ಮತ್ತೆ ಬಂತು ಜಿಎಸ್ ಟಿ ತೆರಿಗೆ ವಿನಾಯಿತಿ| ಜಿಎಸ್ ಟಿ ಕೌನ್ಸಿಲ್ ಸಭೆಯಿಂದ ಮಹತ್ವದ ನಿರ್ಧಾರ| ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ ನೀಡಲಿರುವ ತೆರಿಗೆ ವಿನಾಯಿತಿ| ಮಹತ್ವದ ನಿರ್ಧಾರ ಪ್ರಕಟಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ

ನವದೆಹಲಿ(ಜ.10): ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಇಂದು ನಡೆದ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಉದ್ದಿಮೆದಾರರಿಗೆ ತೆರಿಗೆ ವಿನಾಯಿತಿ ಮಿತಿಯನ್ನು ದ್ವಿಗುಣಗೊಳಿಸಿದೆ.

ಜಿಎಸ್ ಟಿ ಕೌನ್ಸಿಲ್ ವಿನಾಯಿತಿ ಮಿತಿಯನ್ನು ಈಶಾನ್ಯ ರಾಜ್ಯಗಳಿಗೆ 20 ಲಕ್ಷ ರೂ. ಮತ್ತು ದೇಶದ ಉಳಿದ ಭಾಗಗಳಿಗೆ 40 ಲಕ್ಷ ರೂ. ಏರಿಕೆ ಮಾಡಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

Scroll to load tweet…

ಸಣ್ಣ ವ್ಯಾಪಾರಿಗಳು ಮೌಲ್ಯದ ಸೇರ್ಪಡೆಗೆ ಬದಲಾಗಿ ವಹಿವಾಟಿನ ಆಧಾರದ ಮೇಲೆ ತೆರಿಗೆ ಪಾವತಿಸುವ ಅವಕಾಶ ಮಾಡಿಕೊಡಲಾಗಿದ್ದು, ಜಿಎಸ್ ಟಿ ಸಂಯೋಜನೆ ವ್ಯಾಪ್ತಿಯನ್ನು ಈಗಿನ 1 ಕೋಟಿ ರೂ.ದಿಂದ 1.5 ಕೋಟಿ ರೂ.ಗೆ ಏರಿಸಲಾಗಿದೆ.

Scroll to load tweet…

ಕೇರಳದಲ್ಲಿ ಉಂಟಾದ ಭೀಕರ ಪ್ರವಾಹದ ಕಾರಣ ಸಾಕಷ್ಟು ನಷ್ಟವುಂಟಾಗಿದ್ದು, ಕೇರಳ ವ್ಯವಹರಿಸುವ ಅಂತರಾಜ್ಯ ವಹಿವಾಟಿಗೆ ಸಂಬಂಧಿಸಿ ಕಟ್ಟಬೇಕಾಗಿದ್ದ ಸೆಸ್ ತೆರಿಗೆಯನ್ನು ಒಂದು ವರ್ಷದಿಂದ ಎರಡು ವರ್ಷಗಳಿಗೆ ರದ್ದು ಮಾಡಲಾಗಿದೆ.