ಅಬ್ಬಬ್ಬಾ..ವಿಪ್ರೋದ ಸಿಇಒ ಡೆಲಾಪೋರ್ಟೆ, ನಿವೃತ್ತರಾದಾಗ ಗಳಿಸಿದ ದುಡ್ಡು ಇಷ್ಟೊಂದು ಕೋಟಿನಾ?
ಐಟಿ ದಿಗ್ಗಜ ಕಂಪೆನಿ ವಿಪ್ರೋದ ಸಿಇಒ ಥಿಯೆರಿ ಡೆಲಾಪೋರ್ಟೆ ಇತ್ತೀಚೆಗೆ ತಮ್ಮ ಗೌರವಾನ್ವಿತ ಸ್ಥಾನದಿಂದ ನಿವೃತ್ತಿ ಘೋಷಿಸಿದ್ದಾರೆ. ಡೆಲಾಪೋರ್ಟೆ, 2023ರಲ್ಲಿ ಐಟಿ ವಲಯದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ CEO ಆಗಿ ಗುರುತಿಸಿಕೊಂಡಿದ್ದರು. ನಿವೃತ್ತಿಯಾಗೋ ಸಮಯದಲ್ಲಿ ಡೆಲಾಪೋರ್ಟೆ ಗಳಿಸಿದ ದುಡ್ಡು ಎಷ್ಟು ಕೋಟಿ ನಿಮ್ಗೆ ಗೊತ್ತಿದ್ಯಾ?
ಐಟಿ ದಿಗ್ಗಜ ಕಂಪೆನಿ ವಿಪ್ರೋದ ಸಿಇಒ ಥಿಯೆರಿ ಡೆಲಾಪೋರ್ಟೆ ಇತ್ತೀಚೆಗೆ ತಮ್ಮ ಗೌರವಾನ್ವಿತ ಸ್ಥಾನದಿಂದ ನಿವೃತ್ತಿ ಘೋಷಿಸಿದ್ದಾರೆ. ಏಪ್ರಿಲ್ 7, 2024ರಂದು ಐದು ವರ್ಷಗಳ ಅವಧಿಗೆ ಹೊಸ CEO ಈ ಸ್ಥಾನಕ್ಕೆ ಆಗಮಿಸಿದ್ದಾರೆ. ಥಿಯೆರಿ ಡೆಲಾಪೋರ್ಟೆ ಸ್ಥಾನವನ್ನು ಶ್ರೀನಿವಾಸ್ ಪಾಲ್ಲಿಯಾ ನಿರ್ವಹಿಸಲಿದ್ದಾರೆ. ವಿಪ್ರೋದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ 56ನೇ ವಯಸ್ಸಿನ ಡೆಲಾಪೋರ್ಟೆ ಸಾಕಷ್ಟು ಆಸ್ತಿಯನ್ನು ಗಳಿಸಿದ್ದಾರೆ. ವಿಪ್ರೋ ಸಿಇಒ ಆಗಿರುವ ಮೊದಲು, ಕ್ಯಾಪ್ಜೆಮಿನಿಯಲ್ಲಿ ಸಿಒಒ ಹುದ್ದೆಯನ್ನು ಹೊಂದಿದ್ದರು. ಅಲ್ಲಿ ಬರೋಬ್ಬರಿ 25 ವರ್ಷಗಳ ಕಾಲ ವಿವಿಧ ಹುದ್ದೆಯನ್ನು ನಿರ್ವಹಿಸಿದ್ದಾರೆ.
ಜುಲೈ 6, 2020ರಂದು ಡೆಲಾಪೋರ್ಟೆ ವಿಪ್ರೋದಲ್ಲಿ ಕೆಲಸ ಮಾಡಲು ಆರಂಭಿಸಿರು. ಆದರೆ ಅವರ ಹಿಂದಿನ ಅಬಿದಾಲಿ ನೀಮುಚ್ವಾಲಾ ಅವರಂತೆ, ಡೆಲಾಪೋರ್ಟಿ ತಮ್ಮ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ಮೊದಲು ನಿರ್ಗಮಿಸಲು ನಿರ್ಧರಿಸಿದರು. ಡೆಲಾಪೋರ್ಟೆ ನಾಯಕತ್ವದ ಅವಧಿಯಲ್ಲಿ, ವಿಪ್ರೋನ ಮಾರುಕಟ್ಟೆ ಬಂಡವಾಳೀಕರಣವು ಅದರ ಹಿಂದಿನ ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಕಂಪನಿಯು ಸತತ ನಾಲ್ಕನೇ ತ್ರೈಮಾಸಿಕದಲ್ಲಿ ಲಾಭದಲ್ಲಿ ಕುಸಿತವನ್ನು ವರದಿ ಮಾಡಿದೆ, ವರದಿಗಳ ಪ್ರಕಾರ, ವರ್ಷದಿಂದ ವರ್ಷಕ್ಕೆ 12 ಶೇಕಡಾ 2,694 ಕೋಟಿಗೆ ಇಳಿದಿದೆ.
ಬ್ರಿಟೀಷರಿಗೇ ಸಾಲ ಕೊಡ್ತಿದ್ದ, ಅಂಬಾನಿಗಿಂತಲೂ ಶ್ರೀಮಂತ ಭಾರತೀಯ ವ್ಯಕ್ತಿ ಯಾರು?
2023ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಸಿಇಒ ವಿಪ್ರೋದ ಡೆಲಾಪೋರ್ಟೆ
ಹೀಗಿದ್ದೂ, ಡೆಲಾಪೋರ್ಟೆ FY23ರಲ್ಲಿ IT ವಲಯದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ CEO ಆಗಿ ಗುರುತಿಸಿಕೊಂಡಿದ್ದಾರೆ. USD 10 ಮಿಲಿಯನ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ಬರೋಬ್ಬರಿ 82 ಕೋಟಿ ರೂ. ಗಣನೀಯ ಸಂಭಾವನೆಯನ್ನು ಪಡೆದಿದ್ದಾರೆ. ಅವರ ಮೂಲ ವೇತನ 9.5 ಕೋಟಿ ರೂ.ಗಳಾಗಿದ್ದು, ಭತ್ಯೆಗಳು ಒಟ್ಟು 3.57 ಕೋಟಿ ರೂ. ಆಗಿದೆ.
ಫ್ರೆಂಚ್ ಪ್ರಜೆಯಾದ ಡೆಲಾಪೋರ್ಟೆ ಅವರು ಸೈನ್ಸಸ್‌ಪೋ ಪ್ಯಾರಿಸ್‌ನಿಂದ ಅರ್ಥಶಾಸ್ತ್ರ ಮತ್ತು ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ನಂತರ ಸೊರ್ಬೊನ್ನೆ ವಿಶ್ವವಿದ್ಯಾಲಯದಿಂದ ಕಾನೂನುಗಳ ಸ್ನಾತಕೋತ್ತರ ಪದವಿಯನ್ನು ಪಡೆದರು.
ಅನಿಲ್ ಅಂಬಾನಿಯಂತೆ ಬಿಲಿಯನೇರ್ ಆಗಿ ದಿವಾಳಿಯಾದ ಭಾರತದ ರಿಟೇಲ್ ಕಿಂಗ್!
ಹೊಸ ಸಿಇಒ ಶ್ರೀನಿವಾಸ್ ಪಾಲ್ಲಿಯಾ, 32 ವರ್ಷದಿಂದ ವಿಪ್ರೊ ಉದ್ಯೋಗಿ
ಇನ್ನು ಹೊಸ ಸಿಇಒ ಶ್ರೀನಿವಾಸ್ ಪಾಲ್ಲಿಯಾ. ವಿಪ್ರೊದಲ್ಲಿ 32 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. 1992ರಲ್ಲಿ ಉತ್ಪನ್ನ ನಿರ್ವಾಹಕರಾಗಿ ವಿಪ್ರೋದಲ್ಲಿ ಕೆಲಸ ಪ್ರಾರಂಭಿಸಿದರು. US ಕೇಂದ್ರ ಕಾರ್ಯಾಚರಣೆಗಳ ಜನರಲ್ ಮ್ಯಾನೇಜರ್, USAನಲ್ಲಿ ಎಂಟರ್‌ಪ್ರೈಸ್ ವ್ಯವಹಾರದ ಉಪಾಧ್ಯಕ್ಷ ಮತ್ತು ಮಾರ್ಕೆಟಿಂಗ್ ಮತ್ತು ಸೇರಿದಂತೆ ವೈವಿಧ್ಯಮಯ ಪಾತ್ರಗಳನ್ನು ವಹಿಸಿದ್ದಾರೆ. ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಹೇಳುವುದಾದರೆ 1992 ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಮಾಸ್ಟರ್ ಆಫ್ ಟೆಕ್ನಾಲಜಿ ಪದವಿ ಮತ್ತು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಲೀಡಿಂಗ್ ಗ್ಲೋಬಲ್ ಬಿಸಿನೆಸ್ ಎಕ್ಸಿಕ್ಯೂಟಿವ್ ಪ್ರೋಗ್ರಾಂ ಮತ್ತು ಮೆಕ್‌ಗಿಲ್ ಎಕ್ಸಿಕ್ಯುಟಿವ್ ಇನ್‌ಸ್ಟಿಟ್ಯೂಟ್‌ನಲ್ಲಿ ಅಡ್ವಾನ್ಸ್ಡ್ ಲೀಡರ್‌ಶಿಪ್ ಕೋರ್ಸ್ ಮಾಡಿದ್ದಾರೆ.
ವಿಪ್ರೋ ಸಂಸ್ಥೆಯನ್ನು 1945 ರಲ್ಲಿ ಮೊಹಮ್ಮದ್ ಪ್ರೇಮ್ಜಿ ಸ್ಥಾಪಿಸಿದರು. ಸಂಸ್ಥಾಪಕರ ಅಕಾಲಿಕ ಮರಣದ ನಂತರ, ಕಂಪನಿಯ ನಿಯಂತ್ರಣವನ್ನು ಬಿಲಿಯನೇರ್ ಅಜೀಂ ಪ್ರೇಮ್‌ಜಿ ವಹಿಸಿಕೊಂಡರು, ಅವರು ಇಲ್ಲಿಯವರೆಗೆ ಮಂಡಳಿಯ ಕಾರ್ಯನಿರ್ವಾಹಕೇತರ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವರದಿಗಳ ಪ್ರಕಾರ 93,400 ಕೋಟಿ ರೂ .ಮೌಲ್ಯದ ವಿಪ್ರೋ ಆರು ಖಂಡಗಳಲ್ಲಿ 25,0000 ಉದ್ಯೋಗಿಗಳನ್ನು ಹೊಂದಿದೆ