Asianet Suvarna News Asianet Suvarna News

ಸಣ್ಣ ಕೈಗಾರಿಕೆ ಉಳಿಸಲು HDFC ಮತ್ತು ವೀಸಾ ಪಾಲುದಾರಿಕೆಯಲ್ಲಿ ವಿಮಾ ಪಾಲಿಸಿ

* ಎಚ್‍ಡಿಎಫ್‍ಸಿ ಎರ್ಗೋ ಮತ್ತು ವೀಸಾ ಪಾಲುದಾರಿಕೆಯಲ್ಲಿ ಹೊಸ ವಿಮಾ ಪಾಲಿಸಿಗಳು
* ಸಣ್ಣ ಕೈಗಾರಿಕೆಗಳನ್ನು ಗಮನದಲ್ಲಿ ಇಟ್ಟುಕೊಂಡು ರೂಪಣೆ
* ವೈಯಕ್ತಿಕ ಅಪಘಾತ ವಿಮಾ ಪಾಲಿಸಿಯೂ ಲಭ್ಯ

HDFC ERGO  And VISA insurance policy for MSME mah
Author
Bengaluru, First Published Jun 1, 2021, 6:55 PM IST

ಬೆಂಗಳೂರು( ಜೂ. 1) ಭಾರತದ ಪ್ರಮುಖ ಖಾಸಗಿ ವಲಯದ ವಿಮಾ ಕಂಪನಿ ಎಚ್‍ಡಿಎಫ್‍ಸಿ ಎರ್ಗೋ ಜನರಲ್ ಇನ್ಶುರೆನ್ಸ್ ಮತ್ತು  ವೀಸಾ ಪಾಲುದಾರಿಕೆ ಮಾಡಿಕೊಂಡಿವೆ. ವೀಸಾದ ಕಾರ್ಡುದಾರರಿಗೆ ಸಂಘಟಿತ ವಿಮಾ ರಕ್ಷಣೆ ನೀಡಲು ಮುಂದಾಗಿವೆ  ಬಿಸಿನೆಸ್ ಸುರಕ್ಷ ಕ್ಲಾಸಿಕ್ ಮತ್ತು  ಮೈ:ಕ್ರೆಡಿಟ್ ವೈಯಕ್ತಿಕ ಅಪಘಾತ ವಿಮೆಯನ್ನು ಕೊಡಮಾಡುತ್ತಿವೆ. 

1.    ಬಿಸಿನೆಸ್ ಸುರಕ್ಷ ಕ್ಲಾಸಿಕ್;
ಪಾಲಿಸಿಯು ಸಣ್ಣ ವ್ಯಾಪಾರಿಗಳು ಮತ್ತು ಅಂಗಡಿ ಮಾಲೀಕರಿಗೆ ಸ್ವಾಭಾವಿಕ  ಅಗ್ನಿ ದುರಂತವನ್ನು ಒಳಗೊಂಡಿರುತ್ತದೆ. ಬೆಂಕಿ ಅಪಘಾತಗಳು, ಪ್ರವಾಹ, ಭೂಕಂಪ, ದರೋಡೆ, ತಿಜೋರಿಯಲ್ಲಿಟ್ಟ ನಗದಿಗೆ ವಿಮೆ ಒದಗಿಸುತ್ತದೆ.

2.    ಮೈ:ಕ್ರೆಡಿಟ್ ವೈಯಕ್ತಿಕ ಅಪಘಾತ ಇನ್ಶುರೆನ್ಸ್ ಗ್ರೂಪ್ ಪಾಲಿಸಿ;
ಪ್ರಧಾನವಾಗಿ ಎರಡು ವಿಭಿನ್ನ ವಿಮಾ ಕೊಡುಗೆಗಳಾಗಿ ವಿಂಗಡಿಸಲಾಗಿದೆ, ಅವುಗಳೆಂದರೆ - ಅಪಘಾತ ರಕ್ಷಣೆ (ಆಕ್ಸಿಡೆಂಟ್ ಶೀಲ್ಡ್) ಮತ್ತು ಶಾಶ್ವತ ಅಂಗವೈಕಲ್ಯ ಯೋಜನೆ. ಅಪಘಾತ ರಕ್ಷಣೆ ಅಡಿಯಲ್ಲಿ, ವಿಮೆ ಮಾಡಿಸಿರುವ ವ್ಯಕ್ತಿಯು ಅಪಘಾತದಿಂದಾಗಿ ಗಾಯಗೊಂಡು, ನಂತರದ ಹನ್ನೆರಡು ತಿಂಗಳೊಳಗೆ ಅದೇ ಕಾರಣದಿಂದ ಮರಣ  ಹೊಂದಿದರೆ, ಆ ವ್ಯಕ್ತಿಗೆ (ಅಥವಾ ವ್ಯಕ್ತಿಯ ಕುಟುಂಬಕ್ಕೆ) ಮೊತ್ತವನ್ನು ನೀಡಲಾಗುತ್ತದೆ. ಒಂದು ವೇಳೆ ಅಪಘಾತದ ಕಾರಣದಿಂದ ವಿಮಾದಾರನು ಶಾಶ್ವತವಾಗಿ ಅಂಗವಿಕಲನಾದರೆ, ಯೋಜನೆಯಡಿಯಲ್ಲಿ ಖಾತರಿಪಡಿಸಿದ ಮೊತ್ತದ ಪ್ರಕಾರ ಶಾಶ್ವತ ಅಂಗವೈಕಲ್ಯ ಯೋಜನೆಯಡಿ ರಕ್ಷಣೆ ಒದಗಿಸಲಾಗುತ್ತದೆ.

ಪಾಲುದಾರಿಕೆಯ ಕುರಿತು ಮಾತನಾಡಿದ ಎಚ್‍ಡಿಎಫ್‍ಸಿ ಎರ್ಗೋ ಜನರಲ್ ಇನ್ಶುರೆನ್ಸ್ ಕಂಪನಿಯ ಬ್ಯಾಂಕಾಸ್ಯೂರೆನ್ಸ್ ಬಿಸಿನೆಸ್ ಅಧ್ಯಕ್ಷ  ಅಂಕುರ್ ಬಹೋರಿ,  ಸುರಕ್ಷತೆಗೆ ಮೊದಲ ಆದ್ಯತೆ ನೀಡಿದ್ದೇವೆ. ಇದು ಕಳ್ಳತನ, ಅನಿರೀಕ್ಷಿತ ಆರೋಗ್ಯ ಸಮಸ್ಯೆ ಎದುರಾದರೆ ಪಾಲಿಸಿ ನೆರವಾಗುತ್ತದೆ. ಕುಟುಂಬಕ್ಕೆ ರಕ್ಷಣೆ ಒದಗಿಸುತ್ತದೆ ಎಂದು ತಿಳಿಸಿದರು.

ವೀಸಾದ ಭಾರತ ಮತ್ತು ದಕ್ಷಿಣ ಏಷ್ಯಾದ ಬಿಸಿನೆಸ್ ಸೊಲ್ಯೂಷನ್ಸ್ ಮುಖ್ಯಸ್ಥ  ಮನೀಶ್ ದಾಸ್ವಾನಿ  ಮಾತನಾಡಿ, ಸಾಂಕ್ರಾಮಿಕ ರೋಗಗಳು ಸಣ್ಣ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ನಮ್ಮ ವೀಸಾ ಬಿಸಿನೆಸ್ ಕಾರ್ಡ್‍ದಾರರಿಗೆ ವಿಶೇಷ ವಿಮಾ ಪರಿಹಾರಗಳನ್ನು ತರಲು ಎಚ್‍ಡಿಎಫ್‍ಸಿ ಎರ್ಗೋ ಜೊತೆ ಒದಗಿಸಲಿದೆ. ಎಂಎಸ್‍ಎಂಇಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸೂಕ್ತ ಯೋಜನೆಗಳನ್ನು ತಯಾರಿಸಲಾಗಿದೆ. ವ್ಯವಹಾರಗಳ ಆರ್ಥಿಕ ಯೋಗಕ್ಷೇಮ ಮತ್ತು ಸುರಕ್ಷತೆಗೆ ಖಾತ್ರಿ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಕೊರೋನಾದಿಂದ ಅನಾಥರಾದ ಮಕ್ಕಳಿಗೆ ಕೇಂದ್ರದ ವಿಮಾ ಸುರಕ್ಷೆ

ಮೈ:ಕ್ರೆಡಿಟ್ ವೈಯಕ್ತಿಕ ಅಪಘಾತ ಪಾಲಿಸಿಯು ಒಟ್ಟು 1 ಕೋಟಿ ರೂ.ಗಳ ವಿಮೆ ಮೊತ್ತವನ್ನು ಒದಗಿಸುತ್ತದೆ, ಇದು 1 ವರ್ಷದ ಕಾಲಾವಧಿಗೆ ಮತ್ತು ವೈಯಕ್ತಿಕ ಕಾರ್ಡುದಾರರ ಕ್ರೆಡಿಟ್ ಮಿತಿಗೆ ಒಳಪಟ್ಟಿರುತ್ತದೆ.18 ರಿಂದ 60 ವರ್ಷದೊಳಗಿನ ವಯಸ್ಕರು ಈ ಯೋಜನೆ ಆರಿಸಿಕೊಳ್ಳಬಹುದು. 

ಎಚ್‍ಡಿಎಫ್‍ಸಿ ಎರ್ಗೋ ಒಂದು `ಡಿಜಿಟಲ್ ಪ್ರಥಮ' ವಿಮಾ ಕಂಪನಿಯಾಗಿದ್ದು, ತಂತ್ರಜ್ಞಾನದ ಮೇಲೆ ಪ್ರಭಾವ ಬೀರುವ ಕಂಪನಿಯು ವೀಸಾ ಗ್ರಾಹಕರಿಗೆ ವಿಶೇಷವಾದ ಪೋರ್ಟಲ್ ಅನ್ನು ತಯಾರು ಮಾಡಿದೆ. ಕೆಳಗಿನ ಲಿಂಕ್‍ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.
•    ಬಿಸಿನೆಸ್ ಸುರಕ್ಷ ಕ್ಲಾಸಿಕ್ 
•    ಮೈ:ಕ್ರೆಡಿಟ್ ವೈಯಕ್ತಿಕ ಅಪಘಾತ - ಸಮೂಹ 

 

"

Follow Us:
Download App:
  • android
  • ios