Asianet Suvarna News Asianet Suvarna News

ಏಕಾಏಕಿ ಹೆಚ್ಚಾಯ್ತು ಪುರುಷರ ಒಳಉಡುಪು ಮಾರಾಟ; ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಚಡ್ಡಿ ಸೇಲ್!

ಭಾರತದ ಮಾರುಕಟ್ಟೆಯಲ್ಲಿ ಒಳಉಡುಪುಗಳ ಮಾರುಕಟ್ಟೆ ಬೆಳವಣಿಗೆಯಾಗುತ್ತಿದೆ. ಕೋವಿಡ್‌ನಿಂದ ಮಕಾಡೆ ಮಲಗಿದ್ದ ಉದ್ಯಮದಲ್ಲಿ ಚೇತರಿಕೆ ಕಾಣಿಸುತ್ತಿದ್ದು, ಪುರುಷರ ಅಂಡರ್‌ವೇರ್ ಮಾರಾಟ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

how men inner wear sales indicate economy details mrq
Author
First Published Aug 18, 2024, 4:23 PM IST | Last Updated Aug 18, 2024, 4:23 PM IST

ನವದೆಹಲಿ: ಭಾರತದ ಮಾರುಕಟ್ಟೆಯಲ್ಲಿ ಪುರುಷರ ಒಳಉಡುಪುಗಳ ಮಾರಾಟ ಏರಿಕೆಯಾಗಿದೆ. ಒಳಉಡುಪು ತಯಾರಿಕಾ ಮತ್ತು ಮಾರಾಟ ಪ್ರಮಖ ಕಂಪನಿಗಳಾದ ಪೇಜ್ ಇಂಡಸ್ಟ್ರೀಸ್, ಆದಿತ್ಯ ಬಿರ್ಲಾ ಫ್ಯಾಶನ್ & ರಿಟೇಲ್, ಅರವಿಂದ್ ಫ್ಯಾಶನ್ಸ್ ಮತ್ತು ರೂಪಾ & ಕಂಪನಿಗಳು ತಮ್ಮ ಮಾರಾಟದ ವರದಿಗಳನ್ನು ಬಹಿರಂಗಗೊಳಿಸಿವೆ. ಈ ವರದಿಯಲ್ಲಿ ಒಳಉಡುಪುಗಳ ಮಾರಾಟ ಏರಿಕೆಯಾಗಿರೋದನ್ನು ಧೃಡವಾಗಿದೆ. ಅದರಲ್ಲಿಯೂ ಪುರುಷರ ಒಳಉಡುಪು ಮಾರಾಟ ಹೆಚ್ಚಾಗಿದೆ ಎಂಬುದನ್ನು ಗಮನಿಸಬಹುದಾಗಿದೆ. ಒಳ ಉಡುಪು ಮಾರಾಟ ಹೆಚ್ಚಾದ್ರೆ ಅಂತಹ ವಿಶೇಷ ಏನು ಎಂದು ನೀವು ಯೋಚಿಸುತ್ತಿರಬೇಕು. ಆದ್ರೆ  ಅಂಡರ್‌ವೇರ್ ಮಾರಾಟದ ಏರಿಕೆ ಆರ್ಥವ್ಯವಸ್ಥೆಗೆ ಗುಡ್‌ನ್ಯೂಸ್‌ ಎಂದು ನಂಬಲಾಗುತ್ತದೆ. ಇದು  ಮಾರುಕಟ್ಟೆಯ ಸಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ.

ಕಳೆದ ಕೆಲವು ದಿನಗಳಿಂದ ಭಾರತದ ಅರ್ಥವ್ಯವಸ್ಥೆ ಸಕಾರಾತ್ಮಕವಾಗಿ ಬೆಳವಣಿಗೆ ಆಗುತ್ತಿರುವ ಬಗ್ಗೆ ವರದಿಗಳು  ಪ್ರಕಟವಾಗುತ್ತಿವೆ. ಈ ಬೆಳವಣಿಗೆಯನ್ನು ಅಂಡರ್‌ವೇರ್ ಮಾರಾಟದಿಂದ  ಕಂಡು ಹಿಡಿಯಬಹುದಾಗಿದೆ. ಬೆಲೆ ಇಳಿಕೆ, ಉತ್ತಮ ಮಳೆಯಿಂದಾಗಿ ಭಾರತದ ಮಾರುಕಟ್ಟೆಯಲ್ಲಿ ವೃದ್ಧಿ ಕಾಣುತ್ತಿದ್ದು, ಇದಕ್ಕೆ ಸಾಕ್ಷಿ ಪುರುಷರ ಒಳಉಡುಪು ಮಾರಾಟ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಸ್ವಲ್ಪ ವಿಚಿತ್ರ ಎನಿಸಿದರೂ ಇದು ಸತ್ಯ ವಾಗಿದೆ.

ಅಂಡರ್‌ವೇರ್ ಮಾರಾಟ   ಅರ್ಥವ್ಯವಸ್ಥೆಯ ಬೆಳವಣಿಗೆ  ಅಥವಾ ಕುಂಠಿತವನ್ನು ಹೇಗೆ ಸೂಚಿಸುತ್ತದೆ ಎಂಬುದರ ಬಗ್ಗೆ ಅಮೆರಿಕಾದ ಫೆಡರಲ್ ರಿಸರ್ವ್ ಮಾಜಿ ಅಧ್ಯಕ್ಷ ಎಲನ್ ಗ್ರೀನ್‌ಸ್ಪಾನ್  ಅಧ್ಯಯನ ನಡೆಸಿದ್ದಾರೆ. ಒಳುಉಡುಪು ಮಾರುಕಟ್ಟೆಯ ಬಗ್ಗೆ ಅಧ್ಯಯನ ನಡೆಸಿರುವ ಎಲನ್, ಇದಕ್ಕೆ 'ಮೆನ್ ಅಂಡರ್‌ವೇರ್ ಇಂಡೆಕ್ಸ್' ಎಂದು ಕರೆದಿದ್ದಾರೆ.  ಜನರು ಆರ್ಥಿಕವಾಗಿ ದುರ್ಬಲರಾಗಿದ್ದಾಗ ಹಣ ಎಲ್ಲಿ ಮತ್ತು ಹೇಗೆ ಉಳಿತಾಯ ಮಾಡಬೇಕು ಎಂದು ಯೋಚಿಸುತ್ತಾರೆ. ಬಹುತೇಕ ಎಲ್ಲಾ ಪುರುಷರು ಒಳಉಡುಪು ಖರೀದಿಸೋದನ್ನು ನಿಲ್ಲಿಸುತ್ತಾರೆ. ಆರ್ಥಿಕ ಸ್ಥಿತಿ ಕುಸಿದಾಗ ಅವಶ್ಯಕವಲ್ಲದ ಪಟ್ಟಿಯಲ್ಲಿ ಒಳಉಡುಪುಗಳು ಬರುತ್ತವೆ ಎಂದು ಎಲನ್ ಹೇಳುತ್ತಾರೆ. 

ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಪೇಜ್ ಇಂಡಸ್ಟ್ರಿಯ ಹೇಳಿಕೆಯನ್ನು  ಉಲ್ಲೇಖಿಸಲಾಗಿದೆ. ತಮ್ಮ ಮಳಿಗೆಗೆ ಬರುವ ಗ್ರಾಹಕರ ಸಂಖ್ಯೆ ಏರಿಕೆಯಾಗುತ್ತಿದೆ. ಗ್ರಾಹಕರ ಬೇಡಿಕೆಗನುಸಾರವಾಗಿ ಸ್ಟಾಕ್ ಹೆಚ್ಚಿಸಲಾಗುತ್ತಿದೆ. ಪುರುಷರ ಒಳ ಉಡುಪುಗಳ ಮಾರಾಟವೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಗ್ರಾಹಕರ ವಿಶ್ವಾಸವೂ ಮರಳುತ್ತಿದ್ದು, ಬಟ್ಟೆ ಸೇರಿದಂತೆ ಇನ್ನಿತರ ದಿನಬಳಕೆಯ ವಸ್ತುಗಳ ಮೇಲೆ ಹೆಚ್ಚು ಖರ್ಚ ಮಾಡುತ್ತಿದ್ದಾರೆ ಎಂದು ಪೇಜ್ ಕಂಪನಿ ಹೇಳಿದೆ. ಆನ್‌ಲೈನ್‌ನಲ್ಲಿಯೂ ಪುರುಷರ ಅಂಡರ್‌ವೇರ್ ಮಾರಾಟ ಅಧಿಕಗೊಂಡಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. 

ದಿಢೀರ್ ಬದಲಾಯ್ತು ಅನಿಲ್ ಅಂಬಾನಿ ಅದೃಷ್ಟ, ಮಗನಿಗೆ ಸಿಕ್ತು ಸಕ್ಸಸ್‌ ಕೀ, ಹಣದ ಸುರಿಮಳೆ ಫಿಕ್ಸ್!

ಕೋವಿಡ್ ಕಾಲಘಟ್ಟದಲ್ಲಿ ಬಟ್ಟೆಗಳು ಸೇರಿದಂತೆ ಎಲ್ಲಾ ಉತ್ಪನ್ನಗಳ ಮಾರಾಟ ತೀವ್ರವಾಗಿ ಕುಸಿದಿತ್ತು. ಅದರಲ್ಲಿ ಪುರುಷರ ಒಳಉಡುಪು ಮಾರಾಟ ಮಕಾಡೆ ಮಲಗಿತ್ತು. ಹೀಗಾಗಿ ಹಲವು ಕಂಪನಿಗಳು ವರ್ಷಗಟ್ಟಲೇ ಸ್ಟಾಕ್‌ ಖಾಲಿಯಾಗದೇ ಚಿಂತಿತರಾಗಿದ್ದರು. ಇದೀಗ ಮಾರುಕಟ್ಟೆ ಚೇತರಿಕೆ ಕಂಡು  ಬಂದಿದ್ದು ಹಣದ ಹರಿವು ಹೆಚ್ಚಾಗಿದೆ. ಅರವಿಂದ್ ಫ್ಯಾಶನ್ಸ್, ರೂಪಾ & ಕಂಪನಿ ಮತ್ತು ಲಕ್ಸ್ ಇಂಡಸ್ಟ್ರೀಸ್‌ನಂತಹ ಕಂಪನಿಗಳು ತಮ್ಮ ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ದಾಖಲಿಸಿವೆ.

ಜುಲೈನಲ್ಲಿ ಹಣದುಬ್ಬರ ದರವು ಶೇಕಡಾ 3.54ಕ್ಕೆ ಇಳಿದಿದೆ ಮತ್ತು ಮುಂಗಾರು ಸಹ ಉತ್ತಮವಾಗಿದೆ. ಇದು ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸಿದೆ. 2025ರ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯ ಬೆಳವಣಿಗೆ ದರವು 7.2% ಆಗಲಿದೆ ಎಂದು  ರಿಸರ್ವ್ ಬ್ಯಾಂಕ್ ಅಂದಾಜಿಸಿದೆ.

ಒಂದು ಕೋಟಿ ಮಹಿಳೆಯರಿಗೆ ಗುಡ್ ನ್ಯೂಸ್ - ಪ್ರತಿ ತಿಂಗಳು ಜಮೆ ಆಗಲಿದೆ 1,500 ರೂಪಾಯಿ

Latest Videos
Follow Us:
Download App:
  • android
  • ios