ಮನೆ ಖರೀದಿ ವೇಳೆ ಡೌನ್ ಪೇಮೆಂಟ್ ಸಮಸ್ಯೆ ಕಾಡ್ತಿದ್ಯಾ? ಹೀಗೆ ಪ್ಲಾನ್ ಮಾಡಿ

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಮಾತಿದೆ. ಮನೆ ನಿರ್ಮಾಣ ಅಥವಾ ಮನೆ ಖರೀದಿ ಈಗ ಸುಲಭವಲ್ಲ. ಮನೆಯ ಬೆಲೆ ಗಗನಕ್ಕೇರಿದೆ,  ಸಂಬಳ ಮಾತ್ರ ಪಾತಾಳದಲ್ಲಿ ಎನ್ನುವವರು ಡೌನ್ ಪೇಮೆಂಟ್ ಬಗ್ಗೆ ಮೊದಲೇ ಪ್ಲಾನ್ ಮಾಡಿದ್ರೆ ಬೆಸ್ಟ್.
 
How To Plan  Down Payment On Your First House

ಸ್ವಂತಕ್ಕೊಂದು ಸೂರಿ (Home )ರಬೇಕು ಎಂಬುದು ಎಲ್ಲರ ಕನಸು (Dream). ದುಡಿಮೆ ಶುರುವಾಗ್ತಿದ್ದಂತೆ ಕೆಲವರು ತನ್ನ ಮನೆಯ ಕನಸು ಕಾಣಲು ಶುರು ಮಾಡ್ತಾರೆ. ಜೀವನ (Life) ಪರ್ಯಂತ ಹಣ ಕೂಡಿಟ್ಟು ಕೊನೆ ಸಮಯದಲ್ಲಿ ಮನೆ ಖರೀದಿ (Purchase)ಸುವವರೂ ಇದ್ದಾರೆ. ಒಟ್ಟಾರೆ ಬಹುತೇಕರ ಗುರಿ ಮನೆಯಾಗಿರುತ್ತದೆ.  ಮನೆ ಖರೀದಿಯು ಜೀವನದಲ್ಲಿ ಒಂದು ಪ್ರಮುಖ ಆರ್ಥಿಕ ನಿರ್ಧಾರವಾಗಿದೆ. ಮನೆ ನಿರ್ಮಾಣ ಅಥವಾ ಮನೆ ಕಟ್ಟಲು ಹಣದ ಅವಶ್ಯಕತೆ ಹೆಚ್ಚಿರುತ್ತದೆ. ಜನರ ಕನಸಿನ ಮನೆಯನ್ನು ನನಸು ಮಾಡಲು ಬ್ಯಾಂಕ್ ಗಳು ಸದಾ ಸಿದ್ಧವಾಗಿರುತ್ತವೆ. ಬ್ಯಾಂಕ್ ಗಳಲ್ಲಿ ಹೋಮ್ ಲೋನ್ ಸಿಗುತ್ತದೆ. ಮನೆ ನಿರ್ಮಾಣ ಅಥವಾ ಮನೆ ಖರೀದಿಗೆ ಮುಂದಾಗಿರುವವರು,ಬ್ಯಾಂಕ್ ನಲ್ಲಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವವರು ಕೆಲವೊಂದು  ವಿಷಯಗಳನ್ನು ತಿಳಿದಿರಬೇಕು. ಸಾಲದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದರೆ ಮುಂದೆ ಸಮಸ್ಯೆಯಾಗುವುದಿಲ್ಲ. ಸಂಪೂರ್ಣ ಸಾಲ ಸಿಗುವುದಿಲ್ಲ : ಮನೆ ಖರೀದಿ ಮಾಡ್ಬೇಕು,ಬ್ಯಾಂಕ್ ಸಾಲ ನೀಡುತ್ತೆ ಅಂತಾ ನೀವು ಭಾವಿಸಿದ್ದರೆ ಅದು ತಪ್ಪಾಗುತ್ತದೆ. ಬ್ಯಾಂಕ್ ಅಥವಾ ಯಾವುದೇ ಹಣಕಾಸು ಸಂಸ್ಥೆ ನೂರಕ್ಕೆ ನೂರರಷ್ಟು ಮನೆಯ ಹಣವನ್ನು ಸಾಲದ ರೂಪದಲ್ಲಿ ನೀಡುವುದಿಲ್ಲ. ಸಾಮಾನ್ಯವಾಗಿ ನೀವು ಮಾರಾಟ ಒಪ್ಪಂದ  ಮೌಲ್ಯದ ಶೇಕಡಾ 80ರಷ್ಟರವರೆಗೆ  ಸಾಲವನ್ನು ಪಡೆಯಬಹುದು. ಆಸ್ತಿಯ ಖರೀದಿಯಲ್ಲಿ ನಿಮ್ಮ ಆಸಕ್ತಿಯನ್ನು ಖಚಿತಪಡಿಸಿಕೊಳ್ಳಲು ಸಾಲದ ಕಂಪನಿಗಳಿಗೆ ಡೌನ್ ಪೇಮೆಂಟ್ ರೂಪದಲ್ಲಿ ನೀವು ಉಳಿದ ಹಣವನ್ನು ನೀಡಬೇಕಾಗುತ್ತದೆ.  ಸಾಮಾನ್ಯವಾಗಿ ಆಸ್ತಿಯ ಒಟ್ಟು ಮೌಲ್ಯದ ಸುಮಾರು ಶೇಕಡಾ 5  ರಿಂದ ಶೇಕಡಾ 20ರಷ್ಟು ಮುಂಗಡ ಪಾವತಿಯ ಅಗತ್ಯವಿರುತ್ತದೆ. ಕಡಿಮೆ ಅವಧಿಯಲ್ಲಿ ದೊಡ್ಡ ಮೊತ್ತವನ್ನು ಹೊಂದಿಸುವುದು ಎಲ್ಲರಿಗೂ ಸಾಧ್ಯವಿಲ್ಲ.  

ಡೌನ್ ಪೇಮೆಂಟ್ ಗೆ ಹೀಗೆ ಹಣ ಹೊಂದಿಸಿ : 
ಅಲ್ಪಾವಧಿ ಹೂಡಿಕೆ  :  ಮನೆ ಖರೀದಿ ಮಾಡಲು ಮೊದಲೇ ಹೇಳಿದಂತೆ ಮುಂಗಡ ಹಣ ನೀಡಬೇಕು. ಹೆಚ್ಚು ಬೆಲೆ ಬಾಳುವ ಮನೆ ಖರೀದಿಗೆ ಕೈ ಹಾಕಿದ್ರೆ ಮುಂಗಡ ಹಣ ಹೆಚ್ಚಾಗುತ್ತದೆ. ನೀವು ಈಗಾಗಲೇ ಅಲ್ಪಾವಧಿಯ ಹೂಡಿಕೆ ಮಾಡಿದ್ದರೆ ಅದು ನಿಮ್ಮ ನೆರವಿಗೆ ಬರುತ್ತದೆ. ಈಕ್ವಿಟಿಯಂತಹ ಹೂಡಿಕೆಗಳು ಸಹ ಉಪಯುಕ್ತ.  ಅವುಗಳಿಂದ ಹಣವನ್ನು ಯಾವುದೇ ಸಮಯದಲ್ಲಿ ಹಿಂಪಡೆಯಬಹುದು. ಭವಿಷ್ಯದಲ್ಲಿ ಮನೆ ಖರೀದಿ ಪ್ಲಾನ್ ಇದ್ದರೆ ಮೊದಲೇ ನೀವು ಇಲ್ಲಿ ಹಣ ಹೂಡಿಕೆ ಶುರು ಮಾಡಿ.  

ಅಸುರಕ್ಷಿತ ಸಾಲ : ಅನೇಕ ಕಡೆ ಅಸುರಕ್ಷಿತ ಸಾಲ ಲಭ್ಯವಿದೆ. ಆದರೆ ಇದರಲ್ಲಿ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ನೀವು ಸುಲಭವಾಗಿ ಲಭ್ಯವಿರುವ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬಹುದು. ಆದರೆ ಬಡ್ಡಿ ಹಾಗೂ ಮರುಪಾವತಿ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿದ ನಂತರ ಇದಕ್ಕೆ ಕೈ ಹಾಕುವುದು ಒಳ್ಳೆಯದು.

ವಿಮೆ ಮತ್ತು ಪಿಎಫ್ ಮೇಲೆ ಸಾಲ : ಜೀವ ವಿಮಾ ಪಾಲಿಸಿ ಅಥವಾ ಪ್ರಾವಿಡೆಂಟ್ ಫಂಡ್ ಹೊಂದಿದ್ದರೆ ಅದ್ರಡಿಯಲ್ಲಿ ನೀವು ಸಾಲ ಪಡೆಯಬಹುದು. ಇದ್ರಲ್ಲಿ ಸಾಲಗಳು ಸುಲಭವಾಗಿ ದೊರೆಯುತ್ತವೆ. ಬಡ್ಡಿ ಕೂಡ ಹೆಚ್ಚಿನ ಪ್ರಮಾಣದಲ್ಲಿರುವುದಿಲ್ಲ. ಹಾಗೆ ಯಾವುದೇ ಗಡುವು ಇರುವುದಿಲ್ಲ.  

ಸ್ವಂತಕ್ಕೊಂದು ಸೂರಿ (Home )ರಬೇಕು ಎಂಬುದು ಎಲ್ಲರ ಕನಸು (Dream). ದುಡಿಮೆ ಶುರುವಾಗ್ತಿದ್ದಂತೆ ಕೆಲವರು ತನ್ನ ಮನೆಯ ಕನಸು ಕಾಣಲು ಶುರು ಮಾಡ್ತಾರೆ. ಜೀವನ (Life) ಪರ್ಯಂತ ಹಣ ಕೂಡಿಟ್ಟು ಕೊನೆ ಸಮಯದಲ್ಲಿ ಮನೆ ಖರೀದಿ (Purchase)ಸುವವರೂ ಇದ್ದಾರೆ. ಒಟ್ಟಾರೆ ಬಹುತೇಕರ ಗುರಿ ಮನೆಯಾಗಿರುತ್ತದೆ.  ಮನೆ ಖರೀದಿಯು ಜೀವನದಲ್ಲಿ ಒಂದು ಪ್ರಮುಖ ಆರ್ಥಿಕ ನಿರ್ಧಾರವಾಗಿದೆ. ಮನೆ ನಿರ್ಮಾಣ ಅಥವಾ ಮನೆ ಕಟ್ಟಲು ಹಣದ ಅವಶ್ಯಕತೆ ಹೆಚ್ಚಿರುತ್ತದೆ. ಜನರ ಕನಸಿನ ಮನೆಯನ್ನು ನನಸು ಮಾಡಲು ಬ್ಯಾಂಕ್ ಗಳು ಸದಾ ಸಿದ್ಧವಾಗಿರುತ್ತವೆ. ಬ್ಯಾಂಕ್ ಗಳಲ್ಲಿ ಹೋಮ್ ಲೋನ್ ಸಿಗುತ್ತದೆ. ಮನೆ ನಿರ್ಮಾಣ ಅಥವಾ ಮನೆ ಖರೀದಿಗೆ ಮುಂದಾಗಿರುವವರು,ಬ್ಯಾಂಕ್ ನಲ್ಲಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವವರು ಕೆಲವೊಂದು  ವಿಷಯಗಳನ್ನು ತಿಳಿದಿರಬೇಕು. ಸಾಲದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದರೆ ಮುಂದೆ ಸಮಸ್ಯೆಯಾಗುವುದಿಲ್ಲ.
ಸಂಪೂರ್ಣ ಸಾಲ ಸಿಗುವುದಿಲ್ಲ : ಮನೆ ಖರೀದಿ ಮಾಡ್ಬೇಕು,ಬ್ಯಾಂಕ್ ಸಾಲ ನೀಡುತ್ತೆ ಅಂತಾ ನೀವು ಭಾವಿಸಿದ್ದರೆ ಅದು ತಪ್ಪಾಗುತ್ತದೆ. ಬ್ಯಾಂಕ್ ಅಥವಾ ಯಾವುದೇ ಹಣಕಾಸು ಸಂಸ್ಥೆ ನೂರಕ್ಕೆ ನೂರರಷ್ಟು ಮನೆಯ ಹಣವನ್ನು ಸಾಲದ ರೂಪದಲ್ಲಿ ನೀಡುವುದಿಲ್ಲ. ಸಾಮಾನ್ಯವಾಗಿ ನೀವು ಮಾರಾಟ ಒಪ್ಪಂದ  ಮೌಲ್ಯದ ಶೇಕಡಾ 80ರಷ್ಟರವರೆಗೆ  ಸಾಲವನ್ನು ಪಡೆಯಬಹುದು. ಆಸ್ತಿಯ ಖರೀದಿಯಲ್ಲಿ ನಿಮ್ಮ ಆಸಕ್ತಿಯನ್ನು ಖಚಿತಪಡಿಸಿಕೊಳ್ಳಲು ಸಾಲದ ಕಂಪನಿಗಳಿಗೆ ಡೌನ್ ಪೇಮೆಂಟ್ ರೂಪದಲ್ಲಿ ನೀವು ಉಳಿದ ಹಣವನ್ನು ನೀಡಬೇಕಾಗುತ್ತದೆ.  ಸಾಮಾನ್ಯವಾಗಿ ಆಸ್ತಿಯ ಒಟ್ಟು ಮೌಲ್ಯದ ಸುಮಾರು ಶೇಕಡಾ 5  ರಿಂದ ಶೇಕಡಾ 20ರಷ್ಟು ಮುಂಗಡ ಪಾವತಿಯ ಅಗತ್ಯವಿರುತ್ತದೆ. ಕಡಿಮೆ ಅವಧಿಯಲ್ಲಿ ದೊಡ್ಡ ಮೊತ್ತವನ್ನು ಹೊಂದಿಸುವುದು ಎಲ್ಲರಿಗೂ ಸಾಧ್ಯವಿಲ್ಲ.  

ಡೌನ್ ಪೇಮೆಂಟ್ ಗೆ ಹೀಗೆ ಹಣ ಹೊಂದಿಸಿ : 
ಅಲ್ಪಾವಧಿ ಹೂಡಿಕೆ  :  ಮನೆ ಖರೀದಿ ಮಾಡಲು ಮೊದಲೇ ಹೇಳಿದಂತೆ ಮುಂಗಡ ಹಣ ನೀಡಬೇಕು. ಹೆಚ್ಚು ಬೆಲೆ ಬಾಳುವ ಮನೆ ಖರೀದಿಗೆ ಕೈ ಹಾಕಿದ್ರೆ ಮುಂಗಡ ಹಣ ಹೆಚ್ಚಾಗುತ್ತದೆ. ನೀವು ಈಗಾಗಲೇ ಅಲ್ಪಾವಧಿಯ ಹೂಡಿಕೆ ಮಾಡಿದ್ದರೆ ಅದು ನಿಮ್ಮ ನೆರವಿಗೆ ಬರುತ್ತದೆ. ಈಕ್ವಿಟಿಯಂತಹ ಹೂಡಿಕೆಗಳು ಸಹ ಉಪಯುಕ್ತ.  ಅವುಗಳಿಂದ ಹಣವನ್ನು ಯಾವುದೇ ಸಮಯದಲ್ಲಿ ಹಿಂಪಡೆಯಬಹುದು. ಭವಿಷ್ಯದಲ್ಲಿ ಮನೆ ಖರೀದಿ ಪ್ಲಾನ್ ಇದ್ದರೆ ಮೊದಲೇ ನೀವು ಇಲ್ಲಿ ಹಣ ಹೂಡಿಕೆ ಶುರು ಮಾಡಿ.  

LIC Lapsed Insurance Revival: ಮಾ.25 ವರೆಗೆ ಪಾಲಿಸಿ ವಿಶೇಷ ಪುನಶ್ಚೇತನ ಅಭಿಯಾನ!

ಅಸುರಕ್ಷಿತ ಸಾಲ : ಅನೇಕ ಕಡೆ ಅಸುರಕ್ಷಿತ ಸಾಲ ಲಭ್ಯವಿದೆ. ಆದರೆ ಇದರಲ್ಲಿ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ನೀವು ಸುಲಭವಾಗಿ ಲಭ್ಯವಿರುವ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬಹುದು. ಆದರೆ ಬಡ್ಡಿ ಹಾಗೂ ಮರುಪಾವತಿ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿದ ನಂತರ ಇದಕ್ಕೆ ಕೈ ಹಾಕುವುದು ಒಳ್ಳೆಯದು.

ವಿಮೆ ಮತ್ತು ಪಿಎಫ್ ಮೇಲೆ ಸಾಲ : ಜೀವ ವಿಮಾ ಪಾಲಿಸಿ ಅಥವಾ ಪ್ರಾವಿಡೆಂಟ್ ಫಂಡ್ ಹೊಂದಿದ್ದರೆ ಅದ್ರಡಿಯಲ್ಲಿ ನೀವು ಸಾಲ ಪಡೆಯಬಹುದು. ಇದ್ರಲ್ಲಿ ಸಾಲಗಳು ಸುಲಭವಾಗಿ ದೊರೆಯುತ್ತವೆ. ಬಡ್ಡಿ ಕೂಡ ಹೆಚ್ಚಿನ ಪ್ರಮಾಣದಲ್ಲಿರುವುದಿಲ್ಲ. ಹಾಗೆ ಯಾವುದೇ ಗಡುವು ಇರುವುದಿಲ್ಲ.  

ಬಂಗಾರದ ಮೇಲೆ ಸಾಲ : ಡೌನ್ ಪೇಮೆಂಟ್ ಮಾಡಲು ಹಣವಿಲ್ಲ ಎನ್ನುವವರು ಮನೆಯಲ್ಲಿರುವ ಬಂಗಾರವನ್ನು ಬಳಸಿಕೊಳ್ಳಬಹುದು. ಬಂಗಾರವನ್ನು ಆಪತ್ತಿನ ಧನ ಎಂದೇ ಕರೆಯಲಾಗುತ್ತದೆ. ಇದನ್ನು ಅಡವಿಟ್ಟು ಸಾಲ ಪಡೆಯಬಹುದು.   

PAN Card for Children: ಮಕ್ಕಳ‌ ಪಾನ್ ಕಾರ್ಡ್ ಮಾಡಿಸೋದು ಸುಲಭ : ಆನ್ಲೈನ್ ನಲ್ಲಾಗುತ್ತೆ ಎಲ್ಲ ಕೆಲಸ!

ಇನ್ನೊಂದು ಮುಖ್ಯವಾದ ವಿಷ್ಯವೆಂದ್ರೆ ಮನೆ ಖರೀದಿ ವೇಳೆ ನಿಮಗೆ ಡೌನ್ ಪೇಮೆಂಟ್ ಹೆಚ್ಚು ಹೊರೆ ಎನ್ನಿಸಬಹುದು. ಆದ್ರೆ ಮನೆ ಖರೀದಿಗೆ ಮೊದಲು ಗರಿಷ್ಠ ಡೌನ್ ಪೇಮೆಂಟ್ ಮಾಡುವುದು ಒಳ್ಳೆಯದು. ಹೆಚ್ಚು ಡೌನ್ ಪೇಮೆಂಟ್ ಮಾಡಿದಾಗ ಬ್ಯಾಂಕ್ ನೊಂದಿಗೆ ಮಾತನಾಡಿ ಬಡ್ಡಿಯನ್ನು ಕಡಿಮೆ ಮಾಡಿಸಬಹುದು. ಜೊತೆಗೆ ಡೌನ್ ಪೇಮೆಂಟ್ ಹೆಚ್ಚಾದಾಗ  ಸಾಲದ ಮೊತ್ತ ಕಡಿಮೆ ಇರುತ್ತದೆ. ನಿಮಗೆ ಮುಂದೆ ಬಡ್ಡಿ ಹೊಣೆ ಕಡಿಮೆಯಾಗುತ್ತದೆ.
 
ಡೌನ್ ಪೇಮೆಂಟ್ ಮಾಡಲು ಹಣವಿಲ್ಲ ಎನ್ನುವವರು ಮನೆಯಲ್ಲಿರುವ ಬಂಗಾರವನ್ನು ಬಳಸಿಕೊಳ್ಳಬಹುದು. ಬಂಗಾರವನ್ನು ಆಪತ್ತಿನ ಧನ ಎಂದೇ ಕರೆಯಲಾಗುತ್ತದೆ. ಇದನ್ನು ಅಡವಿಟ್ಟು ಸಾಲ ಪಡೆಯಬಹುದು.   

ಇನ್ನೊಂದು ಮುಖ್ಯವಾದ ವಿಷ್ಯವೆಂದ್ರೆ ಮನೆ ಖರೀದಿ ವೇಳೆ ನಿಮಗೆ ಡೌನ್ ಪೇಮೆಂಟ್ ಹೆಚ್ಚು ಹೊರೆ ಎನ್ನಿಸಬಹುದು. ಆದ್ರೆ ಮನೆ ಖರೀದಿಗೆ ಮೊದಲು ಗರಿಷ್ಠ ಡೌನ್ ಪೇಮೆಂಟ್ ಮಾಡುವುದು ಒಳ್ಳೆಯದು. ಹೆಚ್ಚು ಡೌನ್ ಪೇಮೆಂಟ್ ಮಾಡಿದಾಗ ಬ್ಯಾಂಕ್ ನೊಂದಿಗೆ ಮಾತನಾಡಿ ಬಡ್ಡಿಯನ್ನು ಕಡಿಮೆ ಮಾಡಿಸಬಹುದು. ಜೊತೆಗೆ ಡೌನ್ ಪೇಮೆಂಟ್ ಹೆಚ್ಚಾದಾಗ  ಸಾಲದ ಮೊತ್ತ ಕಡಿಮೆ ಇರುತ್ತದೆ. ನಿಮಗೆ ಮುಂದೆ ಬಡ್ಡಿ ಹೊಣೆ ಕಡಿಮೆಯಾಗುತ್ತದೆ.

Latest Videos
Follow Us:
Download App:
  • android
  • ios