Asianet Suvarna News Asianet Suvarna News

EPFO:ಉಮಂಗ್ ಆ್ಯಪ್‌ ಮೂಲಕ ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡೋದು ಹೇಗೆ?

ಉದ್ಯೋಗಿಗಳು ತಮ್ಮ ಇಪಿಎಫ್ ಖಾತೆಯಲ್ಲಿರುವ ಹಣವನ್ನು ತುರ್ತು ಸಂದರ್ಭಗಳಲ್ಲಿ ವಿತ್ ಡ್ರಾ ಮಾಡಬಹುದು. ಅದರಲ್ಲೂ ಉಮಂಗ್ ಆ್ಯಪ್‌ ಮೂಲಕ ಮನೆಯಲ್ಲೇ ಕುಳಿತು ಇಪಿಎಫ್ ಖಾತೆಯಿಂದ ಸುಲಭವಾಗಿ ಹಣ ವಿತ್ ಡ್ರಾ ಮಾಡಬಹುದು. ಅದು ಹೇಗೆ? ಇಲ್ಲಿದೆ ಮಾಹಿತಿ. 
 

EPFO Easy withdrawal of PF funds with UMANG app step by step guide anu
Author
First Published Apr 11, 2023, 4:50 PM IST

Business Desk:ಎಲ್ಲ ಉದ್ಯೋಗಿಗಳ ತಿಂಗಳ ವೇತನದ ಒಂದು ಭಾಗವನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ (ಇಪಿಎಫ್) ಠೇವಣಿ ಇಡಲಾಗುತ್ತದೆ. ಇಪಿಎಫ್ ಖಾತೆದಾರರು ನಿವೃತ್ತಿ ಬಳಿಕ ಇಪಿಎಫ್ಒನಲ್ಲಿರುವ ಸಂಪೂರ್ಣ ಹಣವನ್ನು ವಿತ್ ಡ್ರಾ ಮಾಡಬಹುದು. ಆದರೆ, ತುರ್ತು ಸಂದರ್ಭಗಳಲ್ಲಿ ಇಪಿಎಫ್ ಖಾತೆದಾರರು ತಮ್ಮ ಪಿಎಫ್ ಖಾತೆಯಲ್ಲಿರುವ ಹಣವನ್ನು ವಿತ್ ಡ್ರಾ ಮಾಡಬಹುದು. ಇಪಿಎಫ್ಒ ವೆಬ್ ಸೈಟ್ ಗೆ ಹೋಗಿ ಇಪಿಎಫ್ ನಲ್ಲಿರುವ ಹಣ ವಿತ್ ಡ್ರಾ ಮಾಡಲು ಅವಕಾಶವಿದೆ. ಹಾಗೆಯೇ ಕೇಂದ್ರ ಸರ್ಕಾರದ ಉಮಂಗ್ ಅಪ್ಲಿಕೇಷನ್ ಮೂಲಕ ಕೂಡ ಇಪಿಎಫ್ ಹಣವನ್ನು ವಿತ್ ಡ್ರಾ ಮಾಡಬಹುದು. ಮನೆಯಲ್ಲೇ ಕುಳಿತು ಈ ಆ್ಯಪ್‌ ಮೂಲಕ ಪಿಎಫ್ ಖಾತೆಯಿಂದ ಸುಲಭವಾಗಿ ಹಣ ವಿತ್ ಡ್ರಾ ಮಾಡಹುದು. ಸಾಮಾನ್ಯವಾಗಿ ಜನರು ಮನೆ ದುರಸ್ತಿ, ವಿವಾಹದ ವೆಚ್ಚಗಳು, ತನ್ನ ಅಥವಾ ಕುಟುಂಬ ಸದಸ್ಯರ ವೈದ್ಯಕೀಯ ವೆಚ್ಚಗಳಿಗಾಗಿ ಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡುತ್ತಾರೆ. ಈ ಹಿಂದೆ ಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಲು ಬ್ಯಾಂಕ್ ಅಥವಾ ಪಿಎಫ್ ಖಾತೆಗೆ ಅನೇಕ ಬಾರಿ ಅಲೆದಾಡಬೇಕಿತ್ತು. ಆದರೆ, ಈಗ ಉಮಂಗ್ ಆ್ಯಪ್‌ ಮೂಲಕ ಸುಲಭವಾಗಿ ಹಣ ವಿತ್ ಡ್ರಾ ಮಾಡಬಹುದು. 

ಉಮಂಗ್ ಆ್ಯಪ್‌ ಮೂಲಕ ಹೇಗೆ?
ಉಮಂಗ್ ಆ್ಯಪ್‌ (UMANG app ) ಮೂಲಕ ನಿಮ್ಮ ಇಪಿಎಫ್ ಒ ಖಾತೆಯಿಂದ ಹಣ ವಿತ್ ಡ್ರಾ ಮಾಡಲು ನಿಮ್ಮ ಯುನಿವರ್ಸಲ್ ಖಾತೆ ಸಂಖ್ಯೆ (ಯುಎಎನ್) ಅನ್ನು ಆಧಾರ್ ಸಂಖ್ಯೆ ಜೊತೆಗೆ ಲಿಂಕ್ ಮಾಡೋದು ಅಗತ್ಯ.ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಬಹುದು.
*ಮೊದಲಿಗೆ ಉಮಂಗ್ ಆ್ಯಪ್‌ ಡೌನ್ ಲೋಡ್ ಮಾಡಿಕೊಳ್ಳಿ. ಆ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ ಬಳಸಿ ನೋಂದಣಿ ಮಾಡಿ.
*ಆ್ಯಪ್‌ ನಲ್ಲಿ ಲಭ್ಯವಿರುವ ಅನೇಕ ಆಯ್ಕೆಗಳಲ್ಲಿ ಇಪಿಎಫ್ ಒ ಆಯ್ಕೆಯನ್ನು ಆರಿಸಿ.
*ಕ್ಲೇಮ್ ಆಯ್ಕೆ ಆರಿಸಿ ನಿಮ್ಮ ಯುಎಎನ್ ಸಂಖ್ಯೆ ಭರ್ತಿ ಮಾಡಿ.
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದಿರುವ ಒಟಿಪಿಯನ್ನು ಇಪಿಎಫ್ಒ ನಲ್ಲಿ ನಮೂದಿಸಿ.
*ನಿಮ್ಮ ಪಿಎಫ್ ಖಾತೆಯಿಂದ ವಿತ್ ಡ್ರಾ ವಿಧಾನ ಆಯ್ಕೆ ಮಾಡಿ ಹಾಗೂ ಅರ್ಜಿಯಲ್ಲಿ ಭರ್ತಿ ಮಾಡಿ.

EPF ಖಾತೆಯನ್ನುಹೊಸ ಕಂಪನಿಗೆ ವರ್ಗಾಯಿಸಬೇಕಾ? ಹಾಗಾದ್ರೆ ಯಾವ ಅರ್ಜಿ ನಮೂನೆ ಬಳಸ್ಬೇಕು?

*ಅರ್ಜಿಯನ್ನು ಸಲ್ಲಿಕೆ ಮಾಡಿ ಹಾಗೂ ವಿತ್ ಡ್ರಾ ಮನವಿಗೆ ರೆಫರೆನ್ಸ್ ಸಂಖ್ಯೆ ಸ್ವೀಕರಿಸಿ.
*ಈ ರೆಫರೆನ್ಸ್ ಸಂಖ್ಯೆ ಬಳಸಿಕೊಂಡು ವಿತ್ ಡ್ರಾ ಮನವಿ ಟ್ರ್ಯಾಕ್ ಮಾಡಿ.
*3 ಅಥವಾ 4 ದಿನಗಳಲ್ಲಿ ಇಪಿಎಫ್ ಒ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತದೆ.
ಉಮಂಗ್ ಆ್ಯಪ್‌ ತುರ್ತು ವೆಚ್ಚಗಳಿಗೆ ಹಣ ವಿತ್ ಡ್ರಾ ಮಾಡಲು ನೆರವು ನೀಡಿದೆ. ಬ್ಯಾಂಕ್ ಅಥವಾ ಪಿಎಫ್ ಕಚೇರಿಗೆ ಭೇಟಿ ನೀಡದೆ ಹಣ ವಿತ್ ಡ್ರಾ ಮಾಡಲು ಈ ಆ್ಯಪ್‌ ಅವಕಾಶ ಕಲ್ಪಿಸಿದೆ. ಆದರೆ, ನೀವು ನಿಮ್ಮ ಖಾತೆಯಿಂದ ಹಣ ವಿತ್ ಡ್ರಾ ಮಾಡಲು ಸಮರ್ಪಕವಾದ ಕಾರಣ ನೀಡಬೇಕಾಗುತ್ತದೆ. 

PPF ಖಾತೆದಾರರೇ ಗಮನಿಸಿ; ಇಂದು ಹೂಡಿಕೆ ಮಾಡಿದ್ರೆ ಮಾತ್ರ ನಿಮಗೆ ಅಧಿಕ ರಿಟರ್ನ್ ಸಿಗುತ್ತೆ, ಏಕೆ? ಇಲ್ಲಿದೆ ಮಾಹಿತಿ

ಆನ್ ಲೈನ್ ವಿತ್ ಡ್ರಾ ಹೇಗೆ?
*ಮೊದಲಿಗೆ ಯುಎಎನ್ ಪೋರ್ಟಲ್  https://unifiedportal-mem.epfindia.gov.in/memberinterface/ ಲಾಗಿ ಇನ್ ಆಗಿ. 
*ನಿಮ್ಮ ಯುಎಎನ್ ಹಾಗೂ ಪಾಸ್ ವರ್ಡ್ ಬಳಸಿ ಲಾಗಿ ಇನ್ ಆಗಿ. ಆ ಬಳಿಕ ದೃಢೀಕರಣಕ್ಕೆ ಕ್ಯಾಪ್ಚಾ ನಮೂದಿಸಿ.
*ಈಗ ‘Online Services’ ಮೇಲೆ ಕ್ಲಿಕ್ ಮಾಡಿ ಹಾಗೂ ಕ್ಲೇಮ್ (Claim) ಆಯ್ಕೆ ಆರಿಸಿಕೊಳ್ಳಿ. 
* ಆ ಬಳಿಕ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಿ. ‘Verify’ ಮೇಲೆ ಕ್ಲಿಕ್ ಮಾಡಿ.
*ಈಗ ‘Yes’ಆಯ್ಕೆ ಮೇಲೆ ಕ್ಲಿಕ್ ಮಾಡಿ ಹಾಗೂ ಮುಂದುವರಿಯಿರಿ.
*‘Proceed for Online Claim’ ಮೇಲೆ ಕ್ಲಿಕ್ ಮಾಡಿ.
*ಈಗ ಕ್ಲೇಮ್ ಫಾರ್ಮ್ ನಲ್ಲಿ 'I Want To Apply For’ ಅಡಿಯಲ್ಲಿ ಯಾವ ಕಾರಣಕ್ಕೆ ಕ್ಲೇಮ್ ಮಾಡುತ್ತೀರಿ ಎಂಬುದನ್ನು ಆಯ್ಕೆ ಮಾಡಿ. 
*ಈಗ ನಿಮ್ಮ ಹಣ ವಿತ್ ಡ್ರಾ ಮಾಡಲು  ‘PF Advance (Form 31)’ಆರಿಸಿ. ಬಳಿಕ ಈ ರೀತಿ ಹಣ ಹಿಂಪಡೆಯೋ ಉದ್ದೇಶ, ಎಷ್ಟು ಹಣ ಬೇಕಾಗಿದೆ ಹಾಗೂ ನಿಮ್ಮ ವಿಳಾಸ ನೂದಿಸಬೇಕು.
*ಈಗ ಪ್ರಮಾಣಪತ್ರದ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿ ಸಲ್ಲಿಸಿ.
*ಅಗತ್ಯ ದಾಖಲೆಗಳನ್ನು ಕೋರಿದ್ರೆ ಅದನ್ನು ಸಲ್ಲಿಕೆ ಮಾಡಿ.
ಉದ್ಯೋಗದಾತ ಸಂಸ್ಥೆ ವಿತ್ ಡ್ರಾ ಮನವಿಗೆ ಅನುಮೋದನೆ ನೀಡಿದ ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತದೆ.


 

Follow Us:
Download App:
  • android
  • ios