Financial Changes In May:ಯುಪಿಐ ಪಾವತಿ ಮಿತಿ ಹೆಚ್ಚಳ; ಗೃಹಸಾಲದ ಬಡ್ಡಿ ಏರಿಕೆ; ಮೇಯಲ್ಲಿನ ಬದಲಾವಣೆಗಳ ಪಟ್ಟಿ ಇಲ್ಲಿದೆ

* ಮೇ 1ರಿಂದ ಎಲ್ ಪಿಜಿ  ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯೇರಿಕೆ 
* ಪಿಎಂ ಕಿಸಾನ್ ಯೋಜನೆ ಇ-ಕೆವೈಸಿ ಸಲ್ಲಿಕೆಗೆ ಮೇ 31 ಗಡುವು
*ವೈಮಾನಿಕ ಇಂಧನ ದರ ಹೆಚ್ಚಳ, ದುಬಾರಿಯಾಗಲಿದೆ ವಿಮಾನಯಾನ 

Financial Changes in May 2022 that effects day to day life

Business Desk: ಮೇ ತಿಂಗಳು ಪ್ರಾರಂಭವಾಗಿದೆ. 2022-23ನೇ ಹಣಕಾಸು ಸಾಲಿನ ಎರಡನೇ ತಿಂಗಳಿಗೆ ಕಾಲಿಟ್ಟಿದ್ದೇವೆ. ಹೀಗಿರುವಾಗ ಈ ತಿಂಗಳಲ್ಲಿ ಯಾವೆಲ್ಲ ಹಣಕಾಸು ಬದಲಾವಣೆಗಳು ಸಾಮಾನ್ಯ ಜನರ ಬದುಕಿನ ಮೇಲೆ ಪರಿಣಾಮ ಬೀರಬಲ್ಲವು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.  ಹಣದುಬ್ಬರ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆಯೇರಿಕೆ ಈಗಾಗಲೇ ಜನಸಾಮಾನ್ಯರ ಜೇಬು ಸುಡುತ್ತಿದೆ. ಇಂಥ ಸಮಯದಲ್ಲಿ ತಿಂಗಳ ಆದಾಯದ ಮೇಲೆ ಪರಿಣಾಮ ಬೀರುವ ಬದಲಾವಣೆಗಳ ಬಗ್ಗೆ ಮಾಹಿತಿ ಹೊಂದಿರುವುದು ಅತೀ ಅವಶ್ಯಕ. ಹಾಗಾದ್ರೆ ಮೇ ತಿಂಗಳಲ್ಲಿ ಯಾವೆಲ್ಲ ಬದಲಾವಣೆಗಳಾಗುತ್ತವೆ? ಇಲ್ಲಿದೆ ಮಾಹಿತಿ.

ಪಿಎಂ ಕಿಸಾನ್ ಯೋಜನೆ ಇ-ಕೆವೈಸಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಫಲಾನುಭವಿ ರೈತರು ಮೇ 31ರೊಳಗೆ ಕಡ್ಡಾಯವಾಗಿ ಇ-ಕೆವೈಸಿ (e-KYC) ಸಲ್ಲಿಕೆ ಮಾಡಬೇಕು. ಪಿಎಂ ಕಿಸಾನ್  ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಣಿಗೊಂಡಿರೋ ರೈತರಿಗೆ ಇ-ಕೆವೈಸಿ ಕಡ್ಡಾಯ.  ಈ ಹಿಂದೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಮಾರ್ಚ್ 31ರ ಗಡುವು ನೀಡಲಾಗಿತ್ತು. ಆ ಬಳಿಕ ಈ ಗಡುವನ್ನು ಮೇ 31ರ ತನಕ ವಿಸ್ತರಿಸಲಾಗಿದೆ. ಕೆವೈಸಿಯನ್ನು ಆನ್ ಲೈನ್ ಮೂಲಕ ಸಲ್ಲಿಕೆ ಮಾಡಬಹುದು.  ಪಿಎಂ ಕಿಸಾನ್ ಅಧಿಕೃತ ವೆಬ್ ಸೈಟ್ https://pmkisan.gov.in ನಲ್ಲಿ ರೈತರು ಕೆವೈಸಿ ಸಲ್ಲಿಕೆ ಮಾಡಬಹುದು. 

ಕೇಂದ್ರದಿಂದ ಐಟಿ ರಿಟರ್ನ್ಸ್‌ ಪರಿಷ್ಕರಣೆಗೆ ಹೊಸ ಫಾರ್ಮ್!

ಎಲ್ ಪಿಜಿ ಸಿಲಿಂಡರ್ ಬೆಲೆಯೇರಿಕೆ
ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮೇ 1ರಿಂದ ಏರಿಕೆಯಾಗಿದೆ. 19 ಕೆಜಿ ತೂಕದ ವಾಣಿಜ್ಯ ಬಳಕೆ ಸಿಲಿಂಡರ್ ದರ 102 ರೂಪಾಯಿ ಏರಿಕೆ ಕಂಡಿದೆ. ಪ್ರಸ್ತುತ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 2430.50 ರೂ. ಆಗಿದೆ. ಆದ್ರೆ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. 

ಯುಪಿಐ ಪಾವತಿ ಮಿತಿ ಹೆಚ್ಚಳ
ನೀವು ಚಿಲ್ಲರೆ (Retail) ಹೂಡಿಕೆದಾರರಾಗಿದ್ದು (Investors), ಕಂಪನಿಯ ಐಪಿಒನಲ್ಲಿ(IPO) ಹೂಡಿಕೆ (Invest) ಮಾಡಲು ಯುಪಿಐ (UPI) ಮೂಲಕ ಪಾವತಿ ಮಾಡುತ್ತಿದ್ದರೆ, ನಿಮಗೆ ಸೆಬಿ (SEBI) ಶುಭಸುದ್ದಿ ನೀಡಿದೆ. ಅದೇನಪ್ಪ ಅಂದ್ರೆ 5ಲಕ್ಷ ರೂ. ತನಕದ ಹೂಡಿಕೆಗೆ ಇನ್ನು ಮುಂದೆ ಯುಪಿಐ ಮೂಲಕವೇ ಪಾವತಿ ಮಾಡಬಹುದು. ಈ ಹಿಂದೆ ಐಪಿಒನಲ್ಲಿ ಯುಪಿಐ ಮೂಲಕ ಪಾವತಿ ಮಿತಿ 2ಲಕ್ಷ ರೂ. ಆಗಿತ್ತು. ಈ ಹೊಸ ಯುಪಿಐ (UPI) ಮಿತಿ ಮೇ 1ರ ಬಳಿಕ ಪ್ರಾರಂಭವಾಗುವ ಎಲ್ಲ ಐಪಿಒಗಳಿಗೆ ಅನ್ವಯಿಸಲಿದೆ. 

ಗೃಹ ಸಾಲ ಬಡ್ಡಿದರ ಏರಿಕೆ
ಖಾಸಗಿ ವಲಯದ ಬ್ಯಾಂಕ್ ಎಚ್ ಡಿಎಫ್ ಸಿ (HDFC) ಗೃಹಸಾಲಗಳ (Home Loan) ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ. ಮೇ 1ರಿಂದ ಜಾರಿಗೆ ಬರುವಂತೆ ಗೃಹ ಸಾಲಗಳ ಮೇಲಿನ ರಿಟೇಲ್ ಪ್ರೈಮ್ ಲೆಂಡಿಂಗ್ ರೇಟ್ (RPLR) 5 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಲಾಗಿದೆ. ಇದ್ರಿಂದ ಗೃಹಸಾಲಗಳ ಮಾಸಿಕ ಇಎಂಐ (EMI) ಮೊತ್ತದಲ್ಲಿ ಹೆಚ್ಚಳವಾಗಲಿದೆ. 

ಏಪ್ರಿಲ್ ನಲ್ಲಿ ಸಾರ್ವಕಾಲಿಕ ದಾಖಲೆಯ 1.68 ಲಕ್ಷ ಕೋಟಿ GST ಸಂಗ್ರಹ!

ವಿಮಾನ ಇಂಧನ ದರ ಏರಿಕೆ
ಮೇ 1ರಂದು ವೈಮಾನಿಕ ಇಂಧನ ದರ ಶೇಕಡಾ 3.22 ರಷ್ಟುಏರಿಕೆಯಾಗಿದೆ. ಇದು ಸಾರ್ವಕಾಲಿಕ ಗರಿಷ್ಠ ಏರಿಕೆಯಾಗಿದೆ. ಈ ವರ್ಷದಲ್ಲಿ 9 ಬಾರಿ ವಿಮಾನ ಇಂಧನ ದರವನ್ನು ಏರಿಕೆ ಮಾಡಲಾಗಿದ್ದು, ವಿಮಾನ ಪ್ರಯಾಣ ದುಬಾರಿಯಾಗಲಿದೆ. ಏವಿಯೇಷನ್ ​​ಟರ್ಬೈನ್ ಇಂಧನ (ATF) ಜೆಟ್ ಇಂಧನ ದರ ಇದೀಗ ಪ್ರತಿ ಕಿಲೋಲೀಟರ್‌ಗೆ ರೂ 3,649.13 ಏರಿಕೆಯಾಗಿದೆ. ಮುಂಬೈನಲ್ಲಿ ATF ಈಗ ಪ್ರತಿ ಕಿಲೋ ಲೀಟರ್‌ಗೆ ರೂ 1,15,617.24, ಕೋಲ್ಕತ್ತಾದಲ್ಲಿ ರೂ 1,21,430.48 ಮತ್ತು ಚೆನ್ನೈನಲ್ಲಿ ರೂ 1,20,728.03 ಆಗಿದೆ

Latest Videos
Follow Us:
Download App:
  • android
  • ios