Asianet Suvarna News Asianet Suvarna News

ಮಿತವ್ಯಯವೇ ಹಿತ: ವಿದ್ಯುತ್‌ ಬಿಲ್‌ ತಗ್ಗಿಸಲು ಏನ್‌ ಮಾಡ್ಬಹುದು?

ಕೊರೋನಾದಿಂದ ಅನೇಕರ ಆದಾಯಕ್ಕೆ ಬರೆ ಬಿದ್ದಿದೆ. ಇಂಥ ಸಮಯದಲ್ಲಿ ಕಾಸ್ಟ್‌ ಕಟ್ಟಿಂಗ್‌ ಅತ್ಯಗತ್ಯ. ಅದ್ರಲ್ಲೂ ಸಾವಿರದ ಗಡಿ ದಾಟೋ ಮನೆ ವಿದ್ಯುತ್‌ ಬಿಲ್ ನೋಡಿದ್ರೆ ಟೆನ್ಷನ್‌ ಹೆಚ್ಚೋದು ಸಹಜ. ಹಾಗಾದ್ರೆ ವಿದ್ಯುತ್‌ ಮಿತವ್ಯಯ ಮಾಡೋದು ಹೇಗೆ?

How to cut down electricity consumption
Author
Bangalore, First Published Jun 26, 2021, 5:55 PM IST

ಕೊರೋನಾ ಕಾರಣಕ್ಕೆ ಅನೇಕರ ಬದುಕು ಸಂಕಷ್ಟದಲ್ಲಿದೆ,ಇಂಥ ಸಮಯದಲ್ಲಿ ಸರ್ಕಾರ ವಿದ್ಯುತ್‌ ದರ ಏರಿಕೆ ಮಾಡಿ ಶಾಕ್‌ ನೀಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರತಿ ವಿಷಯದಲ್ಲೂ ವೆಚ್ಚಕಡಿತ ಮಾಡಬೇಕಾದ ಅನಿವಾರ್ಯತೆಯಿದೆ. ಇಂಥ ಸಮಯದಲ್ಲಿ ವಿದ್ಯುತ್‌ ಬಿಲ್‌ ಜಾಸ್ತಿ ಬಂದ ಬಳಿಕ ತಲೆ ಚಚ್ಚಿಕೊಳ್ಳೋ ಬದಲು ಮೊದಲೇ ಒಂದಿಷ್ಟು ಮುಂಜಾಗ್ರತೆ ವಹಿಸೋದು ಉತ್ತಮ.

ವಿದ್ಯುತ್‌ ಉಳಿತಾಯ ಮಾಡೋದ್ರಿಂದ ಜೇಬಿಗೂ ಹೊರೆ ಕಡಿಮೆ, ಪರಿಸರಕ್ಕೂ ಹಿತ. ಜೊತೆಗೆ ಇಂಧನ ಭದ್ರತೆಯೂ ಹೌದು. ಪ್ರತಿ ಮನೆಯಲ್ಲೂ ವಿದ್ಯುತ್‌ ಅಪವ್ಯಯ ತಪ್ಪಿಸಿದ್ರೆ ಬಹಶಃ ವಿದ್ಯುತ್‌ ಕಡಿತದ ಅನಿವಾರ್ಯತೆಯೇ ಇಲ್ಲ! ಅದೇನೇ ಇರಲಿ, ನಮ್ಮ ಮನೆಯಲ್ಲಿ ಒಂದಿಷ್ಟು ವಿದ್ಯುತ್‌ ಉಳಿಸೋದ್ರಿಂದ ನಮಗಂತೂ ಲಾಭವಿದೆ.

ಮನೆಯ ಹಳೆಯ, ಅಧಿಕ ವಿದ್ಯುತ್‌ ಬಳಸೋ ಉಪಕರಣಗಳನ್ನು ಬದಲಾಯಿಸೋದು ತುಸು ದುಬಾರಿ ಪ್ರಕ್ರಿಯೆ ಎಂದೇ ಬಹುತೇಕರು ಭಾವಿಸುತ್ತಾರೆ. ಆದ್ರೆ ಒಂದು ಬಲ್ಬ್ ಬದಲಾಯಿಸೋದ್ರಿಂದ ದೀರ್ಘಾವಧಿಯಲ್ಲಿ ಹಲವು ವೊಲ್ಟೇಜ್‌ ವಿದ್ಯುತ್‌ ಉಳಿಸಬಹುದು. ಇದೇ ರೀತಿ ಗೃಹ ವಿದ್ಯುತ್‌ ಬಳಕೆ ತಗಿಸೋ ಅನೇಕ ಮಾರ್ಗಗಳಿದ್ದು,ಅವುಗಳ ಮಾಹಿತಿ ಇಲ್ಲಿದೆ ನೋಡಿ.

ಬ್ಯಾಂಕ್‌ನಲ್ಲಿ ಚಿನ್ನವಿಟ್ಟು ಬಡ್ಡಿ ಗಳಿಸಿ, ಹೇಗೆ ಅಂತೀರಾ?

ಸೌರಫಲಕ ಅಳವಡಿಸಿ

ಮನೆ ಟೆರೇಸ್‌ ಮೇಲೆ ಸಾಕಷ್ಟು ಸ್ಥಳಾವಕಾಶ ಇದ್ದೇಇರುತ್ತೆ. ಇಲ್ಲಿ ಸೌರಫಲಕಗಳನ್ನು ಅಳವಡಿಸಿ, ಅದನ್ನು ವಿದ್ಯುತ್‌ ಗ್ರಿಡ್‌ಗೆ ಸಂಪರ್ಕಿಸಿದ್ರೆ ನಿಮ್ಮದೇ ವಿದ್ಯುತ್‌ ಘಟಕ ನಿರ್ಮಾಣವಾಗುತ್ತದೆ. ನಿಮ್ಮ ಗೃಹ ಬಳಕೆಗೆ ಸಾಕಾಗುವಷ್ಟು ವಿದ್ಯುತ್‌ ಬಳಸಿ ಉಳಿಕೆಯನ್ನು ಗ್ರಿಡ್‌ಗೆ ನೀಡಬಹುದು. ಇದ್ರಿಂದ ನಿಮಗೊಂದಿಷ್ಟು ಆದಾಯವೂ ಬರುತ್ತದೆ. ಅಲ್ಲದೆ, ವಿದ್ಯುತ್‌ ಬಿಲ್‌ ಪಾವತಿಸಬೇಕಾದ ಅಗತ್ಯವೂ ಇರುವುದಿಲ್ಲ. ಸೌರ ಫಲಕಗಳ ಅಳವಡಿಕೆಗೆ ಪ್ರಾರಂಭದಲ್ಲಿ ಹೆಚ್ಚಿನ ಖರ್ಚು ಬಂದ್ರೂ ನಂತರದ ದಿನಗಳಲ್ಲಿ ವಿದ್ಯುತ್‌ ಬಿಲ್‌ ಪಾವತಿಸಬೇಕಾದ ಅಗತ್ಯವಿಲ್ಲದಿರೋ ಕಾರಣ ಅದ್ರಿಂದ ಲಾಭವಂತೂ ಆಗೇಆಗುತ್ತದೆ.

ಸೋಲಾರ್‌ ವಾಟರ್‌ ಹೀಟರ್‌ ಬಳಕೆ

ಬಹುತೇಕ ಮನೆಗಳಲ್ಲಿ ಸ್ನಾನಕ್ಕೆ ಬಿಸಿ ನೀರು ಕಾಯಿಸಲು ಗೀಸರ್‌ ಬಳಸುತ್ತಾರೆ. ಆದ್ರೆ ಗೀಸರ್‌ ಅತೀಹೆಚ್ಚು ವಿದ್ಯುತ್‌ ಬಳಸಿಕೊಳ್ಳುತ್ತದೆ. ನಿಮ್ಮ ಮನೆಯ ವಿದ್ಯುತ್‌ ಬಿಲ್‌ ಹೆಚ್ಚಳಕ್ಕೆ ಇದರ ಕೊಡುಗೆ ಅಪಾರ. ಹೀಗಾಗಿ ಸ್ವಲ್ಪ ದುಬಾರಿ ಅನಿಸಿದ್ರೂ ಸೋಲಾರ್‌ ವಾಟರ್‌ ಹೀಟರ್‌ ಅಳವಡಿಸಿ. ಇದ್ರಿಂದ ದೀರ್ಘಾವಧಿಯಲ್ಲಿ ನಿಮಗೆ ಹಣ ಉಳಿತಾಯವಾಗೋದು ಗ್ಯಾರಂಟಿ.

ಆನ್‌ಲೈನ್‌ನಲ್ಲೇ ಪರ್ಸನಲ್‌ ಲೋನ್ ಸೌಲಭ್ಯ

ಬಳಕೆ ಬಳಿಕ ಮರೆಯದೆ ನಿಲ್ಲಿಸಿ

ರೂಮ್‌ನಿಂದ ಹೊರಗೆ ಹೋಗೋವಾಗ ಮರೆಯದೆ ಲೈಟ್‌ಗಳು ಹಾಗೂ ಫ್ಯಾನ್‌ ಆರಿಸಿ. ಟಿವಿ, ಕಂಪ್ಯೂಟರ್‌, ಎಸಿ, ಗೀಸರ್‌, ವಾಟರ್‌ ಫ್ಯೂರಿಫೈಯರ್‌ ಸೇರಿದಂತೆ ಎಲ್ಲ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಬಳಸಿದ ಬಳಿಕ ಮರೆಯದೆ ಸ್ವಿಚ್‌ ಆಪ್‌ ಮಾಡಿ. ಕೆಲವು ಮನೆಗಳಲ್ಲಿ ಇಂಥ ಉಪಕರಣಗಳು ಇಡೀ ದಿನ ಆನ್‌ ಆಗಿಯೇ ಇರುತ್ತವೆ. ಇದ್ರಿಂದ ವಿದ್ಯುತ್‌ ಅಪವ್ಯಯವಾಗುತ್ತದೆ. 

ಗೋಡೆ ಬಣ್ಣ

ಗೋಡೆಗಳಿಗೆ ಗಾಢ ಬಣ್ಣ ಬಳಸಿದ್ರೆ, ಅದು ಬೆಳಕನ್ನು ಹೀರಿಕೊಳ್ಳುತ್ತದೆ. ಇದ್ರಿಂದ ಕೋಣೆಯಲ್ಲಿ ನೈರ್ಸಗಿಕ ಬೆಳಕು ತಗ್ಗುತ್ತದೆ. ಅದೇ ತಿಳಿ ಬಣ್ಣಗಳನ್ನು ಬಳಸಿದ್ರೆ ಗೋಡೆಗಳಲ್ಲಿ ನೈರ್ಸಗಿಕ ಬೆಳಕು ಪ್ರತಿಫಲನ ಹೊಂದೋ ಮೂಲಕ ಕೋಣೆ ಪ್ರಕಾಶಮಾನವಾಗಿ ಕಾಣಿಸುತ್ತದೆ. ಹಗಲಿನಲ್ಲಿ ಸೂರ್ಯನ ಬೆಳಕೇ ಕೋಣೆಯನ್ನು ಬೆಳಗಿಸೋ ಕಾರಣ ವಿದ್ಯುತ್‌ ಲೈಟ್‌ಗಳ ಅಗತ್ಯವಿರೋದಿಲ್ಲ. ಅಲ್ಲದೆ, ನೈಸರ್ಗಿಕ ಬೆಳಕು ಮನಸ್ಸಿಗೂ ಮುದ ನೀಡುತ್ತದೆ. 

ಇಂಧನ ಉಳಿತಾಯ ಉಪಕರಣಗಳು 

ನಿಮ್ಮ ಮನೆಯಲ್ಲಿರೋ ಎಲೆಕ್ಟ್ರಾನಿಕ್‌ ಸಾಧನಗಳನ್ನು ಬದಲಾಯಿಸಬೇಕಾದ ಸಂದರ್ಭ ಎದುರಾದಾಗ ಆದಷ್ಟು ಆಧುನಿಕ ಹಾಗೂ ಇಂಧನ ಉಳಿಸೋ ಉಪಕರಣಗಳನ್ನೇ ಖರೀದಿಸಿ. ಇದ್ರಿಂದ ಸಾಕಷ್ಟು ವಿದ್ಯುತ್‌ ಉಳಿಸಬಹುದು. 

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಇಎಂಐ ಆಯ್ಕೆ ಮಾಡಿದ್ರಾ?

ಸೀಲಿಂಗ್‌ ಫ್ಯಾನ್‌ ಬಳಕೆ ಹೆಚ್ಚಿಸಿ

ಎಸಿ ಅತಿಹೆಚ್ಚು ವಿದ್ಯುತ್‌ ಬಳಸಿಕೊಳ್ಳುತ್ತದೆ. ಹೀಗಾಗಿ ಮನೆಯಲ್ಲಿ ಎಸಿ ಬದಲು ಸೀಲಿಂಗ್ ಫ್ಯಾನ್‌ಗಳನ್ನೇ ಹೆಚ್ಚು ಬಳಸಿ. ಇದ್ರಿಂದ ವಿದ್ಯುತ್‌ ಉಳಿತಾಯದ ಜೊತೆ ಪರಿಸರದ ಮೇಲಾಗೋ ಹಾನಿಯೂ ತಗ್ಗುತ್ತದೆ. 

ಎಲ್‌ಇಡಿ ಲೈಟ್ಸ್‌ ಬಳಸಿ

ಎಲ್‌ಇಡಿ ಲೈಟ್‌ಗಳು ನಿಮ್ಮ ವಿದ್ಯುತ್‌ ಬಳಕೆ ಪ್ರಮಾಣವನ್ನು ಶೇ.90ರಷ್ಟು ತಗ್ಗಿಸುತ್ತವೆ. ಹೀಗಾಗಿ ನಿಮ್ಮ ಮನೆಯಲ್ಲಿ ಇನ್ನೂ ಟ್ಯೂಬ್‌ ಲೈಟ್‌ ಅಥವಾ ಹಳೆಯ ಮಾದರಿ ಬಲ್ಬ್‌ಗಳಿದ್ದರೆ ಅವುಗಳನ್ನು ತೆಗೆದು ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಿ. ಏಕೆಂದ್ರೆ ಈ ಬಲ್ಬ್‌ಗಳು ಹೆಚ್ಚು ವಿದ್ಯುತ್‌ ಬಳಸಿಕೊಳ್ಳುತ್ತವೆ. 

ಪವರ್‌ ಸ್ಟ್ರಿಪ್‌ ಅಳವಡಿಸಿ

ನಿಮ್ಮ ಬಳಿ ಅನೇಕ ಎಲೆಕ್ಟ್ರಾನಿಕ್‌ ಉಪಕರಣಗಳಿದ್ರೆ ಅವುಗಳನ್ನು ಒಂದೇ ಪವರ್‌ ಸ್ಟ್ರಿಪ್‌ಗೆ ಸಂಪರ್ಕಿಸಿ. ಇದ್ರಿಂದ ಈ ಉಪಕರಣಗಳು ಬಳಕೆಯಲ್ಲಿಲ್ಲದಾಗ ಒಂದೇ ಬಾರಿಗೆ ಎಲ್ಲವನ್ನೂ ಸ್ವಿಚ್‌ ಆಪ್‌ ಮಾಡಬಹುದು. ಇದ್ರಿಂದ ವಿದ್ಯುತ್‌ ಅಪವ್ಯಯವನ್ನು ಕಡಿಮೆ ಮಾಡಬಹುದು.

Follow Us:
Download App:
  • android
  • ios