Asianet Suvarna News Asianet Suvarna News

ಕಾರ್ಮಿಕರನ್ನು ಕರೆತರಲು ಫ್ಲೈಟ್ ಟಿಕೆಟ್ ಕಳಿಸಿದ ಹುಬ್ಬಳ್ಳಿ ಉದ್ಯಮಿ

ಪರಿಣಿತ ಕಾರ್ಮಿಕರಿಗಾಗಿ ಫ್ಲೈಟ್ ಟಿಕೆಟ್ | ಚೆನ್ನೈ, ಪಶ್ಚಿಮ ಬಂಗಾಳದಲ್ಲಿರುವ ಕಾರ್ಮಿಕರು

 

Hubballi businessman wanted his skilled technicians back, so he offered them air tickets dpl
Author
Bangalore, First Published Oct 16, 2020, 11:51 AM IST

ಯಶಸ್ವಿ ಉದ್ಯಮದ ಹಿಂದೆ ಪರಿಣಿತ ಕಾರ್ಮಿಕರಿರುತ್ತಾರೆ. ಯಾವ್ಯಾವುದೋ ರಾಜ್ಯಗಳಿಂದ ಬಂದು ಕಾರ್ಖಾನೆಗಳಲ್ಲಿ ಬಹಳಷ್ಟು ವರ್ಷಗಳಿಂದ ದುಡಿಯುತ್ತಿರುವವರಿದ್ದಾರೆ. ಕೊರೋನಾದಿಂದಾಗಿ ಎಲ್ಲ ಕಾರ್ಯಾಣೆಗಳೂ ತತ್ಕಾಲಿಕವಾಗಿ ಮುಚ್ಚಿದಾಗ ಕಾರ್ಮಿಕರೆಲ್ಲ ತಮ್ಮ ಸ್ವಗ್ರಾಮಗಳಿಗೆ ಹೋಗಿದ್ದಾರೆ.

ಈಗ ಮತ್ತೆ ಕಾರ್ಖಾನೆಗಳು ಆರಂಭವಾಗಿದೆ. ಆದರೆ ಪರಿಣಿತ ಕಾರ್ಮಿಕರಿಲ್ಲದೆ ಮಾಲೀಕರು ಎದುರಿಸುತ್ತಿರುವ ಕಷ್ಟ ಒಂದೆರಡಲ್ಲ. ಆದರೆ ಕರ್ನಾಟಕದ ಉದ್ಯಮಿಯೊಬ್ಬರು ಏನೇ ಆದ್ರೂ ಪರ್ವಾಗಿಲ್ಲ, ನನ್ನ ಕಾರ್ಮಿಕರು ನನಗೆ ಬೇಕು ಎಂದು ಏನು ಮಾಡಿದ್ದಾರೆ ನೋಡಿ..

ಚಿನ್ನದ ದರದಲ್ಲಿ ಮತ್ತೆ ಬದಲಾವಣೆ: ಇಲ್ಲಿದೆ ನೋಡಿ ಅ. 15ರ ಗೋಲ್ಡ್ ರೇಟ್!

ಹುಬ್ಬಳಿಯ ಉದ್ಯಮಿಯೊಬ್ಬರು ತನ್ನ ಪರಿಣಿತ ಕಾರ್ಮಿಕರನ್ನು ಮರಳಿ ಕರೆತರುವ ಸಲುವಾಗಿ ವಿಮಾನ ಟಿಕೆಟ್ ಆಫರ್ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಕೆಲಸ ಮಾಡುವ ತಮಿಳುನಾಡು, ಪಶ್ಚಿಮ ಬಂಗಾಳದ ಕಾರ್ಮಿಕರು ಲಾಕ್‌ಡೌನ್ ಸಂದರ್ಭ ಊರಿಗೆ ಹೋಗಿದ್ದರು. ಈಗ ಕಾರ್ಖಾನೆ ತೆರೆಯಬಹುದಾದರೂ ನುರಿತ ಕೆಲಸಗಾರರಿಲ್ಲದೆ ಉದ್ಯಮಿ ಕಷ್ಟಪಟ್ಟಿದ್ದರು.

ಚಂದ್ರಕಾಂತ್ ಗಡಿಕಾರ್ ಗಮನಗಟ್ಟಿ ಮತ್ತು ಹುಬ್ಬಳ್ಳಿಯ ತ್ರಿಹಾಲ್ ಇಂಡಸ್ಟ್ರಿಯರಲ್ ಏರಿಯಾಗಾಗಿ ಸುಮಾರು 1 ಕೋಟಿ ರೂಪಾಯಿ ಬಂಡವಾಳ ಹೂಡಿದ್ದರು. ನಿರ್ಮಾಣ ಕೆಲಸ ಮತ್ತು ಯಂತ್ರಗಳ ಅಳವಡಿಸುವ ಕೆಲಸ ಫೆಬ್ರವರಿಯಲ್ಲಿಯೇ ಪೂರ್ತಿಯಾಯಿತು. ಆದರೆ ಮಾರ್ಚ್‌ನಲ್ಲಿ ಲಾಕ್‌ಡೌನ್ ಆದ ಕಾರಣ ಕಾರ್ಖಾನೆ ಮುಚ್ಚಬೇಕಾಯಿತು.

ಎಲ್ಲ ಸಿಬ್ಬಂದಿಗೆ ವೇತನ ಹೆಚ್ಚಿಸಿದ ಇನ್ಫೋಸಿಸ್, ಎಷ್ಟು ಪರ್ಸಂಟ್?

ಅನಲಾಕ್‌ ಪ್ರಕ್ರಿಯೆ ಆರಂಭವಾದ ಮೇಲೆ ಗಡಿಕಾರ್ ಕಾರ್ಖಾನೆ ಆರಂಭಿಸಲು ಸಿದ್ಧರಾಗಿದ್ದಾರೆ. ಆದರೆ ಕಾರ್ಮಿಕರಿಲ್ಲದೆ ಕೆಲಸ ಆರಂಭಿಸಲು ಮಾತ್ರ ಸಾಧ್ಯವಾಗಿಲ್ಲ. ಹಾಗಾಗಿ ಫ್ಲೈಟ್ ಟಿಕೆಟ್‌ಗಳನ್ನು ಕಳಿಸಿ ಕಾರ್ಮಿಕರನ್ನು ಕರೆತರಲು ಮುಂದಾಗಿದ್ದಾರೆ ಗಡಿಕಾರ್. ಈ ರೀತಿ ಐವರು ಕಾರ್ಮಿಕರನ್ನು ಇವರು ಕರೆಸಿಕೊಳ್ಳಲಿದ್ದಾರೆ. ಮೂವರು ಕೊಲ್ಕತ್ತಾದಿಂದ ಬೆಂಗಳೂರಿಗೆ ಈ ವಾರ ಬರಲಿದ್ದು, ಇನ್ನಿಬ್ಬರು ಮುಂದಿನವಾರ ಚೆನ್ನೈನಿಂದ ಬೆಂಗಳೂರು ತಲುಪಲಿದ್ದಾರೆ.

ಜಾಕೆಟ್, ಬ್ಯಾಗ್, ವಾಲೆಟ್, ಗ್ಲೌಸ್, ಚಪ್ಪಲಿ ಹಾಗೂ ಇತರ ಚರ್ಮದ ವಸ್ತುಗಳನ್ನು ರಫ್ತು ಗುಣಮಟ್ಟದಲ್ಲಿ ಉತ್ಪಾದಿಸಲು ಕಾರ್ಖಾನೆ ಆರಂಭಿಸಿದೆ. ಫ್ಯಾಕ್ಟರಿಯಲ್ಲಿ 30 ಜನರಿದ್ದಾರೆ. ಚರ್ಮದ ಯಂತ್ರ ಬಳಸಲು ಗೊತ್ತಿರುವ ಸ್ಥಳೀಯ ಕಾರ್ಮಿಕರಿಲ್ಲ. ಹಾಗಾಗಿ ಅನ್ಯರಾಜ್ಯದ ಕಾರ್ಮಿಕರನ್ನು ನಿಯೋಜಿಸಿದೆ. ಅವರು ಕೆಲಸಕ್ಕೆ ಮರಳಿದ ಮೇಲೆ ಸ್ಥಳೀಯರಿಗೂ ಇದನ್ನು ಕಲಿಸಿಕೊಡಬೇಕು, ತರ್ತು ಸಂದರ್ಭದಲ್ಲಿ ಇದು ನೆರವಾಗುತ್ತದೆ ಎಂದಿದ್ದಾರೆ.

Follow Us:
Download App:
  • android
  • ios