ಎಲ್ಐಸಿ ಈ ಪಾಲಿಸಿಯಲ್ಲಿ ತಿಂಗಳಿಗೆ 833ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ ಒಂದು ಕೋಟಿ ರೂ.!

ಎಲ್ಐಸಿ ಅನೇಕ ರೀತಿಯ ಪಾಲಿಸಿಗಳನ್ನು ಹೊಂದಿದೆ. ಅವುಗಳಲ್ಲಿ ಎಲ್ಐಸಿ ಧನ್ ರೇಖಾ ಕೂಡ ಒಂದು. ಟರ್ಮ್ ಇನ್ಯುರೆನ್ಸ್ ಗಾಗಿ ಹುಡುಕಾಟ ನಡೆಸುತ್ತಿರೋರು ಈ ಪಾಲಿಸಿಯಲ್ಲಿ ಹೂಡಿಕೆ ಮಾಡಬಹುದು. ಈ ಪಾಲಿಸಿ ಅನೇಕ ಪ್ರಯೋಜನಗಳು ಹಾಗೂ ಆಕರ್ಷಕ ಆಫರ್ ಗಳನ್ನು ಕೂಡ ಒಳಗೊಂಡಿದೆ.

LIC Dhan Rekha Invest around Rs 833 per month in this policy and get Rs 1 crore anu

Business Desk: ಹೂಡಿಕೆ ವಿಚಾರ ಬಂದಾಗ ಇಂದಿಗೂ ಭಾರತೀಯರು ರಿಸ್ಕ್ ತೆಗೆದುಕೊಳ್ಳಲು ಬಯಸೋದಿಲ್ಲ. ಸುರಕ್ಷೆ ಹಾಗೂ ಉತ್ತಮ ರಿಟರ್ನ್ಸ್ ನೀಡುವ ಯೋಜನೆಗಾಗಿ ಹುಡುಕುತ್ತಾರೆ. ಸುರಕ್ಷೆ ಹಾಗೂ ಉತ್ತಮ ರಿಟರ್ನ್ಸ್ ವಿಷಯಕ್ಕೆ ಬಂದಾಗ ಮೊದಲು ನೆನಪಾಗೋದೆ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ). ಸರ್ಕಾರದ ಬೆಂಬಲ ಹೊಂದಿರುವ ಕಾರಣ ಎಲ್ಐಸಿ ಪಾಲಿಸಿಗಳಲ್ಲಿ ಹೂಡಿಕೆ ಮಾಡಿದ್ರೆ ಆ ಹಣ ಸುರಕ್ಷಿತವಾಗಿರುತ್ತದೆ ಎಂಬ ಭಾವನೆ ಜನರಲ್ಲಿರುತ್ತದೆ. ಇನ್ನು ಎಲ್ಐಸಿ ಕೂಡ ಆಯಾ ವರ್ಗದ, ವಯೋಮಾನದ ಜನರಿಗೆ ಹೊಂದಿಕೆಯಾಗುವ ಯೋಜನೆಗಳನ್ನು ಆಗಾಗ ಪ್ರಕಟಿಸುತ್ತದೆ. ಅಂಥ ಯೋಜನೆಗಳಲ್ಲಿ ಎಲ್ಐಸಿ ಧನ್ ರೇಖಾ ಯೋಜನೆ ಕೂಡ ಒಂದು. ಟರ್ಮ್ ಇನ್ಯುರೆನ್ಸ್ ಗಾಗಿ ಹುಡುಕಾಟ ನಡೆಸುತ್ತಿರೋರು ಈ ಪಾಲಿಸಿಯಲ್ಲಿ ಹೂಡಿಕೆ ಮಾಡಬಹುದು. ಈ ಪಾಲಿಸಿ ಅನೇಕ ಪ್ರಯೋಜನಗಳು ಹಾಗೂ ಆಕರ್ಷಕ ಆಫರ್ ಗಳನ್ನು ಕೂಡ ಒಳಗೊಂಡಿದೆ. ಅಲ್ಲದೆ, ಕೈಗೆಟುಕುವ ಪ್ರೀಮಿಯಂನಲ್ಲಿ ಜೀವನಕ್ಕೆ ಭದ್ರತೆ ಒದಗಿಸುತ್ತದೆ. ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುತ್ತದೆ.

ಪ್ರೀಮಿಯಂ ಪಾವತಿ
ಧನ್ ರೇಖಾ ಯೋಜನೆ ಪ್ರೀಮಿಯಂ ಪಾವತಿಯಲ್ಲಿ ಕೂಡ ಎರಡು ಆಯ್ಕೆಗಳನ್ನು ನೀಡಲಾಗಿದೆ. ಒಂದೇ ಪ್ರೀಮಿಯಂನಲ್ಲಿ ಪೂರ್ತಿ ಹಣ ಪಾವತಿ ಮಾಡಬಹುದು ಇಲ್ಲವೇ ನಿಯಮಿತವಾಗಿ ಕೂಡ ಪ್ರೀಮಿಯಂ ಪಾವತಿಸಬಹುದು. ಹೀಗಾಗಿ ಪಾಲಿಸಿದಾರರು ತಮ್ಮ ಅನುಕೂಲ ನೋಡಿಕೊಂಡು ಒಮ್ಮೆಗೆ ಅಥವಾ ಕಂತುಗಳಲ್ಲಿ ಪ್ರೀಮಿಯಂ ಪಾವತಿಸಬಹುದಾಗಿದೆ.

EPF Alert:ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಗಡುವು ವಿಸ್ತರಿಸಿದ ಇಪಿಎಫ್ಒ; ಮೇ 3ರ ತನಕ ಕಾಲಾವಕಾಶ

ತೆರಿಗೆ ಪ್ರಯೋಜನ
ಈ ಯೋಜನೆಯ ಪ್ರೀಮಿಯಂ ಪಾವತಿಗಳ ಮೇಲೆ ಪಾಲಿಸಿದಾರರು ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಲು ಆರ್ಹತೆ ಗಳಿಸಿದ್ದಾರೆ. 

ವಯಸ್ಸಿನ ಮಿತಿ
ಎಲ್ಐಸಿ ಧನ್ ರೇಖಾ ಯೋಜನೆಯಲ್ಲಿ 18 ವರ್ಷದಿಂದ 60 ವರ್ಷ ವಯಸ್ಸಿನೊಳಗಿನವರು ಹೂಡಿಕೆ ಮಾಡಬಹುದು. ಮೆಚ್ಯುರಿಟಿಗೆ ಗರಿಷ್ಠ ವಯಸ್ಸು 70 ವರ್ಷಗಳು. ಈ ಯೋಜನೆಯಡಿಯಲ್ಲಿ ಭರವಸೆ ನೀಡಿರುವ ಕನಿಷ್ಠ ಮೊತ್ತ ಒಂದು ಲಕ್ಷ ರೂ.

ಅರ್ಜಿ ಸಲ್ಲಿಕೆ ಹೇಗೆ?
ಎಲ್ ಐಸಿ ಧನ್ ರೇಖಾ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಬಯಸೋರು ಸಮೀಪದ ಎಲ್ಐಸಿ ಶಾಖೆಗೆ ತೆರಳಿ ಅರ್ಜಿ ಸಲ್ಲಿಸಬಹುದು. ಇಲ್ಲವೇ ಎಲ್ಐಸಿ ವೆಬ್ ಸೈಟ್ ನಲ್ಲಿ ಕೂಡ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸಂಬಮಧಪಟ್ಟ ಅರ್ಜಿಗಳನ್ನು ಭರ್ತಿ ಮಾಡೋದು, ಅಗತ್ಯ ದಾಖಲೆಗಳ ಸಲ್ಲಿಕೆ ಹಾಗೂ ಪ್ರೀಮಿಯಂ ಪಾವತಿಯನ್ನು ಒಳಗೊಂಡಿದೆ. ಅರ್ಜಿ ಪ್ರಕ್ರಿಯೆ ಮುಂದುವರಿದು, ಎಲ್ಐಸಿ ಅನುಮತಿ ನೀಡಿದ ಬಳಿಕ ಪಾಲಿಸಿಯನ್ನು ನೀಡಲಾಗುತ್ತದೆ. ಇನ್ನು ಪಾಲಿಸಿದಾರರು ತಮ್ಮ ಕವರೇಜ್ ಮೊತ್ತ ಹೆಚ್ಚಿಸಲು ಅಪಘಾತ ಮರಣ ಪ್ರಯೋಜನ ರೈಡರ್, ಗಂಭೀರ ಅನಾರೋಗ್ಯ ರೈಡರ್ ಹಾಗೂ ಅಂಗವೈಕಲ್ಯ ಪ್ರಯೋಜನ ರೈಡರ್ ಸೌಲಭ್ಯವನ್ನು ಕೂಡ ಪಡೆಯಬಹುದು. 

ಮಾರ್ಚ್ 1ರಿಂದ ಈ ನಿಯಮಗಳಲ್ಲಿ ಬದಲಾವಣೆ; ಜನಸಾಮಾನ್ಯರ ಜೇಬಿನ ಮೇಲೆ ಹೆಚ್ಚಲಿದೆ ಹೊರೆ

ಒಂದು ಕೋಟಿ ಪಡೆಯೋದು ಹೇಗೆ?
ಉದಾಹರಣೆಗೆ 35 ವರ್ಷ ವಯಸ್ಸಿನ ಎರಡು ಮಕ್ಕಳಿರುವ ಒಬ್ಬ ವಿವಾಹಿತ ವ್ಯಕ್ತಿ ತನ್ನ ಅನುಪಸ್ಥಿತಿಯಲ್ಲಿ ಕುಟುಂಬವನ್ನು ಆರ್ಥಿಕವಾಗಿ ಸುರಕ್ಷಿತವಾಗಿಡಲು ಬಯಸುತ್ತಾನೆ. ಇದಕ್ಕಾಗಿ ಆತನ ಎಲ್ಐಸಿ ಧನ್ ರೇಖಾ ಪಾಲಿಸಿ ಖರೀದಿಸುತ್ತಾನೆ. 50ಲಕ್ಷ ರೂ. ಮೊತ್ತದ  ಪಾಲಿಸಿಗೆ ವಾರ್ಷಿಕ  10,000ರೂ. ಪ್ರೀಮಿಯಂ ಪಾವತಿಯನ್ನು ಆಯ್ಕೆ ಮಾಡುತ್ತಾನೆ. ಅಂದರೆ ತಿಂಗಳಿಗೆ 833ರೂ. ಅದೇ ರೀತಿ ಆತ ಕವರೇಜ್ ಹೆಚ್ಚಿಸಲು ಅಪಘಾತ ಮರಣ ಪ್ರಯೋಜನ ರೈಡರ್ ಅನ್ನು ಕೂಡ ಪಡೆಯುತ್ತಾನೆ. ದುರಾದೃಷ್ಟದಿಂದ 40ನೇ ವಯಸ್ಸಿನಲ್ಲಿ ಈ ವ್ಯಕ್ತಿ ಅಪಘಾತದಲ್ಲಿ ಮೃತಪಡುತ್ತಾನೆ. ಆತನ ಕುಟುಂಬಕ್ಕೆ ಧನ್ ರೇಖಾ ಪಾಲಿಸಿ ಅಡಿಯಲ್ಲಿ 50ಲಕ್ಷ ರೂ. ಸಿಗುತ್ತದೆ. ಹಾಗೆಯೇ ಅಪಘಾತ ಮರಣ ಪ್ರಯೋಜನವನ್ನು ಆತ ಪಡೆದಿರುವ ಕಾರಣ ಹೆಚ್ಚುವರಿಯಾಗಿ 50ಲಕ್ಷ ರೂ. ಸಿಗುತ್ತದೆ. ಹೀಗಾಗಿ ಆತನ ಕುಟುಂಬಕ್ಕೆ ಒಟ್ಟು 1 ಕೋಟಿ ರೂ. ಸಿಗುತ್ತದೆ. 

Latest Videos
Follow Us:
Download App:
  • android
  • ios