ಆರ್ಥಿಕ ಹಿಂಜರಿತ: ಜಿಎಸ್‌ಟಿ ದರ ಏರಿಕೆಗೆ ಕೇಂದ್ರ ಸರ್ಕಾರ ಚಿಂತನೆ!
ಜಿಎಸ್‌ಟಿ ದರ ಏರಿಕೆಗೆ ಕೇಂದ್ರ ಸರ್ಕಾರ ಚಿಂತನೆ| 5% ಸ್ಲ್ಯಾಬ್ 9ರಿಂದ 10%ಗೆ| 12% ಸ್ಲ್ಯಾಬ್ ರದ್ದು| ಮುಂದಿನ ವಾರ ಸಭೆ, ಹಲವು ಸೇವೆ ಶೀಘ್ರ ದುಬಾರಿ
ನವದೆಹಲಿ[ಡಿ.08]: ಆರ್ಥಿಕ ಹಿಂಜರಿತದಿಂದಾಗಿ ತೆರಿಗೆ ಸಂಗ್ರಹ ಕುಸಿದಿರುವುದು ಹಾಗೂ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪಾವತಿಸಬೇಕಾಗಿರುವ ತೆರಿಗೆ ಪಾಲು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎರಡೂವರೆ ವರ್ಷಗಳ ಹಿಂದೆ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ಸ್ಲಾ್ಯಬ್ ದರಗಳನ್ನು ಬದಲಿಸಲು ಹಾಗೂ ಮತ್ತಷ್ಟುವಸ್ತುಗಳನ್ನು ತೆರಿಗೆ ವ್ಯಾಪ್ತಿಗೆ ಹೊಸದಾಗಿ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಬರೋಬ್ಬರಿ 1 ಲಕ್ಷ ಕೋಟಿ ರು. ಹೆಚ್ಚುವರಿ ಸಂಪನ್ಮೂಲ ಲಭ್ಯವಾಗಲಿದ್ದರೆ, ಗ್ರಾಹಕರು ಮಾತ್ರ ಹೆಚ್ಚಿನ ಹೊರೆ ಹೊರಬೇಕಾಗುತ್ತದೆ.
ಈಗ ಇರುವ 5% ಸ್ಲ್ಯಾಬ್ ಅನ್ನು ಶೇ.9ರಿಂದ ಶೇ.10ಕ್ಕೆ ಹೆಚ್ಚಳ ಮಾಡಲು, 12% ಸ್ಲ್ಯಾಬ್ ಅನ್ನು ರದ್ದುಗೊಳಿಸಿ, ಅದರ ಪರಿಧಿಯಲ್ಲಿರುವ 243 ವಸ್ತುಗಳನ್ನು 18% ಸ್ಲ್ಯಾಬ್ ವ್ಯಾಪ್ತಿಗೆ ತರುವ ಚಿಂತನೆ ನಡೆಯುತ್ತಿದೆ. ಇದರಿಂದಾಗಿ ಹಲವು ವಸ್ತುಗಳು ದುಬಾರಿಯಾಗಲಿವೆ. ವಿವಿಧ ಸೇವೆ ಪಡೆಯಲು ಗ್ರಾಹಕರು ಈಗ ಪಾವತಿಸುತ್ತಿರುವುದಕ್ಕಿಂತ ಹೆಚ್ಚಿನ ಜಿಎಸ್‌ಟಿಯನ್ನು ನೀಡಬೇಕಾಗುತ್ತದೆ.
ಮೋದಿ ಸುತ್ತ ಇರೋ ಜನ ಸರಿಯಿಲ್ಲ: ಅಬ್ಬಬ್ಬಾ ಇಂಥ ಆರೋಪ ಕೇಳಿರಲಿಲ್ಲ!
ಉದ್ದೇಶಿತ ಬದಲಾವಣೆಗಳನ್ನು ಮುಂದಿನ ವಾರ ನಡೆಯುವ ಸಭೆಯಲ್ಲಿ ಕೇಂದ್ರ ಸರ್ಕಾರ ಚರ್ಚೆ ನಡೆಸಲಿದೆ. ಈ ಕ್ರಮದಿಂದ ಎರಡು ಉದ್ದೇಶಗಳು ಈಡೇರಲಿವೆ. ಮೊದಲನೆಯದಾಗಿ, ಸರ್ಕಾರಕ್ಕೆ ಹೆಚ್ಚುವರಿ ಸಂಪನ್ಮೂಲ ಹರಿದುಬರುತ್ತದೆ. ಎರಡನೆಯದಾಗಿ, ನಾಲ್ಕು ಸ್ತರಗಳಲ್ಲಿರುವ ಜಿಎಸ್‌ಟಿ ಮೂರೇ ಸ್ತರದ ತೆರಿಗೆಯಾಗಿ ಬದಲಾಗಲಿದೆ. ಭವಿಷ್ಯದಲ್ಲಿ ಅದನ್ನು 2 ಸ್ತರಕ್ಕೆ ತರಲು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ಪ್ರಸ್ತಾವ ಜಾರಿಯಾಗಿದ್ದೇ ಆದಲ್ಲಿ ಹವಾನಿಯಂತ್ರಿತ ರೈಲು ಪ್ರಯಾಣ, ವಿಮಾನಯಾನ, ರೆಸ್ಟೋರೆಂಟ್‌ನಲ್ಲಿ ಮಾಡುವ ಊಟ, ಮೊಬೈಲ್ ಫೋನ್, ಹೋಟೆಲ್ ವಾಸ್ತವ್ಯ, ಪ್ರವಾಸ, ಕೇಟರಿಂಗ್ ಸೇವೆಗೆ ಪಾವತಿಸುವ ಶುಲ್ಕ, ಪುರುಷರು ಧರಿಸುವ ಸೂಟ್ ಶೀಘ್ರದಲ್ಲೇ ದುಬಾರಿಯಾಗುವ ಎಲ್ಲ ಸಾಧ್ಯತೆಗಳೂ ಇವೆ.
ಮೋದಿ ಸುತ್ತ ಇರೋ ಜನ ಸರಿಯಿಲ್ಲ: ಅಬ್ಬಬ್ಬಾ ಇಂಥ ಆರೋಪ ಕೇಳಿರಲಿಲ್ಲ!
ದುಬಾರಿಯಾಗಲಿರುವ ವಸ್ತು, ಸೇವೆಗಳು
1. ಬ್ರಾಂಡೆಡ್ ಆಹಾರ ಧಾನ್ಯಗಳು, ಹಿಟ್ಟು, ಪನ್ನೀರ್, ಎಕಾನಮಿ ದರ್ಜೆಯ ವಿಮಾನ ಪ್ರಯಾಣ, 1 ಹಾಗೂ 2ನೇ ಶ್ರೇಣಿಯ ಹವಾನಿಯಂತ್ರಿತ ರೈಲು ಪ್ರಯಾಣ, ತಾಳೆ ಎಣ್ಣೆ, ಆಲಿವ್ ಆಯಿಲ್, ಪಿಜ್ಜಾ ಬ್ರೆಡ್, ಕೋಕೋವಾ ಪೇಸ್ಟ್, ಡ್ರೈ ಫä್ರಟ್ಸ್, ಸಿಲ್‌್ಕ, ಲಿನೆನ್ ಹಾಗೂ ಪುರುಷರ ಸೂಟ್‌ಗೆ ಬಳಸಲಾಗುವ ಬಟ್ಟೆ, ಕ್ರೂಸ್ ಪ್ರಯಾಣ, ದೋಣಿಗಳ ಪ್ರವಾಸ, ಪ್ರವಾಸ ಸೇವೆ, ಕೇಟರಿಂಗ್, ರೆಸ್ಟೋರೆಂಟ್.
ಡಿಸೆಂಬರ್ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
*ಈ ಸೇವೆಗಳಿಗೆ ಸದ್ಯ ಶೇ.5ರಷ್ಟುಜಿಎಸ್‌ಟಿ ಇದೆ. ಇದನ್ನು ಶೇ.9-10ಕ್ಕೇರಿಸಲು ಚಿಂತನೆ ನಡೆಯುತ್ತಿದೆ.
2. ಮೊಬೈಲ್ ಫೋನ್, ಬಿಸಿನೆಸ್ ಕ್ಲಾಸ್ ವಿಮಾನ ಪ್ರಯಾಣ, ರಾಜ್ಯ ಸರ್ಕಾರದ ಲಾಟರಿ, ದುಬಾರಿ ಪೇಂಟಿಂಗ್, 5ರಿಂದ 7500 ರು. ಬಾಡಿಗೆಯ ಹೋಟೆಲ್ ಕೋಣೆ.
*ಈ ಸೇವೆಗಳಿಗೆ ಶೇ.12 ಜಿಎಸ್‌ಟಿ ಇದೆ. ಅದನ್ನು ಶೇ.18ಕ್ಕೆ ಹೆಚ್ಚಿಸುವ ಪ್ರಸ್ತಾವ ಇದೆ.
3. ದುಬಾರಿ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಚಿಕಿತ್ಸೆ, 1000 ರು. ಒಳಗಿನ ಹೋಟೆಲ್ ಬಾಡಿಗೆ, ಕಂಪನಿಗಳು ಪಡೆಯುವ ದುಬಾರಿ ಮೊತ್ತದ ಭೋಗ್ಯ, ಬ್ರಾಂಡೆಡ್ ಅಲ್ಲದ ಪನ್ನೀರ್, ಕಚ್ಚಾ ರೇಷ್ಮೆ, ಸೇಂದಿ.
*ಇವಕ್ಕೆ ಈವರೆಗೆ ತೆರಿಗೆ ಇರಲಿಲ್ಲ