ಮಹಿಳೆಯರು ಹೆಚ್ಚು ರಿಸ್ಕ್ ಇಲ್ಲದೇ ಮಾಡೋ ಬ್ಯುಸಿನೆಸ್ ಇದು!
ಮನೆಯಲ್ಲಿ ಬಿಡುವಿನ ಸಮಯದಲ್ಲಿ ಬ್ಯುಸಿನೆಸ್ ಶುರು ಮಾಡ್ತೇನೆ ಎನ್ನುವವರಿಗೆ ಸಾಕಷ್ಟು ಅವಕಾಶವಿದೆ. ಅದ್ರಲ್ಲಿ ಮೆಹಂದಿ ಕೋನ್ ಬ್ಯುಸಿನೆಸ್ ಕೂಡ ಒಂದು. ಆರಂಭದಲ್ಲಿ ಸ್ವಲ್ಪ ಕಷ್ಟಪಟ್ಟರೆ ಮುಂದೆ ಲಾಭ ಗಳಿಸೋದು ಸುಲಭ. 10 x 10 ಅಡಿ ಜಾಗದಲ್ಲಿಯೂ ನೀವು ಈ ಬ್ಯುಸಿನೆಸ್ ಶುರು ಮಾಡಬಹುದು.
ಮೆಹಂದಿ ರಂಗಿಲ್ಲದೆ ಹಬ್ಬ ಆಚರಿಸೋದು ಹೇಗೆ? ಹಬ್ಬವಿರಲಿ, ಮದುವೆ ಸಮಾರಂಭವಿರಲಿ ಕೈಗೆ ಮದರಂಗಿ ಹಾಕಿಕೊಳ್ಳೋದು ನಮ್ಮ ದೇಶದ ಸಂಪ್ರದಾಯ. ಮೆಹಂದಿಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮದರಂಗಿಯನ್ನು ನಮ್ಮ ದೇಶದಲ್ಲಿ ಹಿಂದಿನಿಂದಲೂ ಬಳಸಲಾಗುತ್ತಿದೆ. ಮೆಹಂದಿ ನಮ್ಮ ಸಂಸ್ಕೃತಿಯ ಭಾಗವಾಗಿದೆ.
ಮದರಂಗಿ (Mehndi) ಗಿಡದ ಎಲೆಗಳನ್ನು ತೆಗೆದು ಅದನ್ನು ರುಬ್ಬಿ, ಕೈಗಳಿಗೆ ಹಚ್ಚಿಕೊಳ್ಳಲಾಗ್ತಿತ್ತು. ನಂತ್ರ ಮೆಹಂದಿ ಎಲೆ (Leaf)ಗಳನ್ನು ರುಬ್ಬಿ ಅದನ್ನು ಪಾಲಿಥಿನ್ ಕೋನ್‌ಗಳಿಂದ ತುಂಬಿಸಿ ಕೈಗಳಿಗೆ ಹಾಕಿಕೊಳ್ಳುವ ಪದ್ಧತಿ ಬಂತು. ಇದಾದ್ಮೇಲೆ ಮಾರುಕಟ್ಟೆಯಲ್ಲಿಯೇ ಮೆಹಂದಿ ಪುಡಿಗಳು ಸಿಗಲು ಶುರುವಾದ್ವು. ಜನರು ಮೆಹಂದಿ ಪುಡಿಯನ್ನು ತಂದು ಅದನ್ನು ಫಿಲ್ಟರ್ (Filter) ಮಾಡಿ ಪಾಲಿಥಿನ್ ಕೋನ್‌ನಲ್ಲಿ ತುಂಬಿ ಕೈಗಳಿಗೆ ಹಾಕಿಕೊಳ್ಳುತ್ತಿದ್ದರೆ. ಈಗ ಮಾರುಕಟ್ಟೆಗೆ ಮೆಹಂದಿ ಕೋನ್ ಗಳೇ ಬಂದಿವೆ. ಅದನ್ನು ತಂದು ಅನ್ವಯಿಸಿದ್ರೆ ಸಾಕಾಗುತ್ತದೆ. ಕಂಪನಿಗಳು ಮೆಹಂದಿ ಹಚ್ಚಿಕೊಳ್ಳುವ ಕೆಲಸವನ್ನು ಸುಲಭಗೊಳಿಸಿವೆ. ಮಾರುಕಟ್ಟೆ (Market) ಯಲ್ಲಿ ಬೇಡಿಕೆಯಿರುವ ವಸ್ತುಗಳಲ್ಲಿ ಮೆಹಂದಿ ಕೂಡ ಒಂದು. ಈ ಮೆಹಂದಿಯನ್ನು ನೀವು ಸಣ್ಣ ಪ್ರಮಾಣದ ಉದ್ಯಮ (Industry) ವಾಗಿ ಪ್ರಾರಂಭಿಸಬಹುದು.
ಮೆಹೆಂದಿ ಇನ್ನೂ ಯಾವುದೇ ಬ್ರಾಂಡ್ (Brand) ಹೆಸರಿಗೆ ಬಲಿಯಾಗಿಲ್ಲ. ಗ್ರಾಹಕರು ಅಂಗಡಿಗೆ ಹೋಗಿ ಯಾವುದೇ ಬ್ರಾಂಡ್ ಹೆಸರು ಕೇಳಿ ಪಡೆಯುತ್ತಿಲ್ಲ. ಸಿಕ್ಕಿದ್ದನ್ನು ಖರೀದಿಸಿ ಬರ್ತಾರೆ. ಹಾಗಾಗಿ ಮೆಹಂದಿ ವ್ಯಾಪಾರ ಶುರು ಮಾಡಲು ನಿಮಗೂ ಅವಕಾಶವಿದೆ. ಮೆಹಂದಿ ವ್ಯಾಪಾರಕ್ಕೆ ಹೆಚ್ಚಿನ ಬಂಡವಾಳ ಬೇಕಾಗಿಲ್ಲ.
ಮೆಹಂದಿ ತಯಾರಿಕೆಗೆ ಬೇಕಾಗುವ ಪ್ರಮುಖ ವಸ್ತುವೆಂದ್ರೆ ಮೆಹಂದಿ ಎಲೆಗಳು. ಗೋರಂಟಿಯೊಂದಿಗೆ ಬೆರೆಸಲು ಇತರ ಕೆಲವು ಗಿಡಮೂಲಿಕೆ, ಸಕ್ಕರೆ ಮತ್ತು ಪ್ಯಾಕ್ ಮಾಡಲು ಬೇಕಾದ ಪ್ಯಾಕಿಂಗ್ ವಸ್ತುಗಳನ್ನು ಹೊಂದಿಸಿದ್ರೆ ಸಾಕಾಗುತ್ತದೆ. ಪಲ್ವೆರೈಸರ್ ಯಂತ್ರ ಮತ್ತು ಮೋಟಾರ್ ನಿಮಗೆ ಅಗತ್ಯವಿರುತ್ತದೆ. ಅಲ್ಲದೆ ಮೆಹಂದಿಯಿಂದ ತ್ಯಾಜ್ಯವನ್ನು ಬೇರ್ಪಡಿಸಲು ಜರಡಿ, ಮೆಹಂದಿ ತೂಕ ಮಾಡಲು ತೂಕದ ಯಂತ್ರ ಮತ್ತು ಮೆಹಂದಿ ಪೌಚ್‌ಗಳನ್ನು ಪ್ಯಾಕ್ ಮಾಡಲು ಪೌಚ್ ಸೀಲಿಂಗ್ ಯಂತ್ರ ಬೇಕು.ಮೆಹಂದಿ ಎಲೆಗಳನ್ನು ಪುಡಿ ಮಾಡುವ ಘಟಕವನ್ನು ಸ್ಥಾಪಿಸುವುದು ತುಂಬಾ ಸುಲಭ. ದೊಡ್ಡ ಜಾಗದ ಅಗತ್ಯವಿಲ್ಲ. ಆದ್ರೆ ಸೂರ್ಯನ ಬೆಳಕು ಬರುವುದು ಮುಖ್ಯವಾಗುತ್ತದೆ. ಇದ್ರ ಜೊತೆಗೆ ಮೆಹಂದಿ ಎಲೆಗಳನ್ನು ರುಬ್ಬುವ ಸ್ಥಳದಲ್ಲಿ ಧೂಳು ಮತ್ತು ಮಣ್ಣು ಬರದಂತೆ ನೋಡಿಕೊಳ್ಳಬೇಕು.
Business Idea : ಹತ್ತು ಸಾವಿರಕ್ಕಿಂತ ಕಡಿಮೆ ಬಂಡವಾಳದಲ್ಲಿ ಶುರು ಮಾಡಿ ಈ ಬ್ಯುಸಿನೆಸ್
ಮೆಹಂದಿ ತಯಾರಿ ಹೇಗೆ? : ಮೆಹಂದಿ ಎಲೆಗಳನ್ನು ನೀವು ವ್ಯಾಪಾರಿಗಳಿಂದ ಖರೀದಿ ಮಾಡಬಹುದು. ಇದು ಸಾಧ್ಯವಾಗ್ತಿಲ್ಲವೆಂದ್ರೆ ನೀವೇ ಗೋರಂಟಿಯನ್ನು ಬೆಳೆಯಬಹುದು. ಮೆಹಂದಿ ಎಲೆಗಳನ್ನು ಮೂರು ವಿಧವಾಗಿ ವಿಂಗಡಿಸಬೇಕು. ಒಂದು ಕಪ್ಪು ಎಲೆ, ಇದು ಕಡಿಮೆ ಗುಣಮಟ್ಟ ಹೊಂದಿರುತ್ತದೆ. ಎರಡನೇಯದು ಗೋಲ್ಡನ್ ಬಣ್ಣದ ಎಲೆ, ಇದು ಮಧ್ಯಮ ಗುಣಮಟ್ಟ ಹೊಂದಿರುತ್ತದೆ. ಮೂರನೇಯದು ಹಸಿರು ಎಲೆ. ಇದು ಉತ್ತಮ ಗುಣಮಟ್ಟ ಹೊಂದಿರುತ್ತದೆ. ಈ ಎಲೆಗಳನ್ನು ಬೇರೆ ಬೇರೆ ಮಾಡಿ ಒಣಗಿಸಬೇಕು. ನಂತ್ರ ರುಬ್ಬುವ ಯಂತ್ರದಲ್ಲಿ ಎಲೆಗಳನ್ನು ಹಾಕಿ ರುಬ್ಬಬೇಕು. ಅದ್ರಲ್ಲಿರುವ ಕಲ್ಮಶ ತೆಗೆಯಲು ಜರಡಿ ಹಿಡಿಯಬೇಕು. ಫಿಲ್ಟರ್ ಆದ ಮಿಶ್ರಣವನ್ನು ಪ್ಯಾಕ್ ಮಾಡಿ, ಮಾರಾಟ ಮಾಡಬೇಕು.
ನೀವು ಮಹೆಂದಿಯನ್ನು ಕೋನದಲ್ಲಿ ತುಂಬಿ, ನಿಮ್ಮ ಬ್ರ್ಯಾಂಡ್ ನೇಮ್ ಹಾಕಿ ಮಾರಾಟ ಮಾಡಬಹುದು. ಅಂಗಡಿಗಳಲ್ಲಿ ನೀವು ಇದನ್ನು ಮಾರಾಟ ಮಾಡಬಹುದು. ಇಲ್ಲವೆ ನೇರವಾಗಿ ಗ್ರಾಹಕರಿಗೆ ನೀಡಬಹುದು. ಆನ್ಲೈನ್, ಸಾಮಾಜಿಕ ಜಾಲತಾಣಗಳಲ್ಲಿ ಇದ್ರ ಬಗ್ಗೆ ಪ್ರಚಾರ ಕೂಡ ನೀವು ಮಾಡಬಹುದು. ಗುಣಮಟ್ಟಕ್ಕೆ ನೀವು ಮಹತ್ವ ನೀಡಬೇಕಾಗುತ್ತದೆ. ಒಳ್ಳೆ ಗುಣಮಟ್ಟದ ಹಾಗೂ ಕೆಂಪಾಗುವ ಮದರಂಗಿಯನ್ನು ಎಲ್ಲರೂ ಇಷ್ಟಪಡ್ತಾರೆ.
Personal Finance: ಸ್ಯಾಲರಿ ಖಾತೆಗೆ ಸಂಬಳ ಬರ್ತಿದ್ದರೆ ಇದನ್ನು ಗಮನಿಸಿ
ಮೆಹೆಂದಿ ಕೋನ್‌ಗಳನ್ನು ತಯಾರಿಸುವ ವ್ಯವಹಾರದಲ್ಲಿ ನೀವು ಶೇಕಡಾ 50 ರಿಂದ 60 ರಷ್ಟು ಲಾಭ ಪಡೆಯುತ್ತೀರಿ. ಒಂದು ಕೋನ್ ತಯಾರಿಸಲು 5 ರಿಂದ 6 ರೂಪಾಯಿ ಖರ್ಚಾಗುತ್ತದೆ. ಅದನ್ನು ನೀವು 10 ರೂಪಾಯಿವರೆಗೆ ಮಾರಾಟ ಮಾಡಬಹುದು. ದಿನಕ್ಕೆ 100 ಕೋನ್ ಮಾರಿದರೂ ದಿನಕ್ಕೆ 2000 ರೂಪಾಯಿ ಲಾಭ ಗಳಿಸಬಹುದು.