ಕ್ರೆಡಿಟ್ ಕಾರ್ಡ್ ಬಳಕೆ ಮೇಲೂ ತೆರಿಗೆ ಬೀಳುತ್ತಾ? ಯಾವಾಗ ಆದಾಯ ತೆರಿಗೆ ಇಲಾಖೆ ಇಂಥ ವೆಚ್ಚಗಳ ಪರಿಶೀಲನೆ ನಡೆಸುತ್ತೆ?

ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ವೆಚ್ಚಕ್ಕೂ ತೆರಿಗೆ ಬೀಳುತ್ತಾ? ಯಾವ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿದ ವೆಚ್ಚಗಳ ಪರಿಶೀಲನೆ ನಡೆಸುತ್ತದೆ? ಇಲ್ಲಿದೆ ಮಾಹಿತಿ. 

How much can you spend with Credit Card without attracting Income Tax scrutiny anu

Business Desk: ಕ್ರೆಡಿಟ್ ಕಾರ್ಡ್ ಬಳಕೆ ಮಾಡೋರ ಸಂಖ್ಯೆ ಇಂದು ಹೆಚ್ಚಿದೆ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ರಿವಾರ್ಡ್ಸ್, ಕ್ಯಾಶ್ ಬ್ಯಾಕ್ ಹಾಗೂ ನಿರ್ದಿಷ್ಟ ಅವಧಿಯ ಬಳಿಕ ಬಿಲ್ ಪಾವತಿಸುವ ಅವಕಾಶವಿರುವ ಕಾರಣ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಡೆಬಿಟ್ ಕಾರ್ಡ್ ಗಿಂತ ಹೆಚ್ಚು ಪ್ರಿಯವಾಗಿದೆ. ಇನ್ನು ಆರ್ ಬಿಐ ವರದಿ ಅನ್ವಯ ಇ-ಕಾಮರ್ಸ್ ತಾಣಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಮೂರು ಪಟ್ಟು ಹೆಚ್ಚಿದೆ. ಹಾಗೆಯೇ  ಕ್ರೆಡಿಟ್ ಕಾರ್ಡ್ ಪಾವತಿ ಮೊತ್ತ ಡೆಬಿಟ್ ಕಾರ್ಡ್ ವಹಿವಾಟಿಗಿಂತ 1.2 ಪಟ್ಟು ಹೆಚ್ಚಿದೆ. ಬಿಲ್ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಪಾವತಿಸಲಯ ಸಾಧ್ಯವಾದ್ರೆ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡೋದ್ರಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ, ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಅಧಿಕ ಖರ್ಚು ಮಾಡಿದ್ರೆ ಅದರ ಮೇಲೆ ಕೂಡ ತೆರಿಗೆ ಭಾರ ಬೀಳಲಿದೆ ಎಂಬ ಮಾಹಿತಿ ಇರೋದು ಅಗತ್ಯ. ಅದರಲ್ಲೂ ಅಧಿಕ ಮೌಲ್ಯದ ವಹಿವಾಟುಗಳ ಸಮಯದಲ್ಲಿ ಈ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಹಾಗಾದ್ರೆ ಕ್ರೆಡಿಟ್ ಕಾರ್ಡ್ ಬಳಸಿ ಎಷ್ಟು ಮೊತ್ತ ವ್ಯಯಿಸಿದ್ರೆ ತೆರಿಗೆ ಬೀಳುತ್ತದೆ? ಎಷ್ಟು ತೆರಿಗೆ ವಿಧಿಸಲಾಗುತ್ತದೆ? ಇಲ್ಲಿದೆ ಮಾಹಿತಿ.

ಕ್ರೆಡಿಟ್ ಕಾರ್ಡ್ ವೆಚ್ಚಗಳಿಗೆ ಆದಾಯ ತೆರಿಗೆ ನಿಯಮವಿದೆಯಾ?
ತೆರಿಗೆ ತಜ್ಞರ ಪ್ರಕಾರ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ವೆಚ್ಚ ಮಾಡೋದಕ್ಕೆ ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ. ಆದರೆ, ಅಧಿಕ ಮೊತ್ತದ ವಹಿವಾಟುಗಳ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಬ್ಯಾಂಕುಗಳು ಕಡ್ಡಾಯವಾಗಿ ಮಾಹಿತಿ ನೀಡಬೇಕು.ಪ್ರತಿ ಹಣಕಾಸು ಸಾಲಿನಲ್ಲಿ ನಡೆಯುವ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಬಗ್ಗೆ ಬ್ಯಾಂಕುಗಳು, ಕಂಪನಿಗಳು, ರಿಜಿಸ್ಟ್ರಾರ್ ಹಾಗೂ ಅಂಚೆ ಕಚೇರಿಗಳು ಕಡ್ಡಾಯವಾಗಿ ವರದಿ ನೀಡಬೇಕು. ಇದೇ ಕಾರಣಕ್ಕೆ ಈ ಸಂಸ್ಥೆಗಳು ಅರ್ಜಿ ನಮೂನೆ 61A ಭರ್ತಿ ಮಾಡಿ ನೀಡಬೇಕು. ಇದು ಹಣಕಾಸು ವಹಿವಾಟುಗಳ ಸ್ಟೇಟ್ಮೆಂಟ್ ಆಗಿದೆ. ಇನ್ನು ಸಾಮಾನ್ಯ ತೆರಿಗೆದಾರರು ಕೂಡ ಅರ್ಜಿ ನಮೂನೆ 26AS ಭರ್ತಿ ಮಾಡಿ ನೀಡಬೇಕು. ಅದರಲ್ಲಿ ಅಧಿಕ ಮೊತ್ತದ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಬಗ್ಗೆ ಮಾಹಿತಿ ನೀಡಬೇಕು.

Investment Tips: ಸಣ್ಣ ಷೇರಿನಲ್ಲಿ ಹೆಚ್ಚು ಲಾಭಬೇಕೆಂದ್ರೆ ಈ ರೂಲ್ಸ್ ಫಾಲೋ ಮಾಡಿ

10 ಲಕ್ಷ ರೂ. ಮೀರಿದ ಕ್ರೆಡಿಟ್ ಕಾರ್ಡ್ ವಹಿವಾಟು
10 ಲಕ್ಷ ರೂ. ಮೀರಿದ ಯಾವುದೇ ಕ್ರೆಡಿಟ್ ಕಾರ್ಡ್ ವಹಿವಾಟಿನ ಬಗ್ಗೆ ಹಣಕಾಸು ಸಂಸ್ಥೆಗಳು ಆದಾಯ ತೆರಿಗೆ ಇಲಾಖೆಗೆ ವರದಿ ಮಾಡಬೇಕು. ಇದನ್ನು ಅರ್ಜಿ ನಮೂನೆ 61Aಯಲ್ಲಿ ವರದಿ ಮಾಡಬೇಕು. ಇನ್ನು ಆದಾಯ ತೆರಿಗೆ ಇಲಾಖೆ ಕ್ರೆಡಿಟ್ ಕಾರ್ಡ್ ವಹಿವಾಟುಗಳನ್ನು ಅರ್ಜಿ ನಮೂನೆ 26Aಯಲ್ಲಿ ನಮೂದಿಸಬೇಕು. ಇದರಲ್ಲಿ ಅಧಿಕ ಮೊತ್ತದ ವಹಿವಾಟುಗಳ ಮಾಹಿತಿ ನಮೂದಿಸಬೇಕು. 

1ಲಕ್ಷ ರೂ. ಮೀರಿದ ಕ್ರೆಡಿಟ್ ಕಾರ್ಡ್ ಬಿಲ್
1ಲಕ್ಷ ರೂ. ಮೀರಿದ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ನಗದು ರೂಪದಲ್ಲಿ ಪಾವತಿಸಿದ್ರೆ ಆಗ ಅದಕ್ಕೆ ತೆರಿಗೆ ಪರಿಶೀಲನೆ ನಡೆಯುತ್ತದೆ. ಒಂದು ಲಕ್ಷ ರೂ. ಮೀರಿದ ಬಿಲ್ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಿದ್ರೆ ಆಗ ತೆರಿಗೆ ಅಧಿಕಾರಿಗಳು ಮಾಹಿತಿ ಕೋರುತ್ತಾರೆ. 

ಹೊಸ ವರ್ಷಕ್ಕೆ ಎಫ್‌ಡಿ ಇಡಲು ಬಯಸ್ತಿದ್ದೀರಾ? ಹಾಗಾದ್ರೆ ಪ್ರಮುಖ ಬ್ಯಾಂಕ್‌ಗಳು ಎಷ್ಟು ಬಡ್ಡಿ ದರ ನೀಡ್ತಿವೆ ನೋಡಿ..

ಅಧಿಕ ಮೊತ್ತದ ಕ್ರೆಡಿಟ್ ಕಾರ್ಡ್ ವೆಚ್ಚಕ್ಕೆ ಪರಿಶೀಲನೆ?
ಒಂದು ಲಕ್ಷ ರೂ.ಗಿಂತ ಅಧಿಕ ಮೊತ್ತದ ಕ್ರೆಡಿಟ್ ಬಿಲ್ ಮೊತ್ತವನ್ನು ನಗದಿನಲ್ಲಿ ಪಾವತಿಸಿದ್ದರೆ ಹಾಗೂ10ಲಕ್ಷ ರೂ. ಅಥವಾ ಅದಕ್ಕಿಂತ ಅಧಿಕ ಮೊತ್ತದ ಕ್ರೆಡಿಟ್ ಕಾರ್ಡ್ ಖರೀದಿ ಮಾಡಿದ್ದರೆ ಆಗ ಆದಾಯ ತೆರಿಗೆ ಇಲಾಖೆ ಪರಿಶೀಲನೆ ನಡೆಸುವ ಸಾಧ್ಯತೆಯಿದೆ. 


 

Latest Videos
Follow Us:
Download App:
  • android
  • ios