*ದೂರು ನಿರ್ವಹಣಾ ವ್ಯವಸ್ಥೆ ಪ್ರಾರಂಭಿಸಿರುವ ಆರ್ ಬಿಐ*ಆರ್ ಬಿಐಯಿಂದ ನಿಯಂತ್ರಿಸಲ್ಪಡೋ ಎಲ್ಲ ಹಣಕಾಸು ಸೇವಾ ಪೂರೈಕೆದಾರರ ವಿರುದ್ಧ ಗ್ರಾಹಕರು ದೂರು ನೀಡಬಹುದು*ಈ ಬಗ್ಗೆ ಮೆಸೇಜ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿರುವ ಆರ್ ಬಿಐ
ನವದೆಹಲಿ (ಏ.21): ಬ್ಯಾಂಕ್ (Bank) ಅಥವಾ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ (NBFC) ವಿರುದ್ಧ ನಿಮಗೇನಾದ್ರೂ ದೂರುಗಳಿವೆಯಾ? ದೂರು (Complaint) ನೀಡೋದು ಹೇಗೆ ಎಂದು ತಿಳಿಯುತ್ತಿಲ್ಲವೆ? ಡೋಂಟ್ ವರಿ ಇದಕ್ಕಾಗಿಯೇ ಭಾರತೀಯ ರಿಸರ್ವ್ ಬ್ಯಾಂಕ್ (RBI) ದೂರು ನಿರ್ವಹಣಾ ವ್ಯವಸ್ಥೆಯನ್ನು (CMS) ಪ್ರಾರಂಭಿಸಿದೆ. ಇದರಲ್ಲಿ ಆರ್ ಬಿಐಯಿಂದ ನಿಯಂತ್ರಿಸಲ್ಪಡೋ ಎಲ್ಲ ಹಣಕಾಸು ಸೇವಾ ಪೂರೈಕೆದಾರರ ವಿರುದ್ಧ ಗ್ರಾಹಕರು (Customers) ದೂರು ದಾಖಲಿಸಬಹುದು.
ಈ ಬಗ್ಗೆ ಜನರಿಗೆ ಮಾಹಿತಿ ನೀಡಿ ಅರಿವು ಮೂಡಿಸಲು ಆರ್ ಬಿಐ (RBI) ಮೆಸೇಜ್ ಗಳನ್ನು ಕಳುಹಿಸುತ್ತಿದೆ. 'ಯಾವುದೇ ಬ್ಯಾಂಕ್, ಎನ್ ಬಿಎಫ್ ಸಿ ಅಥವಾ ಪಾವತಿ ವ್ಯವಸ್ಥೆ ಸಂಸ್ಥೆ ವಿರುದ್ಧ ಆರ್ ಬಿ- ಇಂಟಿಗ್ರೇಟೆಡ್ ಒಂಬುಡ್ಸ್ ಮನ್ ಯೋಜನೆ ಅಡಿಯಲ್ಲಿ https://cms.rbi.org.in ನಲ್ಲಿ ದೂರು ಸಲ್ಲಿಸಿ. ಹೆಚ್ಚಿನ ಮಾಹಿತಿಗೆ 14440 ಸಂಖ್ಯೆಗೆ ಕರೆ ಮಾಡಿ.'
RBI Norms:ಎನ್ ಬಿಎಫ್ ಸಿ ಸಾಲ ಪಡೆಯೋದು ಇನ್ಮುಂದೆ ಸುಲಭವಲ್ಲ; ನಿಯಮ ಬಿಗಿಗೊಳಿಸಿದ ಆರ್ ಬಿಐ
ದೂರು ದಾಖಲಿಸೋದು ಹೇಗೆ?
ಆರ್ ಬಿಐ 'ದೂರು ನಿರ್ವಹಣಾ ವ್ಯವಸ್ಥೆ'ಯಲ್ಲಿ ದೂರು ದಾಖಲಿಸೋದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಹಂತ 1: https://cms.rbi.org.in ವೆಬ್ ಸೈಟ್ ಗೆ ಭೇಟಿ ನೀಡಿ. 'file a complaint' ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 2: Captcha code ನಮೂದಿಸಿ.
ಹಂತ 3: ದೂರುದಾರರ ಹೆಸರು ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ. ಆ ಬಳಿಕ ‘Get OTP’ಮೇಲೆ ಕ್ಲಿಕ್ ಮಾಡಿ.
ಹಂತ 4: OTP ನಮೂದಿಸಿ.
ಹಂತ 5: ಇ-ಮೇಲ್ (e-mail) ಸೇರಿದಂತೆ ಇತರ ಹೆಚ್ಚುವರಿ ಮಾಹಿತಿಗಳನ್ನು ಭರ್ತಿ ಮಾಡಿ. ದೂರಿನ ವರ್ಗವನ್ನು ಡ್ರಾಪ್ ಡೌನ್ ನಿಂದ ಆಯ್ಕೆ ಮಾಡಿ. ನೀವು ದೂರು (Complaint) ನೀಡಲು ಬಯಸೋ ಬ್ಯಾಂಕ್ (Bank) ಅಥವಾ ಎನ್ ಬಿಎಫ್ ಸಿ (NBFC) ಮಾಹಿತಿಗಳನ್ನು ಕೂಡ ನಮೂದಿಸಿ.
ಹಂತ 6: ಪ್ರಶ್ನೆಯ ಆಧಾರದಲ್ಲಿ ರೇಡಿಯೋ ಬಟನ್ಸ್ ಆಯ್ಕೆ ಮಾಡಿ ಹಾಗೂ Next ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 7: ಸಂಬಂಧಪಟ್ಟ ಸಂಸ್ಥೆಗೆ ನೀವು ಈಗಾಗಲೇ ದೂರು ದಾಖಲಿಸಿದ್ದೀರಾ ಎಂಬ ಪ್ರಶ್ನೆಗೆ Yes ಅಥವಾ No ಆಯ್ಕೆಯನ್ನು ಆರಿಸಿ.
ಹಂತ 8: ನೀವು ದೂರು ನೀಡುತ್ತಿರುವ ದಿನಾಂಕ (Date) ನಮೂದಿಸಿ ಹಾಗೂ ನಿಮ್ಮ ಮೊಬೈಲ್ (mobile) ಅಥವಾ ಸಿಸ್ಟ್ಂ ನಲ್ಲಿರುವ ಫೈಲ್ ಅಪ್ಲೋಡ್ ಮಾಡಿ.
ಹಂತ 9: ವಹಿವಾಟಿನ ಮೊತ್ತ ಹಾಗೂ ದಿನಾಂಕದ ಜೊತೆಗೆ ಸಮಸ್ಯೆಯ ಮಾಹಿತಿಗಳೊಂದಿಗೆ ಯಾವುದಕ್ಕೆ ಸಂಬಂಧಿಸಿ ಪ್ರಶ್ನೆ ಕೇಳುತ್ತೀರೋ ಅದಕ್ಕೆ ಸಂಬಂಧಿಸಿದ ಬಟನ್ ಆಯ್ಕೆ ಮಾಡಿ.
ಹಂತ 10: ನಿಮ್ಮ ವಹಿವಾಟನ್ನು ಬೆಂಬಲಿಸುವ ಯಾವುದೇ ದಾಖಲೆಗಳಿದ್ದರೆ ಅಪ್ಲೋಡ್ ಮಾಡಿ. ‘Authorisation’ ಮೇಲೆ ಕ್ಲಿಕ್ ಮಾಡಿ ಹಾಗೂ declaration ಟಿಕ್ ಮಾಡಿ.
ಹಂತ 11: Review and Submit ಮೇಲೆ ಕ್ಲಿಕ್ ಮಾಡಿ.
ಈಗ ನಿಮಗೆ ದೂರಿನ ಪಿಡಿಎಫ್ ಡೌನ್ ಲೋಡ್ ಮಾಡುವ ಆಯ್ಕೆ ಸಿಗುತ್ತದೆ.
ಎಸ್‌ಬಿಐ ಸೇರಿ ಹಲವು ಬ್ಯಾಂಕ್‌ಗಳ ಸಾಲದ ಬಡ್ಡಿದರ ಏರಿಕೆ
ಸುರಕ್ಷಿತ ಹಣಕಾಸಿನ ವಹಿವಾಟುಗಳ ಬಗ್ಗೆ ಆರ್ ಬಿಐ ಗ್ರಾಹಕರಿಗೆ ಅರಿವು ಮೂಡಿಸುವ ಕೆಲಸವನ್ನು ಆಗಾಗ ಮಾಡುತ್ತಲೇ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಆರ್ ಬಿಐ 'BE(A)WARE ಎಂಬ ಕೈಪಿಡಿ ಬಿಡುಗಡೆ ಮಾಡಿದೆ. ಇದರಲ್ಲಿ ವಿವಿಧ ಹಣಕಾಸಿನ ವಹಿವಾಟುಗಳನ್ನು ನಡೆಸುವಾಗ ಅನುಸರಿಸಬೇಕಾದ ವಿಧಾನಗಳು ಹಾಗೂ ಮುಂಜಾಗ್ರತಾ ಕ್ರಮಗಳ ಮಾಹಿತಿಯಿದೆ.
