Asianet Suvarna News Asianet Suvarna News

ಮನೆಯನ್ನು Rentಗೆ ನೀಡೋ ಮುನ್ನ ಇವೆಲ್ಲಾ ಗೊತ್ತು ಮಾಡಿಕೊಳ್ಳಿ

ಅನೇಕ ಬಾರಿ, ಯಾರಾದ್ರೂ ಮನೆ ಬಾಡಿಗೆಗೆ ಬಂದ್ರೆ ಸಾಕು ಎನ್ನಿಸುತ್ತಿರುತ್ತದೆ. ಹಾಗಾಗಿ ಪೂರ್ವಾಪರ ಆಲೋಚನೆ ಮಾಡದೆ ಮನೆ ಬಾಡಿಗೆಗೆ ನೀಡ್ತೇವೆ. ಆದ್ರೆ ಅಪರಿಚಿತರಿಗೆ ಮನೆ ಬಾಡಿಗೆ ನೀಡಿ ನಂತ್ರ ಸಮಸ್ಯೆ ಎದುರಿಸ್ತೇವೆ. ಅದರ ಬದಲು ಆರಂಭದಲ್ಲಿಯೇ ಎಚ್ಚರದಿಂದಿರಬೇಕು. 
 

House Renting Tips
Author
Bangalore, First Published May 25, 2022, 6:13 PM IST

ಬೆಂಗಳೂರಿ (Bangalore) ನಂತಹ ನಗರದಲ್ಲಿ ಮನೆ (Home) ಬಾಡಿಗೆ (Rent) ಗೆ ಕೊಡೊದು, ಮನೆ ಬಾಡಿಗೆ ಪಡೆಯೋದು ಎರಡೂ ಅನಿವಾರ್ಯ. ಅನೇಕರು ಒಂದು ಮನೆಯನ್ನು ಮಾತ್ರವಲ್ಲ ಎರಡು ಮೂರು ಮನೆಯನ್ನು ಖರೀದಿ (Purchase ) ಮಾಡ್ತಾರೆ. ನಂತ್ರ ಮನೆಯನ್ನು ಬಾಡಿಗೆಗೆ ನೀಡ್ತಾರೆ. ಅದ್ರಿಂದ ಬರುವ ಹಣದಲ್ಲಿ ಜೀವನ ನಡೆಸುವವರಿದ್ದಾರೆ. ಮನೆ ಮಾಲೀಕರು ಭರ್ಜರಿ ಹಣ (Money) ಮಾಡ್ತಾರೆ ಎನ್ನಿಸುತ್ತೆ. ಆದ್ರೆ ಮಾಲೀಕರ ಸಮಸ್ಯೆ ಸಾಕಷ್ಟಿರುತ್ತದೆ. ಬಾಡಿಗೆದಾರರಿಗೆ ಮನೆ ಬಾಡಿಗೆ ನೀಡುವಾಗ ನೂರು ಸಲ ಆಲೋಚನೆ ಮಾಡ್ಬೇಕು. ಅನೇಕ ವಿಷ್ಯಗಳನ್ನು ತಿಳಿಯಬೇಕು. ಮನೆ ಬಾಡಿಗೆಗೆ ಬಂದ ವ್ಯಕ್ತಿ ಬಾಡಿಗೆ ನೀಡದೆ ಹೋಗ್ಬಹುದು, ಮನೆಯಲ್ಲಿರುವ ವಸ್ತುಗಳನ್ನು ಹಾಳು ಮಾಡ್ಬಹುದು ಇಲ್ಲವೆ ಮನೆಯಲ್ಲಿ ಸದಾ ಗಲಾಟೆ ಮಾಡಿ ಕಿರಿಕಿರಿ ನೀಡ್ಬಹುದು. ಇದೆಲ್ಲವನ್ನೂ ಮಾಲೀಕ ಎದುರಿಸಬೇಕಾಗುತ್ತದೆ. ಶಾಂತಿಯಿಂದ ವರ್ತಿಸುವ, ಸಭ್ಯವಾಗಿರುವ ಹಾಗೂ ಸರಿಯಾದ ಸಮಯಕ್ಕೆ ಬಾಡಿಗೆ ನೀಡುವ ವ್ಯಕ್ತಿ ಸಿಗುವುದು ಪುಣ್ಯ ಎನ್ನಬೇಕು. ಇತ್ತೀಚಿನ ದಿನಗಳಲ್ಲಿ ಬಾಡಿಗೆದಾರ ಹಾಗೂ ಮಾಲೀಕರ ಮಧ್ಯೆ ನಡೆದ ಅನೇಕ ಗಲಾಟೆಗಳು ಸುದ್ದಿಯಾಗ್ತಿರುತ್ತವೆ. ನೀವೂ ಮನೆ ಬಾಡಿಗೆ ನೀಡಲು ಸಿದ್ಧವಾಗಿದ್ದರೆ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮನೆ ಬಾಡಿಗೆ ನೀಡುವ ಮೊದಲು ಏನೆಲ್ಲ ಕ್ರಮಕೈಗೊಳ್ಳಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

ಮನೆ ಬಾಡಿಗೆಗೆ ನೀಡುವ ಮುನ್ನ ಇದು ನೆನಪಿರಲಿ : 
ಅಪರಿಚಿತ (Unknown) ಜನರಿಗೆ ಮನೆಯನ್ನು ನೀಡಬೇಡಿ :
ಅಪರಿಚಿತ ವ್ಯಕ್ತಿಗೆ ಮನೆಯನ್ನು ಎಂದಿಗೂ ಬಾಡಿಗೆಗೆ ನೀಡಬೇಡಿ. ನಿಮಗೆ ತಿಳಿದಿರುವ ವ್ಯಕ್ತಿಗೆ ಮನೆಯನ್ನು ನೀಡಿ. ಇಲ್ಲವೆ ನಿಮಗೆ ತಿಳಿದಿರುವ ವ್ಯಕ್ತಿಗೆ ತಿಳಿದಿರುವವರಿಗೆ ಮನೆಯನ್ನು ನೀಡಿ. ನೆರೆ ಹೊರೆಯವರು ಅಥವಾ ಸ್ನೇಹಿತ (Friend) ರಿಗೆ ತಿಳಿದ ವ್ಯಕ್ತಿಗೆ ಮನೆಯನ್ನು  ನೀಡಿ. ಹಾಗೆ ವ್ಯಕ್ತಿಯ ಹಳೆ ಮನೆ ಮಾಲೀಕನ ಜೊತೆ ಮಾತುಕತೆ ನಡೆಸಿ. 

ದಾಖಲೆ (Documentation) ಗಳನ್ನು ಪರಿಶೀಲಿಸಿ : ಯಾರಿಗಾದರೂ ಮನೆಯನ್ನು ಬಾಡಿಗೆಗೆ ನೀಡುವ ಮೊದಲು, ಅವರ ಆಧಾರ್ (Aadhaar ) ಮತ್ತು ಪ್ಯಾನ್ ಕಾರ್ಡ್ (PAN Card ) ಪರಿಶೀಲಿಸಬೇಕಾಗುತ್ತದೆ. ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೊತೆ ಅವರ ಕಚೇರಿ (Office) ಐಡಿಯನ್ನು ಸಹ ಪರಿಶೀಲಿಸಿ. ಬಾಡಿಗೆದಾರನ ಬಗ್ಗೆ ಇದ್ರಿಂದ ಸಂಪೂರ್ಣ ಮಾಹಿತಿಯನ್ನು ನೀವು ಪಡೆಯಬಹುದು.

ಬಾಡಿಗೆ ಕರಾರು ಪತ್ರ : ನೀವು ಮನೆಯನ್ನು ಬಾಡಿಗೆಗೆ ನೀಡುತ್ತಿದ್ದರೆ ಬಾಡಿಗೆ ಪಡೆಯುವ ವ್ಯಕ್ತಿ ಜೊತೆ ಒಪ್ಪಂದವನ್ನು ಮಾಡಿಕೊಳ್ಳುವುದನ್ನು ಮರೆಯಬೇಡಿ. ಅಗ್ರಿಮೆಂಟ್‌ (Agreement) ನಲ್ಲಿ ಹೆಸರು (Name), ವಿಳಾಸ (Address), ತಂದೆಯ ಹೆಸರು, ಬಾಡಿಗೆ ಮೊತ್ತ ಇತ್ಯಾದಿಗಳನ್ನು ಸರಿಯಾಗಿ ಬರೆಯಿರಿ. ಮನೆಯಲ್ಲಿ ಕೆಲವು ಪೀಠೋಪಕರಣಗಳಿದ್ದರೆ, ಅದನ್ನು ಒಪ್ಪಂದದಲ್ಲಿ ನಮೂದಿಸಿ ಮತ್ತು ಬಾಡಿಗೆದಾರರ ಸಹಿಯನ್ನು ತೆಗೆದುಕೊಳ್ಳಿ. 

ಇದು ಅಮೇಜಾನ್ ಆಫರ್ ..! ಪ್ಲಾಸ್ಟಿಕ್ ಬಕೆಟ್ ಗೆ 26 ಸಾವಿರ, ಮಗ್ ಗೆ 10 ಸಾವಿರ!

ಪೊಲೀಸ್ (Police) ಪರಿಶೀಲನೆಯನ್ನು ಖಚಿತಪಡಿಸಿಕೊಳ್ಳಿ : ನೀವು ಪೊಲೀಸ್ ಪರಿಶೀಲನೆಯನ್ನು ಮಾಡಿದರೆ ನಿಮ್ಮ ಬಾಡಿಗೆದಾರರ ಬಗ್ಗೆ ಪೊಲೀಸರು ಎಲ್ಲವನ್ನೂ ತಿಳಿದುಕೊಳ್ಳುತ್ತಾರೆ. ಇದ್ರಿಂದ ನಿಮಗೆ ಪ್ರಯೋಜನವಾಗುತ್ತದೆ. ನಿಮ್ಮ ಬಾಡಿಗೆದಾರರು ಏನಾದರೂ ತಪ್ಪು ಮಾಡಿದರೆ, ಪೊಲೀಸರು ಸುಲಭವಾಗಿ ಅಪರಾಧಿಯನ್ನು ತಲುಪಬಹುದು ಮತ್ತು ನಿಮಗೆ ಸಹಾಯ ಮಾಡಬಹುದು.

PALM OIL IMPORT:ಅಗ್ಗವಾದ ಸೋಯಾಬೀನ್ ಎಣ್ಣೆ, ಭಾರತದ ತಾಳೆ ಎಣ್ಣೆ ಆಮದು 11 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿಯುವ ಸಾಧ್ಯತೆ!

ಸುತ್ತಮುತ್ತಲಿನವರಿಂದ ಮಾಹಿತಿ : ಒಂದು ವೇಳೆ ಬಾಡಿಗೆದಾರರಿರುವ ಮನೆಯ ಪಕ್ಕದಲ್ಲಿ ನೀವಿಲ್ಲ ಎಂದಾದ್ರೆ ನಿಮ್ಮ ನೆರೆಯವರಿಂದ ಅವರ ಬಗ್ಗೆ ಆಗಾಗ ಮಾಹಿತಿ ಪಡೆಯುತ್ತಿರಿ. ಬಾಡಿಗೆದಾರರು ಏನು ಕೆಲಸ ಮಾಡ್ತಿದ್ದಾರೆ, ನೆರೆ ಹೊರೆಯವರ ಜೊತೆ ಹೇಗಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಿ. ಫ್ಲಾಟ್ ನಲ್ಲಿ ಮನೆ ಬಾಡಿಗೆ ನೀಡಿದ್ದರೆ ಬಾಡಿಗೆದಾರ ಸರಿಯಾಗಿ ಮೆಂಟೆನೆನ್ಸ್ ನೀಡ್ತಿದ್ದಾನೆಯೇ ಎಂಬುದನ್ನು ತಿಳಿಯಿರಿ.  

Follow Us:
Download App:
  • android
  • ios