ಲಂಡನ್‌[ಮೇ.13]: ಸಂಡೇ ಟೈಮ್ಸ್‌ ಪ್ರಕಟಿಸುವ ಬ್ರಿಟನ್‌ನ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಎರಡೂ ಸ್ಥಾನಗಳು ಭಾರತೀಯ ಮೂಲದವರಿಗೆ ಸಂದಿದೆ.

ಪಟ್ಟಿಯಲ್ಲಿ 2 ಶತಕೋಟಿ ರು.(22 ಶತಕೋಟಿ ಪೌಂಡ್‌) ಸಂಪತ್ತಿನೊಂದಿಗೆ ಹಿಂದೂಜಾ ಸೋದರರು ಮೊದಲ ಸ್ಥಾನದಲ್ಲಿದ್ದರೆ, 1.6 ಲಕ್ಷ ಕೋಟಿ ರು. (18.66 ಶತಕೋಟಿ ಪೌಂಡ) ಸಂಪತ್ತಿನೊಂದಿಗೆ ಮುಂಬೈ ಮೂಲದ ರ್ಯುಬೆನ್‌ ಸೋದರರು 2ನೇ ಸ್ಥಾನದಲ್ಲಿದ್ದಾರೆ. ಇನ್ನೋರ್ವ ಭಾರತೀಯ ಮೂಲದ ಉದ್ಯಮಿ ಲಕ್ಷ್ಮೇ ನಿವಾಸ್‌ ಮಿತ್ತಲ್‌ ಕಳೆದ ವರ್ಷದ 5ನೇ ಸ್ಥಾನದಿಂದ ಈ ವರ್ಷ 11ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಅನಿಲ್‌ ಅಗರ್‌ವಾಲ್‌ 12ನೇ ಸ್ಥಾನದಲ್ಲಿದ್ದಾರೆ. ಶ್ರೀಚಂದ್‌, ಪ್ರಕಾಶ್‌ ಮತ್ತು ಅಶೋಕ್‌ ಹಿಂದೂಜಾ ಸೋದರರು ಬ್ರಿಟನ್‌ನಲ್ಲಿ 50ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದ್ದಾರೆ. ಇನ್ನು ಮುಂಬೈ ಮೂಲದ ಡೇವಿಡ್‌ ಮತ್ತು ಸಿಮೋನ್‌ ರ್ಯುಬೆನ್‌ ಸೋದರರು ರಿಯಲ್‌ ಎಸ್ಟೇಟ್‌ ಸೇರಿದಂತೆ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.