ನವದೆಹಲಿ(ಫೆ.01):  ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಪ್ರಸಕ್ತ ಬಜೆಟ್‌ನಲ್ಲಿ ಹಲವು ಪ್ರಮುಖ ಅಂಶಗಳಿದ್ದು, ಪ್ರಮುಖವಾಗಿ ತೆರಿಗೆದಾರರಿಗೆ ವಿನಾಯ್ತಿ ಘೋಷಿಸಿರುವುದು ಕೇಂದ್ರ ಬಜೆಟ್‌ನ ಆಕರ್ಷಣೆಯಾಗಿದೆ.

ಇನ್ನು ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೊಳಿಸಿದ್ದು, ಕ್ಷಣಾರ್ಧದಲ್ಲೇ ಪ್ಯಾನ್ ಮತ್ತು ಆಧಾರ್ ಕಾರ್ಡ್ ಒದಗಿಸುವ ವಿನೂತನ ವ್ಯವಸ್ಥೆ ಜಾರಿಗೆ ತಂದಿದೆ.

ಕೇಂದ್ರ ಬಜೆಟ್ 2020: ಯಾವುದು ಅಗ್ಗ? ಯಾವುದು ದುಬಾರಿ: ಇಲ್ಲಿದೆ ಪಟ್ಟಿ

ವ್ಯಕ್ತಿಯೋರ್ವ ಆಧಾರ್ ಕಾರ್ಡ್ ಹೊಂದಿದ್ದರೆ ಕ್ಷಣಾರ್ಧದಲ್ಲ ಪ್ಯಾನ್ ಕಾರ್ಡ್ ಕೊಡುವ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಪ್ಯಾನ್‌ಗಾಗಿ ಹೊಸದಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇನ್ನು ಮುಂದೆ ಇರುವುದಿಲ್ಲ.

ತೆರಿಗೆದಾರರಿಗೆ ಬಿಗ್ ರಿಲೀಫ್ : ಇಲ್ಲಿದೆ ಟ್ಯಾಕ್ಸ್ ಕಡಿತದ ಫುಲ್ ಡಿಟೇಲ್ಸ್!

ಆಧಾರ್ ಕಾರ್ಡ್ ಇದ್ದರೆ ಸ್ಥಳದಲ್ಲೇ ಪ್ಯಾನ್ ಕಾರ್ಡ್ ದೊರೆಯಲಿದ್ದು, ಪ್ಯಾನ್‌ಗಾಗಿ ಇನ್ನು ತಿಂಗಳುಗಳ ಕಾಲ ಕಾಯಬೇಕಿಲ್ಲ.

ಫೆಬ್ರವರಿ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ