Akshaya Tritiya 2022: ಅಕ್ಷಯ ತೃತೀಯದಂದು ಚಿನ್ನ ಮನೆಗೆ ತಂದ್ರೆ ಶುಭವಾಗುತ್ತೆ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಬಂಗಾರ ಖರೀದಿಗೆ ಮುಂದಾಗ್ತಾರೆ. ಆದ್ರೆ ಪೂರ್ವಾಪರ ಆಲೋಚನೆ ಮಾಡದೆ, ಹಣ ಸುರಿದು ಚಿನ್ನದ ಆಭರಣ ಖರೀದಿಸಿ ಮೋಸ ಹೋಗ್ತಾರೆ.  

ಹಿಂದುಗಳು ಅಕ್ಷಯ ತೃತೀಯ (Akshaya Tritiya 2022) ವನ್ನು ಅತ್ಯಂತ ಮಂಗಳಕರ ಹಬ್ಬ (Festival) ವೆಂದು ನಂಬಿದ್ದಾರೆ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷವೆಂದ್ರೆ ಚಿನ್ನ (Gold). ಅಕ್ಷಯ ತೃತೀಯದ ದಿನ ಚಿನ್ನ ಖರೀದಿಗೆ ವಿಶೇಷ ಮಹತ್ವವಿದೆ. ಬಹುತೇಕರು ಅಕ್ಷಯ ತೃತೀಯದ ದಿನ ಅಲ್ಪ ಬೆಲೆಯ ಆಭರಣವನ್ನಾದ್ರೂ ಖರೀದಿ ಮಾಡಲು ಇಷ್ಟಪಡ್ತಾರೆ. ನೀವು ಸಹ ಅಕ್ಷಯ ತೃತೀಯದಂದು ಚಿನ್ನ ಅಥವಾ ಚಿನ್ನಾಭರಣಗಳನ್ನು ಖರೀದಿಸಲು ಹೊರಟಿದ್ದರೆ, ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನ ಕೊಡಿ. ಇದರಿಂದ ನಕಲಿ ಚಿನ್ನ ಖರೀದಿಯಿಂದ ನೀವು ಬಚಾವ್ ಆಗ್ತೀರಿ. ಚಿನ್ನದ ಅಸಲಿ – ನಕಲಿ ಹೇಗೆ ತಿಳಿಯೋದು ಎಂದು ನೀವು ಪ್ರಶ್ನೆ ಮಾಡಬಹುದು. ಅದನ್ನು ತಿಳಿಯಲು ಕೆಲವು ಟೆಕ್ನಿಕ್ ಗಳಿವೆ. ಚಿನ್ನ ಖರೀದಿ ಮುನ್ನ ನೀವು ಈ ಬಗ್ಗೆ ಗಮನ ಹರಿಸಿದ್ರೆ ನಕಲಿ ಚಿನ್ನ ಖರೀದಿ ಜಾಲಕ್ಕೆ ಬೀಳುವುದಿಲ್ಲ. ಇಂದು ನಾವು ನಕಲಿ – ಅಸಲಿ ಚಿನ್ನ ಪತ್ತೆ ಹೇಗೆ ಎಂಬುದನ್ನು ಹೇಳ್ತೇವೆ.

ಹಾಲ್ಮಾರ್ಕ್ ಬಗ್ಗೆ ಗಮನವಿರಲಿ : ನೀವು ಖರೀದಿಸುತ್ತಿರುವ ಚಿನ್ನದ ಪರಿಶುದ್ಧತೆ ಅಳೆಯಲು ನೀವು ಹಾಲ್ಮಾರ್ಕ್ ಬಗ್ಗೆ ಗಮನ ಹರಿಸಬೇಕು. ಹಾಲ್‌ಮಾರ್ಕಿಂಗ್ ಚಿನ್ನದ ಪರಿಶುದ್ಧತೆಯನ್ನು ಗುರುತಿಸುವ ಸುಲಭ ಮಾರ್ಗವಾಗಿದೆ. ನೀವು ಖರೀದಿಸುವ ಚಿನ್ನದ ಆಭರಣಕ್ಕೆ ಬಿಐಎಸ್‌ನ ಹಾಲ್‌ಮಾರ್ಕ್ ಇದೆಯೇ ಎಂಬುದನ್ನು ನೋಡಿ. ಎಲ್ಲ ಹಾಲ್ಮಾರ್ಕ್ ಕೂಡ ಅಸಲಿಯಾಗಿರುವುದಿಲ್ಲ. ಹಾಗಾಗಿ ಹಾಲ್ಮಾರ್ಕ್ ಬಗ್ಗೆಯೂ ನೀವು ತಿಳಿದಿರಬೇಕು. ಮೂಲ ಹಾಲ್‌ಮಾರ್ಕ್ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್‌ನ ತ್ರಿಕೋನ ಚಿಹ್ನೆಯನ್ನು ಹೊಂದಿದೆ. ಹಾಲ್‌ಮಾರ್ಕಿಂಗ್ ಸೆಂಟರ್‌ನ ಲೋಗೋ ಜೊತೆಗೆ ಚಿನ್ನದ ಶುದ್ಧತೆಯನ್ನು ಸಹ ಬರೆಯಲಾಗಿದೆ. ಇದನ್ನು ಗಮನಿಸಿಯೇ ನೀವು ಚಿನ್ನ ಖರೀದಿಗೆ ಮುಂದಾಗುವುದು ಒಳ್ಳೆಯದು. 

ಅಪ್ಲಿಕೇಷನ್ ಸಹಾಯ ಪಡೆಯಬಹುದು : ಚಿನ್ನದ ಗುಣಮಟ್ಟವನ್ನು ಖಾತ್ರಿಪಡಿಸುವ ಹಾಲ್‌ಮಾರ್ಕಿಂಗ್ ಪರಿಶೀಲಿಸಬೇಕು ಎಂಬುದು ನಿಮಗೆ ಗೊತ್ತಾಗಿದೆ. ಇದಕ್ಕೆ ಬಿಐಎಸ್, ಬಿಐಎಸ್ ಕೇರ್ ಆಪ್ (BIS Care App) ಹೆಸರಿನ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಅದರ ಸಹಾಯದಿಂದ, ನೀವು ಯಾವುದೇ ಐಟಂನ ಹಾಲ್ಮಾರ್ಕಿಂಗ್ ಅಥವಾ ಐಎಸ್ ಐ (ISI) ಮಾರ್ಕ್ ಅನ್ನು ಸುಲಭವಾಗಿ ಪರಿಶೀಲಿಸಬಹುದು. ಇಷ್ಟೇ ಅಲ್ಲ, ಸರಕುಗಳ ಗುಣಮಟ್ಟದ ಬಗ್ಗೆ ನಿಮಗೆ ಅನುಮಾನಗಳಿದ್ದರೆ, ನೀವು ಅದರ ಬಗ್ಗೆಯೂ ದೂರು ನೀಡಬಹುದು.

Jet fuel price ವಿಮಾನ ಇಂಧನ ಬೆಲೆ ಸಾರ್ವಕಾಲಿಕ ಗರಿಷ್ಠ, ಫ್ಲೈಟ್ ಪ್ರಯಾಣ ಮತ್ತಷ್ಟು ದುಬಾರಿ!

ನೀರಿನ ಸಹಾಯ : ನೀರು ಕೂಡ ಚಿನ್ನದ ಶುದ್ಧತೆ ಬಗ್ಗೆ ಹೇಳುತ್ತದೆ. ಹಾಲ್ಮಾರ್ಕಿಂಗ್ ಜೊತೆಗೆ ಚಿನ್ನದ ಶುದ್ಧತೆಯನ್ನು ಪರೀಕ್ಷಿಸಲು ನೀವು ಕೆಲವು ಸುಲಭವಾದ ಮನೆಯ ಟಿಪ್ಸ್ ಬಳಸಬಹುದು. ಚಿನ್ನದ ಆಭರಣಗಳನ್ನು ಬಕೆಟ್ ನೀರಿನಲ್ಲಿ ಮುಳುಗಿಸಬೇಕು. ಆಭರಣ ಮುಳುಗಿದರೆ, ಚಿನ್ನವು ನಿಜ ಎಂದು ಅರ್ಥಮಾಡಿಕೊಳ್ಳಿ. ಆದರೆ ಅದು ಸ್ವಲ್ಪ ಸಮಯದವರೆಗೆ ತೇಲುತ್ತಿದ್ದರೆ ಅದು ನಕಲಿ ಚಿನ್ನ ಎಂದು ಅರ್ಥಮಾಡಿಕೊಳ್ಳಿ. ಚಿನ್ನವು ಎಷ್ಟೇ ಹಗುರವಾಗಿರಲಿ, ಅದು ಯಾವಾಗಲೂ ನೀರಿನಲ್ಲಿ ಮುಳುಗುತ್ತದೆ.

ವಿನೆಗರ್ ಪರೀಕ್ಷೆ :  ವಿನೆಗರ್ ಮೂಲಕವೂ ನೀವು ಮನೆಯಲ್ಲಿ ಚಿನ್ನದ ಶುದ್ಧತೆಯನ್ನು ಪರೀಕ್ಷಿಸಬಹುದು. ಚಿನ್ನದ ಆಭರಣಗಳ ಮೇಲೆ ಕೆಲವು ಹನಿ ವಿನೆಗರ್ ಹಾಕಿ. ಅದರ ಬಣ್ಣದಲ್ಲಿ ಯಾವುದೇ ಬದಲಾವಣೆ ಆಗದೆ ಹೋದ್ರೆ ಅದು ಅಸಲಿ ಚಿನ್ನವೆಂದರ್ಥ. ಆಭರಣದ ಬಣ್ಣ ಬದಲಾದರೆ, ಚಿನ್ನವು ನಕಲಿಯಾಗಿದೆ ಎಂದು ತಿಳಿದುಕೊಳ್ಳಿ. 

FINANCIAL CHANGES IN MAY:ಯುಪಿಐ ಪಾವತಿ ಮಿತಿ ಹೆಚ್ಚಳ; ಗೃಹಸಾಲದ ಬಡ್ಡಿ ಏರಿಕೆ; ಮೇಯಲ್ಲಿನ ಬದಲಾವಣೆಗಳ ಪಟ್ಟಿ ಇಲ್ಲಿದೆ

ಮ್ಯಾಗ್ನೆಟ್ ಪರೀಕ್ಷೆ : ಚಿನ್ನದ ಆಭರಣಗಳಲ್ಲಿ ಕಲಬೆರಕೆ ಇದೆಯೇ ಎಂದು ಪರಿಶೀಲಿಸಲು ನೀವು ಮ್ಯಾಗ್ನೆಟ್ ಪರೀಕ್ಷೆಯನ್ನು ಸಹ ಮಾಡಬಹುದು. ಚಿನ್ನವು ಅಯಸ್ಕಾಂತಕ್ಕೆ ಅಂಟಿಕೊಳ್ಳುವುದಿಲ್ಲ. ಆದ್ದರಿಂದ ಬಲವಾದ ಅಯಸ್ಕಾಂತವನ್ನು ತೆಗೆದುಕೊಂಡು ಅದನ್ನು ಚಿನ್ನದ ಹತ್ತಿರ ಇಡಿ. ಆಭರಣದಲ್ಲಿ ಚಲನೆ ಕಂಡು ಬಂದ್ರೆ ಚಿನ್ನದಲ್ಲಿ ಕಲಬೆರಕೆ ಆಗಿದೆ ಎಂದರ್ಥ.