Instagram Reels 10K Views: ಇನ್‌ಸ್ಟಾಗ್ರಾಂ ರೀಲ್ಸ್‌ಗಳಿಗೆ 10,000 ವೀಕ್ಷಣೆಗಳಿಂದ ಎಷ್ಟು ಹಣ ಸಂಪಾದನೆ ಮಾಡಬಹುದು?  ಇನ್‌ಸ್ಟಾಗ್ರಾಂ ಲಾಂಚ್ ಮಾಡಿರುವ Reels Play Bonus Program ಕುರಿತ ಮಾಹಿತಿ ಇಲ್ಲಿದೆ.

Instagram Reels And Affiliate Commission: ಇಂದು ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಅಪ್ಲೋಡ್ ಮಾಡುವ ಮೂಲಕ ಜನರು ಹಣ ಸಂಪಾದನೆ ಮಾಡುತ್ತಿದ್ದಾರೆ. ಒಳ್ಳೆಯ ಕಂಟೆಂಟ್ ಹೊಂದಿರುವ ವಿಡಿಯೋವನ್ನು ನೀವು ಅಪ್ಲೋಡ್ ಮಾಡಿದ್ರೆ ಹೆಚ್ಚು ಲೈಕ್ಸ್, ವ್ಯೂವ್ ಮತ್ತು ನಿಮ್ಮ ಫಾಲೋವರ್ಸ್ ಸಂಖ್ಯೆಯೂ ಅಧಿಕವಾಗುತ್ತದೆ. ಇಂದು ಎಷ್ಟೋ ಜನರು ಶಾರ್ಟ್ ವಿಡಿಯೋ ಮೂಲಕ ತಮ್ಮ ಜೀವನಕ್ಕೆ ಬೇಕಾಗುವಷ್ಟು ಹಣ ಸಂಪಾದಿಸುತ್ತಿದ್ದಾರೆ. ನಿಮ್ಮದು ಇನ್‌ಸ್ಟಾಗ್ರಾಂ ಖಾತೆ ಇದ್ದು, ನಿಮ್ಮ ವಿಡಿಯೋಗೆ 10,000 ವ್ಯೂವ್ (10K Views) ಬರುತ್ತಿದೆಯಾ? ಹಾಗಾದ್ರೆ ನಿಮ್ಮ ವಿಡಿಯೋಗೆ ಎಷ್ಟು ಹಣ ಬರುತ್ತೆ ಎಂಬುದರ ಮಾಹಿತಿ ಇಲ್ಲಿದೆ. 

ಇನ್‌ಸ್ಟಾಗ್ರಾಂ ಕೆಲವು ದೇಶಗಳಲ್ಲಿ Reels Play Bonus Program ಲಾಂಚ್ ಮಾಡಿದೆ. ಈ ಯೋಜನೆಯಲ್ಲಿ ಕಂಟೆಂಟ್ ಕ್ರಿಯೇಟರ್ಸ್ ಗಳಿಗೆ ಅವರ ವಿಡಿಯೋಗಳಿಗೆ ಬಂದ ವ್ಯೂವ್ ಆಧಾರದ ಮೇಲೆ ಹಣ ನೀಡುತ್ತವೆ. ಈ ಯೋಜನೆ ಕೇವಲ ಕೆಲವೇ ಕೆಲವು ದೇಶಗಳಿಗೆ ಸೀಮಿತವಾಗಿದ್ದು, ಭಾರತದಲ್ಲಿನ್ನೂ ಜಾರಿಯಾಗಿಲ್ಲ. ಹಾಗಂತ ಇನ್‌ಸ್ಟಾಗ್ರಾಂನಿಂದ ನೀವು ಹಣ ಸಿಗಲ್ಲ ಎಂದರ್ಥ ಅಲ್ಲ. ಆದ್ರೂ ಇನ್‌ಸ್ಟಾಗ್ರಾಂ ಖಾತೆ ಮೂಲಕ ಭಾರತದಲ್ಲಿ ನೀವು ಹಣ ಸಂಪಾದನೆ ಮಾಡಬಹುದು. 

ಹಣ ಸಂಪಾದನೆ ಹೇಗೆ?
ನಿಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿನ ವಿಡಿಯೋಗಳು 10K Views ಪಡೆದುಕೊಳ್ಳುತ್ತಿದ್ದರೆ, ಬ್ರ್ಯಾಂಡ್ಸ್ ಗಳಿಗೆ ಸಂಬಂಧಿಸಿದ ಪೋಸ್ಟ್ ಮಾಡಲು ನಿಮ್ಮನ್ನು ಸಂಪರ್ಕಿಸಲಾಗುತ್ತದೆ. 10K Viewಗೆ ಯಾವುದೇ ಹಣ ಸಿಗಲ್ಲ. ಆದ್ರೆ ಇದರ ಆಧಾರದ ಮೇಲೆ ಪರ್ಯಾಯ ಮಾರ್ಗದಲ್ಲಿ ಹಣ ಸಂಪಾದಿಸಬಹುದು. ವ್ಯೂಸ್ ಮತ್ತು ವಿಡಿಯೋ ಎಂಗೇಜ್ಮೇಂಟ್ ಚೆನ್ನಾಗಿದ್ರೆ ಒಂದು ಪೋಸ್ಟ್‌ ಮಾಡಲು 500 ರೂ.ಗಳಿಂದ 2,000 ರೂ.ವರೆಗೂ ಚಾರ್ಜ್ ಮಾಡಬಹುದು. 100K Views ಪಡೆಯುವ ಕಂಟೆಂಟ್ ಕ್ರಿಯೇಟರ್ಸ್ ಒಂದು ಪೋಸ್ಟ್‌ಗೆ 5 ರಿಂದ 50,000 ರೂಪಾಯಿವರೆಗೂ ಚಾರ್ಜ್ ಮಾಡುತ್ತಾರೆ. 

ಇದನ್ನೂ ಓದಿ: ಕೇವಲ 5 ಸಾವಿರ ಬಂಡವಾಳ ಹಾಕಿದ್ರೆ, ತಿಂಗಳಿಗೆ 30 ಸಾವಿರ ಸಂಪಾದನೆ; ಸರ್ಕಾರದಿಂದಲೂ ಸಿಗುತ್ತೆ ಹಣ

ನೀವು ಯಾವುದೇ ಉತ್ಪನ್ನ ಅಥವಾ ಸೇವೆಯ ಬಗ್ಗೆ ಪ್ರಮೋಷನ್ ಮಾಡುತ್ತಿದ್ದು, ನಿಮ್ಮಿಂದ ಸೇಲ್ ಅಧಿಕವಾಗುತ್ತಿದ್ರೆ ನಿಮಗೆ ಅಪಿಲಿಯೇಟ್ ಕಮಿಷನ್ (Affiliate Marketing) ಸಿಗುತ್ತದೆ. ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಹಲವು ಕಂಪನಿಗಳು Affiliate ಲಿಂಕ್ ನೀಡುತ್ತವೆ. ಈ ಲಿಂಕ್ ವಿಡಿಯೋಗಳು ನಿಮ್ಮ ಖಾತೆಯಲ್ಲಿ 10K View ಪಡೆದರೆ ನಿಮಗೆ 200 ರಿಂದ 1,000 ರೂ.ವರೆಗೆ ಕಮಿಷನ್ ಸಿಗುತ್ತದೆ. ನಿಮ್ಮ ಖಾತೆಯಲ್ಲಿ ಲೈವ್ ಫೀಚರ್ಸ್ ಇದ್ರೆ ಬ್ಯಾಡ್ಜ್‌ಗಳನ್ನು ಖರೀದಿಸುವ ಮೂಲಕ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ಇಲ್ಲಿ ಸಂಪಾದನೆ ವ್ಯೂವ್ ಮೇಲೆ ನಿಗದಿ ಮಾಡಲ್ಲ. ನಿಮ್ಮ ಫಾಲೋವರ್ಸ್ ಸಂಖ್ಯೆಗಳ ಮೇಲೆ ಹಣ ಫಿಕ್ಸ್ ಮಾಡಲಾಗುತ್ತದೆ. 

10,000 ವ್ಯೂವ್ ಮೇಲೆ ಇನ್‌ಸ್ಟಾಗ್ರಾಂ ಯಾವುದೇ ರೀತಿಯ ಹಣವನ್ನು ನೀಡಲ್ಲ. ಆದ್ರೆ ಬ್ರ್ಯಾಂಡ್ ಪ್ರಮೋಷನ್, ಪೋಸ್ಟಿಂಗ್ ಮೂಲಕ 200 ರೂ.ಗಳಿಂದ 500 ರೂ.ವರೆಗು ಸಂಪಾದನೆ ಮಾಡಬಹುದು. ನಿಮ್ಮ ಫಾಲೋವರ್ಸ್ ಮತ್ತು ವ್ಯೂವ್ ಅಧಿಕವಾಗಿದ್ರೆ ನೀವೇ ಜಾಹೀರಾತುದಾರರನ್ನು ಸಂಪರ್ಕಿಸಬಹುದು.

ಇದನ್ನೂ ಓದಿ: 5 ರಿಂದ 6 ರೂ.ಗೆ ಮಾರಾಟವಾಗೋ ಈ ಬ್ಯುಸಿನೆಸ್‌ನಿಂದ ತಿಂಗಳಿಗೆ ಸಂಪಾದಿಸಿ 40-50 ಸಾವಿರ ರೂಪಾಯಿ