ಎನ್‌ಎಂಡಿಸಿಯಲ್ಲಿ ರಾಜ್ಯದ ಪ್ರಖ್ಯಾತ ಉಕ್ಕು ಕಂಪನಿ ವಿಲೀನ: ಉಕ್ಕು ಸಚಿವಾಲಯ ಶಿಫಾರಸು

ಕರ್ನಾಟಕದ ಕೆಐಒಸಿಎಲ್ ಮತ್ತು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಡಿಸಿ) ವಿಲೀನಗೊಳಿಸಲು ಕೇಂದ್ರ ಉಕ್ಕು ಸಚಿವಾಲಯ ಚಿಂತನೆ ನಡೆಸಿದೆ. ಈ ಸಂಬಂಧ ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ವಿಲೀನ ಪ್ರಕ್ರಿಯೆಗೆ ವಿವಿಧ ಸಚಿವಾಲಯಗಳ ಅನುಮತಿ ಅಗತ್ಯವಿದೆ.

Govt source says Steel ministry proposes merger of NMDC and KIOCL to Ministry of Finance san

ಬೆಂಗಳೂರು (ಜ.6): ಎಲ್ಲವೂ ಅಂದುಕೊಂಡಂತೆ ಆದಲ್ಲಿ ಕರ್ನಾಟಕದ ಪ್ರತಿಷ್ಠಿತ ಉಕ್ಕು ಕಂಪನಿ, ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದೊಂದಿಗೆ ವಿಲೀನವಾಗುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಉಕ್ಕು ಸಚಿವಾಲಯ, ಕೇಂದ್ರ ಹಣಕಾಸು ಇಲಾಖೆಗೆ ಶಿಫಾರಸು ನೀಡಿದೆ ಎಂದು ವರದಿಯಾಗಿದೆ. ಉಕ್ಕು ಉದ್ಯಮದಲ್ಲಿ ಸಾರ್ವಜನಿಕ ವಲಯದ ಉದ್ಯಮಗಳನ್ನು ಏಕೀಕರಣ ಮಾಡುವ ಕಾರ್ಯತಂತ್ರದ ಭಾಗವಾಗಿ, ಉಕ್ಕು ಸಚಿವಾಲಯವು ಎನ್‌ಎಂಡಿಸಿ (ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ) ಹಾಗೂ ರಾಜ್ಯದ ಕೆಐಓಸಿಎಲ್‌ ಅಂದರೆ, ಕುದುರೆಮುಖ ಐರನ್‌ ಓರ್‌ ಕಂಪನಿ ಲಿಮಿಟೆಡ್‌ಅನ್ನು ವಿಲೀನ ಮಾಡಲು ಪ್ರಸ್ತಾಪ ಮಾಡಿದೆ. ಸರಿಸುಮಾರು ಒಂದು ತಿಂಗಳ ಹಿಂದೆ ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

"NMDC ಮತ್ತು KIOCL ಅನ್ನು ವಿಲೀನಗೊಳಿಸುವ ಪ್ರಸ್ತಾವನೆಯನ್ನು ಉಕ್ಕು ಸಚಿವಾಲಯವು ಸಾರ್ವಜನಿಕ ಉದ್ಯಮಗಳ ಇಲಾಖೆಗೆ (DPE), ಹಣಕಾಸು ಸಚಿವಾಲಯಕ್ಕೆ ಕಳುಹಿಸಿದೆ" ಎಂದು ಮೂಲವು ಜನವರಿ 6 ರಂದು ತಿಳಿಸಿದೆ. ವಿವಿಧ ಸಚಿವಾಲಯಗಳು ಮತ್ತು ನಿಯಂತ್ರಕ ಸಂಸ್ಥೆಗಳಿಂದ ಅಗತ್ಯ ಅನುಮತಿಗಳನ್ನು ಕ್ಲಿಯರ್‌ ಮಾಡುವಂತೆ ಸೂಚಿಸಿದ್ದು, ಇದು ಎರಡೂ ಘಟಕಗಳನ್ನು ವಿಲೀನಗೊಳಿಸುವ ಸರ್ಕಾರದ ಉದ್ದೇಶವನ್ನು ಸೂಚಿಸುತ್ತದೆ ಎನ್ನಲಾಗಿದೆ.

KIOCL ಲಿಮಿಟೆಡ್, ಹಿಂದೆ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು, ಇದು ಉಕ್ಕಿನ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಒಂದು ಮಿನಿ-ರತ್ನ CPSE ಆಗಿದೆ. 1976 ರಲ್ಲಿ ಸ್ಥಾಪನೆಯಾದ KIOCL ಕಬ್ಬಿಣದ ಅದಿರು ಗಣಿಗಾರಿಕೆ ಮತ್ತು ಕಬ್ಬಿಣದ ಗುಂಡು ಉತ್ಪಾದನೆಯಲ್ಲಿ ಪ್ರಮುಖ ಕಂಪನಿಯಾಗಿದೆ.

Jagdeep Singh: ವಿಶ್ವದಲ್ಲಿಯೇ ಗರಿಷ್ಠ ವೇತನ ಪಡೆಯುವ ಉದ್ಯೋಗಿ, ದಿನದ ಸಂಬಳ 48 ಕೋಟಿ!

NMDC ಲಿಮಿಟೆಡ್ ಇದು ದೇಶದ ನವರತ್ನ CPSE ಆಗಿದ್ದು, ಭಾರತದ ಅತಿದೊಡ್ಡ ಕಬ್ಬಿಣದ ಅದಿರು ಉತ್ಪಾದಕವಾಗಿದೆ. 2023-24ರ ಹಣಕಾಸು ವರ್ಷದಲ್ಲಿ ಎನ್‌ಎಂಡಿಸಿ 21,294 ಕೋಟಿ ರೂಪಾಯಿ ವಹಿವಾಟು ನಡೆಸಿದೆ. ವಿಲೀನ ಪ್ರಕ್ರಿಯೆಗೆ ಹಣಕಾಸು ಸಚಿವಾಲಯದ ಅಡಿಯಲ್ಲಿ DPE ಸೇರಿದಂತೆ ಹಲವಾರು ಸಚಿವಾಲಯಗಳಿಂದ ಅನುಮತಿಗಳ ಅಗತ್ಯವಿರುತ್ತದೆ ಮತ್ತು ನಿಯಂತ್ರಕ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ. ಪ್ರಸ್ತಾವನೆಯು ಹಣಕಾಸು ಸಚಿವಾಲಯದ ಪರಿಗಣನೆಗೆ ಕಾಯುತ್ತಿದೆ.

ಇನ್ನು Pension ಓಡಾಟದ ರಗಳೆಯಿಲ್ಲ; ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ ದೇಶಾದ್ಯಂತ ಜಾರಿ ಮಾಡಿದ EPFO

Latest Videos
Follow Us:
Download App:
  • android
  • ios