Asianet Suvarna News Asianet Suvarna News

ಎಸ್‌ಬಿಐ ಮುಂದಿನ ಚೇರ್ಮನ್‌ ಆಗಿ ಚಲ್ಲ ಶ್ರೀನಿವಾಸುಲು ಸೆಟ್ಟಿ ಹೆಸರು ಶಿಫಾರಸು

Challa Sreenivasulu Setty ಹಾಲಿ ಎಸ್‌ಬಿಐ ಅಧ್ಯಕ್ಷರಾಗಿರುವ ದಿನೇಶ ಖಾರಾ ಮುಂದಿನ ಆಗಸ್ಟ್‌ 28 ರಂದು ನಿವೃತ್ತಿಯಾಗಲಿದ್ದಾರೆ. ಇದರ ಬೆನ್ನಲ್ಲಿಯೇ ಚಲ್ಲ ಶ್ರೀನಿವಾಸುಲು ಸೆಟ್ಟಿ ಅವರ ಹೆಸರನ್ನು ಎಫ್‌ಎಸ್‌ಐಬಿ ಶಿಫಾರಸು ಮಾಡಿದೆ.

Govt panel FSIB recommends Challa sreenivasulu Setty as next SBI Chairman san
Author
First Published Jun 29, 2024, 5:25 PM IST


ನವದೆಹಲಿ (ಜೂ.29): ಕೇಂದ್ರದ ಸ್ವಾಯತ್ತ ಸಂಸ್ಥೆಯಾದ ಹಣಕಾಸು ಸೇವಾ ಸಂಸ್ಥೆಗಳ ಬ್ಯೂರೋ (ಎಫ್‌ಎಸ್‌ಐಬಿ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ವ್ಯವಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾದ ಚಲ್ಲ ಶ್ರೀನಿವಾಸುಲು ಸೆಟ್ಟಿ ಅವರ ಹೆಸರನ್ನು ಬ್ಯಾಂಕ್‌ನ ಮುಂದಿನ ಅಧ್ಯಕ್ಷರನ್ನಾಗಿ ಶಿಫಾರಸು ಮಾಡಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ನಿರ್ದೇಶಕರರ ಆಯ್ಕೆ ಮಾಡುವ ಸಂಸ್ಥೆಯಾಗಿರುವ FSIB ತನ್ನ ಹೇಳಿಕೆಉಲ್ಲಿ“ಇಂಟರ್‌ಫೇಸ್‌ನಲ್ಲಿ ಅವರ ಕಾರ್ಯಕ್ಷಮತೆ, ಅವರ ಒಟ್ಟಾರೆ ಅನುಭವ ಮತ್ತು ಪ್ರಸ್ತುತ ನಿಯತಾಂಕಗಳನ್ನು ಗಮನದಲ್ಲಿಟ್ಟುಕೊಂಡು, ಬ್ಯೂರೋ ಚಲ್ಲಾ ಶ್ರೀನಿವಾಸುಲು ಸೆಟ್ಟಿ ಅವರನ್ನು ಎಸ್‌ಬಿಐನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡುತ್ತದೆ ' ಎಂದು ತಿಳಿಸಿದೆ. ಸಂಸ್ಥೆಯು ಜೂನ್ 29 ರಂದು ಹುದ್ದೆಗಾಗಿ ಮೂವರು ಅಭ್ಯರ್ಥಿಗಳನ್ನು ಸಂದರ್ಶಿಸಿತು.

ಹಾಲಿ ಅಧ್ಯಕ್ಷ ದಿನೇಶ್ ಖಾರಾ ಅವರಿಗೆ ಆಗಸ್ಟ್‌ 28 ರಂದು 63 ವರ್ಷ ತುಂಬಲಿದೆ. ಇದರ ಬೆನ್ನಲ್ಲಿಯೇ ಅವರ ತಮ್ಮ ಅಧ್ಯಕ್ಷ ಸ್ಥಾನವನ್ನು ತೊರೆಯಲಿದ್ದಾರೆ. ಎಸ್‌ಬಿಐ ಅಧ್ಯಕ್ಷ ಸ್ಥಾನಕ್ಕೆ 63 ವರ್ಷ ಗರಿಷ್ಠ ವಯಸ್ಸಿನ ಮಿತಿ ಆಗಿದೆ. ಸ್ಪರ್ಧಿಗಳ ಪೈಕಿ ಚಲ್ಲ ಸೆಟ್ಟಿ ಅತ್ಯಂತ ಹಿರಿಯರಾಗಿದ್ದು, ಎಸ್‌ಬಿಐನಲ್ಲಿ ಸುಮಾರು 36 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಸಂದರ್ಶನಕ್ಕೆ ಒಳಗಾದ ಇತರ ಇಬ್ಬರು ಎಂಡಿಗಳು ಅಶ್ವಿನಿ ಕುಮಾರ್ ತಿವಾರಿ ಮತ್ತು ವಿನಯ್ ಎಂ ತೋನ್ಸೆ.

ಸಂಪ್ರದಾಯದ ಪ್ರಕಾರ, ಅಧ್ಯಕ್ಷರನ್ನು ಎಸ್‌ಬಿಐನ ಸೇವೆಯಲ್ಲಿರುವ ವ್ಯವಸ್ಥಾಪಕ ನಿರ್ದೇಶಕರ ಪೂಲ್‌ನಿಂದ ನೇಮಿಸಲಾಗುತ್ತದೆ. FSIB ಯಾರನ್ನಾದರೂ ಶಿಫಾರಸು ಮಾಡಿದ ನಂತರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಎಫ್‌ಎಸ್‌ಐಬಿಯನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (ಡಿಒಪಿಟಿ) ಮಾಜಿ ಕಾರ್ಯದರ್ಶಿ ಭಾನು ಪ್ರತಾಪ್ ಶರ್ಮಾ ನೇತೃತ್ವ ವಹಿಸಿದ್ದಾರೆ.

 

2024ರ ಹಣಕಾಸು ವರ್ಷದಲ್ಲಿ ಭಾರತದ ಟಾಪ್‌ 10 ಲಾಭದಾಯಕ ಕಂಪನಿಗಳಿವು!

ಸರ್ಕಾರ ನೇಮಿಸಿದ ಆಯ್ಕೆ ಸಮಿತಿಯ ಸದಸ್ಯರಾಗಿ ಹಣಕಾಸು ಸೇವೆಗಳ ಕಾರ್ಯದರ್ಶಿ, ಸಾರ್ವಜನಿಕ ಉದ್ಯಮಗಳ ಇಲಾಖೆ ಕಾರ್ಯದರ್ಶಿ ಮತ್ತು RBI ಉಪ ಗವರ್ನರ್ ಇರುತ್ತಾರೆ.

3 ಶತಕೋಟಿ ಡಾಲರ್ ಸಂಗ್ರಹಕ್ಕೆ ಮುಂದಾದ ಎಸ್‌ಬಿಐ; ಹಣ ಕ್ರೋಢೀಕರಣ ಹಿಂದಿನ ರಹಸ್ಯ ಏನು?.

Latest Videos
Follow Us:
Download App:
  • android
  • ios