EPF ಖಾತೆ ಮಾಹಿತಿ ಅಪ್ಡೇಟ್ ಮಾಡಲು ಹೊಸ ನಿಯಮ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ
ಇಪಿಎಫ್ ಖಾತೆ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಕೇಂದ್ರ ಸರ್ಕಾರ ಇತ್ತೀಚೆಗೆ ಹೊಸ ಸುತ್ತೋಲೆ ಹೊರಡಿಸಿದೆ. ಇದರ ಅನ್ವಯ ಇಪಿಎಫ್ ಖಾತೆದಾರರು ಮೆಂಬರ್ ಸೇವಾ ಪೋರ್ಟಲ್ ಮೂಲಕ ಪ್ರೊಫೈಲ್ ಮಾಹಿತಿಗಳನ್ನು ಸರಿಪಡಿಸಲು ಅರ್ಜಿ ಸಲ್ಲಿಸಬೇಕು.
ನವದೆಹಲಿ( ಸೆ.2): ಇಪಿಎಫ್ ಸದಸ್ಯರ ಮಾಹಿತಿಗಳನ್ನು ತಿದ್ದುಪಡಿ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) ಇತ್ತೀಚೆಗೆ ಸುತ್ತೋಲೆ ಹೊರಡಿಸಿದೆ. ಇಪಿಎಫ್ ಸದಸ್ಯರ ಹೆಸರು, ಜನ್ಮದಿನಾಂಕ ಇತ್ಯಾದಿ ಮಾಹಿತಿಗಳನ್ನು ಸರಿಪಡಿಸಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ ಕುರಿತು ಸುತ್ತೋಲೆ ಹೊರಡಿಸಿದೆ. ಈ ಎಸ್ ಒಪಿ ಅನ್ವಯ ಇಪಿಎಫ್ ಸದಸ್ಯರ ಮಾಹಿತಿಗಳನ್ನು ಸುಲಭವಾಗಿ ಅಪ್ಡೇಟ್ ಮಾಡಬಹುದು. ಇನ್ನು ಕ್ಲೇಮ್ಸ್ ಪ್ರೊಸೆಸಿಂಗ್ ಮಾಡುವಾಗ ತಿರಸ್ಕೃತಗೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಕೂಡ. ಹೊಸ ಪ್ರಕ್ರಿಯೆ ನೆರವಿನಿಂದ ಮಾಹಿತಿಗಳು ಹೊಂದಾಣಿಕೆಯಾಗದೆ ವಂಚನೆ ಪ್ರಕರಣಗಳು ನಡೆಯದಂತೆ ತಡೆಯಬಹುದು.ಇನ್ನು 2023ರ ಆಗಸ್ಟ್ 23ರಂದು ಇಪಿಎಫ್ಒ ಹೊರಡಿಸಿರುವ ಸುತ್ತೋಲೆ ಅನ್ವಯ ಅನಿಯಂತ್ರಿತ ಹಾಗೂ ಸ್ಟ್ಯಾಂಡರ್ಡ್ ಅಲ್ಲದ ಪ್ರಕ್ರಿಯೆಗಳು ಕೆಲವು ಪ್ರಕರಣಗಳಲ್ಲಿ ಸದಸ್ಯರ ಗುರುತಿನಲ್ಲಿ ಸಮಸ್ಯೆ ತರುವ ಮೂಲಕ ವಂಚನೆಗೆ ಎಡೆ ಮಾಡಿಕೊಡುತ್ತಿವೆ ಎಂದು ಇಪಿಎಫ್ ಒ ಸುತ್ತೋಲೆಯಲ್ಲಿ ತಿಳಿಸಿದೆ. ಹೊಸ ಎಸ್ ಒಪಿ ಇಪಿಎಫ್ ಸದಸ್ಯರಿಗೆ 11 ಪ್ರೊಫೈಲ್ ಸಂಬಂಧಿ ಮಾನದಂಡಗಳನ್ನು ಅಪ್ಡೇಟ್ ಮಾಡಲು ನೆರವು ನೀಡುತ್ತದೆ.
ಇಪಿಎಫ್ ಸದಸ್ಯರ ಪ್ರೊಫೈಲ್ ಗೆ ಸಂಬಂಧಿಸಿ ಹೆಸರು, ಲಿಂಗ, ಜನ್ಮದಿನಾಂಕ, ತಂದೆ ಹೆಸರು, ಸಂಬಂಧ, ವೈವಾಹಿಕ ಸ್ಟೇಟಸ್, ಸೇರ್ಪಡೆ ದಿನಾಂಕ, ಬಿಡಲು ಕಾರಣ, ಬಿಡುಗಡೆ ಹೊಂದುತ್ತಿರುವ ದಿನಾಂಕ, ರಾಷ್ಟ್ರೀಯತೆ ಹಾಗೂ ಆಧಾರ್ ಸಂಖ್ಯೆ. ಇಪಿಎಫ್ ವಿತ್ ಡ್ರಾ ಕ್ಲೇಮ್ ನಿರಾಕರಿಸಲು ಮುಖ್ಯಕಾರಣ ಸದಸ್ಯರು ನೀಡಿರುವ ಮಾಹಿತಿಗಳು ಇಪಿಎಫ್ ಒ ಬಳಿಯಿರುವ ದಾಖಲೆಗಳಿಗೆ ಸರಿಹೊಂದುವುದಿಲ್ಲ. ಕ್ಲೇಮ್ ಮಾಡುವವರ ಹೆಸರು ಹಾಗೂ ಜನ್ಮದಿನಾಂಕ ಇಪಿಎಫ್ ಒ ದಾಖಲೆಗಳಲ್ಲಿರುವ ಮಾಹಿತಿಗೆ ಮ್ಯಾಚ್ ಆಗಬೇಕು. ಹೀಗಾಗಿ ಈಗ ಇಪಿಎಫ್ ಒ ಬಿಡುಗಡೆಗೊಳಿಸಿರುವ ಹೊಸ ಸ್ಟ್ಯಾಂಡರ್ಸ್ ಆಪರೇಟಿಂಗ್ ಪ್ರೊಸಿಜರ್ (ಎಸ್ ಒಪಿ) ಇಪಿಎಫ್ ವಿತ್ ಡ್ರಾ ಕ್ಲೇಮ್ ತಿರಸ್ಕೃತಗೊಳ್ಳುವ ಸಾಧ್ಯತೆಯನ್ನು ತಗ್ಗಿಸಲಿದೆ.
EPF ಬ್ಯಾಲೆನ್ಸ್ ಚೆಕ್ ಮಾಡಲು ಇಂಟರ್ನೆಟ್ ಬೇಕಿಲ್ಲ; ಮನೆಯಲ್ಲೇ ಕುಳಿತು ಈ ವಿಧಾನದಿಂದ ಪರಿಶೀಲಿಸಬಹುದು
ಇಪಿಎಫ್ ಖಾತೆಯಲ್ಲಿ ಬದಲಾವಣೆಗೆ ಅರ್ಜಿ ಸಲ್ಲಿಕೆ ಹೇಗೆ?
ಇತ್ತೀಚಿನ ಇಪಿಎಫ್ ಒ ಸುತ್ತೋಲೆ ಅನ್ವಯ ಇಪಿಎಫ್ ಖಾತೆದಾರರು ಮೆಂಬರ್ ಸೇವಾ ಪೋರ್ಟಲ್ ಮೂಲಕ ಪ್ರೊಫೈಲ್ ಮಾಹಿತಿಗಳನ್ನು ಸರಿಪಡಿಸಲು ಅರ್ಜಿ ಸಲ್ಲಿಸಬೇಕು. ಅಗತ್ಯ ದಾಖಲೆಗಳನ್ನು ಕೂಡ ಮೆಂಬರ್ ಸೇವಾ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಬೇಕು ಹಾಗೂ ಭವಿಷ್ಯದ ರೆಫರೆನ್ಸ್ ಗೆ ಈ ದಾಖಲೆಗಳನ್ನು ಸರ್ವರ್ ನಲ್ಲಿ ಉಳಿಸಲಾಗುವುದು. ಇನ್ನು ಇಪಿಎಫ್ ಸದಸ್ಯರು ತಮ್ಮ ಖಾತೆಗಳಲ್ಲಿ ಮಾಡಿದ ಬದಲಾವಣೆಗಳಿಗೆ ಉದ್ಯೋಗದಾತ ಸಂಸ್ಥೆ ಕೂಡ ಅನುಮೋದನೆ ನೀಡಬೇಕು.
ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆಗೆ ಸೆ.30 ತನಕ ಅವಕಾಶ
ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್ ) ಅಡಿಯಲ್ಲಿ ನಿಗದಿಗಿಂತ ಹೆಚ್ಚಿನ ಮೊತ್ತದ ಪಿಂಚಣಿಗೆ ಅರ್ಜಿ ಸಲ್ಲಿಸಲು ಉದ್ಯೋಗದಾತ ಸಂಸ್ಥೆಗಳು ಅಥವಾ ಕಂಪನಿಗಳಿಗೆ ಸೆಪ್ಟೆಂಬರ್ 30ರ ತನಕ ಅವಕಾಶ ನೀಡಲಾಗಿದೆ. ಇನ್ನು ಉದ್ಯೋಗಿಗಳಿಗೆ ನಿಗದಿಗಿಂತ ಹೆಚ್ಚಿನ ಮೊತ್ತದ ಪಿಂಚಣಿಗೆ ಅರ್ಜಿ ಸಲ್ಲಿಸಲು ಜುಲೈ 11ರ ತನಕ ಕಾಲಾವಕಾಶ ನೀಡಲಾಗಿತ್ತು. ಈ ಹಿಂದೆ ಅರ್ಜಿ ಸಲ್ಲಿಕೆಗೆ ಜೂನ್.26 ಕೊನೆಯ ದಿನವಾಗಿತ್ತು. ಇಪಿಎಫ್ಒ ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆ ಗಡುವನ್ನು ಒಟ್ಟು ಮೂರು ಬಾರಿ ವಿಸ್ತರಿಸಿತ್ತು.
EPFO:ಉಮಂಗ್ ಆ್ಯಪ್ ಮೂಲಕ ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡೋದು ಹೇಗೆ?
ಶೇ.8.15 ಬಡ್ಡಿ
2022-23ನೇ ಆರ್ಥಿಕ ಸಾಲಿನಲ್ಲಿ ಇಪಿಎಫ್ ಖಾತೆದಾರರಿಗೆ 8.15% ಬಡ್ಡಿ ನಿಗದಿಪಡಿಸಲಾಗಿದೆ. ಮಾರ್ಚ್ 2022 ರಲ್ಲಿ, EPFO 2021-22 ರ EPF ಠೇವಣಿಗಳ ಮೇಲಿನ ಬಡ್ಡಿ ದರವನ್ನು 2020-21 ರಲ್ಲಿ 8.5 ಪ್ರತಿಶತದಿಂದ 8.10% ಗೆ ಅಂದರೆ, ನಾಲ್ಕು ದಶಕಗಳ ಕನಿಷ್ಠ ಮಟ್ಟಕ್ಕೆ ಇಳಿಸಿತ್ತು. ಇದು 1977-78 ರಲ್ಲಿ ಇಪಿಎಫ್ ಬಡ್ಡಿ ದರವು 8% ರಷ್ಟಿದ್ದ ನಂತರ ಅತ್ಯಂತ ಕಡಿಮೆಯಾಗಿದೆ.