ಮುಖೇಶ್ ಅಂಬಾನಿ ನಿವಾಸ ಆಂಟಿಲಿಯಾದ ಪ್ಲಂಬರ್ ವೇತನ ಕೇಳಿದ್ರೆ ಶಾಕ್ ಆಗ್ತೀರಾ!

ಮುಖೇಶ್ ಅಂಬಾನಿ ಅವರ ಐಷಾರಾಮಿ ಬಂಗಲೆ ಆಂಟಿಲಿಯಾ ಆಗಾಗ ಸುದ್ದಿ ಮಾಡುತ್ತಲೇ ಇರುತ್ತದೆ. ಈ ಮನೆಯ ನಿರ್ವಹಣೆಗೆ ನೂರಾರು ಸಿಬ್ಬಂದಿ ಇದ್ದು, ಕೆಲವರು ತಿಂಗಳಿಗೆ ಲಕ್ಷಾಂತರ ರೂಪಾಯಿ ವೇತನ ಪಡೆಯುತ್ತಿದ್ದಾರೆ. ಅಂಬಾನಿ ಮನೆ ಪ್ಲಂಬರ್ ತಿಂಗಳಿಗೆ 2ಲಕ್ಷ ರೂ. ವೇತನ ಪಡೆಯುತ್ತಾನೆ ಎಂದು ವರದಿಯೊಂದು ಹೇಳಿದೆ. 

Here is How Much Antilias Plumber Earns Every Month According To Information Available On Internet anu

Business Desk:ಅಂಬಾನಿ ಕುಟುಂಬದ ಐಷಾರಾಮಿ ಜೀವನಶೈಲಿ ಆಗಾಗ ಸುದ್ದಿಯಾಗುಲೇ ಇರುತ್ತದೆ. ಮುಖೇಶ್ ಅಂಬಾನಿ ಕುಟುಂಬ ವಾಸಿಸುವ ಮುಂಬೈನ ನಿವಾಸ ಆಂಟಿಲಿಯಾ ಸದಾ ಒಂದಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಈ ಮನೆಯಲ್ಲಿ ತಿಂಗಳ ಹಿಂದೆ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ನಿಶ್ಚಿತಾರ್ಥದ ಬಳಿಕ ಈ ಮನೆಯಲ್ಲಿ ಗಣ್ಯರಿಗೆ ಪಾರ್ಟಿ ಆಯೋಜಿಸಲಾಗಿತ್ತು. ಈ ಮನೆಯಲ್ಲೇ ಅಂಬಾನಿ ಕುಟುಂಬ ಅದ್ದೂರಿ ಪಾರ್ಟಿಗಳನ್ನು ಆಯೋಜಿಸುತ್ತದೆ. ಇನ್ನು ಈ ಮನೆಯಲ್ಲಿ ಪ್ರತಿದಿನ  24 ಗಂಟೆಗಳ ಕಾಲ 600 ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಅಡುಗೆ ಮಾಡುವವರು, ಸೇವಕರು, ತೋಟಗಾರರು, ಎಲೆಕ್ಟ್ರಿಷಿಯನ್‌ಗಳು, ಸೆಕ್ಯುರಿಟಿ ಗಾರ್ಡ್‌ಗಳು, ಪ್ಲಂಬರ್‌ಗಳು, ಚಾಲಕರು ಹೀಗೆ ಎಲ್ಲರೂ ಇದ್ದಾರೆ. ಈ ಎಲ್ಲ ಸಿಬ್ಬಂದಿಯೂ ಅಂಬಾನಿ ಕುಟುಂಬ ಸದಸ್ಯರಂತೆಯೇ ಈ ಮನೆಯಲ್ಲಿದ್ದಾರೆ. ಈ ವಿಚಾರವನ್ನು ಅನೇಕ ಬಾರಿ ನೀತಾ ಅಂಬಾನಿ ಕೂಡ ಹೇಳಿಕೊಂಡಿದ್ದಾರೆ. ಆಂಟಿಲಿಯಾದಲ್ಲಿ ಕಾರ್ಯನಿರ್ವಹಿಸುವ ಪ್ರತಿ ಸಿಬ್ಬಂದಿಯೂ ಕುಟುಂಬದ ಸದಸ್ಯರಂತೆಯೇ ಇರುತ್ತಾರೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಬಂದ ವರದಿ ಪ್ರಕಾರ ಆಂಟಿಲಿಯಾದಲ್ಲಿ ಕಾರ್ಯನಿರ್ವಹಿಸುವ ಕೆಲವು ಸಿಬ್ಬಂದಿಗೆ ತಿಂಗಳಿಗೆ 2ಲಕ್ಷ ರೂ.ತನಕ ವೇತನವಿದೆ. ಅವರ ಮನೆಯ ಪ್ಲಂಬರ್ ಕೂಡ ಪ್ರತಿ ತಿಂಗಳು ಇಷ್ಟೇ ಮೊತ್ತದ ಗೌರವಧನ ಪಡೆಯುತ್ತಾನೆ ಎಂದು ಹೇಳಲಾಗಿದೆ.

ಅಂಬಾನಿ ಮನೆಯ ಸಿಬ್ಬಂದಿಗೆ ವೇತನದ ಜೊತೆಗೆ ವೈದ್ಯಕೀಯ ಹಾಗೂ ಮಕ್ಕಳ ಶೈಕ್ಷಣಿಕ ಭತ್ಯೆಯನ್ನು ಕೂಡ ನೀಡಲಾಗುತ್ತದೆ. ಆಂಟಿಲಿಯಾದ ಒಳಾಂಗಣ ವಿನ್ಯಾಸ ಕೂಡ ವಿಭಿನ್ನವಾಗಿದೆ. ಅಲ್ಲದೆ, ಇದು ವಿಶ್ವ ದರ್ಜೆಯ ಪೈಪ್ ಲೈನ್ ಹಾಗೂ ಡ್ರೈನೇಜ್ ವ್ಯವಸ್ಥೆ ಹೊಂದಿದೆ. ಹೀಗಾಗಿ ವಾಷ್ ರೂಮ್ ಫಿಟ್ಟಿಂಗ್ಸ್ ಹಾಗೂ ಇತರ ನಿರ್ವಹಣೆಗೆ ನಿಯಮಿತವಾಗಿ ಪ್ಲಂಬರ್ ನೆರವು ಬೇಕಿರುತ್ತದೆ. ಹೀಗಾಗಿ ಪ್ಲಂಬರ್ ಸಿಬ್ಬಂದಿ ಆಂಟಿಲಿಯಾದಲ್ಲಿ ಕಾಯಂ ಆಗಿ ಇರುತ್ತಾರೆ.

ಭಾರತದ ಶ್ರೀಮಂತ ಉದ್ಯಮಿಗಳು ಯಾವ ನಗರದಲ್ಲಿ ನೆಲೆಸಿದ್ದಾರೆ? ಅವರ ಐಷಾರಾಮಿ ಮನೆಗಳು ಹೇಗಿವೆ? ಇಲ್ಲಿದೆ ಮಾಹಿತಿ

ಆಂಟಿಲಿಯಾ ವಿಶ್ವದ ಐಷಾರಾಮಿ ಬಂಗಲೆಗಳಲ್ಲಿ ಒಂದಾಗಿದೆ. ಸುಮಾರು 4 ಲಕ್ಷ ಚದರ ಅಡಿಗಳಲ್ಲಿ ಈ ಮನೆಯನ್ನು ಸುಮಾರು 11 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.  27 ಅಂತಸ್ತಿನ ಈ ಬಂಗಲೆಯಲ್ಲಿ ದೇವಾಲಯ, ಗ್ಯಾರೇಜ್, ಮೂರು ಹೆಲಿಪ್ಯಾಡ್, ಥಿಯೇಟರ್, ಬಾರ್ ಎಲ್ಲವೂ ಇದೆ. ಆಂಟಿಲಿಯಾ ಒಳಗೆ ನಿರ್ಮಿಸಿರುವ ದೇವಾಲಯಕ್ಕೆ ಸಾಕಷ್ಟು ಸ್ಥಳ ನೀಡಲಾಗಿದೆ. ಇಡೀ ಒಂದು ಅಂತಸ್ತಿನಲ್ಲಿ ದೇವಾಲಯ ನಿರ್ಮಿಸಲಾಗಿದೆ. ಈ ದೇವಾಲಯದ ವಿಗ್ರಹ, ಬಾಗಿಲು ಎಲ್ಲವೂ ಚಿನ್ನ ಹಾಗೂ ಬೆಳ್ಳಿಯಿಂದ ಮಾಡಲ್ಪಟ್ಟಿವೆ. ಆಂಟಿಲಿಯಾ ತೆರೆದ ಆಕಾಶ ಮತ್ತು ಅರೇಬಿಯನ್ ಸಮುದ್ರದ ಅತ್ಯಂತ ಸುಂದರವಾದ ನೋಟವನ್ನು ಹೊಂದಿದೆ. 

ಆಂಟಿಲಿಯಾದ 6ನೇ ಮಹಡಿಯಲ್ಲಿ ಗ್ಯಾರೇಜ್ ಇದ್ದು, ಇದರಲ್ಲಿ ಸುಮಾರು 168 ಕಾರುಗಳನ್ನು ಏಕಕಾಲದಲ್ಲಿ ನಿಲ್ಲಿಸಬಹುದಾಗಿದೆ. ಈ ಕಾರುಗಳನ್ನು ಸರ್ವೀಸ್ ಮಾಡಲು 7ನೇ ಮಹಡಿಯಲ್ಲಿ ಸರ್ವೀಸ್ ಸ್ಟೇಷನ್ ಕೂಡ ಸ್ಥಾಪಿಸಲಾಗಿದೆ. ಈ ಮನೆಯಲ್ಲಿ 9 ಲಿಫ್ಟ್‌ಗಳಿವೆ. ಆಂಟಿಲಿಯಾದ 27ನೇ ಅಂತಸ್ತಿನಲ್ಲಿ ಅಂಬಾನಿ ಕುಟುಂಬ ವಾಸಿಸುತ್ತದೆ. ಸಾಕಷ್ಟು ಗಾಳಿ ಹಾಗೂ ಬೆಳಕು ಬೀಳಬೇಕು ಎಂಬ ಕಾರಣಕ್ಕೆ ಈ ಅಂತಸ್ತು ಆಯ್ಕೆ ಮಾಡಿರೋದಾಗಿ ಈ ಹಿಂದೆ ಸಂದರ್ಶನವೊಂದರಲ್ಲಿ ನೀತಾ ಅಂಬಾನಿ ತಿಳಿಸಿದ್ದರು. 

ಅಂಬಾನಿ ಕುಟುಂಬದ ಈ ಯಶಸ್ವಿ ಮಹಿಳಾ ಉದ್ಯಮಿ ಬಗ್ಗೆ ನಿಮ್ಗೆ ಗೊತ್ತಾ? ಈಕೆ 68,000 ಕೋಟಿ ರೂ. ಮೌಲ್ಯದ ಕಂಪನಿ ಒಡತಿ!

ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆ
ಆಂಟಿಲಿಯಾ ವಿರ್ಶವದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ. ಕೆಲವು ವರದಿಗಳ ಪ್ರಕಾರ ಪ್ರತಿ ತಿಂಗಳು ಆಂಟಿಲಿಯಾದ ನಿರ್ವಹಣೆಗೆ 2.5ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. 

ನಿರ್ಮಾಣಕ್ಕೆ ಏಳು ವರ್ಷ
ಆಂಟಿಲಿಯಾದ ನಿರ್ಮಾಣ ಕೆಲಸವನ್ನು 2004ರಲ್ಲಿ ಪ್ರಾರಂಭಿಸಲಾಗಿದ್ದು, 2010ರಲ್ಲಿ ಪೂರ್ಣಗೊಂಡಿತ್ತು. ಅಂದರೆ 7 ವರ್ಷ ಬೇಕಾಗಿತ್ತು. 2010ರಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರೂ ಅಂಬಾನಿ ಕುಟುಂಬ 2011ರ ಕೊನೆಯಲ್ಲಿ ಈ ಮನೆಗೆ ಶಿಫ್ಟ್ ಆಗಿದ್ದರು. 

Latest Videos
Follow Us:
Download App:
  • android
  • ios