PAN Card for Children: ಮಕ್ಕಳ‌ ಪಾನ್ ಕಾರ್ಡ್ ಮಾಡಿಸೋದು ಸುಲಭ : ಆನ್ಲೈನ್ ನಲ್ಲಾಗುತ್ತೆ ಎಲ್ಲ ಕೆಲಸ!

18 ವರ್ಷದೊಳಗಿನ ಮಕ್ಕಳ ಹೆಸರಿನಲ್ಲಿ ಕೆಲ ಪಾಲಕರು ಬ್ಯುಸಿನೆಸ್ ಶುರು ಮಾಡಲು ಬಯಸ್ತಾರೆ. ಮಕ್ಕಳಿಗೆ ಪಾನ್ ಕಾರ್ಡ್ ಇಲ್ಲವೆಂದ್ರೆ ಆದಾಯ ತೆರಿಗೆ ಪಾವತಿ ಕಷ್ಟ. ಆದ್ರೆ ಇನ್ಮುಂದೆ ಚಿಂತಿಸಬೇಕಾಗಿಲ್ಲ. ಆರಾಮವಾಗಿ ಮಕ್ಕಳ ಹೆಸರಿನಲ್ಲಿ ಪಾನ್ ಕಾರ್ಡ್ ಪಡೆಯಬಹುದು.
 

PAN card for kids how to apply for Permanent Account Number for your child

Business Desk: ಇಂದಿನ ಕಾಲದಲ್ಲಿ ಆಧಾರ್ ಕಾರ್ಡ್ (Aadhaar Card), ಪಾನ್ ಕಾರ್ಡ್ (PAN Card), ರೇಷನ್ ಕಾರ್ಡ್ (Ration Card )ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ವಿಳಾಸ ಪುರಾವೆಯಾಗಿ ಆಧಾರ್ ಕಾರ್ಡ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಪಾನ್ ಕಾರ್ಡ್ ಅನ್ನು ಹಣಕಾಸಿನ ವಹಿವಾಟುಗಳಿಗೆ ಬಳಸಲಾಗುತ್ತದೆ. ಜನರು ಇದನ್ನು ಬ್ಯಾಂಕಿಂಗ್ ವ್ಯವಹಾರಗಳಿಗೆ ಸಂಬಂಧಿಸಿದ ಕೆಲಸಗಳಿಗೆ ಬಳಸುತ್ತಾರೆ. ಆದಾಯ ತೆರಿಗೆಯ ವಹಿವಾಟಿನಲ್ಲಿಯೂ ಪಾನ್ ಕಾರ್ಡ್ ತುಂಬಾ ಉಪಯುಕ್ತವಾಗಿದೆ. ಹಣಕಾಸಿನ ವಹಿವಾಟುಗಳಿಗೆ ಪಾನ್ ಕಾರ್ಡ್ ಅಗತ್ಯವಿರುವುದರಿಂದ, ಯಾವುದೇ ರೀತಿಯ ವ್ಯವಹಾರವನ್ನು ಪ್ರಾರಂಭಿಸಲು ನಿಮಗೆ ಇದು ಅಗತ್ಯವಿದೆ.

ಇಂದಿನ ಶತಮಾನದಲ್ಲಿ ಮಕ್ಕಳೂ ತುಂಬಾ ಸ್ಮಾರ್ಟ್ ಆಗಿದ್ದಾರೆ. ಅವರು ಚಿಕ್ಕ ವಯಸ್ಸಿನಲ್ಲೇ ವ್ಯಾಪಾರ ಯೋಜನೆಗಳನ್ನು ಶುರು ಮಾಡಲು ಪ್ರಾರಂಭಿಸಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ವ್ಯವಹಾರವನ್ನು ಪ್ರಾರಂಭಿಸಲು ಅವರಿಗೆ ಪಾನ್ ಕಾರ್ಡ್ ಅಗತ್ಯವಿದೆ. ಆದ್ದರಿಂದ, ಆದಾಯ ತೆರಿಗೆ ಇಲಾಖೆಯು ತನ್ನ ನಿಯಮಗಳನ್ನು ಬದಲಾಯಿಸಿದೆ. ಮೊದಲು 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಆದಾಯ ತೆರಿಗೆ ಇಲಾಖೆ ಪಾನ್ ಕಾರ್ಡ್ ನೀಡ್ತಾಯಿತ್ತು. ಆದ್ರೀಗ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪಾನ್ ಕಾರ್ಡ್ ನೀಡುವ ಸೌಲಭ್ಯವನ್ನು ಪ್ರಾರಂಭಿಸಿದೆ.

ಮೊದಲೇ ಹೇಳಿದಂತೆ ಮಕ್ಕಳ ಹೆಸರಿನಲ್ಲಿ ಪಾನ್ ಕಾರ್ಡ್ ಪಡೆಯಬಹುದು. ಈ ಪಾನ್ ಕಾರ್ಡ್ ಅನ್ನು ಪೋಷಕರು, ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡಲು ಸಹ ಬಳಸಬಹುದು. ನಿಯಮಗಳ ಪ್ರಕಾರ, ಮಗು ತನ್ನ ಪಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ,. ಆದರೆ ಮಗುವಿನ ಜಾಗದಲ್ಲಿ ಪೋಷಕರು ಅರ್ಜಿ ಸಲ್ಲಿಸಬಹುದು. ಆದ್ದರಿಂದ ಅಪ್ರಾಪ್ತ ವಯಸ್ಕರಿಗೆ ಪಾನ್  ಕಾರ್ಡ್ ಮಾಡುವ ಪ್ರಕ್ರಿಯೆಯ ಬಗ್ಗೆ ನಾವು ನಿಮಗೆ ಇಂದು ಹೇಳ್ತೆವೆ.

ಇದನ್ನೂ ಓದಿ: ಕೊರೋನಾ ಕಾಲದಲ್ಲಿ 10 ಪಟ್ಟು ಹೆಚ್ಚಾಯ್ತು ಅದಾನಿ ಆಸ್ತಿ, ಎಲಾನ್ ಮಸ್ಕ್‌ಗೇ ಟಕ್ಕರ್!

ಮಕ್ಕಳಿಗೆ ಪಾನ್ ಕಾರ್ಡ್ : 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪಾನ್ ಕಾರ್ಡ್ ಬೇಕೆನ್ನುವವರು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಕಚೇರಿಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಸುಲಭವಾಗಿ ಪಾನ್ ಕಾರ್ಡ್ ಪಡೆಯಲು ಬಯಸುವವರು, ಮೊದಲನೆಯದಾಗಿ,ಎನ್ ಎಸ್ ಡಿಎಲ್ ನ ಅಧಿಕೃತ ವೆಬ್‌ಸೈಟ್ www.onlineservices.nsdl.com ಗೆ ಭೇಟಿ ನೀಡಬೇಕಾಗುತ್ತದೆ. ಇದರ ನಂತರ, ಅಲ್ಲಿ ಆನ್‌ಲೈನ್ ಪಾನ್ ಅಪ್ಲಿಕೇಶನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಇದರ ನಂತರ, ನಿಮ್ಮ ಮಗುವಿನ ವಯಸ್ಸಿನ ಪುರಾವೆ ಪ್ರಮಾಣಪತ್ರಕ್ಕಾಗಿ ನೀವು ಕೆಲವು ಪ್ರಮುಖ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಜೊತೆಗೆ ಪೋಷಕರು  ತಮ್ಮ ಸಹಿಯನ್ನು ಅಪ್ಲೋಡ್ ಮಾಡಬೇಕಾಗುತ್ತದೆ.

ಪಾನ್‌ ಕಾರ್ಡ್ ಗೆ ಅರ್ಜಿ ಸಲ್ಲಿಸಲು ನೀವು 107 ರೂಪಾಯಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಇದಕ್ಕೆ ನೀವು ಆನ್ಲೈನ್‌ನಲ್ಲಿ ಠೇವಣಿ ಮಾಡಬೇಕಾಗುತ್ತದೆ. ಆನ್ಲೈನ್ ನಲ್ಲಿ ಠೇವಣಿ ಪಾವತಿ ಮಾಡಿದ ನಂತ್ರ ಅರ್ಜಿ ಪೂರ್ಣಗೊಳ್ಳುತ್ತದೆ. ನಂತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ 15 ದಿನಗಳ ನಂತರ ನಿಮ್ಮ ಮಗುವಿನ ಹೆಸರಿನಲ್ಲಿ ಪಾನ್ ಕಾರ್ಡ್ ಸಿಗುತ್ತದೆ. ನಿಮ್ಮ ವಿಳಾಸಕ್ಕೆ ಪಾನ್ ಕಾರ್ಡ್ ಬರಲಿದೆ.

ಇದನ್ನೂ ಓದಿ: Flexible Work Culture: ಇಂಡಿಯಾ ಮಾರ್ಟ್‌ನಲ್ಲಿ ಇನ್ನು ವಾರಕ್ಕೊಮ್ಮೆ ಸಂಬಳ!

ಪಾನ್ ಕಾರ್ಡ್ ಗೆ ಅಗತ್ಯವಿರುವ ದಾಖಲೆ : ಅಪ್ರಾಪ್ತ ವಯಸ್ಕರ ಪೋಷಕರ ವಿಳಾಸ ಮತ್ತು ಗುರುತಿನ ಪ್ರಮಾಣಪತ್ರದ ಅಗತ್ಯವಿದೆ. ಇದಲ್ಲದೆ, ಅರ್ಜಿದಾರರ ವಿಳಾಸ ಮತ್ತು ಅವರ ಗುರುತಿನ ಪುರಾವೆಯನ್ನು ಸಹ ನೀಡಬೇಕಾಗುತ್ತದೆ. ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ ಅಥವಾ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಅಥವಾ ವೋಟರ್ ಐಡಿಯನ್ನು ಸಲ್ಲಿಸಬಹುದು. ವಿಳಾಸ ಗುರುತಿಗಾಗಿ ಆಧಾರ್ ಕಾರ್ಡ್, ಅಂಚೆ ಕಚೇರಿ ಪಾಸ್‌ಬುಕ್, ಆಸ್ತಿ ನೋಂದಣಿ ದಾಖಲೆ ಅಥವಾ ನಿವಾಸ ಪ್ರಮಾಣಪತ್ರವನ್ನು ಸಲ್ಲಿಸಬಹುದು. 

Latest Videos
Follow Us:
Download App:
  • android
  • ios