Asianet Suvarna News Asianet Suvarna News

ನೀವು ಹಾಯಾಗಿರಿ ಜಿಎಸ್ ಟಿ ಟ್ಯಾಕ್ಸ್ ಇಳಿಯಲಿದೆ: ಗೋಯಲ್!

ಮತ್ತಷ್ಟು ಜಿಎಸ್ ಟಿ ಸರಕು ತೆರಿಗೆ ದರ ಕಡಿತ! ಆದಾಯ ಹೆಚ್ಚಾದರೆ ತೆರಿಗೆ ದರ ಕಡಿತ ಸಾಧ್ಯ! ಲೋಕಸಭೆಗೆ ಹಣಕಸು ಸಚಿವ ಗೋಯಲ್ ಮಾಹಿತಿ! ದೇಶದ ಅಭಿವೃದ್ಧಿ ನಿರೀಕ್ಷಿತ ಪ್ರಮಾಣಕ್ಕಿಂತ ಉತ್ತಮ

 

GST on more items to be slashed if revenue increases: Goyal
Author
Bengaluru, First Published Aug 11, 2018, 2:11 PM IST

ನವದೆಹಲಿ(ಆ.11): ಹೆಚ್ಚಿನ ತೆರಿಗೆ ಹೊರೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಜಿಎಸ್ ಟಿ ಮೂಲಕ ಕೇಂದ್ರ ಸರ್ಕಾರ ತುಸು ಸಮಾಧಾನ ನೀಡುವ ಕಾರ್ಯಕ್ಕೆ ಕೈ ಹಾಕಿದೆ.

ಜಿಎಸ್ ಟಿ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಗೋಯಲ್, ಸರ್ಕಾರದ ವರಮಾನ ಇತರ ಮೂಲಗಳಿಂದ ಹೆಚ್ಚಾಗುವ ಸಂಭವವಿದ್ದು, ಹಾಗಾದರೆ ಮತ್ತಷ್ಟು ಸರಕುಗಳ ಮೇಲಿನ ತೆರಿಗೆಯನ್ನು ಕಡಿತ ಮಾಡಲಾಗುವುದು ಎಂದು ತಿಳಿಸಿದರು.

ಕಳೆದ ವರ್ಷ ಜಿಎಸ್ ಟಿ ಕೌನ್ಸಿಲ್ 384 ಸರಕುಗಳು, 68 ಸೇವೆಗಳ ಮೇಲಿನ ತೆರಿಗೆ ದರವನ್ನು ಕಡಿಮೆ ಮಾಡಿತ್ತು. ಹಾಗೆಯೇ 186 ಸರಕುಗಳು, 99 ಸೇವೆಗಳನ್ನು ಜಿಎಸ್ ಟಿಯಿಂದ ಈಗಾಗಲೇ ವಿನಾಯಿತಿ ನೀಡಲಾಗಿದೆ. ಸ್ಯಾನಿಟರಿ ಪ್ಯಾಡ್ಸ್ ಸಹ ವಿನಾಯಿತಿ ಪಡೆದ ಸರಕುಗಳಲ್ಲಿ ಇವೆ ಎಂದು ಗೋಯಲ್ ಲೋಕಸಬೇಗೆ ಮಾಹಿತಿ ನೀಡಿದರು.

ದೇಶದ ಆರ್ಥಿಕ ಕೊರತೆಗೆ ಅನುಗುಣವಾಗಿ ಜಿಎಸ್ ಟಿ ಸಂಗ್ರಹಿಸಲಾಗುತ್ತಿದೆ. ನಿರೀಕ್ಷಿತ ಪ್ರಮಾಣಕ್ಕಿಂತ ಭಾರತದ ಅಭಿವೃದ್ಧಿ ಉತ್ತಮವಾಗಿದೆ. ಐಎಂಎಫ್ ಬಿಡುಗಡೆ ಮಾಡಿರುವ ವರದಿಯಲ್ಲೂ 2019-20ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಪ್ರಮಾಣ ಶೇ.7.5ರಷ್ಟು ಇರಲಿದೆ ಎಂದು ಅಂದಾಜಿಸಿದೆ ಎಂದು ಗೋಯಲ್ ತಿಳಿಸಿದರು. 

Follow Us:
Download App:
  • android
  • ios