Financial Planning: ಅವಿವಾಹಿತರ ಉಳಿತಾಯದ ಪ್ಲಾನ್ ಹೀಗಿರಲಿ
ಮದುವೆ ಆದ್ಮೇಲೆ ಉಳಿತಾಯ ಮಾಡೋದು ಕಷ್ಟ. ಹಾಗಂತ ಮದುವೆಗಿಂತ ಮೊದಲೂ ಹಣ ಉಳಿಸದೆ ಖರ್ಚು ಹೆಚ್ಚು ಮಾಡಿಕೊಂಡ್ರೆ ಮದುವೆ ಆಗೋದೆ ಕಷ್ಟ. ನಿಮ್ಮ ವಯಸ್ಸು ೩೦ ವರ್ಷದಲ್ಲಿದ್ದು, ಇನ್ನೂ ಮದುವೆ ಆಗಿಲ್ಲ ಎಂದಾದ್ರೆ ಬುದ್ಧಿವಂತಿಕೆಯಿಂದ ಉಳಿತಾಯ ಶುರು ಮಾಡಿ.
ಭಾರತದಲ್ಲಿ ಡಿಗ್ರಿ ಮುಗಿದು ಕೆಲಸ ಸಿಗ್ತಿದ್ದಂತೆ ಮದುವೆ ಆಗೋರು ಹೆಚ್ಚು. ಇಪ್ಪತ್ತೈದು – ಮೂವತ್ತನೇ ವಯಸ್ಸಿಗೆ ಜನರು ಮದುವೆ ಆಗ್ತಾರೆ. ಈಗಿನ ದಿನಗಳಲ್ಲಿ ಮದುವೆ ವಯಸ್ಸಿನಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದಿದೆ. ಜನರು 30 ವರ್ಷವಾದ್ರೂ ಮದುವೆ ಆಗೋದಿಲ್ಲ. ಇದಕ್ಕೆ ದೊಡ್ಡ ಕಾರಣ ಆರ್ಥಿಕ ಸಮಸ್ಯೆ. ಬೇಗ ಮದುವೆ (Marriage) ಆದ್ರೆ ಸಂಸಾರದ ಖರ್ಚು ಹೆಚ್ಚಾಗುತ್ತದೆ, ದುಡಿದ ಹಣ ಸಂಸಾರ ನಿಭಾಯಿಸಲು ಸಾಧ್ಯವಾಗೋದಿಲ್ಲ ಎನ್ನುವ ಕಾರಣಕ್ಕೆ ಜನರು ಮದುವೆ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಾರೆ. ಆರ್ಥಿಕ (Financial) ಸ್ಥಿತಿ ಸುಧಾರಿಸಿದ ಮೇಲೆ, ಸಂಸಾರ ನಡೆಸಲು ತನ್ನಿಂದ ಸಾಧ್ಯ ಎಂಬ ಭರವಸೆ ಬಂದ್ಮೇಲೆ ಮದುವೆಗೆ ಸಿದ್ಧರಾಗುವವರ ಸಂಖ್ಯೆ ಹೆಚ್ಚಿದೆ.
ನೀವೂ ಮದುವೆಗೆ ಆಲೋಚನೆ ಮಾಡ್ತಿದ್ದು, ಮದುವೆಗಿಂತ ಮುನ್ನ ನಿಮ್ಮ ಕೈನಲ್ಲೊಂದಿಷ್ಟು ಹಣ ಇರಬೇಕೆಂದ್ರೆ ನೀವು ಕೆಲ ನಿಯಮ ಪಾಲಿಸಿ. ಹಣ (Money) ವನ್ನು ಯೋಜನೆಗಳಲ್ಲಿ ತೊಡಗಿಸಬೇಕು.
ತಂದೆಯಿಂದ ಸಾಲ ಪಡೆದು ಶೆಡ್‌ನಲ್ಲಿ ವ್ಯಾಪಾರ ಆರಂಭಿಸಿದ ವ್ಯಕ್ತಿ, ಈಗ ಮುಕೇಶ್ ಅಂಬಾನಿಯ ಜಿಯೋ ಪಾರ್ಟ್‌ನರ್!
ಗುರಿ ಮುಖ್ಯ : ಸಣ್ಣ ವಯಸ್ಸಿನಲ್ಲೇ ನೀವು ದುಡಿಮೆ ಶುರು ಮಾಡಿದ್ದರೆ ನಿಮ್ಮ ದುಡಿಮೆಯ ಜೊತೆ ಉಳಿತಾಯಕ್ಕೂ ನೀವು ಗಮನ ನೀಡಬೇಕು. ನಿಮ್ಮ ಗುರಿಗೆ ತಕ್ಕಂತೆ ನೀವು ಉಳಿತಾಯ ಮಾಡಬೇಕು. ಇನ್ನು ಹತ್ತು ವರ್ಷದಲ್ಲಿ ನೀವು ಒಂದು ಕೋಟಿ ಮೌಲ್ಯದ ಮನೆ ಖರೀದಿ ಮಾಡುವ ಪ್ಲಾನ್ ಹೊಂದಿದ್ದರೆ ಅದಕ್ಕೆ ಯಾವ ಯೋಜನೆ ಸೂಕ್ತ ಎಂಬುದನ್ನು ಚರ್ಚಿಸಿ, ಅದರಲ್ಲಿ ಹಣ ಹೂಡಿಕೆ ಮಾಡಿ. ಸ್ವಂತ ಮನೆ, ಶಿಕ್ಷಣ, ಆರೋಗ್ಯ ರಕ್ಷಣೆ, ಉಳಿತಾಯ ಮತ್ತು ಸ್ಥಿರ ಆದಾಯದ ಬಗ್ಗೆ ಪ್ಲಾನ್ ಮಾಡಿ. ಈಕ್ವಿಟಿ ಮ್ಯೂಚುಯಲ್ ಫಂಡ್ ಎಸ್ ಐಪಿ ಅನ್ನು ಪ್ರಾರಂಭಿಸಿ.
ಹೊಸ ವರ್ಷದ ಮೊದಲ ದಿನದಿಂದಲೇ 5 ಪ್ರಮುಖ ಬದಲಾವಣೆಗಳು ಜಾರಿ: ವಿವರ ಹೀಗಿದೆ..
ನಿವೃತ್ತಿಗೆ ತಯಾರಿ : ವೃತ್ತಿ ಜೀವನದ ಆರಂಭದಲ್ಲೇ ನೀವು ನಿವೃತ್ತಿ ಬಗ್ಗೆ ಆಲೋಚನೆ ಮಾಡಲು ಹೋಗೋದಿಲ್ಲ. ಅದೇ ನೀವು ಮಾಡುವ ತಪ್ಪು. ನಿವೃತ್ತಿ ಬಗ್ಗೆ ಆರಂಭದಲ್ಲೇ ಪ್ಲಾನ್ ಮಾಡಬೇಕು. ನಿವೃತ್ತಿಗಾಗಿ ನಿಮ್ಮ ವಾರ್ಷಿಕ ವೆಚ್ಚವನ್ನು ಶೇಕಡಾ 25 ಪಟ್ಟು ಉಳಿಸುವ ಗುರಿಯನ್ನು ಹೊಂದಿಋಬೇಕು. ನೀವು ಈಕ್ವಿಟಿ ಮ್ಯೂಚುಯಲ್ ಫಂಡ್ SIP ಯೊಂದಿಗೆ ಇದನ್ನು ಮಾಡಬಹುದು. ಅದೇ ರೀತಿ, ನಿಮ್ಮ ಗುರಿಗಳಿಗೆ ಅನುಗುಣವಾಗಿ ಈಕ್ವಿಟಿಗಳು, ಬಾಂಡ್‌ಗಳು, ಚಿನ್ನ ಮತ್ತು ರಿಯಲ್ ಎಸ್ಟೇಟ್ ನಂತಹ ಕ್ಷೇತ್ರದಲ್ಲಿ ಹೂಡಿಕೆ ಮಾಡಬಹುದು. 6300 ರೂಪಾಯಿಗೆ ನೀವು 1 ಗ್ರಾಂ ಚಿನ್ನವನ್ನು ಖರೀದಿಸುವ ಬದಲು ಕನಿಷ್ಠ 500 ರೂಪಾಯಿ ಹೂಡಿಕೆ ಮಾಡಿ ಮ್ಯೂಚುವಲ್ ಫಂಡ್ ಖರೀದಿಸಬಹುದು. ವಾಣಿಜ್ಯ ಆಸ್ತಿ ಖರೀದಿ ನಿಮ್ಮಿಂದ ಸಾಧ್ಯವಿಲ್ಲ ಎಂದಾದ್ರೆ ನೀವು REIT ಖರೀದಿಸಬಹುದು.
ರಿಸ್ಕ್ ತೆಗೆದುಕೊಳ್ಳಿ : ನಿಮ್ಮದೇ ಆದ ಕುಟುಂಬವಿಲ್ಲ ಎಂದಾಗ ಅಥವಾ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇಲ್ಲ ಎಂದಾಗ ನೀವು ಅಪಾಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತೀರಿ. ನೀವು ವಿವಿಧ ಕಡೆ ಆಸ್ತಿ ಮಾಡುವ ಕೆಲಸಕ್ಕೆ ಆಗ ಇಳಿಯಬಹುದು. ನಿಮ್ಮ ಗಳಿಕೆಯಲ್ಲಿ ಕಡಿಮೆ ಹಣವನ್ನು ನಿತ್ಯದ ಬಳಕೆಗೆ ಇಟ್ಕೊಂಡು ಉಳಿದಿದ್ದನ್ನು ಹೂಡಿಕೆ ಮಾಡಬಹುದು. ನಿಮ್ಮ ಪೋರ್ಟ್‌ಫೋಲಿಯೊವನ್ನು ವೈವಿಧ್ಯಗೊಳಿಸಲು ನಿಮಗೆ ಹಲವು ಆಯ್ಕೆಗಳಿವೆ. ರಿಯಲ್ ಎಸ್ಟೇಟ್ ನಲ್ಲಿ ನೀವು ಭಾಗಶಃ ಹೂಡಿಕೆ ಮಾಡಬಹುದು. ನಿಮ್ಮ ಹಣ ಎಲ್ಲಿ ಸುರಕ್ಷಿತವಾಗಿರುತ್ತದೆ ಹಾಗೂ ಹೆಚ್ಚು ಲಾಭ ಸಿಗುತ್ತದೆ ಎಂಬುದನ್ನು ತಿಳಿದು ನೀವು ಹೂಡಿಕೆ ಮಾಡಬೇಕಾಗುತ್ತದೆ. ಮದುವೆಗೆ ಮುನ್ನವೇ ನೀವು ಈ ಎಲ್ಲ ಕಡೆ ಹೂಡಿಕೆ ಮಾಡಿ, ಒಂದಿಷ್ಟು ಹಣವನ್ನು ಭದ್ರಪಡಿಸಿಕೊಂಡಿದ್ದರೆ ಹೆಚ್ಚಿನ ಸಮಸ್ಯೆ ನಿಮಗೆ ಕಾಡೋದಿಲ್ಲ.