ಹಿಂದುಜಾ ಗ್ರೂಪ್‌ನ ಸಂಸ್ಥಾಪಕ ಮತ್ತು ಹಿಂದುಜಾ ಕುಟುಂಬದ ಮುಖ್ಯಸ್ಥರಾದ ಪಿ ಡಿ ಹಿಂದೂಜಾ ಅವರ ಹಿರಿಯ ಪುತ್ರ ಶ್ರೀಚಂದ್ ಪಿ ಹಿಂದುಜಾ ಅವರು 87 ನೇ ವಯಸ್ಸಿನಲ್ಲಿ ಇಂಗ್ಲೆಂಡ್‌ನ ಲಂಡನ್‌ನಲ್ಲಿ ನಿಧನರಾದರು ಎಂದು ಕುಟುಂಬದ ವಕ್ತಾರರು ತಿಳಿಸಿದ್ದಾರೆ. 

ಲಂಡನ್‌ (ಮೇ.17): ತಮ್ಮ ಬ್ಯುಸಿನೆಸ್‌ ಪಾರ್ಟ್‌ನರ್‌ ಹಾಗೂ ಆತ್ಮೀಯ ಸ್ನೇಹಿತರಿಂದ 'ಎಸ್‌ಪಿ' ಎಂದೇ ಗುರುತಿಸಿಕೊಂಡಿದ್ದ, ಹಿಂದೂಜಾ ಗ್ರೂಪ್‌ನ ಸಂಸ್ಥಾಪಕ ಮತ್ತು ಹಿಂದೂಜಾ ಕುಟುಂಬದ ಮುಖ್ಯಸ್ಥ ಪಿ ಡಿ ಹಿಂದೂಜಾ ಅವರ ಹಿರಿಯ ಪುತ್ರ ಶ್ರೀಚಂದ್ ಪಿ ಹಿಂದುಜಾ ಅವರು 87 ನೇ ವಯಸ್ಸಿನಲ್ಲಿ ಲಂಡನ್‌ನಲ್ಲಿ ನಿಧನರಾದರು ಎಂದು ಕುಟುಂಬದ ವಕ್ತಾರರು ತಿಳಿಸಿದ್ದಾರೆ. ಕೆಲ ದಿನಗಳಿಂದ ಅವರು ಅಸ್ವಸ್ಥರಾಗಿದ್ದರು ಎಂದು ವರದಿ ತಿಳಿಸಿದೆ. ಗೋಪಿಚಂದ್, ಪ್ರಕಾಶ್, ಅಶೋಕ್ ಮತ್ತು ಇಡೀ ಹಿಂದೂಜಾ ಕುಟುಂಬವು ಇಂದು ನಮ್ಮ ಕುಟುಂಬದ ಹಿರಿಯರಾದ ಮತ್ತು ಹಿಂದೂಜಾ ಗ್ರೂಪ್‌ನ ಅಧ್ಯಕ್ಷ ಎಸ್‌ಪಿ ಹಿಂದುಜಾ ಅವರ ನಿಧನವನ್ನು ಘೋಷಿಸಲು ತೀವ್ರ ಹೃದಯದಿಂದ ವಿಷಾದಿಸುತ್ತೇವೆ ಎಂದು ಕುಟುಂಬದ ವಕ್ತಾರರು ತಿಳಿಸಿದ್ದಾರೆ. ದೇಶದಲ್ಲಿ ಸಾಕಷ್ಟು ಉದ್ಯೋಗಸೃಷ್ಟಿ ಮಾಡಿರುವ ಹಿಂದುಜಾ ಗ್ರೂಪ್‌ನ ಸಂಸ್ಥಾಪಕರಾದ ಪಿಡಿ ಹಿಂದುಜಾ ಅವರ ಹಿರಿಯ ಪುತ್ರರಾಗಿದ್ದ ಶ್ರೀಚಂದ್‌ ಪಿ ಹಿಂದುಜಾ, 1952ರಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಂಡ ಬಳಿಕ ತಮ್ಮ ತಂದೆಯ ಹಾಗೂ ಕುಟುಂಬದ ವ್ಯವಹಾರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಪಿಡಿ ಹಿಂದುಜಾ ನಿಧನರಾದ ಬಳಿಕ, ಇಡೀ ಹಿಂದುಜಾ ಕುಟುಂಬದ ಹಿರಿಯರೆನಿಸಿಕೊಂಡಿದ್ದ 'ಎಸ್‌ಪಿ', ಇಡೀ ಗ್ರೂಪ್‌ ಹಾಗೂ ದತ್ತಿ ಸಂಸ್ಥೆಗಳ ಚೇರ್ಮನ್‌ ಕೂಡ ಆಗಿದ್ದರು.

ಅವರ ಸಹೋದರರಾದ ಗೋಪಿಚಂದ್, ಪ್ರಕಾಶ್, ಮತ್ತು ಅಶೋಕ್ ಹಿಂದುಜಾ ಅವರೊಂದಿಗೆ ಎಸ್‌ಪಿ ಹಿಂದೂಜಾ ಗ್ರೂಪ್‌ನ ವೈವಿಧ್ಯೀಕರಣ ಮತ್ತು ವಿಸ್ತರಣೆಯಲ್ಲಿ ಮಹತ್ವದ ಪಾತ್ರ ವಹಿಸಿದರು. ಏಷ್ಯಾ, ಮಧ್ಯಪ್ರಾಚ್ಯ, ಯುರೋಪ್ ಮತ್ತು ಅಮೆರಿಕದಾದ್ಯಂತ ವಿವಿಧ ಆರ್ಥಿಕತೆಗಳಲ್ಲಿ ವರ್ಷಗಳ ವ್ಯವಹಾರ ಅನುಭವವನ್ನು ಪಡೆದಿರುವ ಎಸ್‌ಪಿ ಮೂಲಭೂತವಾಗಿ ಮುಕ್ತ ಮಾರುಕಟ್ಟೆ ಆರ್ಥಿಕತೆಯು ವಿವಿಧ ಸಂಸ್ಕೃತಿಗಳ ನಡುವೆ ಸಹಿಷ್ಣುತೆ ಮತ್ತು ತಿಳುವಳಿಕೆಯನ್ನು ಉತ್ತೇಜಿಸುತ್ತದೆ ಮತ್ತು ಅಂತಿಮವಾಗಿ ಮಾನವಕುಲಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ನಂಬಿದ್ದರು. ಅವರು ಪ್ರಮುಖ ಅನಿವಾಸಿ ಭಾರತೀಯ (NRI) ಉದ್ಯಮಿಯಾಗಿದ್ದರು ಮತ್ತು ಭಾರತದಲ್ಲಿ ಮೊದಲ ಹೊಸ-ಪೀಳಿಗೆಯ ಖಾಸಗಿ ಬ್ಯಾಂಕ್ ಇಂಡಸ್‌ಇಂಡ್ ಬ್ಯಾಂಕ್‌ನ ಉನ್ನತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಹಿಂದೂಜಾ ಗ್ರೂಪ್ ಬಹುರಾಷ್ಟ್ರೀಯ ಸಂಘಟಿತ ಸಂಸ್ಥೆಯಾಗಿದ್ದು, ನಾಲ್ಕು ಸಹೋದರರಿಂದ ನಿಯಂತ್ರಿಸಲ್ಪಟ್ಟಿದೆ. ಶ್ರೀಚಂದ್, ಗೋಪಿಚಂದ್, ಪ್ರಕಾಶ್ ಮತ್ತು ಅಶೋಕ್. $15.2 ಶತಕೋಟಿಯ ಒಟ್ಟು ನಿವ್ವಳ ಮೌಲ್ಯದ ಕಂಪನಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅವರ ಗುಂಪಿನ ವ್ಯಾಪಾರ ಕಾರ್ಯಾಚರಣೆಗಳಲ್ಲಿ ಟ್ರಕ್‌ಗಳು, ಲೂಬ್ರಿಕಂಟ್‌ಗಳು, ಬ್ಯಾಂಕಿಂಗ್ ಮತ್ತು ಕೇಬಲ್ ಟೆಲಿವಿಷನ್ ಸೇರಿವೆ. ಅವರು ರಾಫೆಲ್ಸ್ ಹೋಟೆಲ್ ಆಗಲು ಸಿದ್ಧವಾಗಿರುವ ಓಲ್ಡ್ ವಾರ್ ಆಫೀಸ್ ಕಟ್ಟಡ ಸೇರಿದಂತೆ ಲಂಡನ್‌ನಲ್ಲಿ ಬೆಲೆಬಾಳುವ ರಿಯಲ್ ಎಸ್ಟೇಟ್ ಅನ್ನು ಹೊಂದಿದ್ದಾರೆ. ಶ್ರೀಚಂದ್ ಮತ್ತು ಗೋಪಿಚಂದ್ ಲಂಡನ್‌ನಲ್ಲಿ ನೆಲೆಸಿದ್ದರೆ, ಪ್ರಕಾಶ್ ಮೊನಾಕೊದಲ್ಲಿ ನೆಲೆಸಿದ್ದಾರೆ ಮತ್ತು ಕಿರಿಯ ಸಹೋದರ ಅಶೋಕ್ ಮುಂಬೈನಿಂದ ಗುಂಪಿನ ಭಾರತೀಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ.

Scroll to load tweet…

1 ಲಕ್ಷ ಕೋಟಿ ರೂ. ಆಸ್ತಿ ಹಂಚಿಕೆಗೆ ಹಿಂದೂಜಾ ಸೋದರರ ನಿರ್ಧಾರ

ಎಸ್‌ಪಿ ಹಿಂದುಜಾ ಮತ್ತು ಅವರ ಸಹೋದರರಾದ ಗೋಪಿಚಂದ್ ಮತ್ತು ಪ್ರಕಾಶ್ ಅವರು ಸ್ವೀಡಿಷ್ ಬಂದೂಕು ತಯಾರಕ ಎಬಿ ಬೋಫೋರ್ಸ್‌ಗೆ ಭಾರತ ಸರ್ಕಾರದೊಂದಿಗೆ ಒಪ್ಪಂದವನ್ನು ಪಡೆಯುವಲ್ಲಿ ಸಹಾಯ ಮಾಡಲು ಸುಮಾರು ಎಸ್‌ಇಕೆ 81 ಮಿಲಿಯನ್ ಕಾನೂನುಬಾಹಿರ ಕಮಿಷನ್‌ಗಳನ್ನು ಸ್ವೀಕರಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ನ್ಯಾಯಾಲಯವು ಈ ಆರೋಪದಿಂದ ಕುಟುಂಬವನ್ನು ಖುಲಾಸೆ ಮಾಡಿತ್ತು.

ಬ್ರಿಟನ್‌ನ ನಂ.1, 2 ಶ್ರೀಮಂತರಿಬ್ಬರೂ ಭಾರತೀಯರೇ!