Asianet Suvarna News Asianet Suvarna News

ತೊಗರಿ, ಉದ್ದಿನ ಬೇಳೆ ದರ ಹೆಚ್ಚಳಕ್ಕೆ ಸರ್ಕಾರದ ತಡೆ; ದಾಸ್ತಾನಿಗೆ ಮಿತಿ ನಿಗದಿ

ತೊಗರಿ ಹಾಗೂ ಉದ್ದಿನ ಬೇಳೆ ದರ ಹೆಚ್ಚಳಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.ಈ ಹಿನ್ನೆಲೆಯಲ್ಲಿ ಈ ಎರಡರ ದಾಸ್ತಾನಿಗೂ ಮಿತಿ ವಿಧಿಸಿದೆ. ಹೀಗಾಗಿ ಮಿಲ್ ಗಳು, ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳು ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಹಾಗೂ ಉದ್ದಿನ ಬೇಳೆಯನ್ನು ದಾಸ್ತಾನು ಮಾಡುವಂತಿಲ್ಲ.ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದ್ದು, 2023ರ ಅಕ್ಟೋಬರ್ 31ರ ತನಕ ಅನುಷ್ಠಾನದಲ್ಲಿರಲಿದೆ.
 

Govt imposes stock limit on pulses to check spike in prices anu
Author
First Published Jun 3, 2023, 4:58 PM IST

ನವದೆಹಲಿ (ಜೂ.3): ದೇಶದಲ್ಲಿ ತೊಗರಿ ಹಾಗೂ ಉದ್ದಿನ ಬೇಳೆ ದರ ಹೆಚ್ಚಳಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಶುಕ್ರವಾರ ದಾಸ್ತನಿಗೆ ಮಿತಿ ವಿಧಿಸಿದೆ. ಮಿಲ್ ಗಳು, ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳು ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಹಾಗೂ ಉದ್ದಿನ ಬೇಳೆಯನ್ನು ದಾಸ್ತಾನು ಮಾಡುವಂತಿಲ್ಲ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದ್ದು, 2023ರ ಅಕ್ಟೋಬರ್ 31ರ ತನಕ ಅನುಷ್ಠಾನದಲ್ಲಿರಲಿದೆ. ಈ ಎರಡೂ ಕಾಳುಗಳ ದಾಸ್ತಾನು ಹಾಗೂ ಬೆಲೆಗೆ ಸಂಬಂಧಿಸಿದ ಆಧಾರರಹಿತ ಊಹೆಗಳಿಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಂಡಿರೋದಾಗಿ ಗ್ರಾಹಕ ವ್ಯವಹಾರಗಳ ಇಲಾಖೆ ತಿಳಿಸಿದೆ. ಅಲ್ಲದೆ, ಅಗತ್ಯ ವಸ್ತುಗಳ ಬೆಲೆ ತಗ್ಗಿಸುವ ನಿಟ್ಟಿನಲ್ಲಿ ಇದು ಇನ್ನೊಂದು ಹೆಜ್ಜೆಯಾಗಿದೆ ಎಂದು ತಿಳಿಸಿದೆ. ಈ  ಪ್ರಸಕ್ತ ಹಣಕಾಸು ಸಾಲಿನಲ್ಲಿ ಉತ್ಪಾದನೆ ತಗ್ಗಿರುವ ಕಾರಣ ಎರಡೂ ಧಾನ್ಯಗಳ ರಿಟೇಲ್ ಬೆಲೆಯಲ್ಲಿ ಏರಿಕೆಯಾಗಿದೆ. ಸಗಟು ಅಥವಾ ಹೋಲ್ ಸೇಲ್ ವ್ಯಾಪಾರಗಳು 200 ಟನ್ ನಷ್ಟು ತೊಗರಿ ಹಾಗೂ ಉದ್ದು ದಾಸ್ತಾನು ಇಡಬಹುದು. ಇನ್ನು ಚಿಲ್ಲರೆ ಅಥವಾ ರಿಟೇಲ್ ವ್ಯಾಪಾರಿಗಳು  5 ಟನ್ ದಾಸ್ತಾನು ಇಡಬಹುದು. ಹಾಗೆಯೇ ಮಿಲ್ ಗಳಲ್ಲಿ ಕಳೆದ ಮೂರು ತಿಂಗಳಲ್ಲಿ ಉತ್ಪಾದನೆಯಾದ ಅಥವಾ ವಾರ್ಷಿಕ ದಾಸ್ತಾನು ಸಾಮರ್ಥ್ಯದ ಶೇ.25ರಷ್ಟನ್ನು ದಾಸ್ತಾನು ಇಡಬಹುದು. 

ಈ ವರ್ಷದ ಪ್ರಾರಂಭದಿಂದ ತೊಗರಿ ಹಾಗೂ ಉದ್ದಿನ ಬೇಳೆ ದರಗಳಲ್ಲಿ ಹೆಚ್ಚಳ ಕಂಡುಬಂದಿದೆ. ಈ ಎರಡರ ಉತ್ಪಾದನೆ ತಗ್ಗಿರೋದರಿಂದ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿದೆ. ಆದರೆ, ಬೇಡಿಕೆ ಹೆಚ್ಚಿದೆ.  ಪರಿಣಾಮ ಬೆಲೆಯಲ್ಲಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2024ರ ಮಾರ್ಚ್ ತನಕ ಶುಂಕರಹಿತ ತೊಗರಿ ಹಾಗೂ ಉದ್ದಿನ ಬೇಳೆ ಆಮದಿಗೆ ಅನುಮತಿ ನೀಡಿದೆ. ಹೀಗಾಗಿ ಆಮದು ಸುಲಭವಾಗಲಿದೆ. ಅಲ್ಲದೆ, ದರ ನಿಯಂತ್ರಣಕ್ಕೆ ಕೂಡ ಈ ನೀತಿ ನೆರವು ನೀಡಲಿದೆ. ಇನ್ನು ವರ್ತಕರು ತಮ್ಮ ಬಳಿಯಿರುವ ತೊಗರಿ ಹಾಗೂ ಉದ್ದಿನ ಬೇಳೆ ದಾಸ್ತಾನು ಮಿತಿ ಬಗ್ಗೆ 30 ದಿನಗಳೊಳಗೆ ಮಾಹಿತಿ ನೀಡಬೇಕು.

ಜೂ.1ರಿಂದ ಈ 4 ನಿಯಮಗಳಲ್ಲಿ ಬದಲಾವಣೆ; ಹೆಚ್ಚಲಿದೆ ಜನರ ಜೇಬಿನ ಹೊರೆ

ತೊಗರಿ ಬೇಳೆ ದರದಲ್ಲಿ ಭಾರೀ ಏರಿಕೆ
ತೊಗರಿ ಬೆಳೆಯುವ ರಾಜ್ಯಗಳಲ್ಲಿ ಅಕಾಲಿಕ ಮಳೆ ಪರಿಣಾಮ ಬೆಳೆ ಹಾನಿಯಿಂದ ಉತ್ಪಾದನೆ ತಗ್ಗಿದೆ. ಇದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾಗಿದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ತೊಗರಿ ಬೇಳೆ ಬೆಲೆಯಲ್ಲಿ ಹೆಚ್ಚಳವಾಗಿದೆ. ಸಗಟು ಮಾರುಕಟ್ಟೆಯಲ್ಲಿ ಗುಣಮಟ್ಟದ ತೊಗರಿ ಬೇಳೆ ದರ ಪ್ರತಿ ಕೆಜಿಗೆ 145-150ರೂ. ಇದೆ. ಈ ಹಿಂದೆ 110-115ರೂ. ಇತ್ತು. 

ಇನ್ನು ತೊಗರಿ ಬಿತ್ತನೆ ಮಾಡಿದ ಪ್ರದೇಶದಲ್ಲಿ ಕೂಡ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇಳಿಕೆಯಾಗಿದೆ ಎಂದು ಕೃಷಿ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಇನ್ನು ತೊಗರಿ ಬಿತ್ತನೆ ಮಾಡಿದ ಪ್ರದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.4.6ರಷ್ಟು ಇಳಿಕೆಯಾಗಿದೆ. ಇನ್ನು ಉದ್ದಿನ ಬಿತ್ತನೆ ಪ್ರದೇಶದಲ್ಲಿ ಶೇ.2ರಷ್ಟು ಇಳಿಕೆಯಾಗಿದೆ. ಉದ್ದಿನ ಉತ್ಪಾದೆಯಲ್ಲಿ ಇಳಿಕೆಯಾದರೂ ಆಮದು ಮೂಲಕ ಸರಿದೂಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. 

ವಾಣಿಜ್ಯ ಎಲ್‌ಪಿಜಿ ಬೆಲೆ 83 ರು.ಇಳಿಕೆ: 3 ತಿಂಗಳಲ್ಲಿ ಒಟ್ಟು 345 ರು. ಕಡಿತ

ಏಪ್ರಿಲ್ ನಲ್ಲಿ ಬೇಳೆ ಕಾಳುಗಳ ಚಿಲ್ಲರೆ ದರ ಶೇ.5.28ರಷ್ಟು ಏರಿಕೆಯಾಗಿದೆ. ಇದು ಮಾರ್ಚ್ ನಲ್ಲಿ ಶೇ.4.33ರಷ್ಟಿತ್ತು. ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ದರ ಏಪ್ರಿಲ್ ನಲ್ಲಿ ಶೇ.4.7ರಷ್ಟಿತ್ತು. ಇದು 18 ತಿಂಗಳಲ್ಲೇ ಕಡಿಮೆ ಮಟ್ಟದಲ್ಲಿತ್ತು. ಇದಕ್ಕೆ ಆಹಾರ ಧಾನ್ಯಗಳ ಬೆಲೆಯಲ್ಲಿ ಇಳಿಕೆಯಾಗಿರೋದೆ ಕಾರಣ. 

Follow Us:
Download App:
  • android
  • ios