ನುಡಿ ಬರೆದಿದ್ದರು.
ಎಲ್ಲಾ ಕ್ಯಾಷ್‌ಬ್ಯಾಕ್ ವಾಪಸ್! : ಪೇಟಿಎಂ ಷೇರು ಮೌಲ್ಯ ಕುಸಿದು ಬಿದ್ದು, ಹೂಡಿಕೆದಾರರ 35000 ಕೋಟಿ ರು. ಕೊಚ್ಚಿ ಹೋದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ (social Media), ಈ ಕುರಿತು ಸಾಕಷ್ಟು ಮೀಮ್ಸ್‌ಗಳು ಓಡಾಡಿದದವು. ಆ ಪೈಕಿ, ಈ ಮೊದಲು ನೀಡಿದ್ದ ಎಲ್ಲಾ ಕ್ಯಾಷ್‌ಬ್ಯಾಕ್ ಅನ್ನು ಪೇಟಿಎಂ ಒಮ್ಮೆಲೇ ಹಿಂದಕ್ಕೆ ಪಡೆದುಕೊಂಡಿತು ಎಂಬ ಮೀಮ್ಸ್ ಭಾರೀ ಸದ್ದು ಮಾಡಿತು.
ಪಾಸ್‌ವರ್ಡ್, ಕಾರ್ಡ್ ಮಾಹಿತಿ ಸುರಕ್ಷಿತವಾಗಿಡಲು ಲಾಕ್ :
ಗ್ರಾಹಕ ಸೈಬರ್ ಸುರಕ್ಷತೆಯ ಜಾಗತಿಕ ನಾಯಕನ ಸ್ಥಾನದಲ್ಲಿರುವ ನೊರ್ಟನ್ ಲೈಫ್ ಲಾಕ್ ದೇಶೀಯವಾಗಿ ಬೆಳೆಯುತ್ತಿರುವ ಡಿಜಿಟಲ್ ಹಣಕಾಸು ಸೇವೆಗಳ ಪ್ಲಾಟ್ ಫಾರ್ಮ್ ಆಗಿರುವ ಪೇಟಿಎಂ ನೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ. ಪೇಟಿಎಂ ಬಳಕೆದಾರರಿಗೆ ಮೂರು ಬಗೆಯ ಅನುಕೂಲಕರವಾದ ಮತ್ತು ಕೈಗೆಟುಕುವ ಚಂದಾದಾರಿಕೆ ಮಾದರಿಗಳನ್ನು ತಮ್ಮ ಸ್ಮಾರ್ಟ್ ಫೋನ್ ಮತ್ತು ಪಿಸಿಗಳಲ್ಲಿ ನೊರ್ಟನ್ ಲೈಫ್ ಲಾಕ್ ನ ಸಮಗ್ರ ಸೈಬರ್ ಸುರಕ್ಷತಾ ಪರಿಹಾರಗಳನ್ನು ನೀಡುವ ನೀಡುವ ನಿಟ್ಟಿನಲ್ಲಿ ಈ ಸಹಭಾಗಿತ್ವವನ್ನು ಮಾಡಿಕೊಂಡಿದೆ.
ಹಬ್ಬದ ವೇಳೆ ಆನ್‌ಲೈನ್ ಶಾಪಿಂಗ್ ಮಾಡುತ್ತೀರಾ? ಎಚ್ಚರ ವಹಿಸುವುದು ಅಗತ್ಯ!..
ಆನ್ ಲೈನ್ ಬ್ರೌಸಿಂಗ್, ಮೊಬೈಲ್ ಬ್ಯಾಂಕಿಂಗ್, ಹಣಕಾಸು ಅಥವಾ ಹೂಡಿಕೆ ಪೋರ್ಟ್ ಪೋಲಿಯೋ ವಹಿವಾಟು, ಮನರಂಜನೆ, ಗೇಮಿಂಗ್ ಮತ್ತು ಸಾಮಾಜಿಕ ಜಾಲಗಳಿಗಾಗಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಸೈಬರ್ ಬೆದರಿಕೆ ಮತ್ತು ಸ್ಮಾರ್ಟ್ ಫೋನ್ ಗಳ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಮೊಬೈಲ್ ಸಾಧನ ಸುರಕ್ಷತೆ ಬಹಳ ಮುಖ್ಯವಾಗಿದೆ. ಅನೇಕ ಬಳಕೆದಾರರು ಬ್ಯಾಂಕ್ ಖಾತೆ ಸಂಖ್ಯೆಗಳು, ಹೂಡಿಕೆ ಮಾಹಿತಿಗಳು, ವೈಯಕ್ತಿಕ ಫೋಟೋಗಳು, ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳು, ಪಾಸ್ ವರ್ಡ್ ಗಳು ಮತ್ತು ವೈಯಕ್ತಿಕ ಗುರುತಿನ ಮಾಹಿತಿಗಳಂತಹ ಅನೇಕ ಅತ್ಯಂತ ಸೂಕ್ಷ್ಮ ವಿವರಗಳನ್ನು ತಮ್ಮ ಫೋನ್ ಗಳಲ್ಲಿ ಸೇವ್ ಮಾಡಿಕೊಂಡಿರುತ್ತಾರೆ.
2019 ರ ನೊಟ್ರನ್ ಲೈಫ್ ಲಾಕ್ ಸೈಬರ್ ಸೇಫ್ಟಿ ಇನ್ ಸೈಟ್ಸ್ ರಿಪೋರ್ಟ್(NLCSIR) ಪ್ರಕಾರ, ಸುಮಾರು 39% ರಷ್ಟು ಭಾರತೀಯ ಪ್ರತಿಕ್ರಿಯೆದಾರರು ತಮ್ಮ ಗುರುತಿನ ಕಳವನ್ನು ಎದುರಿಸಿದ್ದಾರೆ. ಇವರಲ್ಲಿ 10% ರಷ್ಟು ಮಂದಿ ಕಳೆದ ಒಂದು ವರ್ಷದಲ್ಲಿ ಇಂತಹ ಕಳವಿಗೆ ಒಳಗಾಗಿದ್ದಾರೆ. ಇನ್ನು 61% ರಷ್ಟು ಜನರು ತಮ್ಮ ಐಡಿ ಕಳವಿನಿಂದ ತಮ್ಮನ್ನು ರಕ್ಷಿಸಿಕೊಂಡಿದ್ದರೆ, 63% ರಷ್ಟು ಜನರಿಗೆ ಗುರುತಿನ ಕಳವಿನ ಸಂದರ್ಭದಲ್ಲಿ ಏನು ಮಾಡಬೇಕೆಂಬುದು ತಮಗೆ ತಿಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ. ಇಂತಹ ಪ್ರಕರಣಗಳು ನಡೆದ ಸಂದರ್ಭದಲ್ಲಿ ಏನು ಮಾಡಬೇಕೆಂಬುದು ತಮಗೆ ತಿಳಿದಿದೆ ಎಂದು ನಾಲ್ಕನೇ ಮೂರರಷ್ಟು ಜನರು (79%) ಜನರು ಹೇಳಿದ್ದಾರೆ.
ಪೇಟಿಎಂನಿಂದ ನೀಡಲಾಗುತ್ತಿರುವ ನೊರ್ಟನ್ ಲೈಫ್ ಲಾಕ್ ಚಂದಾದಾರಿಕೆ ಮಾದರಿಗಳು ಮೊಬೈಲ್ ಡಿವೈಸ್ ಗಳಿಗೆ ಕೈಗೆಟುಕುವ ಬೆಲೆಯಲ್ಲಿ ಭದ್ರತೆಯನ್ನು ಒದಗಿಸುತ್ತದೆ ಮತ್ತು ಭಾರತದಾದ್ಯಂತ ಲಕ್ಷಾಂತರ ಸ್ಮಾರ್ಟ್ ಫೋನ್ ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಲಭ್ಯವಾಗುವಂತೆ ಮಾಡಲಿದೆ. ಗ್ರಾಹಕರು ಈ ಕೆಳಗಿನ ಮೂರು ಚಂದಾದಾರಿಕೆ ಮಾದರಿಗಳನ್ನು ಪಡೆದುಕೊಳ್ಳಬಹುದು.
ಈ ಸೇವೆಗಳನ್ನು ಪೇಟಿಎಂ ಆ್ಯಪ್ ನಲ್ಲಿ ಪಡೆಯಬಹುದಾಗಿದೆ. ಬಳಕೆದಾರರು ಬಯಸಿದರೆ ಇದನ್ನು ಡೌನ್ಲೋಡ್ ಮಾಡಿಕೊಂಡ ತಕ್ಷಣವೇ ಸ್ವಯಂಚಾಲಿತವಾಗಿ ಸಾಫ್ಟ್ ವೇರ್ ಸಕ್ರಿಯವಾಗಲಿದೆ. ಬಳಕೆದಾರರು ಪೇಟಿಎಂ ಅಥವಾ ನೊರ್ಟನ್ ಲೈಫ್ ಲಾಕ್ ಆ್ಯಪ್ ನಿಂದಲೂ ಇದನ್ನು ನವೀಕರಣಗೊಳಿಸಿಕೊಳ್ಳಬಹುದಾಗಿದೆ.