Asianet Suvarna News Asianet Suvarna News

ದ್ವಿಚಕ್ರ ವಾಹನ ದರ ಭಾರೀ ಇಳಿಕೆ?

ದ್ವಿಚಕ್ರ ವಾಹನ ದರ ಭಾರೀ ಇಳಿಕೆ?| ಶೇ.28ರಷ್ಟು ತೆರಿಗೆ ಇಳಿಕೆ ಸೂಕ್ತವೆಂದ ಸಚಿವೆ ನಿರ್ಮಲಾ

GST Council may consider proposal to cut tax on two wheelers
Author
Bangalore, First Published Aug 26, 2020, 8:10 AM IST

ನವದೆಹಲಿ(ಆ.26): ಮುಂಬರುವ ದಿನಗಳಲ್ಲಿ ದ್ವಿಚಕ್ರ ವಾಹನಗಳ ದರದಲ್ಲಿ ಭಾರೀ ಇಳಿಕೆಯ ಸುಳವೊಂದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೀಡಿದ್ದಾರೆ.

ಮಂಗಳವಾರ ಭಾರತೀಯ ಕೈಗಾರಿಕಾ ಒಕ್ಕೂಟದ ಪ್ರತಿನಿಧಿಗಳ ಜೊತೆ ಸಭೆಯ ವೇಳೆ ದ್ವಿಚಕ್ರವಾಹನಗಳ ಮೇಲೆ ಶೇ.28ರಷ್ಟುಭಾರೀ ತೆರಿಗೆ ವಿಧಿಸಲಾಗುತ್ತಿದೆ. ಇದನ್ನು ಇಳಿಸಬೇಕು ಎಂದು ಹಣಕಾಸು ಸಚಿವರಿಗೆ ಸಲಹೆ ನೀಡಲಾಯಿತು.

ಇದನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಿದ ಸಚಿವೆ ನಿರ್ಮಲಾ, ದ್ವಿಚಕ್ರ ವಾಹನವು ಐಷಾರಾಮಿ ಅಥವಾ ತಂಬಾಕು ಸೇರಿದಂತೆ ಇನ್ನಿತರ ಕೆಡುಕು ಪದಾರ್ಥವಲ್ಲ. ಹೀಗಾಗಿ, ಇದೊಂದು ಉತ್ತಮ ಸಲಹೆಯಾಗಿದ್ದು, ಈ ಬಗ್ಗೆ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಜಿಎಸ್‌ಟಿ ತೆರಿಗೆ ದರ ಇಳಿಕೆ: 1.24 ಕೋಟಿ  ತೆರಿಗೆದಾರರು ಸೇರ್ಪಡೆ!

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಲ್ಲಿ ತೆರಿಗೆ ದರಗಳನ್ನು ಕಡಿತಗೊಳಿಸಿದ್ದರಿಂದ ಮೂಲ ತೆರಿಗೆದಾರರ ಸಂಖ್ಯೆ ಆರಂಭದಲ್ಲಿ ಇದ್ದ 65 ಲಕ್ಷದಿಂದ 1.24 ಕೋಟಿ ರು.ಗಳಿಗೆ ಏರಿಕೆ ಆಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಜಿಎಸ್‌ಟಿ ಜಾರಿಗೊಳಿಸಲು ಕಾರಣಕರ್ತರಾದ ಮಾಜಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಮೊದಲ ಪುಣ್ಯತಿಥಿಯ ಸ್ಮರಣಾರ್ಥ ಸರಣಿ ಟ್ವೀಟ್‌ ಮಾಡಿರುವ ಹಣಕಾಸು ಸಚಿವಾಲಯ, ಜಿಎಸ್‌ಟಿ ಮಂಡಳಿ ತೆರಿಗೆ ದರಗಳನ್ನು ಹಂತ ಹಂತವಾಗಿ ಕಡಿಮೆ ಮಾಡುವ ಮೂಲಕ ಹೆಚ್ಚಿನ ಜನರನ್ನು ತೆರಿಗೆ ವ್ಯಾಪ್ತಿಗೆ ಸೇರಿಸಿಕೊಂಡಿದೆ.

ಅತ್ಯಧಿಕ ಶೇ.28ರಷ್ಟುತೆರಿಗೆ ದರವನ್ನು ಕೇವಲ ಐಷಾರಾಮಿ ವಸ್ತುಗಳ ಮೇಲೆ ಮಾತ್ರ ಉಳಿಸಿಕೊಳ್ಳಲಾಗಿದೆ. ಶೇ.28ರಷ್ಟುತೆರಿಗೆ ಇದ್ದ 230 ವಸ್ತುಗಳ ಪೈಕಿ 200 ವಸ್ತುಗಳನ್ನು ಕೆಳಗಿನ ಸ್ತರಕ್ಕೆ ಇಳಿಸಲಾಗಿದೆ. ವಸತಿ ವಲಯವನ್ನು ಶೇ.5ರ ತೆರಿಗೆ ದರಲ್ಲಿ ತರಲಾಗಿದೆ. ಕೈಗೆಟುಕುವ ಮನೆಗಳ ಮೇಲಿನ ತೆರಿಗೆಯನ್ನು ಶೇ.1ಕ್ಕೆ ಇಳಿಕೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

Follow Us:
Download App:
  • android
  • ios