Hello UPI ಇನ್ಮುಂದೆ ಮಾತಿನ ಮೂಲಕವೇ ಯುಪಿಐ ಪಾವತಿ ಮಾಡ್ಬಹುದು, ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

ದೇಶದಲ್ಲಿ ಯುಪಿಐ ಪಾವತಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಈ ಹಿನ್ನೆಲೆಯಲ್ಲಿ ಇದನ್ನು ಇನ್ನಷ್ಟು ಬಳಕೆದಾರರಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ಸೌಲಭ್ಯವೊಂದನ್ನು ಪರಿಚಯಿಸಲಾಗುತ್ತಿದೆ. ಅದೇ ಧ್ವನಿ ಆಧಾರಿತ ಪಾವತಿ. ಮಾತಿನ ಮೂಲಕ ಕಮಾಂಡ್ ನೀಡುವ ಮೂಲಕ ಯುಪಿಐ ಪಾವತಿ ಮಾಡಲು ಈ ಹೊಸ ಫೀಚರ್  ಅವಕಾಶ ನೀಡಲಿದೆ. 
 

Hello UPI How Conversational UPI Works All You Need To Know About Voice Based Payments anu

ನವದೆಹಲಿ (ಸೆ.12): ಭಾರತದಲ್ಲಿ ಯುಪಿಐ ಪಾವತಿ ವ್ಯವಸ್ಥೆ ಕ್ರಾಂತಿಯನ್ನೇ ಸೃಷ್ಟಿಸಿದೆ. ಯುಪಿಐ ವಹಿವಾಟುಗಳ ಪ್ರಮಾಣ ಹೆಚ್ಚುತ್ತಿರುವ ಬೆನ್ನಲ್ಲೇ ಹೊಸ ಫೀಚರ್ ವೊಂದನ್ನು ಶೀಘ್ರದಲ್ಲೇ ಯುಪಿಐ ಅಪ್ಲಿಕೇಷನ್ ಗೆ ಸೇರಿಸಲಾಗುತ್ತಿದೆ. ಅದೇ ಧ್ವನಿ ಆಧಾರಿತ ಯುಪಿಐ ಪಾವತಿ. ಇದರ ಮೂಲಕ ಬಳಕೆದಾರರು ಬರಹ (ಟೆಕ್ಸ್ಟ್ ) ಆಧಾರಿತ ಇನ್ ಪುಟ್ ಬದಲು ಧ್ವನಿ ಬಳಸಿ ಕಮಾಂಡ್ ಗಳನ್ನು ನೀಡುವ ಮೂಲಕ ಹಣವನ್ನು ಶೀಘ್ರದಲ್ಲಿ ವರ್ಗಾಯಿಸಬಹುದಾಗಿದೆ. ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಕಳೆದ ವಾರ ಮುಂಬೈಯಲ್ಲಿ ನಡೆದ ಜಾಗತಿಕ ಫಿನ್ ಟೆಕ್ ಹಬ್ಬದಲ್ಲಿ ಧ್ವನಿ ಕಮಾಂಡ್ ಮೂಲಕ ಹಣ ವರ್ಗಾವಣೆ ಮಾಡುವ ಯುಪಿಐ ವ್ಯವಸ್ಥೆ ಜಾರಿ ಬಗ್ಗೆ ಮಾಹಿತಿ ನೀಡಿದ್ದರು. ಈ ಧ್ವನಿ ಆಧಾರಿತ ಯುಪಿಐ ಹಣ ವರ್ಗಾವಣೆ ಸೌಲಭ್ಯ ಮೊಬೈಲ್ ಸೇರಿದಂತೆ ಡಿಜಿಟಲ್ ಬಳಕೆ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿಲ್ಲದವರಿಗೆ ಹಾಗೂ ಹಿರಿಯ ನಾಗರಿಕರಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಗಲಿದ. ಇನ್ಉ ಇಂಗ್ಲಿಷ್ ಭಾಷಾ ಜ್ಞಾನ ಹೊಂದಿಲ್ಲದೆ ಸ್ಥಳೀಯ ಭಾಷೆಗಳಲ್ಲಿ ನಿರ್ಗಳತೆ ಹೊಂದಿರೋರಿಗೆ ಕೂಡ ಈ ಹೊಸ ವ್ಯವಸ್ಥೆ ನೆರವು ನೀಡಲಿದೆ. 

ಹಲೋ ಯುಪಿಐ ಬಳಕೆ ಹೇಗೆ?
ಈ ಹೊಸ ಸೌಲಭ್ಯ ಬಳಸಿಕೊಂಡು ಬಳಕೆದಾರರು ಯುಪಿಐ ಅಪ್ಲಿಕೇಷನ್ ಗಳು, ಟೆಲಿಕಾಮ್ ಕಾಲ್ ಗಳು, ಹಿಂದಿ ಹಾಗೂ ಇಂಗ್ಲಿಷ್  ಐಒಟಿ ಸಾಧನಗಳ ಮೂಲಕ ಧ್ವನಿ ಆಧಾರಿತ ಯುಪಿಐ ಪಾವತಿಗಳನ್ನು ಮಾಡಬಹುದು. ಈ ವ್ಯವಸ್ಥೆ ಶೀಘ್ರದಲ್ಲಿ ಇತರ ಅನೇಕ ಭಾಷೆಗಳಲ್ಲಿ ಕೂಡ ಲಭ್ಯವಾಗಲಿದೆ. ಈ ವ್ಯವಸ್ಥೆಯಲ್ಲಿ ಬಳಕೆದಾರರು ಹಣ ವರ್ಗಾವಣೆ ಮಾಡಲು ಹಾಗೂ ಯುಪಿಐ ಪಿನ್ ನಮೂದಿಸಲು ವಾಯ್ಸ್ ಕಮಾಂಡ್ ನೀಡಿದರೆ ಸಾಕು ವಹಿವಾಟು ಪೂರ್ಣಗೊಳ್ಳುತ್ತದೆ. ಐಐಟಿ ಮದ್ರಾಸ್ ಎ14 ಭಾರತ್ ಭಾಷಿನಿ ಪ್ರೋಗ್ರಾಮ್ ಸಹಭಾಗಿತ್ವದಲ್ಲಿ ಎನ್ ಪಿಸಿಐ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪಾವತಿ ಮಾಡೆಲ್ ಗಳನ್ನು ಸಿದ್ಧಪಡಿಸಿದೆ. ಎನ್ ಪಿಸಿಐ ನೀಡಿರುವ ಮಾಹಿತಿ ಪ್ರಕಾರ ಪ್ರತಿ ವರ್ಷ ಧ್ವನಿ ಆಧಾರಿತ ಹುಡುಕುವಿಕೆ ( Voice search) ಪ್ರಮಾಣದಲ್ಲಿ ಏರಿಕೆಯಾಗಿದ್ದು, ಪ್ರತಿವರ್ಷ ಶೇ.270ರಷ್ಟು ಹೆಚ್ಚಳ ಕಂಡಿದೆ.

ಇಂಟರ್‌ನೆಟ್‌ ಇಲ್ಲದೆಯೂ ಸಲೀಸಾಗಿ ಯುಪಿಐ ಬಳಕೆ ಮಾಡಿ: ಆರ್‌ಬಿಐ ಪರಿಚಯಿಸಿದ ಈ ಹೊಸ ವೈಶಿಷ್ಟ್ಯ ಹೀಗಿದೆ ನೋಡಿ..

ಎರಡು ವಿಧಾನಗಳಲ್ಲಿ ಲಭ್ಯ
ಯುಪಿಐಯಲ್ಲಿ ಧ್ವನಿ ಆಧಾರಿತ ವರ್ಗಾವಣೆ ವ್ಯವಸ್ಥೆ ಎರಡು ವಿಧದಲ್ಲಿ ಲಭ್ಯವಾಗಲಿದೆ. ಒಂದು ಆನ್ ಕಾಲ್ (on-call) ಅಂದರೆ ವಾಯ್ಸ್ ಕಾಲ್ ಮೂಲಕ. ಇನ್ನೊಂದು ಇನ್ ಆಪ್ ಅಂದರೆ ಯುಪಿಐ ಅಪ್ಲಿಕೇಷನ್ ಮೂಲಕ.

ಆನ್ ಕಾಲ್: ಈ ವ್ಯವಸ್ಥೆಯಲ್ಲಿ ಬಳಕೆದಾರರು ಒಂದು ಸಂಖ್ಯೆ ಡಯಲ್ ಮಾಡಬೇಕು. ಆಗ ಅವರಿಗೆ ಪಾವತಿ ಪ್ರಕ್ರಿಯೆ ಪೂರ್ಣಗೊಳಿಸಲು ಐವಿಆರ್ ಮೂಲಕ ಮಾರ್ಗದರ್ಶನ ನೀಡಲಾಗುತ್ತದೆ. 
ಇನ್ ಆಪ್ : ಈ ವ್ಯವಸ್ಥೆಯಲ್ಲಿ ಪಾವತಿ ಮಾಡಲು ಬಳಕೆದಾರರು ಇನ್ ವಾಯ್ಸ್ ಇನ್ ಪುಟ್ ಬಳಸಬೇಕು. ಈ ವ್ಯವಸ್ಥೆಯಲ್ಲಿ ನೀವು ಬಳಸುವ ಸಾಧನ ಧ್ವನಿ ಮೂಲಕ ಮಾಡಿದ ಮನವಿಯನ್ನು ಗುರುತಿಸಿ ಅದಕ್ಕೆ ಸ್ಪಂದಿಸುತ್ತದೆ. 

ಯುಪಿಐ ಎಟಿಎಂನಿಂದ ಹಣ ವಿತ್ ಡ್ರಾ ಮಾಡೋ ವಿಡಿಯೋ ಹಂಚಿಕೊಂಡ ಕೇಂದ್ರ ಸಚಿವ, ಭೇಷ್ ಎಂದ ನೆಟ್ಟಿಗರು!

ಈ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ?
*ಮೊದಲಿಗೆ ಮಾನವನ ಮಾತುಗಳನ್ನು ಡಿಜಿಟಲ್ ರೂಪಕ್ಕೆ ಬದಲಾಯಿಸಲಾಗುತ್ತದೆ.
*ಅಟೋಮ್ಯಾಟಿಕ್ ಆಗಿ ಮಾತನ್ನು ಗುರುತಿಸೋದು. ವಾಯ್ಸ್ ಇನ್ ಪುಟ್ ಅನ್ನು ಟೆಕ್ಸ್ಟ್ ರೂಪಕ್ಕೆ ಪರಿವರ್ತಿಸಲಾಗುತ್ತದೆ.
*ಎನ್ ಎಲ್ ಪಿ ಮಷಿನ್ ಭಾಷಾಂತರ. ವಾಯ್ಸ್ ಇನ್ ಪುಟ್ ಅನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಲಾಗುತ್ತದೆ.
*ಟೆಕ್ಸ್ಟ್ ಟು ಸ್ಪೀಚ್ : ಮಷಿನ್ ಬಳಕೆದಾರರ ಉದ್ದೇಶ ಅರಿತುಕೊಳ್ಳುತ್ತದೆ.
*ಬಳಕೆದಾರರ ಉದ್ದೇಶ ಅರಿತ ಬಳಿಕ ಬಳಕೆದಾರರ ಜೊತೆಗೆ ವಾಯ್ಸ್ ಔಟ್ ಪುಟ್ ಶೇರ್ ಮಾಡಲಾಗುತ್ತದೆ. 


 

Latest Videos
Follow Us:
Download App:
  • android
  • ios