ನವದೆಹಲಿ(ಜ.01): 2019ರ ಕೊನೆಯ ತಿಂಗಳಾದ ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಜಿಎಸ್‌ಟಿ ಸಂಗ್ರಹಣೆಯಲ್ಲಿ ದಾಖಲೆ ಬರೆದಿದೆ.

ಕೇಂದ್ರ ಸರ್ಕಾರದ ಉತ್ತೇಜನಕಾರಿ ಕ್ರಮಗಳಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ) ಸಂಗ್ರಹದ ಮೊತ್ತ ಎರಡನೇ ಬಾರಿ 1.03 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ ಎಂದು ಹಣಕಾಸಿ ಇಲಾಖೆ ತಿಳಿಸಿದೆ.

ಜಿಎಸ್‌ಟಿ ವಂಚಿಸಿದರೆ ಆಸ್ತಿಗೆ ಕತ್ತರಿ: ಕೇಂದ್ರದ ಹೊಸ ನಿರ್ಧಾರ!

ಕಳೆದ ಮೂರು ತಿಂಗಳಲ್ಲಿ ಜಿಎಸ್​ಟಿ ಸಂಗ್ರಹ ಮೊತ್ತ 1 ಲಕ್ಷ ಕೋಟಿ ರೂ.ಗಿಂತ ಕೆಳಗಿತ್ತು. ಆದರೆ ಕಳೆದ ನವೆಂಬರ್​ ತಿಂಗಳಲ್ಲಿ ಜಿಎಸ್​ಟಿ ಸಂಗ್ರಹ ಮೊತ್ತ 1.03 ಲಕ್ಷ ಕೋಟಿ ರೂ. ಸಗ್ರಹವಾಗಿತ್ತು. ಇದೀಗ ಡಿಸೆಂಬರ್ ತಿಂಗಳಲ್ಲೂ 1.03 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ ಎಂದು ವರದಿ ತಿಳಿಸಿದೆ.

ಕಳೆದ ತಿಂಗಳು ಒಟ್ಟು 1,03,184 ಕೋಟಿ ರೂ. ಜಿಎಸ್ ಟಿ ಸಂಗ್ರಹವಾಗಿದ್ದು, ಇದರಲ್ಲಿ ಸಿಜಿಎಸ್​ಟಿ 19,962 ಕೋಟಿ ರೂ. ಎಸ್​ಜಿಎಸ್​ಟಿ 26,792 ಕೋಟಿ ರೂ. ಐಜಿಎಸ್​ಟಿ 48,099 ಕೋಟಿ ರೂ. ಹಾಗೂ ಸೆಸ್​ 8,331 ಕೋಟಿ ರೂ. ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಆರ್ಥಿಕ ಹಿಂಜರಿತ: ಜಿಎಸ್‌ಟಿ ದರ ಏರಿಕೆಗೆ ಕೇಂದ್ರ ಸರ್ಕಾರ ಚಿಂತನೆ!