ಮುಖೇಶ್ ಅಂಬಾನಿ ಮಕ್ಕಳಿಗೆ ಬಾಲ್ಯದಲ್ಲಿ ಸಿಗುತ್ತಿದ್ದ ಪಾಕೆಟ್ ಮನಿ ವಾರಕ್ಕೆ 5ರೂ. ಅಷ್ಟೇ!
ಮುಖೇಶ್ ಅಂಬಾನಿ ಮಕ್ಕಳು ಶಾಲಾ ದಿನಗಳಲ್ಲಿ ಕೂಡ ಕೈ ತುಂಬಾ ಪಾಕೆಟ್ ಮನಿ ಪಡೆದು ಮೋಜು-ಮಸ್ತಿನ ಜೀವನ ನಡೆಸುತ್ತಿದ್ದರು ಎಂದು ನೀವು ಭಾವಿಸಿದ್ದರೆ, ಖಂಡಿತಾ ತಪ್ಪು. ನೀತಾ ಅಂಬಾನಿ ಬಾಲ್ಯದಲ್ಲಿ ತಮ್ಮ ಮಕ್ಕಳಿಗೆ ನೀಡುತ್ತಿದ್ದ ಪಾಕೆಟ್ ಮನಿ ಕೇವಲ 5ರೂ. ಮಾತ್ರ.
Business Desk:ನಮ್ಮ ದೇಶದಲ್ಲಿ ಶ್ರೀಮಂತ ಕುಟುಂಬ ಎಂದ ತಕ್ಷಣ ನೆನಪಾಗೋದೆ ಅಂಬಾನಿ ಕುಟುಂಬ. ಐಷಾರಾಮಿ ಬಂಗಲೆ, ವೈಭವದ ಜೀವನಶೈಲಿ , ಪ್ರತಿ ಕೆಲಸಕ್ಕೂ ಆಳುಗಳು. ಜೀವನ ಅಂದ್ರೆ ಹೀಗಿರಬೇಕು ಎಂದು ಎಷ್ಟೋ ಜನ ಇವರನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಾರೆ ಕೂಡ. ಇಂಥ ಕುಟುಂಬದಲ್ಲಿ ಹುಟ್ಟಿದ ಮಕ್ಕಳಿಗೆ ಎಲ್ಲ ವೈಭೋಗ, ಸವಲತ್ತುಗಳು ಸಿಗುತ್ತವೆ ಎಂಬ ನಂಬಿಕೆ ಸಾಮಾನ್ಯ ಜನರಲ್ಲಿರುತ್ತದೆ. ಇದೇ ಕಾರಣಕ್ಕೆ ಶ್ರೀಮಂತರ ಮನೆಯ ಮಕ್ಕಳನ್ನು ನೋಡಿದ ತಕ್ಷಣ ಇವರು ಹುಟ್ಟುವಾಗಲೇ ಬಾಯಲ್ಲಿ ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿದ್ದಾರೆ ಎನ್ನುತ್ತಾರೆ. ಹಾಗಾದ್ರೆ ಭಾರತದ ಶ್ರೀಮಂತ ಉದ್ಯಮಿ ಅನಿಸಿಕೊಂಡಿರುವ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಮಕ್ಕಳು ಕೂಡ ಬಾಲ್ಯದಲ್ಲಿ ಬೇಕಾದಷ್ಟು ಪಾಕೆಟ್ ಮನಿ ಪಡೆದುಕೊಂಡು ಮೋಜು ಮಸ್ತಿ ಮಾಡಿಕೊಂಡಿರುತ್ತಾರೆ ಎಮದು ನೀವು ಭಾವಿಸಿದ್ರೆ ತಪ್ಪು. ಹಾಗಾದ್ರೆ ಇಶಾ,ಆಕಾಶ್ ಹಾಗೂ ಅನಂತ್ ಅಂಬಾನಿಗೆ ಬಾಲ್ಯದಲ್ಲಿ ಎಷ್ಟು ಪಾಕೆಟ್ ಮನಿ ಸಿಗುತ್ತದೆ? ಸಾವಿರಾರು ರೂಪಾಯಿ ಕೊಡ್ತಾರೆ ಎಂದು ಭಾವಿಸಿದ್ರೆ ತಪ್ಪು. ಅವರಿಗೆ ಸಿಗುತ್ತಿದ್ದದ್ದು ಬರೀ 5ರೂ. ಪಾಕೆಟ್ ಮನಿ! ನಂಬಲು ಅಸಾಧ್ಯವಾದ್ರೂ ಸತ್ಯ. ಈ ವಿಷಯವನ್ನು ಸ್ವತಃ ನೀತಾ ಅಂಬಾನಿ ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
2011ರಲ್ಲಿ ನೀತಾ ಅಂಬಾನಿ ಸಂದರ್ಶನವೊಂದರಲ್ಲಿ ತಮ್ಮ ಮಕ್ಕಳಿಗೆ ನೀಡುತ್ತಿದ್ದ ಪಾಕೆಟ್ ಮನಿ ಬಗ್ಗೆ ಮಾತನಾಡಿದ್ದರು. 'ನನ್ನ ಮಕ್ಕಳು ಚಿಕ್ಕವರಿರುವಾಗ ನಾವು ಅವರಿಗೆ ಪ್ರತಿ ಶುಕ್ರವಾರ ಶಾಲೆಯ ಕ್ಯಾಂಟೀನ್ ನಲ್ಲಿಏನಾದ್ರೂ ತಿನ್ನಲು 5ರೂ. ನೀಡುತ್ತಿದ್ದೆವು. ಒಂದು ದಿನ ನನ್ನ ಕಿರಿಯ ಮಗ ಅನಂತ್, ನನ್ನ ಬೆಡ್ ರೂಮ್ ಗೆ ಓಡುತ್ತ ಬಂದಿದ್ದ ಹಾಗೂ 10ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ ಎಂಬ ವಿಚಾರವನ್ನು ಕೂಡ ತಿಳಿಸಿದ್ದರು. 10ರೂ. ಏಕೆ ಬೇಕು ಎಂದು ಮಗನನ್ನು ಪ್ರಶ್ನಿಸಿದಾಗ ಸ್ನೇಹಿತರು ನನ್ನನ್ನು ನೋಡಿ ಗೇಲಿ ಮಾಡುತ್ತಾರೆ ಎಂದು ಹೇಳಿದ್ದ. ಅಷ್ಟೇ ಅಲ್ಲ, ಕ್ಯಾಂಟೀನ್ ನಲ್ಲಿ ನಾನು ಕಿಸೆಯಿಂದ 5ಊ. ನಾಣ್ಯ ತೆಗೆಯೋದನ್ನು ನೋಡಿ 'ನೀನು ಅಂಬಾನಿಯಾ ಅಥವಾ ಬಿಕಾರಿಯಾ' ಎಂದು ಚುಡಾಯಿಸುತ್ತಿದ್ದರು ಎಂದು ಹೇಳಿದ್ದ. ಆತನ ಮಾತುಗಳನ್ನು ಕೇಳಿ ನಾನು ಹಾಗೂ ಮುಖೇಶ್ ಜೋರಾಗಿ ನಕ್ಕು ಬಿಟ್ಟಿದ್ದೆವು ಎಂದು ನೀತಾ ಅಂಬಾನಿ ಹಳೆಯ ಘಟನೆಯನ್ನು ಮೆಲುಕು ಹಾಕಿದ್ದರು.
ಮುಖೇಶ್ ಅಂಬಾನಿ ನಿವಾಸ ಆಂಟಿಲಿಯಾದ ಪ್ಲಂಬರ್ ವೇತನ ಕೇಳಿದ್ರೆ ಶಾಕ್ ಆಗ್ತೀರಾ!
ಇನ್ಫೋಸಿಸ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಕೂಡ ತಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಹೆಚ್ಚು ಪಾಕೆಟ್ ಮನಿ ಕೊಡುತ್ತಿರಲಿಲ್ಲ. ಹಾಗೆಯೇ ಅವರ ಹುಟ್ಟುಹಬ್ಬಗಳನ್ನು ಅತ್ಯಂತ ಸರಳವಾಗಿ ಆಚರಿಸುತ್ತಿದ್ದೆ ಎಂಬ ಬಗ್ಗೆ ಅನೇಕ ಸಂದರ್ಭಗಳಲ್ಲಿ ಹೇಳಿಕೊಂಡಿದ್ದರು. ಅದೆಷ್ಟೇ ಶ್ರೀಮಂತಿಕೆಯಿದ್ದರೂ ಮಕ್ಕಳಿಗೆ ಬಾಲ್ಯದಲ್ಲಿ ಹಣದ ಮಹತ್ವ ತಿಳಿಸೋದು ಅಗತ್ಯ ಎಂಬುದು ಈ ಇಬ್ಬರೂ ಶ್ರೀಮಂತ ಅಮ್ಮಂದಿರ ಉದ್ದೇಶವಾಗಿತ್ತು.
ಅಂಬಾನಿ ಕುಟುಂಬದ ಈ ಯಶಸ್ವಿ ಮಹಿಳಾ ಉದ್ಯಮಿ ಬಗ್ಗೆ ನಿಮ್ಗೆ ಗೊತ್ತಾ? ಈಕೆ 68,000 ಕೋಟಿ ರೂ. ಮೌಲ್ಯದ ಕಂಪನಿ ಒಡತಿ!
ಮುಖೇಶ್ ಅಂಬಾನಿ ಅವರನ್ನು ಮದುವೆಯಾಗೋದಕ್ಕೂ ಮುನ್ನ ನೀತಾ ಅಂಬಾನಿ ಶಿಕ್ಷಕಿಯಾಗಲು ಬಯಸಿದ್ದರಂತೆ. ಆದರೆ, ಮದುವೆ ಬಳಿಕ ಅವರು ತಮ್ಮ ಈ ಕನಸನ್ನು ತ್ಯಾಗ ಮಾಡಿ ಇಡೀ ಕುಟುಂಬದ ಜವಾಬ್ದಾರಿ ವಹಿಸಿಕೊಂಡರು. ನೀತಾ ಅಂಬಾನಿ ಬಾಲ್ಯದಲ್ಲಿ ಅವರನ್ನು ತಾಯಿ ಹೇಗೆ ಶಿಸ್ತಿನಿಂದ ಬೆಳೆಸಿದ್ದರು ಎಂಬುದರ ಬಗ್ಗೆಯೂ ಈ ಹಿಂದೆ ಮಾತನಾಡಿದ್ದರು. ಅವರ ತಾಯಿ ಕೂಡ ಅತ್ಯಂತ ಶಿಸ್ತಿನಿಂದ ಮಕ್ಕಳನ್ನು ಬೆಳೆಸಿದ್ದರು ಎಂಬುದನ್ನು ಅವರು ಸ್ಮರಿಸಿಕೊಂಡಿದ್ದರು. ವರ್ಷದಲ್ಲಿ ಕೇವಲ ನಾಲ್ಕು ಬಾರಿ ಮಾತ್ರ ಮಗೆ ಮನೆಯಿಂದ ಹೊರಗೆ ಎಲ್ಲದರೂ ಕರೆದುಕೊಂಡು ಹೋಗುತ್ತಿದ್ದರು. ನಮಗೆ ಯಾವುದೇ ಪಾಕೆಟ್ ಮನಿ ನೀಡುತ್ತಿರಲಿಲ್ಲ ಎಂದು ನೀತಾ ಅಂಬಾನಿ ಹೇಳಿದ್ದರು.