ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ಮಾಡಿದ್ದೀರಾ? ಕೊನೆ ಡೇಟ್ ಸಮೀಪಿಸುತ್ತಿದ್ದಂತೆ ಪೋರ್ಟಲ್ ಡೌನ್
ಇನ್ನೂ ಒಂದು ದಿನ ಬಾಕಿ ಇದೆ ಎಂದು ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ಮಾಡದೆ ಆರಾಮಾಗಿದ್ದೀರಾ? ಎಚ್ಚರ ಕಳೆದ 24 ಗಂಟೆಯಿಂದ ಜಿಎಸ್‌ಟಿ ಪೋರ್ಟಲ್ ಕಾರ್ಯನಿರ್ವಹಿಸುತ್ತಿಲ್ಲ. ಇತ್ತ ಗಡುವು ಸಮೀಪಿಸುತ್ತಿದೆ. ಇದೀಗ ಹಲವರು ಆತಂಕಗೊಂಡಿದ್ದಾರೆ.
ನವದೆಹಲಿ(ಜ.10) ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆಗೆ ಜೂನ್ 11 ಕೊನೆಯ ದಿನ. ಆದರೆ ಕಳೆದ 24 ಗಂಟೆಯಿಂದ ಜಿಎಸ್‌ಟಿ ಪೋರ್ಟಲ್ ಡೌನ್ ಆಗಿದೆ. ರಿಟರ್ನ್ಸ್ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಿಂಗಳ ಹಾಗೂ ಮೂರು ತಿಂಗಳ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ಮಾಡಲು ಕಳೆದೆರಡು ದಿನದಿಂದ ಹಲವು ಉದ್ಯಮಿಗಳು ಪ್ರಯತ್ನಿಸುತ್ತಿದ್ದಾರೆ. ಆದರೆ ಜಿಎಸ್‌ಟಿ ಪೋರ್ಟಲ್ ಡೌನ್ ಆಗಿರುವ ಹಿನ್ನಲೆಯಲ್ಲಿ ಸಾಧ್ಯವಾಗಿಲ್ಲ. ಇದೀಗ ಉದ್ಯಮಿಗಳು ಜೂನ್ 11ರ ಕೊನೆಯ ದಿನಾಂಕವನ್ನು ಕನಿಷ್ಠ ಜೂನ್ 13ರ ವರೆಗೆ ವಿಸ್ತರಿಸಲು ಮನವಿ ಮಾಡಿದ್ದಾರೆ.
ಜನವರಿ 9(ಗುರುವಾರ)ರಿಂದ ಜಿಎಸ್‌ಟಿ ಪೋರ್ಟಲ್ ಡೌನ್ ಆಗಿದೆ. ಹಲವು ಉದ್ಯಮಿಗಳು ತಿಂಗಳ ಹಾಗೂ ಕ್ವಾರ್ಟರ್ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ಬಾಕಿಯಾಗಿದೆ. ಉದ್ಯಮಿಗಳು ದಾಖಳೆ ಸಮೇತ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ಮಾಡಲು ಪೋರ್ಟಲ್ ಮೂಲಕ ಪ್ರಯತ್ನಿಸಿದ್ದಾರೆ. ಆದರೆ ತಾಂತ್ರಿಕ ಸಮಸ್ಯೆಯಿಂದ ಸಾಧ್ಯವಾಗಿಲ್ಲ. ಇದೇ ವೇಳೆ ಇತರ ಸೋಶಿಯಲ್ ಮೀಡಿಯಾ ಮೂಲಕ ಜಿಎಸ್‌ಟಿ ಪೋರ್ಟಲ್ ತಾಂತ್ರಿಕ ಸಮಸ್ಯೆ ಕುರಿತು ಮಾಹಿತಿ ನೀಡಿದ್ದಾರೆ. ಜನವರಿ 9 ರಂದು ಜಿಎಸ್‌ಟಿ ಅಧಿಕೃತ GSTN ಸೋಶಿಯಲ್ ಮೀಡಿಯಾ ಖಾತೆಯಿಂದ ಈ ಕುರಿತು ಟ್ವೀಟ್ ಮಾಡಲಾಗಿದೆ.
ಹೊಸ ವರ್ಷದಲ್ಲಿ ಹೊಸ ನಿಯಮ, ಜಿಎಸ್‌ಟಿ, ಮೊಬೈಲ್ ಶುಲ್ಕ, ವೀಸಾ ಸೇರಿ ಹಲವು ಬದಲಾವಣೆ!
ಜಿಎಸ್‌ಟಿ ಪೋರ್ಟಲ್ ಸದ್ಯ ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆ. ಸದ್ಯ ತಂತ್ರಜ್ಞರ ತಂಡ ಜಿಎಸ್‌ಟಿ ತಾಂತ್ರಿಕ ಸಮಸ್ಯೆ ಬಗೆ ಹರಿಸಲು ಕಾರ್ಯನಿರ್ವಹಿಸುತ್ತಿದೆ. ತಾಂತ್ರಿಕ ತಂಡ ನಿರ್ವಹಣೆ ಮಾಡುತ್ತಿರುವ ಕಾರಣ ಶೀಘ್ರದಲ್ಲೇ ಸಮಸ್ಯೆ ಪರಿಹಾರವಾಗಲಿದೆ. ಜೊತೆಗೆ ಅಡೆ ತಡೆ ಇಲ್ಲದೆ ಜಿಎಸ್‌ಟಿ ರಿಟರ್ಸನ್ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಇನ್ನು ಕಳೆದೊಂದು ದಿನದಿಂದ ಪೋರ್ಟಲ್ ಡೌನ್ ಕಾರಣ ಗಡುವು ವಿಸ್ತರಣೆಗೆ ಮಾಡಿರುವ CBIC ಮನವಿಯನ್ನು ರವಾನಿಸಲಾಗಿದೆ. ಈ ಕುರಿತು ಇಲಾಖೆ ಚರ್ಚಿಸುತ್ತಿದೆ ಎಂದು ಟ್ವೀಟ್ ಮಾಡಿದೆ.
ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ಗಡುವು ವಿಸ್ತರಣೆ ಸಾಧ್ಯತೆ
24 ಗಂಟೆಯಿಂದ ಜಿಎಸ್‌ಟಿ ಪೋರ್ಟಲ್ ಡೌನ್ ಆಗಿದೆ. ಹೀಗಾಗಿ ಹಲವು ಉದ್ಯಮಿಗಳ ರಿಟರ್ನ್ಸ್ ಸಲ್ಲಿಕೆ ಮಾಡಲು ಪರದಾಡಿದ್ದಾರೆ. ಈಗಾಗಲೇ ಒಂದು ದಿನ ಪೋರ್ಟಲ್ ಡೌನ್ ಕಾರಣದಿಂದ ಸಲ್ಲಿಕೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಉದ್ಯಮಿಗಳು ಗಡುವು ವಿಸ್ತರಿಸಲು ಮನವಿ ಮಾಡಿದ್ದರು. ಒಂದು ದಿನಕ್ಕೂ ಹೆಚ್ಚು ಕಾಲ ಪೋರ್ಟಲ್ ಡೌನ್ ಆಗಿದ್ದ ಕಾರಣ ಇದೀಗ ಗುಡುವ ವಿಸ್ತರಿಸುವ ಸಾಧ್ಯತೆ ಇದೆ. ಮೂಲಗಳ ಜನವರಿ 13ರ ವರೆಗೆ ಗಡುವು ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
GSTR-1 ಸಲ್ಲಿಕೆಗೆ ಯಾರು ಅರ್ಹರು?
GST ಪೋರ್ಟಲ್ ಮಾಹಿತಿ ಪ್ರಕಾರ GSTR-1 ಕ್ವಾರ್ಟರ್ ಫೈಲಿಂಗ್ ಮಾಡಲು ತೆರೆಗೆ ಪಾವತಿದಾರರ ವಾರ್ಷಿಕ ವಹಿವಾಟು ಕನಿಷ್ಠ 5 ಕೋಟಿ ರೂಪಾಯಿ ವರೆಗೆ ಇರಬೇಕು. ಇದು ಕರೆಂಟ್ ಫಿನಾಶಿಯಲ್ ಇರ್ ಹಾಗೂ ಪ್ರೆಸೀಡಿಂಗ್ ಫಿನಾನ್ಶಿಯಲ್ ವರ್ಷದ ವಹಿವಾಟು ಆಗಿಬೇಕು. ಹೀಗಿದ್ದ ಉದ್ಯಮಿಗಳು GSTR-1 ರಿಟರ್ನ್ಸ್‌ಗೆ ಸಲ್ಲಿಕೆ ಮಾಡಬಹುದು. ಈ ಮೂಲಕ ರಿಟರ್ನ್ಸ್ ಪಡೆಯಬಹುದು.
2019-20ರ ಸಾಲಿನ ಹಣಕಾಸು ವರ್ಷ ಹಾಗೂ ಪ್ರಸಕ್ತ ಹಣಕಾಸು ವರ್ಷದ ವಹಿವಾಟು 5 ಕೋಟಿವರೆಗೆ ಇದ್ದು, ಈ ತೆರಿಗೆದಾರರು GSTR-3B ಫಾರ್ಮ್ ಈಗಾಗಲೇ ಅಂದರೆ ನವೆಂಬರ್ 2020ರೊಳಗೆ ಸಲ್ಲಿಕೆ ಮಾಡಿದ್ದರೆ ಈ ತೆರಿಗೆದಾತರು QRMP ಯೋಜನೆ ಮೂಲಕ ಅರ್ಜಿ ಸಲ್ಲಿಕೆ ಮಾಡಬಗುದು. ಸದ್ಯ GSTR-1 ಅರ್ಜಿ ಸಲ್ಲಿಕಿಗೆ ಜನವರಿ 11 ಅಂತಿಮ ಗಡುವು ನೀಡಲಾಗಿತ್ತು.
ಕಾರು ಹಳೇದಾಯಿತು ಎಂದು ಮಾರಿದರೂ ಕಟ್ಟಬೇಕು ಶೇ.18ರಷ್ಟು ಜಿಎಸ್‌ಟಿ, ಹೊಸ ನೀತಿ!