ಖಾಲಿ ಫ್ರಿಜ್ ಭಾರತೀಯ ಮೂಲದ ವ್ಯಕ್ತಿಯನ್ನು ಅಮೆರಿಕದ ಬಿಲಿಯನೇರ್ ಉದ್ಯಮಿಯನ್ನಾಗಿಸಿತು!
ಹೊಸ ಯೋಚನೆಗಳು ಹುಟ್ಟಲು ಒಂದು ಪುಟ್ಟ ಕಾರಣ ಸಾಕು. ಭಾರತೀಯ ಮೂಲದ ಅಪೂರ್ವ ಮೆಹ್ತಾ ಅವರಿಗೆ ಕೂಡ ಒಂದು ದೊಡ್ಡ ಉದ್ಯಮ ಕಟ್ಟಲು ಖಾಲಿ ಫ್ರಿಜ್ ಪ್ರೇರಣೆಯಾಯ್ತು. ಅಮೆರಿಕದ ಬಿಲಿಯನೇರ್ ಉದ್ಯಮಿಯಾಗಿರುವ ಇವರು ಇನ್ಸ್ಟಾಕಾರ್ಟ್ ಎಂಬ ದಿನಸಿ ಸಾಮಾನುಗಳ ಡೆಲಿವರಿ ಅಪ್ಲಿಕೇಷನ್ ಸಂಸ್ಥಾಪಕ.

Business Desk: ಕೆಲವೊಮ್ಮೆ ಯಾವುದೋ ಒಂದು ವಸ್ತು ನಮ್ಮ ದೊಡ್ಡ ಕನಸಿಗೆ ರೆಕ್ಕೆಪುಕ್ಕ ನೀಡಬಹುದು. ಹೊಸ ಹಾದಿಯಲ್ಲಿ ನಡೆಯಲು ಪ್ರೇರಣೆ ನೀಡಬಹುದು. ಅನೇಕ ಯಶಸ್ವಿ ವ್ಯಕ್ತಿಗಳ ಬದುಕಿನಲ್ಲಿ ಕೂಡ ಅವರಿಗೆ ಎಲ್ಲಿಂದಲೂ ಇಂಥದೊಂದು ಪ್ರೇರಣೆ ಸಿಕ್ಕಿರುತ್ತದೆ ಕೂಡ. ಇದಕ್ಕೆ ಅನೇಕ ನಿದರ್ಶನಗಳು ಕೂಡ ಇವೆ. ಹೀಗಿರುವಾಗ ಖಾಲಿ ಫ್ರಿಜ್ ಅಮೆರಿಕದಲ್ಲಿನ ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಹೊಸ ಉದ್ಯಮ ಪ್ರಾರಂಭಿಸಲು ಪ್ರೇರಣೆಯಾಗುವ ಜೊತೆಗೆ ಇಂದು ಆತನನ್ನು ಬಿಲಿಯನೇರ್ ಉದ್ಯಮಿಯನ್ನಾಗಿಸಿದೆ. ಹೌದು, ಬರೀ 37ನೇ ವಯಸ್ಸಿನಲ್ಲೇ ಭಾರತೀಯ ಮೂಲದ ಉದ್ಯಮಿ ಅಪೂರ್ವ ಮೆಹ್ತಾ ಯಶಸ್ಸು ಗಳಿಸುವ ಜೊತೆಗೆ ಬಿಲಿಯನೇರ್ ಉದ್ಯಮಿಯಾಗಿದ್ದಾರೆ. ಇನ್ಸ್ಟಾಕಾರ್ಟ್ ಎಂಬ ದಿನಸಿ ಸಾಮಾನುಗಳ ಡೆಲಿವರಿ ಅಪ್ಲಿಕೇಷನ್ ಪ್ರಾರಂಭಿಸುವ ಮೂಲಕ ಮೆಹ್ತಾ ದೊಡ್ಡ ಯಶಸ್ಸು ಸಾಧಿಸಿದ್ದಾರೆ. ಹಾಗಾದ್ರೆ ಈ ಅಪೂರ್ವ ಮೆಹ್ತಾ ಯಾರು? ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂಥ ಗಮನಾರ್ಹ ಯಶಸ್ಸು ಗಳಿಸಲು ಹೇಗೆ ಸಾಧ್ಯವಾಯಿತು?
ಯಾರು ಈ ಅಪೂರ್ವ ಮೆಹ್ತಾ?
2020ರಲ್ಲಿ ಸೀಟ್ಲನಲ್ಲಿ ನೆಲೆಸಿದ ಮೆಹ್ತಾ ಅಮೆಜಾನ್ ಸಂಸ್ಥೆಯಲ್ಲಿ ಸಪ್ಲೈ ಚೈನ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸ್ವಂತ ಉದ್ಯಮ ಪ್ರಾರಂಭಿಸುವ ಗುರಿಯೊಂದಿಗೆ ಮೆಹ್ತಾ ಉದ್ಯೋಗ ತೊರೆದು ಸ್ಯಾನ್ ಫ್ರಾನ್ಸಿಸ್ಕೋಗೆ ಸ್ಥಳಾಂತರಗೊಳ್ಳುತ್ತಾರೆ. ಆದರೆ, ಯಾವ ಉದ್ಯಮ ಪ್ರಾರಂಭಿಸೋದು ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. 2012ರಲ್ಲಿ ಇನ್ಸ್ಟಾಕಾರ್ಟ್ ಪ್ರಾರಂಭಿಸುವ ತನಕ ಮೆಹ್ತಾ ವಕೀಲರಿಗೆ ಸಾಮಾಜಿಕ ನೆಟ್ ವರ್ಕ್ ನಿಂದ ಹಿಡಿದು ಗೇಮಿಂಗ್ ಇಂಡಸ್ಟ್ರೀಸ್ ಗೆ ಜಾಹೀರಾತು ಸ್ಟಾರ್ಟ್ ಅಪ್ ತನಕ ಎರಡು ವರ್ಷಗಳ ಕಾಲ ಅನೇಕ ಉದ್ಯಮಗಳನ್ನು ಪ್ರಯತ್ನಿಸಿ ನೋಡಿದರು.
ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಆರ್ ಒ ಕಂಪನಿ ಸ್ಥಾಪಿಸಿದ ಐಐಟಿ ಪದವೀಧರ, ಇಂದು 1100 ಕೋಟಿ ಒಡೆಯ
ಇನ್ಸ್ಟಾಕಾರ್ಟ್ ಏನು?
ಇನ್ಸ್ಟಾಕಾರ್ಟ್ ದಿನಸಿ ಸಾಮಾನುಗಳ ಡೆಲಿವರಿಗೆ (grocery delivery)ಇರುವ ಅಪ್ಲಿಕೇಷನ್ ಆಗಿದೆ. ಇದು ಅಮೆರಿಕದಲ್ಲಿ 7.7 ಮಿಲಿಯನ್ ಗಿಂತಲೂ ಅಧಿಕ ಗ್ರಾಹಕರು ಹಾಗೂ 80,000ಕ್ಕಿಂತಲೂ ಹೆಚ್ಚಿನ ರಿಟೇಲರ್ ಗಳ ನೆಟ್ ವರ್ಕ್ ಹೊಂದಿದೆ.
ಇನ್ಸ್ಟಾಕಾರ್ಟ್ ಯೋಚನೆ ಬಂದಿದ್ದು ಹೇಗೆ?
ಈ ಹೊಸ ಉದ್ಯಮ ಪ್ರಾರಂಭಿಸಲು ಮೆಹ್ತಾಗೆ ಪ್ರೇರಣೆಯಾಗಿದ್ದು ಖಾಲಿ ಫ್ರಿಜ್. ದಿನಸಿ ಸಾಮಾಗ್ರಿಗಳನ್ನು ಬಿಟ್ಟು ಬೇರೆ ಏನನ್ನು ಬೇಕಾದರೂ ಆನ್ ಲೈನ್ ನಲ್ಲಿ ಖರೀದಿಸಬಹುದು ಎಂಬುದೇ ಇನ್ಸ್ಟಾಕಾರ್ಟ್ ಪ್ರಾರಂಭಿಸುವ ಯೋಚನೆ ಹುಟ್ಟಲು ಕಾರಣವಾಯಿತು. ಇನ್ಸ್ಟಾಕಾರ್ಟ್ ಪ್ರಾರಂಭಗೊಂಡ ದಿನಗಳಲ್ಲಿ ಸ್ವತಃ ಮೆಹ್ತಾ ಅವರೇ ಊಬರ್ ಮೂಲಕ ಆರ್ಡರ್ ಗಳನ್ನು ಡೆಲಿವರಿ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಉದ್ಯಮ ಇನ್ನಷ್ಟು ವಿಸ್ತರಣೆಗೊಂಡಿತ್ತು. ಅದರಲ್ಲೂ ಕೊರೋನಾ ಪೆಂಡಾಮಿಕ್ ಸಮಯದಲ್ಲಿ ಇನ್ಸ್ಟಾಕಾರ್ಟ್ ಉದ್ಯಮ ಭಾರೀ ಪ್ರಮಾಣದಲ್ಲಿ ವಿಸ್ತರಣೆಗೊಂಡಿತ್ತು. ಈ ಸಮಯದಲ್ಲೇ ಈ ಸಂಸ್ಥೆ ಸಿಕೊಯಾ ಕ್ಯಾಪಿಟಲ್, ಆಂಡ್ರೆಸೆನ್ ಹೊರೊವಿಟ್ಜ್ ಹಾಗೂ ಪೆಪ್ಸಿಕೋ ಮುಂತಾದ ಹೂಡಿಕೆದಾರರಿಂದ ಸಾಕಷ್ಟು ಹಣ ಪಡೆದಿದೆ.
ಬೆಂಗಳೂರು ಐಐಎಂ ಹಳೇ ವಿದ್ಯಾರ್ಥಿನಿ ಈಗ 54 ಸಾವಿರ ಕೋಟಿ ಬೆಲೆಬಾಳೋ ಕಂಪನಿ ಎಂಡಿ;ಈಕೆ ವೇತನ ಎಷ್ಟು ಕೋಟಿ ಗೊತ್ತಾ?
ಇನ್ಸ್ಟಾಕಾರ್ಟ್ ಮೊದಲ ಸಂಸ್ಥೆಯಲ್ಲ
ಅಂದಹಾಗೇ ಇನ್ಸ್ಟಾಕಾರ್ಟ್ ಅಪೂರ್ವ ಮೆಹ್ತಾ ಅವರ ಮೊದಲ ಉದ್ಯಮವೇನಲ್ಲ. ಅಮೆಜಾನ್ ಸಂಸ್ಥೆಯಲ್ಲಿನ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಹಾಗೂ ಇನ್ಸ್ಟಾಕಾರ್ಟ್ ಪ್ರಾರಂಭಿಸುವ ಮುನ್ನ ಮೆಹ್ತಾ ಅನೇಕ ಉದ್ಯಮಗಳನ್ನು ಪ್ರಯತ್ನಿಸಿ ನೋಡಿದ್ದರು. ವಾಟರ್ ಲೂ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ ಪಡೆದಿರುವ ಮೆಹ್ತಾ ಅಮೆಜಾನ್ ಅಷ್ಟೇ ಅಲ್ಲದೆ, ಕ್ವಾಲ್ಕೊಮ್, ಬ್ಲ್ಯಾಕ್ ಬೆರಿ ಮೊದಲಾದ ಸಂಸ್ಥೆಗಳಲ್ಲಿ ಕೂಡ ಕಾರ್ಯನಿರ್ವಹಿಸಿದ್ದರು. ಇನ್ನು ಇನ್ಸ್ಟಾಕಾರ್ಟ್ ಪ್ರಾರಂಭಿಸುವ ಮುನ್ನ ಮೆಹ್ತಾ ಸುಮಾರು 20 ವಿಭಿನ್ನ ಉದ್ಯಮಗಳನ್ನು ಪ್ರಯತ್ನಿಸಿ ನೋಡಿದ್ದರು.
ಇನ್ಸ್ಟಾಕಾರ್ಟ್ ಐಪಿಒ
ಮೇಪಲ್ ಬೇರ್ ಇಂಕ್ ಸಂಘಟಿತ ಸಂಸ್ಥೆಯಾಗಿರುವ ಇನ್ಸ್ಟಾಕಾರ್ಟ್ ಪ್ರತಿ ಷೇರಿಗೆ ಸೆಪ್ಟೆಂಬರ್ 18ರಂದು ನಡೆದ ಐಪಿಒನಲ್ಲಿ $30 ಬೆಲೆ ನಿಗದಿಪಡಿಸಲಾಗಿತ್ತು. ಈ ಷೇರುಗಳು ಸೆಪ್ಟೆಂಬರ್ 19ರಂದು ನ್ಯೂಯಾರ್ಕ್ ಟ್ರೇಡ್ ಗೆ ಮೊದಲು ಪ್ರವೇಶಿಸುವಾಗ ಶೇ.40ರಷ್ಟು ಏರಿಕೆ ಕಂಡಿತ್ತು. ಕಂಪನಿಯ ಒಟ್ಟು ಮೌಲ್ಯ 9.9 ಬಿಲಿಯನ್ ಡಾಲರ್ .