Asianet Suvarna News Asianet Suvarna News

Save Money : ದುಬಾರಿ ಬೆಲೆಯ ಪುಸ್ತಕ ಖರೀದಿ ಹೀಗಿರಲಿ..

ಓದಿದಷ್ಟು ಜ್ಞಾನ ವೃದ್ಧಿಯಾಗುತ್ತದೆ. ಇದು ಪುಸ್ತಕ ಪ್ರೇಮಿಗಳಿಗೆ ಗೊತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲು ಪುಸ್ತಕ ಓದಿ ಎನ್ನುತ್ತಾರೆ ದೊಡ್ಡವರು. ಆದ್ರೆ ಪುಸ್ತಕ ಖರೀದಿ ಅಷ್ಟು ಸುಲಭವಲ್ಲ. ಕಡಿಮೆ ಹಣದಲ್ಲಿ ಇಷ್ಟವಾದ ಪುಸ್ತಕ ಬರ್ತಿಲ್ಲವೆಂದಾದ್ರೆ ಏನು ಮಾಡ್ಬೇಕು ಗೊತ್ತಾ?
 

How To Purchase Book for cheaper price
Author
Bangalore, First Published Apr 13, 2022, 6:28 PM IST

ಬೆಲೆ (Price) ಏರಿಕೆ ಬಿಸಿ ಕೇವಲ ಅಗತ್ಯ ವಸ್ತುಗಳಿಗೆ ಮಾತ್ರ ತಟ್ಟಿಲ್ಲ. ಎಲ್ಲ ವಸ್ತುಗಳ ಬೆಲೆ ಏರಿದೆ. ಅದ್ರಲ್ಲಿ ಪುಸ್ತಕ (Book) ವೂ ಸೇರಿದೆ. ಪುಸ್ತಕಗಳ ಬೆಲೆ ಕೂಡ ಗಗನಕ್ಕೇರಿದೆ. ಪುಸ್ತಕ ಪ್ರೇಮಿಗಳು, ಬೆಲೆ ಹೆಚ್ಚಿದ್ದರೂ ಅದನ್ನು ಖರೀದಿ (Purchase) ಸುವ ಕಾತರದಲ್ಲಿರುತ್ತಾರೆ. ಎಷ್ಟೇ ಕಷ್ಟವಾದ್ರೂ ಆ ಪುಸ್ತಕ ಖರೀದಿಸಿ ಓದಬೇಕೆಂಬ ಬಯಕೆಯಿರುತ್ತದೆ. ಆದ್ರೆ ಬಜೆಟ್ ಕಡಿಮೆಯಿದ್ದರೆ ನೆಚ್ಚಿನ ಪುಸ್ತಕಗಳನ್ನು ಖರೀದಿಸಲು ಕಷ್ಟವಾಗಬಹುದು. ಅದಕ್ಕೆ ನಿರಾಶೆಗೊಳ್ಳುವ ಅಗತ್ಯವಿಲ್ಲ. ನೀವು ಸ್ವಲ್ಪ ಜಾಗರೂಕರಾಗಿದ್ದರೆ ಮತ್ತು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪುಸ್ತಕಗಳನ್ನು ಖರೀದಿಸಿದರೆ, ತುಂಬಾ ಸುಲಭವಾಗಿ ನಿಮ್ಮ ನೆಚ್ಚಿನ ಪುಸ್ತಕಗಳನ್ನು ಓದಬಹುದು ಮತ್ತು ಹಣ ಉಳಿಸಬಹುದು. ಕಡಿಮೆ ಬಜೆಟ್‌ನ ಹೊರತಾಗಿಯೂ ನೀವು ಅಗ್ಗದ ಪುಸ್ತಕಗಳನ್ನು ಹೇಗೆ ಖರೀದಿಸ್ಬಹುದು ಅಂತಾ ನಾವು ಹೇಳ್ತೇವೆ. 

ಪುಸ್ತಕ ವಿನಿಮಯ ಕಾರ್ಯಕ್ರಮ : ಪುಸ್ತಕ ವಿನಿಮಯ ಕಾರ್ಯಕ್ರಮಗಳನ್ನು ಅನೇಕ ಸ್ಥಳಗಳಲ್ಲಿ ಆಯೋಜಿಸುತ್ತಾರೆ.  ಇದರಲ್ಲಿ ಪಾಲ್ಗೊಳ್ಳುವ ಪುಸ್ತಕ ಪ್ರೇಮಿಗಳು ತಮ್ಮ ಪುಸ್ತಕಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಕೋರ್ಸ್ ಪುಸ್ತಕಗಳಿಂದ ಹಿಡಿದು ಇತರ ಹಲವು ರೀತಿಯ ಪುಸ್ತಕಗಳವರೆಗೆ ಎಲ್ಲ ರೀತಿಯ ಪುಸ್ತಕಗಳನ್ನು ನೀವು ವಿನಿಮಯ ಮಾಡಬಹುದು. ನೀವು ಓದಿದ ಪುಸ್ತಕಗಳನ್ನು ಈ ಕಾರ್ಯಕ್ರಮದಲ್ಲಿ ನೀಡಿ ಮತ್ತು ನಿಮ್ಮ ಆಯ್ಕೆಯ ಮತ್ತು ಅಗತ್ಯವಿರುವ ಇತರ ಪುಸ್ತಕಗಳನ್ನು ಅಲ್ಲಿಂದ ತೆಗೆದುಕೊಳ್ಳಿ. ಇಂಥ ಕಾರ್ಯಕ್ರಮ ಎಲ್ಲಿ ನಡೆಯುತ್ತದೆ ಎಂಬುದನ್ನು ಪತ್ತೆ ಮಾಡಿ, ಅಲ್ಲಿ ಅಗತ್ಯವಾಗಿ ಪಾಲ್ಗೊಳ್ಳಿ. 

5 ವರ್ಷಕ್ಕಿಂತ ಮೊದಲೇ ಉದ್ಯೋಗ ಬಿಟ್ರೂ ಸಿಗುತ್ತೆ ಗ್ರ್ಯಾಚುಟಿ, ಹೇಗೆ? ಇಲ್ಲಿದೆ ವಿವರ

ಸೆಕೆಂಡ್ ಹ್ಯಾಂಡ್ ಪುಸ್ತಕ : ನಿಮ್ಮ ಹಣವನ್ನು ಇದು ಉಳಿಸುತ್ತದೆ. ಯಾಕೆಂದ್ರೆ ಮೂಲ ಬೆಲೆಯ ಅರ್ಧಕ್ಕಿಂತ ಕಡಿಮೆ ಬೆಲೆಗೆ ನಿಮಗೆ ಪುಸ್ತಕಗಳು ಸಿಗ್ತವೆ. ಮಾರುಕಟ್ಟೆಯಲ್ಲಿ ಬರೀ ಹೊಸ ಪುಸ್ತಕದ ಅಂಗಡಿ ಮಾತ್ರವಲ್ಲ ಹಳೆ ಪುಸ್ತಕದ ಅಂಗಡಿಗಳು ಸಾಕಷ್ಟಿರುತ್ತವೆ. ಇಲ್ಲಿ ನೀವು ನಿಮ್ಮ ನೆಚ್ಚಿನ ಪುಸ್ತಕಗಳನ್ನು ಅರ್ಧದಷ್ಟು ಅಥವಾ ಕಡಿಮೆ ಬೆಲೆಗೆ ಪಡೆಯಬಹುದು.  ಹಳೇ ಪುಸ್ತಕವಾಗಿದ್ದರಿಂದ ಅದನ್ನು ಜೋಪಾನ ಮಾಡುವುದು ಕಷ್ಟವಾಗುತ್ತದೆ. ಹಾಗೆ ಖರೀದಿ ಮಾಡುವ ವೇಳೆ ಪುಟಗಳು ಹರಿದಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. 

ಗ್ರಂಥಾಲಯದ ಸದಸ್ಯತ್ವ : ಬಹುತೇಕ ಎಲ್ಲ ಕಡೆ ಗ್ರಂಥಾಲಯಗಳಿವೆ. ನೀವು ಗ್ರಂಥಾಲಯದ ಸದಸ್ಯತ್ವ ಪಡೆಯಬೇಕು. ಸಮಯವಿದ್ದರೆ ಅಲ್ಲಿಯೇ ಕುಳಿತು ಓದಬಹುದು. ಕೆಲ ಪುಸ್ತಕಗಳನ್ನು ಮನೆಗೆ ತಂದು ಓದುವ ಅವಕಾಶವಿರುತ್ತದೆ. ಅದರ ಸದುಪಯೋಗವನ್ನು ನೀವು ಪಡೆಯಬೇಕು. 

ಡಿಜಿಟಲ್ ಇ ಪುಸ್ತಕ ಸಂಪೂರ್ಣ ಉಚಿತ :  ಇದು ಡಿಜಿಟಲ್ ಯುಗ. ಇಲ್ಲಿ ಎಲ್ಲವೂ ಮೊಬೈಲ್ ನಲ್ಲಿ ಲಭ್ಯವಿದೆ. ಹಾಗೆಯೇ ಅನೇಖ ಪುಸ್ತಕಗಳು ಆನ್ಲೈನ್ ನಲ್ಲಿ ಸಿಗುತ್ತವೆ.  ಪುಸ್ತಕಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು ಮತ್ತು ಓದಬಹುದು. ಇದಕ್ಕೆ ಕೆಲವೊಮ್ಮೆ ರಿಯಾಯಿತಿಗಳಿರುತ್ತವೆ. ಕೆಲವೊಂದು ಪುಸ್ತಕವನ್ನು ನೀವು ಉಚಿತವಾಗಿ ಓದುವ ಅವಕಾಶವಿರುತ್ತದೆ.  ಕಡಿಮೆ ಬೆಲೆಯಲ್ಲಿ ಚಂದಾದಾರಿಕೆಯನ್ನು ನೀಡುವ ಅನೇಕ ಅಪ್ಲಿಕೇಶನ್‌ಗಳಿವೆ. ಅಲ್ಲಿ ಚಂದಾದಾರಿಕೆ ಪಡೆದ್ರೆ ನಂತರ ನೀವು ಅಲ್ಲಿ ಅನಿಯಮಿತ ಪುಸ್ತಕಗಳನ್ನು ಓದಬಹುದು.

Covid 19 Spike: ಐಫೋನ್ ತಯಾರಕ ಪೆಗಾಟ್ರಾನ್ ಸೇರಿ ಚೀನಾದಲ್ಲಿ 150ಕ್ಕೂ ಹೆಚ್ಚು ಕಂಪನಿ ಕಾರ್ಯಾಚರಣೆ ಸ್ಥಗಿತ

ಪುಸ್ತಕ ಮೇಳ :  ಪುಸ್ತಕ ಮೇಳಗಳು ನಡೆಯುತ್ತಿರುತ್ತವೆ. ಆ ಪುಸ್ತಕ ಮೇಳದಲ್ಲಿ ನೀವು ಪಾಲ್ಗೊಳ್ಳಬೇಕು. ಅಲ್ಲಿ ನಿಮಗೆ ನಾನಾ ಬಗೆಯ ಪುಸ್ತಕಗಳು ಸಿಗುತ್ತವೆ. ಅಲ್ಲಿ ಪ್ರಕಾಶಕರಿಂದ ನೇರವಾಗಿ ಖರೀದಿಸಬಹುದಾದ್ದರಿಂದ ನಿಮಗೆ ಕಡಿಮೆ ಬೆಲೆಗೆ ಈ ಪುಸ್ತಕಗಳು ಸಿಗುತ್ತವೆ. ಹಾಗೆಯೇ ಸಾವಿರಾರು ಪುಸ್ತಕ ಒಂದೇ ಜಾಗದಲ್ಲಿ ಸಿಗುವುದ್ರಿಂದ ಹುಡುಕಾಟ ಸುಲಭವಾಗುತ್ತದೆ. 

ಉಚಿತ ಆಡಿಯೋ ಪುಸ್ತಕ : ಪ್ರಾಯೋಗಿಕ ಆವೃತ್ತಿಯಲ್ಲಿ ಉಚಿತ ಆಡಿಯೊ ಪುಸ್ತಕಗಳನ್ನು ಒದಗಿಸುವ ಹಲವು ವೆಬ್‌ಸೈಟ್‌ಗಳಿವೆ. ಗೂಗಲ್ ನಲ್ಲಿ ಹುಡುಕುವ ಮೂಲಕ ಆಡಿಯೊ ಪುಸ್ತಕಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.   
 

Follow Us:
Download App:
  • android
  • ios