ನಿಮ್ಮ ಬಳಿ ಇರೋ ಎಟಿಎಂ ಕಾರ್ಡಲ್ಲಿ ಸಿಗುತ್ತೆ 3 ಕೋಟಿವರೆಗೆ ಉಚಿತ ವಿಮೆ
ಎಟಿಎಂ ಕಾರ್ಡ್ ಬಹುತೇಕ ಎಲ್ಲರ ಬಳಿ ಇದೆ. ಅದನ್ನು ನಾವು ಹಣ ವಿತ್ ಡ್ರಾ ಮಾಡೋಕೆ ಬಳಸ್ತೇವೆ ವಿನಃ ಅದ್ರಿಂದ ಮತ್ತೇನು ಪ್ರಯೋಜನವಿದೆ ಎಂಬುದನ್ನು ತಿಳಿಯೋ ಪ್ರಯತ್ನಕ್ಕೆ ಹೋಗೋದಿಲ್ಲ. ನಾವಿಂದು ಎಟಿಎಂನಿಂದ ಉಚಿತ ವಿಮೆ ಪಡೆಯೋದು ಹೇಗೆ ಎಂಬುದನ್ನು ಹೇಳ್ತೇವೆ.
ಕೊರೊನಾ ನಂತ್ರ ಜನರ ಆಲೋಚನೆ ಬದಲಾಗಿದೆ. ಜನರು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡ್ತಿದ್ದಾರೆ. ಇದ್ರ ಜೊತೆಗೆ ಫಿಟ್ನೆಸ್, ಹಣ ಉಳಿತಾಯದ ಬಗ್ಗೆ ಯೋಚನೆ ಮಾಡ್ತಿದ್ದಾರೆ. ಇದೇ ಕಾರಣಕ್ಕೆ ವಿಮೆ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಆರೋಗ್ಯದ ಜೊತೆ ತಮ್ಮ ಕುಟುಂಬಸ್ಥರ ಜೀವನದ ಬಗ್ಗೆ ಚಿಂತಿಸುವ ಜನರು ನಾನಾ ವಿಮೆಗಳನ್ನು ಖರೀದಿ ಮಾಡ್ತಿದ್ದಾರೆ. ಸಾಮಾನ್ಯವಾಗಿ ನೀವು ಯಾವುದೇ ವಿಮೆ ಖರೀದಿ ಮಾಡಿದ್ರೂ ಅದಕ್ಕೆ ಹಣ ಪಾವತಿ ಮಾಡಬೇಕು. ತಿಂಗಳು ಅಥವಾ ವರ್ಷದ ಲೆಕ್ಕದಲ್ಲಿ ಪಾವತಿ ಮಾಡಬೇಕು. ಆದ್ರೆ ಎಲ್ಲ ವಿಮೆಗಳು ಹಾಗಿಲ್ಲ. ಕೆಲ ವಿಮೆಗಳಲ್ಲಿ ನೀವು ಹಣ ಪಾವತಿಸುವ ಅಗತ್ಯವಿಲ್ಲ.
ನಮ್ಮ ಬಳಿ ಕ್ರೆಡಿಟ್ ಕಾರ್ಡ್ (Credit Card) ಇಲ್ಲದೆ ಇರಬಹುದು. ಆದ್ರೆ ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬರೂ ಡೆಬಿಟ್ ಕಾರ್ಡ್ (Debit Card) ಹೊಂದಿರುತ್ತಾರೆ. ಇದು ಎಟಿಎಂನಿಂದ ಹಣ ಡ್ರಾ ಮಾಡಲು ಮಾತ್ರ ಬರುತ್ತೆ ಎಂದು ಅನೇಕರು ಭಾವಿಸಿದ್ದಾರೆ. ನಿಮ್ಮ ಬಳಿ ಇರುವ ಡೆಬಿಟ್ ಕಾರ್ಡ್ ಬರೀ, ಎಟಿಎಂ (ATM) ನಿಂದ ಹಣ ವಿತ್ ಡ್ರಾ ಮಾಡಲು ಮಾತ್ರವಲ್ಲ ಇನ್ನೂ ಅನೇಕ ಪ್ರಯೋಜನಗಳನ್ನು ಹೊಂದಿದೆ. ಅದ್ರಲ್ಲಿ ವಿಮೆ ಸೌಲಭ್ಯವೂ ಸೇರಿದೆ. ನೀವು ಡೆಬಿಟ್ ಕಾರ್ಡ್ ಹೊಂದಿದ್ದರೆ ನಿಮಗೆ ಉಚಿತ ವಿಮೆ ಸೌಲಭ್ಯ ಲಭ್ಯವಿದೆ. ಎಲ್ಲ ಡೆಬಿಟ್ ಕಾರ್ಡ್ ಹಾಗೂ ಕಂಪನಿಗಳು ಈ ಸೌಲಭ್ಯ ನೀಡುವುದಿಲ್ಲ. ಕೆಲ ಕಾರ್ಡ್ ನಲ್ಲಿ ಮಾತ್ರ ವಿಮೆಯನ್ನು ಉಚಿತವಾಗಿ ನೀಡಲಾಗುತ್ತದೆ.
ಅಂಬಾನಿ ಮಾಸ್ಟರ್ ಪ್ಲಾನ್, ನೆಟ್‌ಪ್ಲಿಕ್ಸ್ ಮತ್ತು ಅಮೆಜಾನ್ ಪ್ರೇಮ್ ಗೆ ದೊಡ್ಡ ಅಘಾತ
ಕೆಲ ಡೆಬಿಟ್ ಕಾರ್ಡ್ ಗಳು ಮೂರು ಕೋಟಿ ರೂಪಾಯಿವರೆಗೆ ಉಚಿತ ಅಪಘಾತ ವಿಮೆಯನ್ನು ನೀಡುತ್ತವೆ. ಉಚಿತ ಎನ್ನುವ ಅರ್ಥವೇನೆಂದ್ರೆ ಇಲ್ಲಿ ನೀವು ಪ್ರೀಮಿಯಂ ಪಾವತಿಸುವ ಅಗತ್ಯವಿರೋದಿಲ್ಲ. ಇದಕ್ಕಾಗಿ ನೀವು ಅರ್ಜಿ ಸಲ್ಲಿಸುವುದು, ದಾಖಲೆಗಳನ್ನು ನೀಡುವ ಅಗತ್ಯವೂ ಇಲ್ಲ. ಇದು ವಿಮಾ ಗುಂಪಿನ ಪಾಲಿಸಿ ಆಗಿರುವ ಕಾರಣ, ಕಾರ್ಡ್ ಹೊಂದಿರುವವರುವವರಿಗೆ ಪಾಲಿಸಿ ಸಂಖ್ಯೆಯನ್ನು ನೀಡಲಾಗುವುದಿಲ್ಲ.
ಡೆಬಿಟ್ ಕಾರ್ಡ್ ಆಕಸ್ಮಿಕ ವಿಮೆ ಸೌಲಭ್ಯವನ್ನು ನೀವು ಪಡೆಯಬೇಕೆಂದ್ರೆ ಕೆಲವೊಂದು ಷರತ್ತುಗಳನ್ನು ಪಾಲಿಸಬೇಕು. ಬ್ಯಾಂಕ್ ಷರತ್ತಿನಂತೆ ನೀವು ನಿರ್ದಿಷ್ಟ ಅವಧಿಗೆ ನಿರ್ದಿಷ್ಟ ವಹಿವಾಟನ್ನು ಡೆಬಿಟ್ ಕಾರ್ಡ್ ಮೂಲಕ ಮಾಡಬೇಕಾಗುತ್ತದೆ. ಆದ್ರೆ ಯುಪಿಐ ವಹಿವಾಟುಗಳು ಸಾಮಾನ್ಯವಾಗಿ ವಿಮಾ ರಕ್ಷಣೆಗೆ ಅರ್ಹವಾಗಿರುವುದಿಲ್ಲ. ನೀವು ಪಾಯಿಂಟ್ ಆಫ್ ಸೇಲ್ ವಹಿವಾಟು ನಡೆಸಿದ್ರೆ ಅಥವಾ ಇ-ಕಾಮರ್ಸ್ ಮೂಲಕ ಆನ್‌ಲೈನ್ ವಹಿವಾಟು ನಡೆಸಿದ್ರೆ ಅವು ವಿಮಾ ರಕ್ಷಣೆ ಅಡಿ ಬರುತ್ತವೆ ಎಂದು ತಜ್ಞರು ಹೇಳಿದ್ದಾರೆ.
ನೀತಾ ಅಂಬಾನಿಯೂ ಅಲ್ಲ, ಯಾವ ನಟಿಯೂ ಅಲ್ಲ; ಭಾರತದ ಅತ್ಯಂತ ಶ್ರೀಮಂತ ಮಹಿಳೆ ಈಕೆ
ಈ ವಿಮೆ ಪಾಲಿಸಿ (Insurance Politcy) ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಭಿನ್ನವಾಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್, ಕ್ಲಾಸಿಕ್ ಡೆಬಿಟ್ ಕಾರ್ಡ್ (Debit Card) ಹೊಂದಿರುವ ಗ್ರಾಹಕರಿಗೆ ಉಚಿತ ವಿಮೆ ಸೌಲಭ್ಯವನ್ನು ನೀಡುತ್ತದೆ. ಗ್ರಾಹಕರು, ಕಳೆದ 30 ದಿನಗಳಲ್ಲಿ ಕನಿಷ್ಠ 500 ರೂಪಾಯಿಯ 2 ವಹಿವಾಟುಗಳನ್ನಾದ್ರೂ ನಡೆಸಬೇಕಾಗುತ್ತದೆ. ಅದೇ ಹೆಚ್ ಡಿಎಫ್ ಸಿ ಮಿಲೇನಿಯಾ ಕ್ರೆಡಿಟ್ ಕಾರ್ಡ್ ಅನ್ನು ನೀವು ಹೊಂದಿದ್ದರೆ ಅದು ನಿಮಗೆ ಉಚಿತ ವಿಮೆ ಸೌಲಭ್ಯವನ್ನು ನೀಡುತ್ತದೆ. ಈ ಡೆಬಿಟ್ ಕಾರ್ಡ್ ಹೊಂದಿದ ಗ್ರಾಹಕರು, ದೇಶಿ ಪ್ರಯಾಣಕ್ಕೆ ಐದು ಲಕ್ಷ ರೂಪಾಯಿ ಮತ್ತು ವಿದೇಶಿ ಪ್ರಯಾಣಕ್ಕೆ ಒಂದು ಕೋಟಿ ರೂಪಾಯಿ ಉಚಿತ ವಿಮೆ ಸೌಲಭ್ಯವನ್ನು ಪಡೆಯುತ್ತಾರೆ. ನೀವು ಈ ವಿಮೆ ಸೌಲಭ್ಯ ಪಡೆಯಬೇಕೆಂದ್ರೆ ಮೂವತ್ತು ದಿನಗಳಲ್ಲಿ ಕನಿಷ್ಠ ಒಂದು ವಹಿವಾಟನ್ನು ನಡೆಸಿರಬೇಕಾಗುತ್ತದೆ. ಡಿಬಿಎಸ್ ಬ್ಯಾಂಕ್ ಇಂಡಿಯಾ ಇನ್ಫಿನಿಟಿ ಡೆಬಿಟ್ ಕಾರ್ಡ್‌ದಾರರು ಕೂಡ ಉಚಿತ ವಿಮೆ ಪಡೆಯಬಹುದು.