ವಿದೇಶದಲ್ಲಿ ಮಜಾ ಮಾಡ್ಬೇಕಂದ್ರೆ ಈ Loan ಗೆ ಅಪ್ಲೈ ಮಾಡಿ
ಪ್ರವಾಸ ಕೆಲವರಿಗೆ ಕನಸಿನ ಮಾತು. ಅದ್ರಲ್ಲೂ ವಿದೇಶಿ ಪ್ರವಾಸ ಅಸಾಧ್ಯ ಎಂದುಕೊಂಡಿರುತ್ತಾರೆ. ಕೈನಲ್ಲಿ ಹಣವಿಲ್ಲದೆ ಊರು ಸುತ್ತು ಅಂದ್ರೆ ಹೆಂಗೆ ಎಂಬುದು ಅವರ ಪ್ರಶ್ನೆ. ನಿಮ್ಮತ್ರ ಹಣವಿಲ್ಲವೆಂದ್ರೆ ಟೆನ್ಷನ್ ಯಾಕೆ? ಬ್ಯಾಂಕ್ ನಿಮ್ಮ ಪ್ರವಾಸಕ್ಕೆ ಹಣ ನೀಡುತ್ತೆ.
ವಿದೇಶಕ್ಕೆ ಹೋಗ್ಬೇಕು, ವಿದೇಶ ನೋಡ್ಬೇಕು ಎಂಬುದು ಎಲ್ಲರ ಬಯಕೆ. ಆದ್ರೆ ವಿದೇಶಕ್ಕೆ ಹೋಗುವುದು ಸುಲಭವಲ್ಲ. ಅದಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಜೀವನದಲ್ಲಿ ಒಮ್ಮೆಯಾದ್ರೂ ವಿದೇಶಕ್ಕೆ ಹಾರ್ಬೇಕು ಎನ್ನುವವರಿಗೆ ಹಣ ದೊಡ್ಡ ಅಡ್ಡಿಯಾಗುತ್ತದೆ. ಇದೇ ಕಾರಣಕ್ಕೆ ಅವರ ಪ್ರವಾಸದ ಕನಸು ನನಸಾಗೋದೆ ಇಲ್ಲ. ಆದ್ರೆ ವಿದೇಶದ ಆಸೆಯನ್ನು ನೀವು ಈಡೇರಿಸಿಕೊಳ್ಳಬಹುದು. ಅದಕ್ಕೆ ಬ್ಯಾಂಕ್ ಗಳಿಂದ ನೀವು ಸಾಲ ಪಡೆಯಬಹುದು.
ಯಸ್, ಗೃಹ ಸಾಲ (Home Loan) , ವಾಹನ ಸಾಲ, ಕೃಷಿ ಸಾಲ ಹೀಗೆ ಬೇರೆ ಬೇರೆ ಕೆಲಸಕ್ಕೆ ಬ್ಯಾಂಕ್ ಗಳು ಸಾಲ ನೀಡುತ್ತವೆ. ಹಾಗೆಯೇ ವಿದೇಶಿ (Abroad) ಪ್ರವಾಸಕ್ಕೆ ಕೂಡ ಬ್ಯಾಂಕ್ (Bank) ಗಳು ಸಾಲ ಸೌಲಭ್ಯ ನೀಡ್ತವೆ. ನಾವಿಂದು ವಿದೇಶಿ ಪ್ರವಾಸಕ್ಕೆ ಬ್ಯಾಂಕ್ ನೀಡುವ ಸಾಲಗಳ ಬಗ್ಗೆ ಇಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ಎಷ್ಟು ಸಿಗುತ್ತೆ ಸಾಲ ? : ಹೆಚ್ಚಿನ ಹಣಕಾಸು ಸಂಸ್ಥೆಗಳು ನಿಮಗೆ ಪ್ರವಾಸಿ ಸಾಲವನ್ನು ನೀಡುತ್ತವೆ. ಪ್ರತಿ ವರ್ಷ ಕನಿಷ್ಠ ಶೇಕಡಾ 10.75ರ ಬಡ್ಡಿ ದರದಲ್ಲಿ 40 ಲಕ್ಷದವರೆಗೆ ಪ್ರಯಾಣ ಸಾಲವನ್ನು ಬ್ಯಾಂಕ್ ಗಳು ನೀಡುತ್ತವೆ. ಸಾಲಗಾರನಿಗೆ ಇದನ್ನು ತೀರಿಸಲು ಸಮಯವಿರುತ್ತದೆ. ಸಾಲಗಾರ 6 ವರ್ಷಗಳ ಅವಧಿಗೆ ಈ ಸಾಲವನ್ನು ಪಡೆಯಬಹುದು.
MONEY MANAGEMENT: ಈ ಟಿಪ್ಸ್ ಫಾಲೋ ಮಾಡಿದ್ರೆ ಕಾಡಲ್ಲ ಪತಿ-ಪತ್ನಿ ಹಣದ ವೈಮನಸ್ಸು
ಪ್ರವಾಸಿ ಸಾಲಕ್ಕೆ (Travel Loan) ಅರ್ಜಿ ಸಲ್ಲಿಕೆ ಹೇಗೆ? : ರಜಾ ದಿನಗಳು ಶುರುವಾಗ್ತಿದ್ದಂತೆ ಬ್ಯಾಂಕ್ ಗಳು ಪ್ರವಾಸಿ ಸಾಲದ ಆಫರ್ ಶುರು ಮಾಡುತ್ತವೆ. ಸಾಲ ಕಂಪನಿಗಳು ಹಾಗೂ ಬ್ಯಾಂಕ್ ಗಳು ಆಕರ್ಷಕ ಬಡ್ಡಿಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತವೆ. ಬ್ಯಾಂಕ್ ಹಾಗೂ ಸಾಲ ಕಂಪನಿಗಳು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಯಾಣಕ್ಕೆ ಸಂಬಂಧಿಸಿದ ಸಾಲದ ಬಗ್ಗೆ ಮಾಹಿತಿಯನ್ನು ನೀಡುತ್ತವೆ. ಇದಕ್ಕಾಗಿಯೇ ಕೆಲ ಕಂಪನಿಗಳು ಆನ್ಲೈನ್ ಪೋರ್ಟಲ್ ಗಳನ್ನು ಕೂಡ ಹೊಂದಿವೆ. ನೀವು ಬ್ಯಾಂಕ್ ನ ವೆಬ್ ಸೈಟ್ (Website) ಗೆ ಹೋಗಿ ಅಲ್ಲಿ ಪ್ರವಾಸಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಕ್ರೆಡಿಟ್ ಸ್ಕೋರ್ ಮುಖ್ಯವಾಗುತ್ತದೆ. ನೀವು ಅರ್ಜಿಯಲ್ಲಿ ಕ್ರೆಡಿಟ್ ಸ್ಕೋರ್ ಮಾಹಿತಿಯನ್ನು ನೀಡಬೇಕಾಗುತ್ತದೆ. ನೀವು ಈಗಾಗಲೇ ಸಾಲ ಪಡೆದಿದ್ದು, ಅದನ್ನು ಮರುಪಾವತಿ ಮಾಡಿಲ್ಲ ಎಂದಾದ್ರೆ ಮತ್ತೆ ಪ್ರವಾಸಿ ಸಾಲಕ್ಕೆ ಅರ್ಜಿ ಸಲ್ಲಿಸಲು ಹೋಗ್ಬೇಡಿ. ನೀವು ಮತ್ತೆ ಪ್ರವಾಸಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ರೆ ನಿಮಗೆ ಸಾಲ ಸಿಗದೆ ಹೋಗಬಹುದು. ಹಾಗೆ ತುರ್ತು ಸಂದರ್ಭದಲ್ಲಿ ಸಾಲ ಸಿಗುವುದು ಕಷ್ಟವಾಗಬಹುದು.
ಅರ್ಜಿ ಸಲ್ಲಿಸುವ ಮುನ್ನ : ರಜಾ ದಿನಗಳಲ್ಲಿ ನೀವು ವಿದೇಶ ಪ್ರವಾಸಕ್ಕೆ ಹೊರಡುವ ಪ್ಲಾನ್ ಮಾಡಿದ್ದು, ಬ್ಯಾಂಕ್ ನಿಂದ ಸಾಲ ಪಡೆಯಲು ಮುಂದಾಗಿದ್ದರೆ ಮೊದಲು ಎಷ್ಟು ಹಣ ಬೇಕು ಎಂಬುದನ್ನು ನೀವು ನಿರ್ಧರಿಸಿ. ನಂತ್ರ ಸಾಲಕ್ಕೆ ಅರ್ಜಿ ಸಲ್ಲಿಸಿ. ಅನೇಕ ಬಾರಿ ಕಡಿಮೆ ಖರ್ಚಿನಲ್ಲೂ ನೀವು ಪ್ರವಾಸ ಕೈಗೊಳ್ಳಬಹುದು. ಆದ್ರೆ ನಿಮಗೆ ಸರಿಯಾದ ಮಾಹಿತಿ ಇರದ ಕಾರಣ ನೀವು ಹೆಚ್ಚಿಗೆ ಸಾಲ ಪಡೆದಿರುತ್ತೀರಿ. ಇದ್ರಿಂದ ಅನವಶ್ಯಕ ಖರ್ಚು ಹೆಚ್ಚಾಗುತ್ತದೆ. ಇದ್ರ ಜೊತೆಗೆ ನೀವು ಹೆಚ್ಚಿನ ಬಡ್ಡಿ ಕೂಡ ಪಾವತಿ ಮಾಡಬೇಕಾಗುತ್ತದೆ.
ಬ್ಯಾಂಕ್ ಗಳು ಮರುಪಾವತಿಗೆ ಬೇರೆ ಬೇರೆ ಅವಧಿಯನ್ನು ನೀಡುತ್ತವೆ. 12 ತಿಂಗಳಿಂದ 60 ತಿಂಗಳವರೆಗಿನ ಅವಧಿಗಳಲ್ಲಿ ನೀವು, ನಿಮಗೆ ಅನುಕೂಲವಾದದ್ದನ್ನು ಆಯ್ಕೆ ಮಾಡಿಕೊಳ್ಳಬಹುದು. 1 ರಿಂದ 5 ವರ್ಷಗಳಲ್ಲಿ ಸಾಲವನ್ನು ಮರುಪಾವತಿಸುತ್ತಿದ್ದರೆ ಕಡಿಮೆ ವೆಚ್ಚದ ಇಎಂಐ ಸೌಲಭ್ಯ ಕೂಡ ನಿಮಗೆ ಸಿಗುವ ಸಾಧ್ಯತೆಯಿರುತ್ತದೆ.
ಮದುವೆ ಆಯಿತಾ? ಕೂಡಲೇ ಈ ಕೆಲಸ ಮಾಡಿ!
ಸಾಲ ಪಡೆಯುವ ಮೊದಲು ನೀವು ಅದ್ರ ಬಡ್ಡಿಯನ್ನು ಗಮನಿಸಬೇಕು. ಸಾಲದ ಅವಧಿ ಹೆಚ್ಚಾಗಿದ್ದಾಗ ಬಡ್ಡಿ ಪಾವತಿ ಕೂಡ ಹೆಚ್ಚಾಗುತ್ತದೆ. ಹಾಗೆಯೇ ಸಾಲದ ಅವಧಿ ಕಡಿಮೆಯಿದ್ದರೆ ಬಡ್ಡಿ ಪಾವತಿ ಕೂಡ ಕಡಿಮೆಯಿರುತ್ತದೆ ಎಂಬುದು ನೆನಪಿರಲಿ.